ಅಂಕಣ

ತನ್ನ ಆಚಾರವಿಲ್ಲದ ನಾಲಿಗೆಯಿಂದ ದೇಶದ ಪ್ರಧಾನಿ ಮೋದಿಯನ್ನ ಸೂ** ಎಂದ ರೋಷನ್ ಬೇಗ್ ಏನು ಸಾಚಾ ಅಂದುಕೊಂಡರಾ? ಈತನ ವಿರುದ್ಧ ಕೇಳಿ ಬಂದ ಆರೋಪಗಳ ಬಗ್ಗೆಯೂ ತಿಳಿದುಕೊಳ್ಳಿ!!!

ನೆನ್ನೆ ಬೆಂಗಳೂರಿನ ಪುಲಕೇಶಿ ನಗರದಲ್ಲಿ ಜನರನ್ನುದ್ದೇಶಿಸಿ ಮಾತನಾಡುತ್ತಿದ್ದ ನಗರಾಭಿವೃದ್ಧಿ, ಮಾಹಿತಿ ಮತ್ತು ಹಜ್​ ಸಚಿವ ರೋಷನ್ ಬೇಗ್ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಸಭೆಯಲ್ಲಿ ಅವಾಚ್ಯ ಶಬ್ದ ಪ್ರಯೋಗ ಮಾಡುತ್ತ ಹೇಳ್ತಾನೆ “500, 1000 ರೂ ನೋಟುಗಳನ್ನ ಮೋದಿ ನಿಷೇಧ ಮಾಡಿದ್ದಕ್ಕೆ ಅಧಿಕಾರಕ್ಕೆ ತಂದವರೇ ಬೈಯ್ಯುತ್ತಿದ್ದಾರೆ. ಅಧಿಕಾರಕ್ಕೆ ಬಂದಾಗ ಮೋದಿಯನ್ನು ಹೊಗಳುತ್ತಿದ್ದವರೇ ಈಗ ನೋಟು ನಿಷೇಧ ಮಾಡಿದ ಮೇಲೆ ಈ ಸೂ* ಮಗ ಏನೆಲ್ಲಾ ಮಾಡಿಬಿಟ್ಟ” ಅನ್ನುತ್ತಿದ್ದಾರೆ ಅಂದಿದ್ದ.

8 ಬಾರಿ MLA ಆಗಿ ಶಿವಾಜಿನಗರವನ್ನ ಪ್ರತಿನಿಧಿಸುತ್ತಿರೋ ರೋಷನ್ ಬೇಗ್ ಅದೆಷ್ಟು ಕೂಡಿಟ್ಟಿದ್ದನೋ ಪಾಪ, 500, 1000 ನೋಟುಗಳು ರದ್ದಿ ಪೇಪರ್ ಆದತಕ್ಷಣ ರೋಷನ್ ಬೇಗ್’ನ ಈ ರೀತಿಯ ಆಕ್ರೋಶ ಸಹಜವೇ ಬಿಡಿ!

ಅಷ್ಟಕ್ಕೂ ದೇಶದ ಪ್ರಧಾನಿಯವರನ್ನ ಈ ರೀತಿಯಾಗಿ ತುಚ್ಛ ಪದಗಳಿಂದ ಬೈಯುತ್ತಿರೋ ರೋಷನ್ ಬೇಗ್ ಏನು ಸಾಚಾ ಅಂದುಕೊಂಡಿರಾ?

ಈತನ ಕೇಸ್ಗಳನ್ನ ವಿಚಾರಣೆ ಮಾಡೋಕೆ ಸ್ವತಃ ಲೋಕಾಯುಕ್ತ ಕೋರ್ಟ್ ಆದೇಶಿಸಿದ್ದು ಬಹುಶಃ ರೋಷನ್ ಬೇಗ್ ಮರೆತಂತಿದೆ.

ಪ್ರಕರಣ 1:

ಬೇಗೂರು ಹೋಬಳಿಯ ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಅಕ್ರಮವಾಗಿ ಸರ್ಕಾರಿ ಜಮೀನು ಮಂಜೂರು ಮಾಡಿಸಿಕೊಂಡಿರೋದು ಹಾಗೂ ಆದಾಯ ಮೀರಿದ ಆಸ್ತಿ ಹೊಂದಿರುವ ಕುರಿತು ಶಿವಾಜಿನಗರ ನಿವಾಸಿ ಅಬ್ದುಲ್‌ ಹಕ್‌ ಸುರತಿ ಎಂಬವರು ರೋಷನ್‌ ಬೇಗ್‌ ಹಾಗೂ ಅವರ ಕುಟುಂಬದವರ ವಿರುದ್ಧ ಲೋಕಾಯುಕ್ತಕ್ಕೆ ಖಾಸಗಿ ದೂರು ನೀಡಿದ್ದರು.

ಏನಿದು ಪ್ರಕರಣ?

ಬೇಗೂರು ಹೋಬಳಿಯ ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಕಿಯೋನಿಕ್ಸ್‌ ಸಂಸ್ಥೆ ವಶದಲ್ಲಿದ್ದ ಜಾಗವನ್ನು 2006 ರಲ್ಲಿ ಸಣ್ಣ ಕೈಗಾರಿಕೆ ಆರಂಭಿಸುವುದಾಗಿ ಹೇಳಿ ಆಗ
ಸಚಿವನಾಗಿದ್ದ ರೋಷನ್ ಬೇಗ್ ಅಧಿಕಾರ ದುರುಪಯೋಗಿಸಿಕೊಂಡು ಆ ಜಾಗವನ್ನು ಕೇವಲ 38 ಲಕ್ಷ ರೂ. ಗೆ ಮಂಜೂರು ಮಾಡಿಸಿಕೊಂಡು ಬಳಿಕ ಆ ಜಾಗದ
ಅಭಿವೃದ್ಧಿಗೆ ಪ್ರಸ್ಟಿಜ್‌ ಗ್ರೂಪ್‌ ಜತೆ ಒಪ್ಪಂದ ಮಾಡಿಕೊಂಡಿದ್ದನಂತೆ.

ಆದರೆ, ಜಂಟಿ ಒಪ್ಪಂದದ ಬಳಿಕ ಅಂದರೆ 2010 ರಲ್ಲಿ ಈ ಜಾಗದ ಕ್ರಯ ಪತ್ರವನ್ನು ರೋಷನ್‌ ಬೇಗ್‌ ಮಾಲೀಕತ್ವದ ಸುಬಿ ಎಲೆಕ್ಟ್ರಾನಿಕ್ಸ್‌ ಸಂಸ್ಥೆ ಹೆಸರಿಗೆ ಬದಲಿಸಲಾಗಿದೆ. ಸಣ್ಣ ಕೈಗಾರಿಕೆ ಸ್ಥಾಪಿಸುವುದಾಗಿ ಸುಳ್ಳು ಹೇಳಿ ಜಮೀನು ಪಡೆದು ಕೊಂಡಿರುವ ರೋಷನ್‌ ಬೇಗ್‌ ಈಗ ಅದನ್ನು ಖಾಸಗಿ ಕಂಪನಿಯೊಂದಕ್ಕೆ ಬಾಡಿಗೆಗೆ ನೀಡಿದ್ದಾರೆ ಎನ್ನುವುದನ್ನ ದೂರುದಾರಅಬ್ದುಲ್‌ ಹಕ್‌ ಸುರತಿ ದೂರನ್ನ ದಾಖಲಿಸಿದ್ದರು.

ಪ್ರಕರಣ 2:

ನಗರಾಭಿವೃದ್ಧಿ ಸಚಿವ ಆರ್‌. ರೋಷನ್‌ ಬೇಗ್‌ ಬೆಂಗಳೂರು ನಗರದ ಪ್ರತಿಷ್ಠಿತ ಪ್ರದೇಶಗಳಲ್ಲಿ ₹165 ಕೋಟಿ ಬೆಲೆಬಾಳುವ ಮೂರು ಸ್ವತ್ತುಗಳನ್ನು ಕಬಳಿಸಿದ್ದ
ಎನ್ನುವ ಆರೋಪವೂ ರೋಷನ್ ಬೇಗ್ ಮೇಲಿದೆ

ತಿಮ್ಮಯ್ಯ ರಸ್ತೆಯಲ್ಲಿರುವ ಪಾಲಿಕೆಯ ಸ್ವತ್ತನ್ನು ಬೇಗ್‌ ಮಾಲೀಕತ್ವದ ಡ್ಯಾನಿಷ್ ಪಬ್ಲಿಕೇಷನ್‌ ಸಂಸ್ಥೆಗೆ ನೀಡಿರುವ ನಿರ್ಣಯವನ್ನು ಹೈಕೋರ್ಟ್‌ ಕೂಡ ರದ್ದುಪಡಿಸಿತ್ತು.

ಪ್ರಕರಣ 3:

2002 ರಲ್ಲಿ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಕರೀಂ ಲಾಲಾ ತೆಲಗಿ ನಡೆಸಿದ್ದ ನಕಲಿ ಛಾಪಾ ಕಾಗದ ಹಗರಣದಲ್ಲೂ ರೋಷನ್ ಬೇಗ್ ಹಾಗು ಆತನ ಸಹೋದರ ಕೈವಾಡವಿದೆ ಅಂತ ತೆಲಗಿಯ ವಕೀಲನೇ ಹೇಳಿದ್ದ.

ಇದು 2002 ರಲ್ಲಿ ನಡೆದ ಹಗರಣವಾಗಿದ್ದು ಈ ಹಗರಣದ ಮೊತ್ತ 20 ಸಾವಿರ ಕೋಟಿಯಾಗಿತ್ತು.

2002 ರಲ್ಲಿ ನಡೆದ ಪ್ರಕರಣದ ತೀರ್ಪು ಇತ್ತೀಚೆಗಷ್ಟೇ ಬಂದಿದ್ದು ಸಾಕ್ಷ್ಯಾಧಾರಗಳ ಕೊರತೆಯಿಂದ ರೋಷನ್ ಬೇಗ್ ಸಹೋದರ ರೇಹಾನ್ ಬೇಗ್ ನ್ನ ಕೋರ್ಟು ಖುಲಾಸೆಗೊಳಿಸಿತ್ತು.

ತಮ್ಮದೇ ಸರ್ಕಾರ ಬಂದತಕ್ಷಣ ರೊಷನ್ ಬೇಗ್ ಸಾಕ್ಷಿಗಳ ನಾಶಮಾಡಿದ್ದ ಅನ್ನೋ ಆರೋಪವೂ ಕೇಳಿಬಂದಿತ್ತು.

ಈ ಹಗರಣಗಳೆಲ್ಲಾ ಮಾಧ್ಯಮದ ಮೂಲಕ ಹೊರಬಂದ ಹಗರಣಗಳಾಗಿವೆ, ಇನ್ನೂ ಅದೆಷ್ಟು ಹಗರಣಗಳು ಇದಾವೋ ಅದು ರೋಷನ್ ಬೇಗ್ ಗೇ ಗೊತ್ತು.

ಇಷ್ಟೆಲ್ಲಾ ಹಗರಣಗಳನ್ನ ತನ್ನ ಮೈಗೆ ಸುತ್ತಿಕೊಂಡು ತಾನು ಗಳಿಸಿರೋ ಅಕ್ರಮ ಸಂಪತ್ತನ್ನ 500, 1000 ನೋಟುಗಳಲ್ಲಿ ರೋಷನ್ ಬೇಗ್
ಬಚ್ಚಿಟ್ಟಿದ್ದರೇನೋ, ಮೋದಿ ಆ ನೋಟುಗಳನ್ನ ಬ್ಯಾನ್ ಮಾಡಿದ ತಕ್ಷಣ ರೋಷನ್ ಬೇಗ್ ಆದಿಯಾಗಿ ದೇಶದ ಎಲ್ಲ ರಾಜಕಾರಣಿಗಳೂ ನಮೋದಿಗೆ ಹಿಡಿ ಶಾಪ
ಹಾಕಿದ್ದು ನಾವು ಮರೆತಿಲ್ಲ.

ಆದರೆ ಅದು ಹಿಡಿಶಾಪದ ರೀತಿಯಲ್ಲಿರಲಿಲ್ಲ, “ಜನರಿಗೆ ಸಮಸ್ಯೆ ಆಗುತ್ತಿದೆ ಆದ ಕಾರಣ ನೋವು ನೋಟ್ ಬ್ಯಾನ್ ಮಾಡಿದ್ದನ್ನ ವಾಪಸ್
ತೆಗೆದುಕೊಳ್ಳಬೇಕು” ಅಂತ ಇದೇ ಕಾಂಗ್ರೆಸ್ಸಿಗರು ಒತ್ತಾಯ ಮಾಡಿದ್ದು ನಿಮಗೆಲ್ಲಾ ಗೊತ್ತಿರುವ ವಿಷಯವೇ.

ಒಟ್ಟಿನಲ್ಲಿ ತಾವು ಮಾಡುವ ಕೆಲಸಗಳಿಗೆ ಮೋದಿ ಅಡ್ಡಲಾಗಿ ನಿಂತಿದ್ದಾರೆ, ತಮ್ಮ ಆಟ ಇನ್ನು ಮುಂದೆ ನಡೆಯಲ್ಲ ಅಂತ ಗೊತ್ತಾಗಿರೋ ಕಾರಣ ಹಾಗು ಮುಂದಿನ ಚುನಾವಣೆಯಲ್ಲಿ ಮೋದಿಯೇನಾದರೂ ರಾಜ್ಯ ಚುನಾವಣಾ ಪ್ರಚಾರಕ್ಕೇನಾದರೂ ಬಂದರೆ ನಮ್ಮ ಗತಿ ಅಧೋಗತಿ ಎಂದು ತಿಳಿದಿರೋ ಕಾಂಗ್ರೆಸ್ಸಿಗರು ಜನರಿಗೆ ಮೋದಿಯ ಮೇಲೆ ದ್ವೇಷಭಾವನೆ ಹುಟ್ಟುವ ರೀತಿಯಲ್ಲಿ ಭಾಷಣ ಮಾಡಲು ಮುಂದಾಗಿದ್ದಾರೆ.

ಸರಿ ಏನಾದರು ಆರೋಪ ಪ್ರತ್ಯಾರೋಪ ಮಾಡಿಕೊಳ್ಳಿ ಸ್ವಾಮಿ, ಆದರೆ ನಿಮ್ಮ ಭಾಷೆ ನೋಡಿದರೆ ನೀವು ಎಂಥಾ ಹೊಲಸ್ಸು ಸಂಸ್ಕೃತಿಯಿಂದ ಬೆಳೆದು ಬಂದಿದ್ದೀರ ಅನ್ನೋದು ನೆನ್ನೆ ರಾಜ್ಯದ ಜನರಿಗೆ ಸ್ಪಷ್ಟವಾಗಿ ಗೊತ್ತಾಗಿದೆ.

ಮೊದಿಯವರನ್ನ ನಿಮ್ಮ ಪಕ್ಷದವರೇ 2002 ರಿಂದ ವಿನಾಕಾರಣ ದೂಷಿಸುತ್ತ ಬಂದಿದ್ದಕ್ಕೆ ಮೋದಿ 3 ಬಾರಿ ಗುಜರಾತ್ ಮುಖ್ಯಮಂತ್ರಿಯಾದರು & ಅದೇ ನಿಮ್ಮ ಬಾಯಿ ಚಪಲದಿಂದ ಮೋದಿಯನ್ನ ಪ್ರಧಾನಿಯಾಗುವಂತೆ ಮಾಡಿದ್ದೂ ನಿಮ್ಮ ಹೊಲಸ್ಸು ನಾಲಿಗೆಯ ಪ್ರಚಾರದಿಂದಲೇ.

ಈಗಲಾದರೂ ಎಚ್ಚೆತ್ತುಕೊಳ್ಳಿ, ನೀವು ಎಷ್ಟು ಮೋದಿಯವರನ್ನ ಬೈಯುತ್ತೀರೋ ಅದು ಮೋದಿಯವರಿಗೆ ಲಾಭವೇ ಹೊರತು ನಷ್ಟವೇನಲ್ಲ!!

— ರಾಜ್ಯದ ಸಾಮಾನ್ಯ ಪ್ರಜೆ(ಅನಾಮಿಕ)

Tags

Related Articles

Close