ಅಂಕಣಇತಿಹಾಸಪ್ರಚಲಿತರಾಜ್ಯ

ಡಿನೋಟಿಫೈ ಪ್ರಕರಣಕ್ಕೆ ಹೊಸ ಟ್ವಿಸ್ಟ್: ಬಿಎಸ್‍ವೈ ವಿರುದ್ಧ ಕುತಂತ್ರ‌ ರಾಜಕಾರಣ ಮಾಡುತ್ತಿದೆಯಾ ಕಾಂಗ್ರೆಸ್??

ಒಂದು ಕಾಲದಲ್ಲಿ ಕರ್ನಾಟಕದಲ್ಲಿ ಬಿಜೆಪಿ‌ ಪಕ್ಷ ಅಧಿಕಾರಕ್ಕೆ ಬರುವುದೇ ಇಲ್ಲವೆಂದು ಅಂದುಕೊಳ್ಳುತ್ತಿದ್ದಾಗ ಬಿಜೆಪಿಯನ್ನು ಸ್ವ-ಸಾಮರ್ಥ್ಯದಿಂದ‌ ಅಧಿಕಾರಕ್ಕೆ ತಂದವರು ಬಿಎಸ್ ಯಡಿಯೂರಪ್ಪನವರು. ಕಾಂಗ್ರೆಸ್ ಆಡಿದ್ದೇ ಆಟ ಅನ್ನುವ ಸ್ಥಿತಿಯಿದ್ದಾಗ ಅಡ್ಡವಾಗಿ ನಿಂತು ಅವರು ಮಾಡಿದ‌ ಅಕ್ರಮಗಳ ವಿರುದ್ಧವಾಗಿ ಸೆಟೆದು ನಿಂತದ್ದು ಬಿಜೆಪಿ ರಾಜ್ಯಾಧ್ಯಕ್ಷರೇ. ಇನ್ನೇನು ಚುನಾನಣೆ ಸಮೀಪಿಸುತ್ತಿದೆ. ಈಗ ರಾಜಕೀಯವೆಂಬ ಚದುರಂಗವಾಟ ಪ್ರಾರಂಭಮಾಡಿದೆ‌ ಕಾಂಗ್ರೆಸ್. ಹೇಗಾಗದರೂ ಮಾಡಿ ಬಿಜೆಪಿಯನ್ನು ಬಗ್ಗುಬಡಿಯಬೇಕೆಂಬ ಚಿಂತನೆಯಲ್ಲಿದೆ. ಅದಕ್ಕಾಗಿ ಅವರು ಉಪಯೋಗಿಸುತ್ತಿರುವುದು ಮಾತ್ರ‌ ವಾಮಮಾರ್ಗ!!!!!

ವಾಸ್ತವಾಗಿ ಸತ್ಯವಿದು. ಕೆಲವು ದಿನಗಳ ಹಿಂದಷ್ಟೇ‌ ಡಿಕೆಶಿ ಯ ಮೂಲಕ‌ ಕಾಂಗ್ರೆಸ್ ಪಕ್ಷದ ಬಂಡವಾಳ ಮತ್ತೊಮ್ಮೆ ಜಗಜ್ಜಾಹೀರಾಗಿತ್ತು. ಅದಕ್ಕೆ ಪ್ರತೀಕಾರವನ್ನು ತೀರಿಸಲೇಬೇಕೆಂಬ ಉದ್ದೇಶದಿಂದ ಬಿಎಸ್ ವೈ ಮೇಲೆ ಡಿನೋಟಿಫೈ ಪ್ರಕರಣ ಕಾಂಗ್ರೆಸ್ ಪಕ್ಷ‌ ದಾಖಲಿಸಿದೆ. ಈ ಪ್ರಕರಣ ದಾಖಲಾಗಿದ್ದೇ ಒಂದು ಕುತಂತ್ರದ‌ ರಾಜಕಾರಣದಿಂದ!!

ದ್ವೇಷ‌ರಾಜಕಾರಣದ ಪರಮಾವಧಿಯನ್ನು ತಲುಪುತ್ತಿದೆ ಕಾಂಗ್ರೆಸ್. ಡಿನೋಟಿಫಿಕೇಷನ್ ಕೇಸ್ ಕುರಿತಾಗಿ ಅನೇಕ ವಿಚಾರಗಳನ್ನು‌ ಬಯಲಿಗೆಳೆದಿದ್ದಾರೆ ಗಣಿ ಇಲಾಖೆಯ ಉಪಕಾರ್ಯದರ್ಶಿಯಾಗಿರುವ ಎಚ್.ಬಸವರಾಜೇಂದ್ರರವರು. ಅವರು ಬಹಿರಂಗಗೊಳಿಸಿದ ವಿಚಾರ ಈಗ ಜನರನ್ನು ಬೆರಗುಗಣ್ಣಿನಿಂದ‌ ನೋಡುವಂತೆ ಮಾಡಿದೆ. ಯಾಕೆಂದರೆ ಈ ವಿಚಾರ ಕಾಂಗ್ರೆಸ್ ಎಂಬ ಬ್ರಿಟಿಷ್ ಇಂಡಿಯಾ ಪಕ್ಷವು ಅಧಿಕಾರವನ್ನು ದುರುಪಯೋಗಪಡಿಸಿರುವುದು ಸ್ಪಷ್ಟವಾಗಿದೆ.

ಸ್ವತಃ ಎಸಿಬಿ ಡಿವೈಎಸ್‌ಪಿಯೇ ಕೇಸು ದಾಖಲಿಸಲು ಒತ್ತಡ ತಂದಿದ್ದರು ಎಂಬುದಾಗಿ ಗಣಿ ಇಲಾಖೆಯ ಉಪಕಾರ್ಯದರ್ಶಿ ಎಚ್.ಬಸವರಾಜೇಂದ್ರರವರು ಡಿನೋಟಿಫೈ ಕುರಿತಾದ‌ ಬಂಡವಾಳವನ್ನು ಬಹಿರಂಗ ಮಾಡಿದ್ದಾರೆ.ಮಾನವ ಹಕ್ಕುಗಳ ಆಯೋಗ, ಡಿಪಿಆರ್ ಕಾರ್ಯದರ್ಶಿ ಮತ್ತು ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಸ್ವವಿವರವಾಗಿ ವಿವರಿಸಿದ್ದಾರೆ. 12.07.2010ರಿಂದ 11.09.2011ರವರೆಗೆ ಬಿಡಿಎನ ವಿಶೇಷ ಭೂಸ್ವಾಧೀನಾಧಿಕಾರಿಯಾಗಿದ್ದ ಬಸವರಾಜೇಂದ್ರ,ಕೆಎಎಸ್ ಅಧಿಕಾರಿಯಿಂದ ಸ್ಫೋಟಕ ಮಾಹಿತಿಯನ್ನು ಬಹಿರಂಗಗೊಳಿಸಿ, ಪ್ರಕರಣದಲ್ಲಿ ಬಿಎಸ್‌ವೈರನ್ನ ಸಿಲುಕಿಸಲು ಒತ್ತಡವನ್ನು‌ ಮೇಲಧಿಕಾರಿಗಳು‌ ಹೇರಿದರು. ಶಿವರಾಮಕಾರಂತ ಬಡಾವಣೆ ಡಿನೋಟಿಫೈ ಕೇಸ್ ಪ್ರಕರಣದಲ್ಲಿ ಬಿಎಸ್‌ವೈರನ್ನ ಸಿಲುಕಿಸಲು ಎಸಿಬಿ ಒತ್ತಾಯ ಮಾಡಿದ್ದರು. ಸರಕಾರವೂ ಎಸಿಬಿಯವರನ್ನು ದುರ್ಬಳಕೆ ಮಾಡಿತು. ಡಿವೈಎಸ್‌ಪಿಗಳಾದ ಬಾಲರಾಜ್, ಜೆ.ಕೆ.ಆಂಥೋನಿಯಿಂದ ಬಸವರಾಜೇಂದ್ರಗೆ ಸರಕಾರ ಒತ್ತಡ ಹಾಕಿರುವುದಾಗಿ ಬಸವರಾಜೇಂದ್ರರವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಆ ಪತ್ರದಲ್ಲಿ ಸಂಪೂರ್ಣವಾಗಿ ವಿವರಿಸಿದ ಬಸವರಾಜೇಂದ್ರ ರವರು ತಾನು 12.07.2010ರಿಂದ 11.09.2011ರವರೆಗೆ ಬಿಡಿಎ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಕಾರ್ಯವನ್ನು ನಿರ್ವಹಿಸಿದ್ದೇನೆ. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಕರೆದಿದ್ದ DYSPಗಳು ಆಗಸ್ಟ್ 6ರಿಂದ 10ರವರೆಗೆ ಬಸವರಾಜೇಂದ್ರಗೆ ಕರೆಮಾಡಿ,ಪ್ರಮುಖವಾಗಿ ಎಸಿಬಿ ಡಿವೈಎಸ್‌ಪಿ ಬಾಲರಾಜ್‌ರವರು ದೂರವಾಣಿ ಕರೆ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದರು. ಬಾಲರಾಜ್ ಸೂಚನೆಯಂತೆ ವಿಚಾರಣೆಗೆ ಖನಿಜ ಭವನದ ಎಸಿಬಿ ಕಚೇರಿಯಲ್ಲಿ ಹಾಜರಾಗಿದ್ದರು.

ಬಾಲರಾಜ್, ಜೆ.ಕೆ.ಆಂಥೋನಿಯಿಂದ ನಡೆದ ವಿಚಾರಣೆ ವೇಳೆ ಬಸವರಾಜೇಂದ್ರ ಮೇಲೆ ಒತ್ತಡ ಹೇರಿದ್ದರೆಂಬುದಾಗಿಯೂ ‌ಪತ್ರದಲ್ಲಿ ನಮೂದಿಸಿದ ಅವರು ಶಿವರಾಮಕಾರಂತ ಬಡಾವಣೆ ಡಿನೋಟಿಫೈ ವಿಚಾರದಲ್ಲಿ ಬಿಎಸ್‌ವೈ ಡಿನೋಟಿಫೈ ಮಾಡಿರುವುದಾಗಿ ಹೇಳಬೇಕು, ಇದರಿಂದ ಸರ್ಕಾರಕ್ಕೆ 2 ಸಾವಿರ ಕೋಟಿ ನಷ್ಟವಾಗಿದೆ ಎಂಬುದಾಗಿಯೂ ಹೇಳಬೇಕೆಂಬುದಾಗಿಯೂ ಮೇಲಧಿಕಾರಿಗಳು ಸೂಚಿಸಿದರು ಎಂದು ಉಲ್ಲೇಖಿಸಿದರು. ಅಷ್ಟೇ ಅಲ್ಲದೇ, ಪತ್ರಕ್ಕೆ ಒಪ್ಪಿ ಸಹಿ ಹಾಕುವಂತೆ ಬಸವರಾಜೇಂದ್ರಗೆ ಒತ್ತಡ ಹೇರಲಾಗಿದೆ. ಇದಕ್ಕೆ ಒಪ್ಪಿದರೆ ಉನ್ನತ ಹುದ್ದೆಯ ಆಮಿಷ, ಕೆಎಎಸ್‌ನಿಂದ ಐಎಎಸ್‌ಗೆ ಬಡ್ತಿ ನೀಡುವ ಆಮಿಷವನ್ನು ಬಾಲರಾಜ್, ಆಂಥೋನಿಯವರು ಒಡ್ಡಿದರೆಂಬುದಾಗಿಯೂ ‌ಪತ್ರದಲ್ಲಿ ಬರೆದಿದ್ದಾರೆ.

2010‌ರಿಂದ 14 ತಿಂಗಳುಗಳ ಕಾಲ ಭೂಸ್ವಾಧೀನಾಧಿಕಾರಿಯಾಗಿದ್ದ‌ಬಸವರಾಜೇಂದ್ರರವರಿಗೆ ಸುಳ್ಳು ಕೇಸು ದಾಖಲಿಸುವಂತೆಯೂ, ಸುಳ್ಳು ಹೇಳಿಕೆಯನ್ನು ನೀಡುವಂತೆ ಮೇಲಧಿಕಾರಿಗಳು ಬೆದರಿಕೆ ಹಾಕಿರುವ ಸಂಗತಿ ಅವರು ಮುಖ್ಯಕಾರ್ಯದರ್ಶಿ ಕುಂಠಿಯಾ ಅವರಿಗೆ ಬರೆದ ಪತ್ರದಲ್ಲಿ ಬಯಲು ಮಾಡಿದ್ದಾರೆ. ಇದರ ಹಿಂದಿನ ಕೈವಾಡ ಘನಸರಕಾರವೆಂಬುದೂ ಇಲ್ಲಿ ಸ್ಪಷ್ಟವಾಗಿದೆ. ಅವರು ಸಿಡಿಸಿದ‌ ಬಾಂಬ್ ಈಗ ಸರಕಾರವನ್ನು ಅನುಮಾನದ ದೃಷ್ಟಿಯಿಂದ ನೋಡುವಂತೆ ಮಾಡಿದೆ.

ನಿಮಗೆ ಇನ್ನೊಂದು ವಿಚಾರ ನೆನಪಿರಬಹುದು. 1984ರಲ್ಲಿ ಕರ್ನಾಟಕ ಸರಕಾರ ಮಾಡುವ ಭ್ರಷ್ಟಾಚಾರವನ್ನು ಬಯಲಿಗೆಳೆಯಲು ಹಾಗೂ ಜನರ ಕಷ್ಟಕ್ಕೆ ಸ್ಪಂದಿಸಲು ಲೋಕಾಯುಕ್ತ‌ ವ್ಯವಸ್ಥೆಯನ್ನು ಪ್ರಾರಂಭಿಸಲಾಗುತ್ತು. ಅದೇ ಲೋಕಾಯುಕ್ತ ಬಿಜೆಪಿಯಲ್ಲಿನ ಭ್ರಷ್ಟಾಚಾರವನ್ನು ಬಯಲಿಗೆಳೆದಿತ್ತು. ರಾಜ್ಯದಲ್ಲೇ ಸಂಚಲನವನ್ನು ಸೃಷ್ಟಿಸಿದ ಸಂದರ್ಭವಾಗಿತ್ತು ಅದು.

ಬಹುಶ: ಲೋಕಾಯುಕ್ತಕ್ಕೆ ಅಷ್ಟೊಂದು ಶಕ್ತಿಯಿದೆಂದು ವಿರೋಧ ಪಕ್ಷಕ್ಕೂ ಅರಿವಾಗಿದ್ದು ಆಗಲೇ.. ಅಂದು ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್, ಇಂದು ಅಧಿಕಾರದ ಗದ್ದುಗೆಯಲ್ಲಿದೆ. ಲೋಕಾಯಕ್ತವನ್ನು ನಿಷ್ಕ್ರಿಯಗೊಳಿಸಿದರು. ಅಲ್ಲಿಗೆ ಸರಕಾರದ ನಿಜವಾದ ಬಣ್ಣವನ್ನು ಬಯಲಿಗೆಳೆಯುವುದಕ್ಕೆ ಯಾವುದೆ ಸಮಿತಿಯಿಲ್ಲದಂತೆ ಮಾಡಿತು ಆಡಳಿತಾರೂಢ‌ ಕಾಂಗ್ರೆಸ್. ಜನರ ಕಣ್ಣಿಗೆ ಮಣ್ಣೆರಚಲು ಭ್ರಷ್ಟಾಚಾರ ನಿರ್ಮೂಲನ ಸಮಿತಿಯನ್ನು(ಎಸಿಬಿ – ಆಂಟಿ ಕರಪ್ಷನ್ ಬ್ಯೂರೋ) ರಚಿಸಿತು ಸರಕಾರ.

ಸರಿ. ಎಸಿಬಿ ಗೆ ಲೋಕಾಯುಕ್ತದಷ್ಟು ಶಕ್ತಿ, ಸ್ವಾತಂತ್ರ್ಯವಿದೆಯೇ ಎಂದು ಕೇಳಿದರೆ, ಅದಕ್ಕೆ ಉತ್ತರ ‌ಇಲ್ಲವೆಂಬುದಾಗಿಯೇ. ಲೋಕಾಯುಕ್ತ ಸರಕಾರೇತರ ಸಮಿತಿಯಾಗಿತ್ತು. ಹಾಗಾಗಿ ಅಧಿಕಾರದಲ್ಲಿದ್ದ ಸರಕಾರವನ್ನೇ ಬಡಮೇಲು ಮಾಡಲು ಸಾಧ್ಯವಾಯಿತು. ಆದರೆ ಎಸಿಬಿ ಸಂಪೂರ್ಣವಾಗಿ ಸರಕಾರದ ‌ಆಳ್ವಿಕೆಯಲ್ಲಿ , ಅವರು ತೋರಿದ ದಾರಿಯಲ್ಲೇ ನಡೆಯಬೇಕಾದ ‌ಸಮಿತಿ. ಆದ ಕಾರಣ ಎಸಿಬಿ ಮಾಡಬಹುದಾದ ‌ಕಾರ್ಯವೆಂದರೆ ಸರಕಾರದ ವಿರೋಧಿಗಳನ್ನು ಸೋಲಿಸುವುದು. ಅದು ನೇರವಾಗಿಯಾದರೂ ಸರಿ, ವಾಮಮಾರ್ಗದಲ್ಲಾದರೂ ಸರಿ.

ನೀವು ಅಷ್ಟಾಗಿ ಗಮನಿಸಿರದ ಇನ್ನೊಂದು ವಿಚಾರವನ್ನು ಪ್ರಸ್ತುಪಡಿಸುತ್ತೇನೆ. ಸಾಮಾಜಿಕ ಕಾರ್ಯಕರ್ತರಾಗಿರುವ ರವಿ ಕೃಷ್ಣ ರೆಡ್ಡಿಯವರು ಮಧ್ಯದ ಪರವಾನಗಿ ರದ್ದು ಮಾಡುವ ವಿಚಾರದಲ್ಲಿ ಸಿದ್ದರಾಮಯ್ಯನವರು ಭ್ರಷ್ಟಾಚಾರವನ್ನು ಮಾಡಿದ್ದಾರೆ ಎಂದು ಇತ್ತೀಚೆಗೆ ಎಸಿಬಿ ಗೆ ದೂರನ್ನು ದಾಖಲಿಸಿದ್ದರು. ಕೆಲವು ಮದ್ಯದ ಸಂಸ್ಥೆಗಳ ಆಶ್ರಯವನ್ನು ಸರಕಾರ ಪಡೆದು ಇತರೆ ಮದ್ಯದ‌ ಕಂಪೆನಿಗಳಿಗೆ ಪರವಾನಿಗೆ ಕೊಡುತ್ತಿಲ್ಲವೆಂದೆಲ್ಲಾ ದೂರಿನಲ್ಲಿ ದಾಖಲಿಸಿದ್ದರು. ಆದರೆ ಈ ಪ್ರಕರಣ ಇತ್ಯರ್ಥವಾಗುವ ಲಕ್ಷಣ ರವಿಯವರಿಗೂ ಇಲ್ಲ‌ ನಮಗೂ ಇಲ್ಲ. ಯಾಕೆಂದರೆ ಎಸಿಬಿ ಬರುವುದೇ ಭ್ರಷ್ಟಾಚಾರ ಸರಕಾರದ ಆಡಳಿತದ ಅಡಿಯಲ್ಲಿ.

ತಮ್ಮನ್ನುಳಿಸುವುದಕ್ಕಾಗಿ ಇನ್ನೆಷ್ಟು‌ ದಿವಸ ಇಂತಹ ಆಟ ಆಡುತ್ತಾರೆ ಕಾಂಗ್ರೆಸ್ ನ ಭ್ರಷ್ಟಾಚಾರಿಗಳು.. ಅವರ ಆಶ್ರಯದಲ್ಲೇ ಉಂಡು ತೇಗುತ್ತಿರುವ ಅಧಿಕಾರಿಗಳು?? ಒಂದಲ್ಲಾ ಒಂದು ಅವರೆಲ್ಲರ ಬಂಡವಾಳವೂ ಬಯಲಾಗಲಿದೆ. ಕಾದು ನೋಡಬೇಕಷ್ಟೇ. ಕಾಲವೇ ತಸ್ಮೈ ನಮ: ಎಂದಿಲ್ಲವೇ ನಮ್ಮ ಪೂರ್ವಜರು??

– ವಸಿಷ್ಠ

Tags

Related Articles

Close