ಪ್ರಚಲಿತ

ತಮಿಳು ನಟ ಜೋಸೆಫ್ ವಿಜಯ್ ನ ಈ ಒಂದು ತಪ್ಪು ಪ್ರಧಾನಿ ಮೋದಿಯ ಕೆಂಗಣ್ಣಿಗೆ ಗುರಿಯಾಗಿದ್ದು ಯಾಕೆ ಗೊತ್ತೇ?!

ಒಂದಷ್ಟು ನಟರಿಗೆ ಏನಾಗುತ್ತದೆಯೋ ಗೊತ್ತಿಲ್ಲ! ಆದರೆ, ಸೀರೀಸ್ ಆಗಿ ಒಂದಷ್ಟು ಸಿನಿಮಾ ಹಿಟ್ ಆದರೆ ಸಾಕು, ಜಗತ್ತು ತನ್ನ ತಲೆಯ ಮೇಲಿದೆ ಎಂದಾಡುವಾಗ ವಿಷಾದವೆನಿಸುತ್ತದೆ! ಅದೂ ಅಲ್ಲದೇ, ರಾಜಕೀಯದ ಬಗ್ಗೆ ಯಾವ ಜ್ಞಾನವೂ ಇಲ್ಲದೇ, ತಮ್ಮ ಸಿನಿಮಾದಲ್ಲಿ ದೇಶದ ಪ್ರಧಾನ ಮಂತ್ರಿಯನ್ನು ಅಪರೋಕ್ಷವಾಗಿ ಟೀಕಿಸುವಷ್ಟು ಕೆಳಕ್ಕಿಳಿದು ಬಿಡುವ ನಟರಲ್ಲಿ ಈಗ ತಮಿಳಿನ ಜೋಸೆಫ್ ವಿಜಯ್ ಕೂಡಾ ಒಬ್ಬರು! ಅವರ ಬಹುನಿರೀಕ್ಷಿತ ಸಿನಿಮಾವಾದ ‘ಮೆರ್ಸಾಲ್’ ನಲ್ಲಿರುವ ಒಂದೊಂದು ಡೈಲಾಗ್ ಗಳಿಗೆ ಬಹುಷಃ ಚಪ್ಪಾಳೆ ಹೊಡೆದದ್ದು ಮೋದಿ ವಿರೋಧಿಗಳಷ್ಟೇ!

ತಮಿಳು ರಂಗದ ನಟ ಜೋಸೆಫ್ ವಿಜಯ್ ನಟಿಸಿರುವ ಮೆರ್ಸಾಲ್ ಚಲನಚಿತ್ರವೊಂದು ಬರೀ ಮೋದಿ ಸರಕಾರವನ್ನು ಟೀಕಿಸುವುದರಲ್ಲಿಯೇ ಮುಗಿದು ಹೋಗುವುದಿಲ್ಲ! ಬದಲಿಗೆ, ಹಿಂದುತ್ವದ ಭಾವನೆಗಳನ್ನೂ ಕೆದಕುವ ಪ್ರಯತ್ನ ಸರಾಗವಾಗಿಯೇ ನಡೆದಿದೆ! ಮೊದಲನೆಯದಾಗಿ, ಮೋದಿಯ GST ಯೋಜನೆ ಹಾಗೂ ಡಿಜಿಟಲ್ ಇಂಡಿಯಾದ ಕುರಿತು ಸುಳ್ಳು ಸುದ್ದಿ ಹಬ್ಬಿಸುವುದರಲ್ಲಿ ಆತ್ಮತೃಪ್ತಿ ಕಂಡುಕೊಂಡರಷ್ಟೇ! ತದನಂತರ, ದೇವಾಲಯಗಳನ್ನು ಕಟ್ಟುವ ಬದಲು ಆಸ್ಪತ್ರೆಗಳನ್ನು ಕಟ್ಟಿ.ಎಂದು ಬೇಕಾಬಿಟ್ಟಿ ಸಲಹೆ ನೀಡಿದ ಇದೇ ಜೋಸೆಫ್ ರಾಮ ಮಂದಿರ ಕಟ್ಟುವುದನ್ನು ಅಪರೋಕ್ಷವಾಗಿ ವಿರೋಧಿಸಿದ್ದರು!

“ಕಳೆದ 20 ವರುಷಗಳಲ್ಲಿ, 17,500 ಚರ್ಚುಗಳು, 9,700 ಮಸೀದಿಗಳು ಹಾಗೂ 370 ದೇವಾಲಯಗಳ ನಿರ್ಮಾಣವಾಗಿದೆ! ಹಾಗಾದರೆ, ಯಾವುದನ್ನು ಕಟ್ಟುವ ಬದಲು ಆಸ್ಪತ್ರೆ ಕಟ್ಟಬಹುದಿತ್ತು?! ಯಾವ ಧರ್ಮದ ಮಂದಿರ ಕಟ್ಟುವುದನ್ನು ನಿಲ್ಲಿಸಬೇಕಿತ್ತು?!”

ಆದರೆ, ಈ ಕ್ರೈಸ್ತ ನಟನೊಬ್ಬ ಸರಕಾರಕ್ಕೆ ಹಿಂದೂ ದೇವಾಲಯಗಳನ್ನು ಕಟ್ಟುವ ಬದಲು ಆಸ್ಪತ್ರೆಗಳನ್ನು ಕಟ್ಟಿಸಿ ಎಂದು ಸಲಹೆ ಕೊಡುತ್ತಾನೆ! ಆತನ,ಹೊಸದಾದ ಮೆರ್ಸಾಲ್ ಚಿತ್ರದಲ್ಲಿ ಮೋದಿಯ ಇತ್ತೀಚೆಗಿನ ಅಭಿವ್ರದ್ಧಿಯ ಕುರಿತು ಟೀಕಿಸಿರುವ ಜೋಸೆಫ್ ವಿಜಯ್ ಅಬ್ಬಾ! ಅಭಿವ್ಯಕ್ತಿ ಸ್ವಾತಂತ್ರ್ಯದಡಿ ಸಮಾಜದ ಉದ್ಧಾರ ಮಾಡುತ್ತಿದ್ದಾನೆಯೋ ಏನೋ! ಅದೂ, ಕ್ರೈಸ್ತ ಧರ್ಮದ ಅಪರೋಕ್ಷ ಪ್ರಚಾರಕನಾಗಿ!

ನೀವು ಕೇಳಬಹುದು! ಯಾಕೆ ಇಷ್ಟು ದಿನವೂ ಮಾತನಾಡದಿದ್ದ ಜೋಸೆಫ್ ವಿಜಯ್, ತನ್ನ ಸಿನಿಮಾದಲ್ಲಿ ಮೂರ್ಖನ ಹಾಗೆ ಬೇಕಾಬಿಟ್ಟಿ ಮಾತನಾಡಿದ್ದಾನೆಂದು! ನಿಮಗೆ ಐಸಾಕ್ ನ್ಯೂಟನ್ ನ ಥಿಯರಿ ನೆನಪಿದೆಯಾ?! ಪ್ರತೀ ಕ್ರಿಯೆಗೆ, ಸಮನಾದ ಹಾಗೂ ವಿರುದ್ಧವಾದ ಪ್ರತಿಕ್ರಿಯೆ ಇರುತ್ತದೆಂಬ ಥಿಯರಿ ನಿಮಗೆ ಗೊತ್ತಿದೆಯಲ್ಲವೇ?!

ಹಾ! ಒಂದು ಚಿಕ್ಕ ಬದಲಾವಣೆ ಇದೆ ಈ ಥಿಯರಿನಲ್ಲಿ! ಬರೋಬ್ಬರಿ ಐದು ವರ್ಷಗಳ ಕಾಲ ಇದೇ ಜೋಸೆಫ್ ವಿಜಯ್ ದುಡಿದ ಹಣಕ್ಕೆ ತಕ್ಕನಾಗಿ ತೆರಿಗೆಯನ್ನು ಕಟ್ಟದೇ ಕಪ್ಪು ಹಣದ ಕಂತೆಯನ್ನು ಪೇರಿಸಿದ್ದನಷ್ಟೇ! ಅದಕ್ಕೆ ತಕ್ಕನಾಗಿ, ಮೋದಿಯ ಬಳಿ ವರದಿಯೂ ಹೋಗಿತ್ತು! ಸರಿಯಾಗಿ, ತೆರಿಗೆ ಅಧಿಕಾರಿಗಳು ದಾಳಿ ನಡೆಸಿದರು! ಪೇರಿಸಿದ್ದ ಹಣ ಸರಕಾರದ ಪಾಲಾಯಿತು! ತಿರುಗಿ ಬಿದ್ದ ಜೋಸೆಫ್ ವಿಜಯ್ ತಪ್ಪೊಪ್ಪಿಕೊಳ್ಳುವುದನ್ನು ಬಿಟ್ಟು ಮೋದಿಯವರ ಪ್ರತೀ ಯೋಜನೆಯ ಬಗ್ಗೆ ಸುಳ್ಳು ಸುದ್ದಿ ಹರಡಲು ಪ್ರಯತ್ನಿಸಿದ! ವಿಷಯ ಇಷ್ಟೇ!

ಸಿನಿಮಾದಲ್ಲಿ ಹೀರೋ! ವಾಸ್ತವದಲ್ಲಿ ವಿಲನ್!

ಸಿನಿಮಾದಲ್ಲಿ ಅದೆಷ್ಟೋ ಆದರ್ಶವಾದಿಗಳಂತೆ ಡೈಲಾಗ್ ಹೊಡೆಯುವ ಅದೆಷ್ಟೋ ಮಂದಿ ನಟರನ್ನು ಕಾಣಬಹುದು ಇವತ್ತಿನ ಚಿತ್ರರಂಗದಲ್ಲಿ. ಆದರೆ., ಅದೇ ಆದರ್ಶಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳುವುದರಲ್ಲಿ ಮಾತ್ರ ಸಾಧ್ಯವಾಗುವುದೇ ಇಲ್ಲ! ತೆಗೆದುಕೊಂಡಷ್ಟು ದುಡ್ಡಿಗೆ ಪಂಚಿಂಗ್ ಡೈಲಾಗ್ ಗಳನ್ನು ಹೊಡೆದು, ಸಮಾಜದಲ್ಲಿ ಎಂತಹ ಆದರ್ಶ ವ್ಯಕ್ತಿ ಎಂದೆನಿಸಿಕೊಂಡು, ನಿಜ ಜೀವನದಲ್ಲಿ ಖಳನಾಯಕನಂತೆ ಇರುವ ನಟರ ಸಾಲಿನಲ್ಲಿ ಈ ಜೋಸೆಫ್ ವಿಜಯ್
ಕೂಡಾ ಒಬ್ಬ! ಆದರೆ, ಈ ಸಲ ತಾನೇ ತೋಡಿದ ಗುಂಡಿಗೆ ಸ್ವತಃ ಬಲಿಯಾಗಿದ್ದಕ್ಕೆ ಭಾರತೀಯರು ಹೆಮ್ಮೆ ಪಡುತ್ತಿದ್ದಾರೆ!

ತೆರಿಗೆ ಅಧಿಕಾರಿಗಳು ಚೆನ್ನೈನಲ್ಲಿರುವ ಆತನ ಆಸ್ತಿಗಳ ಮೇಲೆ 2015 ರ ಸೆಪ್ಟೆಂಬರ್ 30 ಹಾಗೂ ಅಕ್ಟೋಬರ್ 1 ರಂದು ದಾಳಿ ನಡೆಸಿದ್ದರು! ದಾಳಿ ನಡೆದ ನಂತರ, ಮಾಧ್ಯಮಗಳಿಗೆ ಜೋಸೆಫ್ ವಿಜಯ್ ಐದು ವರ್ಷಗಳಿಂದ ತೆರಿಗೆ ಕಟ್ಟದೇ ವಂಚಿಸಿದ್ದನ್ನು ಬಹಿರಂಗಪಡಿಸಿದ್ದರು.

ರೆಡ್ ಹ್ಯಾಂಡಾಗೇ ಸಿಕ್ಕಿಬಿದ್ದ ಜೋಸೆಫ್ ವಿಜಯ್ ನಂತರದ ಸಿನಿಮಾಗಳಲ್ಲಿಯೂ ಸಹ ಆದರ್ಶ ವ್ಯಕ್ತಿಯಂತೆ ನಟಿಸುವುದನ್ನು ನಿಲ್ಲಿಸಲೂ ಇಲ್ಲ, ಜನ ಆತನನ್ನು ಹೊಗಳುವುದನ್ನೂ ಕಡಿಮೆ ಮಾಡಲಿಲ್ಲ! ಆದರೆ, ಈ ಸಲ, ಮೋದಿಯನ್ನು ವಿರೋಧಿಸುವ ಭರದಲ್ಲಿ ಕೋಟಿ ಹಿಂದೂಗಳ ಧಾರ್ಮಿಕ ಭಾವನೆಯನ್ನೂ ಪ್ರಶ್ನಿಸಿದ್ದಾನೆ ಜೋಸೆಫ್ ವಿಜಯ್ ಎಂಬ ಅಪ್ಪಟ ಖಳನಟ!

ದೇವಸ್ಥಾನದ ಬದಲು ಆಸ್ಪತ್ರೆಗಳನ್ನು ಕಟ್ಟಿ ಎಂದು ಸಲಹೆ ಕೊಟ್ಟ ಈ ನಟನಿಗೆ ಚರ್ಚುಗಳ ಬದಲು ಆಸ್ಪತ್ರೆಗಳನ್ನು ಕಟ್ಟಿ ಎನ್ನುವ ನೈತಿಕತೆಯಾಗಲೀ ಅಥವಾ ಧೈರ್ಯವಾಗಲೀ ಇದೆಯೇ?!

ಈತನ ಹೇಳಿಕೆಗಳನ್ನೆಲ್ಲ ಗಮನಿಸಿದರೆ ಕಾಂಗ್ರೆಸ್ ಪಕ್ಷದ ಥರ್ಡ್ ಪಾರ್ಟಿ ಆಂದೋಲನಕಾರನಂತೆಯೇ ಕಾಣುವ ಹೊತ್ತಲ್ಲೇ, ಕಾಂಗ್ರೆಸ್ ನ ಪಪ್ಪು! ಕ್ಷಮಿಸಿ! ಯೂಥ್ ಐಕಾನ್ ರಾಹುಲ್ ಗಾಂಧಿ ಜೋಸೆಫ್ ವಿಜಯ್ ಪರ ಟ್ವೀಟ್ ಮಾಡಿ ಭಾರೀ ಬೆಂಬಲ ನೀಡಿದ್ದಾರೆ!

ದುರಂತವೆಂದರೆ, ಇದೇ ರಾಹುಲ್ ಗಾಂಧಿಯ ಕಾಂಗ್ರೆಸ್ ಸರಕಾರ ಮಧುರ್ ಭಂಡಾರ್ಕರ್ ರವರ ಸತ್ಯಕಥೆಯಾಧಾರಿತ ‘ಇಂದುಚಿತ್ರ’ ಸಿನಿಮಾವನ್ನು ನಿಷೇಧಿಸಲು ಪ್ರಯತ್ನಪಟ್ಟಿತ್ತು!

ಇದು ಇವತ್ತಿನ ಭಾರತವಾಗಿದೆ ಸ್ವಾಮಿ! ಸಣ್ಣ ಭ್ರಷ್ಟಾಚಾರಿಯೊಬ್ಬ ಸರಕಾರದ ಯೋಜನೆಗಳ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿ ಆರೋಪಿಸಿದಾಗ, ದೊಡ್ಡ ದೊಡ್ಡ ಭ್ರಷ್ಟಾಚಾರಿ ತಿಮಿಂಗಿಲಗಳು ಸಣ್ಣ ಮೀನುಗಳ ಬೆಂಬಲಕ್ಕೆ ನಿಂತುಬಿಡುತ್ತವೆ!

ಆದರೂ, ನಮಗರ ನಂಬಿಕೆಯಿದೆ! ಒಂದಲ್ಲ ಒಂದು ದಿನ ಸತ್ಯ ಹೊರಬರುತ್ತದೆ!

Source :http://zeenews.india.com/regional/bjps-fireworks-against-vijay-for-dialogues-in-mersal-2051120.html

http://www.hindustantimes.com/regional-movies/vijay-partially-evaded-income-tax-for-5-years-it-officials/story-rFHRGQprm64vEZh7xZA0cP.html

– ತಪಸ್ವಿ

Tags

Related Articles

Close