ಪ್ರಚಲಿತ

`ದತ್ತಪೀಠ ಮುಸ್ಲಿಮರಿಗೆ ಸೇರಿದೆ.. ಈದ್‍ಮಿಲಾದ್ ಮೆರವಣಿಗೆಗೆ ಅಡ್ಡಿಯಾಗುವುದರಿಂದ ಹಿಂದೂಗಳು ದತ್ತಯಾತ್ರೆ ನಡೆಸಿದ್ರೆ ಹುಷಾರ್!!!’

ದತ್ತಪೀಠ ಮುಸ್ಲಿಮರಿಗೆ ಸೇರಿರುವುದರಿಂದ ಈ ಬಾರಿ ಹಿಂದೂಗಳು ದತ್ತಪೀಠಕ್ಕೆ ಪಾದಯಾತ್ರೆ ನಡೆಸಬಾರದು. ಈ ಸಂದರ್ಭದಲ್ಲಿ ಮುಸ್ಲಿಮರ ಹಬ್ಬ ಈದ್ ಮಿಲಾದ್ ಇರುವುದರಿಂದ ಅವರಿಗೆ ಮೆರವಣಿಗೆ ನಡೆಸಲು ಅಡ್ಡಿಯಾಗುವುದರಿಂದ ಹಿಂದೂಗಳು ದತ್ತಯಾತ್ರಾ ಮೆರವಣಿಗೆ ನಡೆಸಬಾರದು. ಅಲ್ಲದೆ ರಥಯಾತ್ರೆಯನ್ನೂ ನಡೆಸಬಾರದು. ಈದ್-ಮಿಲಾದ್ ದಿನ ಹಿಂದೂಗಳು ಬೃಹತ್ ಶೋಭಾಯಾತ್ರೆ ನಡೆಸಬಾರದು… ಒಂದುವೇಳೆ ಇದನ್ನು ಮೀರಿಯೂ ಹಿಂದೂಗಳು ಪಾದಯಾತ್ರೆ, ರಥಯಾತ್ರೆ ನಡೆಸಿದರೆ ಅವರ ವಿರುದ್ಧ ಉಗ್ರ ಕಾನೂನು ಕ್ರಮ ಕೈಗೊಳ್ಳಲಾಗುವವುದು…

ಇದನ್ನು ಓದಿ ಬೆಚ್ಚಿಬಿದ್ದಿರಾ? ಖಂಡಿತಾ ಬೆಚ್ಚಿಬೀಳಲೇಬೇಕು. ಯಾಕೆಂದರೆ ಈ ಆದೇಶ ಹೊರಡಿಸಿದ್ದು ಬಾಂಗ್ಲಾದೇಶದಲ್ಲಾಗಲೀ, ಪಾಕಿಸ್ತಾನದಲ್ಲಾಗಲೀ ಅಲ್ಲ.. ಬದಲಿಗೆ ಬಹುಸಂಖ್ಯಾತ ಹಿಂದೂಗಳಿರುವ ಕರ್ನಾಟಕದಲ್ಲಿ.. ಹೌದು ಈ ಬಾರಿ ಚಿಕ್ಕಮಗಳೂರಿನ ದತ್ತಪೀಠಕ್ಕೆ ವಿಶ್ವಹಿಂದೂ ಪರಿಷತ್, ಭಜರಂಗದಳ ಪಾದಯಾತ್ರೆ ನಡೆಸದಂತೆ ಕಾಂಗ್ರೆಸ್ ಏಜೆಂಟರಂತೆ ವರ್ತಿಸುವ ಜಿಲ್ಲಾಡಳಿತ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಂಡಿದ್ದು, ಪಾದಯಾತ್ರೆಗೆ ಬ್ರೇಕ್ ಬೀಳುವ ಎಲ್ಲಾ ಲಕ್ಷಣ ಕಾಣಿಸಿಕೊಂಡಿದೆ.

ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗಿರುವ ಸಿದ್ದರಾಮಯ್ಯನ ಕಾಂಗ್ರೆಸ್ ಸರಕಾರ ಹಿಂದೂಗಳಿಗೆ ಸೇರಿದ ದತ್ತಪೀಠವನ್ನು ಮುಸ್ಲಿಮರಿಗೆ ಒಪ್ಪಿಸುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ. ಕಾಂಗ್ರೆಸ್ ಸರಕಾರದ ಏಜೆಂಟ್‍ನಂತೆ ವರ್ತಿಸುತ್ತಿರುವ ಚಿಕ್ಕಮಗಳೂರು ಜಿಲ್ಲಾಡಳಿತ ಕೇಸರಿ ಧರಿಸಿ ದತ್ತಯಾತ್ರೆ ನಡೆಸುವ ಹಿಂದೂಗಳ ಮೇಲೆ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸಲು ಮುಂದಾಗಿದೆ. ಮೊದಲೇ ದತ್ತಪೀಠದ ಹೆಸರಲ್ಲಿ ಸಾಕಷ್ಟು ಕೋಮುಗಲಭೆ ನಡೆದಿದ್ದು, ಇದೀಗ ಕಾಂಗ್ರೆಸ್ ಸರಕಾರವೇ ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ ಸುರಿಯುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಿದೆ. ಸರಕಾರದ ಈ ನಿರ್ಧಾರದಿಂದ ಭಾರೀ ವಿವಾದ ಉಂಟಾಗುವ ಎಲ್ಲಾ ಲಕ್ಷಣಗಳು ಕಾಣಿಸಿಕೊಂಡಿದೆ.

ಡಿಸೆಂಬರ್ 3ರಂದು ದತ್ತಪೀಠಕ್ಕೆ ಪಾದಯಾತ್ರೆ, ರಥಯಾತ್ರೆ ನಡೆಸಲು ಹಿಂದೂ ಸಂಘಟನೆಗಳು ನಿರ್ಧರಿಸಿದೆ. ಆದರೆ ಅದೇ ದಿನ ಮುಸ್ಲಿಮರ ಈದ್‍ಮಿಲಾದ್ ಹಬ್ಬವೂ ಇದೆ. ಹಿಂದೂ ಸಂಘಟನೆಗಳ ಮುಖಂಡರು ದತ್ತಯಾತ್ರೆ ಮೆರವಣಿಗೆ ನಡೆಸಲು ಜಿಲ್ಲಾಡಳಿತದ ಅನುಮತಿ ಕೇಳಿದಾಗ ಕಡ್ಡಿಮುರಿದಂತೆ ಒಪ್ಪಿಗೆ ಸೂಚಿಸಿಲ್ಲ. ಅಲ್ಲದೆ ಹಿಂದೂಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ. ಜಿಲ್ಲಾಡಳಿತ ಒಪ್ಪಿಗೆ ಸೂಚಿಸದೇ ಇರಲು ಮುಖ್ಯ ಕಾರಣವೇನೆಂದರೆ ಅದೇ ದಿನ ಈದ್ ಮಿಲಾದ್ ಹಬ್ಬವಿದೆ. ಮುಸ್ಲಿಮರ ಈದ್‍ಮಿಲಾದ್ ಮೆರವಣಿಗೆಗೆ ಲಗುಬಗೆಯಿಂದ ಒಪ್ಪಿಗೆ ನೀಡಿದ ಜಿಲ್ಲಾಡಳಿತ ಅವರಿಗೆ ಭಾರೀ ರಕ್ಷಣೆ ಒದಗಿಸಲು ಮುಂದಾಗಿದೆ. ಮುಸ್ಲಿಮರ ಮೆರವಣಿಗೆಗೆ ಅಡ್ಡಿಯಾಗುವುದರಿಂದ ಹಿಂದೂಗಳ ದತ್ತಯಾತ್ರೆಗೆ ಕಾಂಗ್ರೆಸ್ ಏಜೆಂಟ್ ಚಿಕ್ಕಮಗಳೂರು ಜಿಲ್ಲಾಡಳಿತ ನಿರಾಕರಿಸಿದೆ.

ಚಿಕ್ಕಮಗಳೂರಿನಲ್ಲಿ ದತ್ತ ಜಯಂತಿಗೆ ಬಜರಂಗದಳ ಹಾಗೂ ವಿಎಚ್‍ಪಿಯು ಚಾಲನೆ ನೀಡಿದೆ. ರಾಜ್ಯದಾದ್ಯಂತ ಸಾವಿರಾರು ಮಂದಿ ಹಿಂದೂ ಕಾರ್ಯಕರ್ತರು ಮಾಲಾಧಾರಣೆಯನ್ನು ಮಾಡಿದ್ದಾರೆ. ದತ್ತ ಜಯಂತಿ ಅಂಗವಾಗಿ ರಥಯಾತ್ರೆ ಮೂಲಕ ಸಾರ್ವಜನಿಕರಿಗೆ ದತ್ತ ಪೀಠದ ಮಾಹಿತಿ ನೀಡುವುದು ಹಿಂದೂ ಸಂಘಟನೆಯ ಉದ್ದೇಶವಾಗಿತ್ತು. ಕಾರ್ಯಕ್ರಮ ಶಾಂತಿಯುತವಾಗಿ ನಡೆಸಲು ಹಿಂದೂಸಂಘಟನೆಗಳು ನಿರ್ಧರಿಸಿದ್ದವು. ಆದರೆ ಜಿಲ್ಲಾಡಳಿತ ಈದ್-ಮಿಲಾದ್ ಹಬ್ಬದ ನೆಪವೊಡ್ಡಿ ಅನುಮತಿ ನಿರಾಕರಿಸಿದೆ. ಹಿಂದೂಗಳನ್ನು ಹತ್ತಿಕ್ಕಲು ಎಲ್ಲಿಲ್ಲದಂತೆ ಪ್ರಯತ್ನ ನಡೆಸುತ್ತಿರುವ ಕಾಂಗ್ರೆಸ್ ಸರಕಾರಕ್ಕೆ ಈ ಬಾರಿ ದತ್ತಪೀಠವೊಂದು ನೆಪವಾಗಿದೆ.

ಚಿಕ್ಕಮಗಳೂರಿನ ದತ್ತಪೀಠವಿರುವ ಚಂದ್ರದ್ರೋಣ ಪರ್ವತ ಪ್ರದೇಶ ರಮಣೀಯ ತಾಣ. ಇದು ಗುಹಾಂತರ ದೇವಾಲಯ. ಸಾವಿರಾರು ವರ್ಷಗಳಿಂದ ಇದು ಹಿಂದುಗಳ ಶ್ರದ್ಧಾಕೇಂದ್ರವಾಗಿತ್ತು. ಅಲ್ಲದೆ ಈ ಗುಹೆಯಲ್ಲಿ ದತ್ತಾತ್ರೇಯರ ಮೂರ್ತಿ ಇದೆ. ನಿತ್ಯ ಪೂಜೆ ಮಾಡುತ್ತಿದ್ದ ವಿಚಾರವು ಸ್ವತಃ ಮುಸಲ್ಮಾನ ಮಠದ ವ್ಯಕ್ತಿಯಾದ ಶಾಖಾದ್ರಿಯೇ ಪ್ರಕಟಿಸಿದ (ಖಲಂದಿರಿಯಾ ಬರ ಹಾಶ್) ಎಂಬ ಪುಸ್ತಕದಲ್ಲಿಯೂ ಉಲ್ಲೇಖವಿದೆ. ಆದರೆ ಹೈದರಾಲಿ ಹಾಗೂ ಟಿಪ್ಪುವಿನ ಕಾಲದಲ್ಲಿ ಇದನ್ನು ಇಸ್ಲಾಮೀಕರಿಸಲಾಯಿತು. ವೇದಗಳ ಅಧ್ಯಯನದ ನಾಲ್ಕು ಪೀಠಗಳನ್ನು ನಾಲ್ಕು ಗೋರಿಗಳನ್ನಾಗಿ ಪರಿವರ್ತಿಸಲಾಯಿತು. ದತ್ತಾತ್ರೇಯ ದೇವರ ಹೆಸರಿನ ಖಾತೆಯ ನೂರಾರು ಎಕರೆ ಭೂಮಿಯನ್ನು ಮಾರಾಟ ಮಾಡಲಾಯಿತು. ಸುಮಾರು 1725 ವರೆಗೂ ಇದು ಹಿಂದೂ ಧರ್ಮೀಯರ ಕೇಂದ್ರವಾಗಿತ್ತು ಎನ್ನುವುದಕ್ಕೆ ದಾಖಲೆಗಳಲ್ಲಿ ಆಧಾರಗಳು ಸಿಗುತ್ತವೆ.

ದತ್ತಪೀಠವು ನಿಸ್ಸಂದೇಹವಾಗಿ ಹಿಂದೂಗಳಿಗೆ ಸೇರಿದುದಾಗಿದೆ. ರೆವೆನ್ಯೂ ದಾಖಲೆಗಳ ಪ್ರಕಾರವೂ ವಿವಾದಾತ್ಮಕ ದತ್ತ ಸ್ಥಳ ಹಿಂದೂಗಳಿಗೆ ಸೇರಿದೆ. ಹಿಂದೂಗಳು ಅಲ್ಲಿ ಮುಂಚೆಯಿಂದಲೂ ಪೂಜೆ ಹಾಗೂ ಧಾರ್ಮಿಕ ವಿಧಿಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಬಾಬಾಬುಡನ್ ಅಸಲಿ ದರ್ಗಾ ನಾಗನಹಳ್ಳಿ ಕಂದಾಯ ವ್ಯಾಪ್ತಿಗೆ ಸೇರಿದ್ದಾಗಿದೆ. ಇದು ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್‍ಗಿರಿಯಿಂದ ತುಂಬಾ ದೂರದಲ್ಲಿದೆ. ದತ್ತಪೀಠವು ಕಂದಾಯ ದಾಖಲೆಗಳ ಪ್ರಕಾರ ನಿಸ್ಸಂಶಯವಾಗಿ ಹಿಂದೂಗಳಿಗೆ ಸೇರಿದ್ದರೂ ಅದನ್ನು ಇದುವರೆಗೂ ಹಿಂದೂಗಳಿಗೆ ಒಪ್ಪಿಸಲಾಗಿಲ್ಲ.

ಅಯೋಧ್ಯಾದಂತೆ ದತ್ತಪೀಠವನ್ನು ಅತಿಕ್ರಮಣ ಮಾಡಿರುವ ಮುಸ್ಲಿಮರು ಇದೀಗ ಅದನ್ನು ತನ್ನದೆನ್ನುತ್ತಿದ್ದಾರೆ. ದತ್ತಪೀಠವನ್ನು ಸಂಪೂರ್ಣವಾಗಿ ಹಿಂದೂಗಳಿಗೆ ಒಪ್ಪಿಸಬೇಕೆಂದು ಹಿಂದೂ ಸಂಘಟನೆಗಳು ಹೋರಾಟ ನಡೆಸುತ್ತಿದೆ. ಆದರೆ ಅಲ್ಪಸಂಖ್ಯಾತರ ಓಲೈಕೆಗೆ ಇಳಿದಿರುವ ಸಿದ್ದರಾಮಯ್ಯನ ಕಾಂಗ್ರೆಸ್ ಸರಕಾರ ದತ್ತಪೀಠವನ್ನು ಮುಸ್ಲಿಮರಿಗೆ ಒಪ್ಪಿಸಲು ಮುಂದಾಗಿದೆ.. ಇದು ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದ್ದು, ರಾಜ್ಯಾದ್ಯಂತ ಭಾರೀ ಪ್ರತಿಭಟನೆ ನಡೆಯುವ ಸಾಧ್ಯತೆ ಇದೆ.

-ಚೇಕಿತಾನ

Tags

Related Articles

Close