ಪ್ರಚಲಿತ

ನಿಮ್ಮ ಮಕ್ಕಳಿಗೆ ಅವರ ದೇಹವನ್ನು ರಕ್ಷಿಸಿಕೊಳ್ಳುವ ಬಗ್ಗೆ ಎಷ್ಟು ಅರಿವು ನೀಡಿದ್ದೀರಿ?! ‘ಲೈಂಗಿಕ ಕಿರುಕುಳ’ ದಿಂದ ಮಕ್ಕಳನ್ನು ಪಾರು ಮಾಡಲು ಇಲ್ಲಿದೆ ಒಂದಷ್ಟು ಎಚ್ಚರಿಕೆಗಳು!

ನಾವು ನಮ್ಮ ಮಕ್ಕಳನ್ನು ಹೇಗೆ ಸುರಕ್ಷಿತವಾಗಿರಿಸಿಕೊಳ್ಳಬೇಕು ಎಂಬುವುದನ್ನು ನಮ್ಮ ಮಕ್ಕಳಿಗೆ ಅದೆಷ್ಟೋ ವಿಧಗಳಲ್ಲಿ ಕಲಿಸಿಕೊಡುತ್ತೇವೆ. ಉದಾಹರಣೆಗೆ ಬಿಸಿ ಸ್ಷೌವ್‍ನ್ನು ನೋಡಲು ಕಲಿಸುತ್ತೇವೆ!! ವಾಹನಗಳು ಒಡಾಡುವ ರಸ್ತೆಯನ್ನು ದಾಟಲು, ಮುಂಚಿತವಾಗಿಯೇ ಎರಡೂ ಮಾರ್ಗಗಳನ್ನು ನೋಡಲು ಕಲಿಸುತ್ತೇವೆ!! ಆದರೆ ದೇಹದ ಸುರಕ್ಷತೆಯ ಬಗ್ಗೆ ನಾವು ಎಂದೂ ಕಲಿಸಿಕೊಡುವುದಿಲ್ಲ. ಆದರೆ ಕೆಲವೊಂದು ಸಲ ಕಲಿಸಿಕೊಡಬೇಕು ಎಂದು ತಿಳಿದರೂ ಕೂಡ ಅದು ತಡವಾಗಿ ಹೋಗಿರುತ್ತೆ!!

ಹೌದು..ಭಾರತದಲ್ಲಿರುವ ಕೆಲವು ಮಕ್ಕಳಲ್ಲಿ ಒಂದಿಷ್ಟು ಮಕ್ಕಳು ಈಗಾಲೂ ಅಸುರಕ್ಷಿತವಾಗಿದ್ದಾರೆ: ಇಲ್ಲಿ ಅಪರಿಚಿತರಿಂದಲೇ ಮಕ್ಕಳ ರಕ್ಷಣೆಯ ಕೊರತೆಗಳು ಕಂಡು ಬರುತ್ತಿದೆ. ಭೌತಿಕವಾಗಿ, ಭಾವನಾತ್ಮಕವಾಗಿರುವ ನಡೆಯುವ ದುರ್ಬಳಕೆ ಅಥವಾ ಇದು ಹಿಂಸಾಚಾರದ ಗುರಿಯಾಗಿದ್ದಾರೆ, ಈ ಬಗ್ಗೆ ಕಾಳಜಿವಹಿಸುವುದು ಅತಿ ಮುಖ್ಯವಾಗಿದೆ. “ಸ್ಮಾಲ್ ವಾಯ್ಸಸ್, ಬಿಗ್ ಡ್ರಿಮ್” ಎನ್ನುವ ಸಮೀಕ್ಷೆಯನ್ನು ಇತ್ತೀಚೆಗೆ ಅಂತರಾಷ್ಟ್ರೀಯ ಮಕ್ಕಳ ನಿಧಿ ನಡೆಸಿದ್ದು, ಇದರಲ್ಲಿ ಜಗತ್ತಿನಾದ್ಯಂತ 10 ರಿಂದ 12 ವರುಷದ 6000 ಮಕ್ಕಳನ್ನು ಈ ಒಂದು ಸರ್ವೇಯಲ್ಲಿ ಬಳಸಿಕೊಳ್ಳಲಾಗಿದೆ.

ಇದೊಂದು ಅಸಹ್ಯಪಡುವ ಸಂಗತಿಯೇ ಎಂದು ಕೇಳಿದರೆ, ಅದು ಖಂಡಿತವಾಗಿಯೂ ಹೌದು… ಆದರೆ ಅಸಹ್ಯ ಪಡುವಂತೆ, ಸ್ವಲ್ಪ ಮಟ್ಟಿಗೆ ಮಾಡಬಹುದು ಎಂದು ಕೆಲವರು ಉಲ್ಲೇಖಿಸುತ್ತಾರೆ. ಕೆಲ ಪೋಷಕರು ಹೇಳುವುದೆಂದರೆ, ನಮ್ಮ ಮಕ್ಕಳಿಗೆ ಈ ರೀತಿ ಸಂಭವಿಸುತ್ತೆ ಅಂತ ಭಾವಿಸಿರಲಿಲ್ಲ. ಯಾಕೆಂದರೆ ಅವರು ತಮ್ಮ ಮಕ್ಕಳನ್ನು ಅಪರಿಚಿತರೊಂದಿಗೆ ಬಿಟ್ಟು ಹೋಗುವುದಿಲ್ಲ. ಅಷ್ಟೇ ಅಲ್ಲದೇ ಯಾವಾಗಲೂ ತಮ್ಮ ಮಕ್ಕಳ ಮೇಲೆ ಒಂದು ದೃಷ್ಟಿಯನ್ನು ಇಟ್ಟುಕೊಂಡಿರುತ್ತೇವೆ ಎಂದು.

ನಿಮ್ಮ ಮಕ್ಕಳು ಡೇ ಕೇರ್ ಅಥವಾ ಪ್ರೀ- ಸ್ಕೂಲ್‍ಗೆ ಹೋಗುತ್ತಿದ್ದಾರಾ? ನೀವು ನಿಮ್ಮ ಸ್ನೇಹಿತರು ಅಥವಾ ಕುಟುಂಬವನ್ನು ಹೊಂದಿದ್ದೀರಾ? ಪಕ್ಕದ
ಮನೆಯವರೊಂದಿಗೆ ನಿಮ್ಮ ಮಕ್ಕಳು ಆಟವಾಡುತ್ತಾರೆಯೇ? ವಾಸ್ತವವಾಗಿ, ನಿಮ್ಮ ಮಗುವಿಗೆ ಲೈಂಗಿಕ ದುರ್ಬಳಕೆಯನ್ನು ಪೂರ್ತಿಯಾಗಿ ತಡೆಯಲು ಸಾಧ್ಯವಿಲ್ಲ. ಆದರೆ ಪೋಷಕರು ತಮ್ಮ ಮಕ್ಕಳಿಗೆ ಜಗತ್ತಿನ ಸುತ್ತಮುತ್ತಗೆ ಸಂಚರಿಸಿ, ಸಂವಹನ ನಡೆಸಲು ಅವಕಾಶ ನೀಡಬೇಕು. ಹಾಗಾದರೆ, ನಾವು ನಮ್ಮ ಮಕ್ಕಳನ್ನು ಬಲಿಪಶುಗಳನ್ನಾಗಿ ಮಾಡುವ ಬದಲು ಅವರನ್ನು ರಕ್ಷಿಸಿಕೊಳ್ಳುವ ಬಗೆ ಹೇಗೆ? “ನಮ್ಮ ಮಕ್ಕಳಿಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳುವಲ್ಲಿ ಕೌಶಲ್ಯವನ್ನು ಭೋದಿಸುವುದು” ಅತೀ ಸೂಕ್ತವಾದ ವಿಚಾರ.

ಸಾಕಷ್ಟು ಜನ ಪೋಷಕರು ತಮ್ಮ ಮಕ್ಕಳೊಂದಿಗೆ ದೇಹ ರಕ್ಷಣೆಯ ಬಗ್ಗೆ ಮುಂಚಿತವಾಗಿ ಮಾತಾನಾಡುವುದೇ ಇಲ್ಲ. ಯಾಕೆಂದರೆ ತಮ್ಮ ಮಕ್ಕಳು ಇನ್ನೂ ಸಣ್ಣವರು ಇದೆಲ್ಲ ಅವರಿಗೆ ಅರ್ಥವಾಗಲು ಸಾಧ್ಯವಿಲ್ಲ ಎಂದು ತಿಳಿದುಕೊಳ್ಳುತ್ತಾರೆ. ಹಾಗಾಗಿ ಇದು ತುಂಬಾ ಭಯನಕವಾದದ್ದು!! ಆದರೆ ಇಲ್ಲಿ ಭಯಪಟ್ಟಿಕೊಳ್ಳುವ ಸಂಗತಿ ಏನಿಲ್ಲ. ನಿಮ್ಮ ಮಗುವಿಗೆ ಲೈಂಗಿಕ ದುರ್ಬಳಕೆ ಕಡಿಮೆಯಾಗಲು ಹಾಗೂ ನಿಮಗೆ ಸಹಾಯ ಮಾಡಲು ಇಲ್ಲಿವೆ 10 ವಿಷಯಗಳು:

1. ದೇಹದ ಭಾಗಗಳ ಬಗ್ಗೆ ಮಾತಾನಾಡಿ

ದೇಹದ ಭಾಗಗಳ ಹೆಸರನ್ನು ಮಕ್ಕಳಿಗೆ ಮುಂಚಿತವಾಗಿ ತಿಳಿಸಿಕೊಡಿ ಅಷ್ಟೇ ಅಲ್ಲದೇ, ಅದರ ಬಗ್ಗೆ ಮಕ್ಕಳೊಂದಿಗೆ ಮಾತಾನಾಡಿ. ಮಕ್ಕಳಿಗೆ ದೇಹದ ಭಾಗಗಳನ್ನು ಹೇಳುವಾಗ ಸರಿಯಾದ ಹೆಸರನ್ನು ಬಳಸಿ. ಚಿಕ್ಕಮಕ್ಕಳು ಅವರ ಯೋನಿಯನ್ನು “ಕೆಳಭಾಗ” ಎಂದು ಕರೆಯುತ್ತಾರೆ. ಈ ಪದವನ್ನು ಉಪಯೋಗಿಸುವುದು ತುಂಬಾ ಸೂಕ್ತ ಎಂದು ತಿಳಿಯುತ್ತೆ ಯಾಕಂದರೆ ಮಕ್ಕಳು ಸುಲಭವಾಗಿ ಮಾತಾನಾಡುವ ಪದವಾಗಿರುವುದರಿಂದ ಇದು ಸುಲಭವಾಗಿರುತ್ತದೆ.

2. ನಿಮ್ಮ ಮಗುವಿನ ದೇಹದಲ್ಲಿನ ಖಾಸಗಿಭಾಗಗಳ ಬಗ್ಗೆ ತಿಳಿಸಿ

ನಿಮ್ಮ ಮಗುವಿಗೆ ಅವರ ದೇಹದಲ್ಲಿರುವ ಖಾಸಗಿ ಭಾಗಗಳನ್ನು ತಿಳಿಸಿಕೊಡಿ. ಯಾಕೆಂದರೆ ಅದನ್ನು ಪ್ರತಿಯೊಬ್ಬರು ನೋಡಲು ಸಾಧ್ಯವಿಲ್ಲ. ಅಷ್ಟೇ ಅಲ್ಲದೇ ಅಪ್ಪ ಮತ್ತು ಅಮ್ಮ ಮಾತ್ರ ಬೆತ್ತಲೆಯಾಗಿ ನೋಡಬಹುದೆಂದು ನಿಮ್ಮ ಮಕ್ಕಳಿಗೆ ವಿವರಿಸಿ. ಆದರೆ ಬೇರೆಯವರು ಮೈಮೇಲೆ ಬಟ್ಟೆ ಇದ್ದಾಗ ಮಾತ್ರ ನೋಡಬೇಕು. ಅಲ್ಲದೇ ಡಾಕ್ಟರ್‍ಗಳ ಬಗ್ಗೆಯು ವಿವರೆಸಿ, ಡಾಕ್ಟರ್ ನಿಮ್ಮ ದೇಹವನ್ನು ಪರೀಕ್ಷಿಸುವ ವೇಳೆ ಅಪ್ಪ ಮತ್ತು ಅಮ್ಮ ನಿಮ್ಮ ಜೊತೆ ಇರುತ್ತಾರೆ ಎಂಬುವುದನ್ನು ತಿಳಿಸಿ.

3. ದೇಹದ ಹೊರಮೈ ಭಾಗಗಳ ಬಗ್ಗೆ ತಿಳಿ ಹೇಳಿ

ಯಾರೂ ತಮ್ಮ ಖಾಸಗಿ ಭಾಗಗಳನ್ನು ಅಥವಾ ಗುಪ್ತಭಾಗಗಳನ್ನು ಸ್ಪರ್ಶಿಸಲು ಬಿಡಬಾರದು ಮತ್ತು ಬೇರೆ ಯಾರ ಗುಪ್ತಭಾಗಗಳನ್ನು ಸ್ಪರ್ಶಿಸಲೂ ಹೇಳಿದರೂ ಕೂಡ ಮುಟ್ಟಬಾರದು ಎಂದು ನಿಮ್ಮ ಮಗುವಿಗೆ ಪ್ರಾಯೋಗಿಕವಾಗಿ ಹೇಳಿಕೊಡಬೇಕು. ಕೆಲವು ಪೋಷಕರು ಈ ಮಾತಾನ್ನು ಹೇಳಲು ಮರೆತು ಬಿಡುತ್ತಾರೆ.
ವಿಪರ್ಯಾಸವೆಂದರೆ ಈಗ ಮಕ್ಕಳನ್ನು ದುರುಪಯೋಗಪಡಿಸಿಕೊಳ್ಳುವವರೇ ಹೆಚ್ಚು. ಹಾಗಾಗಿ ಸ್ಪರ್ಶಿಸಲು ಹೇಳುವುದರಿಂದಲೇ ಲೈಂಗಿಕ ಕಿರುಕುಳ ಹೆಚ್ಚಾಗಿ
ಆರಂಭವಾಗುತ್ತದೆ.

4. ನಿಮ್ಮ ದೇಹದಲ್ಲಿರುವ ರಹಸ್ಯಗಳು ಸರಿಯಾಗಿಲ್ಲ ಎಂದು ನಿಮ್ಮ ಮಗುವಿಗೆ ತಿಳಿಸಿ

ಅದೆಷ್ಟೋ ದುಷ್ಕರ್ಮಿಗಳು ಲೈಂಗಿಕ ನಿಂದನೆಯನ್ನು ರಹಸ್ಯವಾಗಿಡಲು ಹೇಳುತ್ತಾರೆ. ಇದು ಹೇಗೆ ನಡೆಯುತ್ತೆ ಎಂದರೆ ” ನನಗೆ ನಿನ್ನ ಜೊತೆ ಆಟವಾಡುವುದೆಂದರೆ ನನಗೆ ತುಂಬಾ ಇಷ್ಟ, ಆದರೆ ಇದನ್ನು ನೀನು ಯಾರಲ್ಲಾದರೂ ಹೇಳಿದರೆ ನಾನು ನಿನ್ನ ಜೊತೆ ಆಟವಾಡಲು ಬರುವುದಿಲ್ಲ” ಅಥವಾ “ಇದು ರಹಸ್ಯ ವಿಚಾರವಾಗಿದ್ದು, ಇದನ್ನು ನೀನು ಯಾರ ಜೊತೆಯಾದರೂ ಹೇಳಿದರೆ ಅದು ನೀನೇ ಮಾಡಿದ್ದು ಎಂದು ಹೇಳುತ್ತೇನೆ ಮತ್ತು ನೀನು ದೊಡ್ಡ ಸಮಸ್ಯೆಗಳನ್ನು ಎದುರಿಸುತ್ತಿಯಾ! ಎಂದು ಕೆಲವರು ಬೆದರಿಕೆಗಳನ್ನು ಒಡ್ಡುತ್ತಾರೆ. ಹಾಗಾಗಿ ನಿಮ್ಮ ಮಕ್ಕಳಿಗೆ ಹೇಳಿ, ಯಾರಾದರೂ ನಿಮ್ಮ ದೇಹದ ರಹಸ್ಯ ಸರಿಯಾಗಿಲ್ಲ ಮತ್ತು ನಿಮ್ಮ ದೇಹವನ್ನು ರಹಸ್ಯವಾಗಿಡಲು ಹೇಳಿದರೆ ಅಥವಾ ಪ್ರಯತ್ನಿಸಿದರೆ ಯಾವಾಗಲೂ ನೀವು ನಮ್ಮ ಜೊತೆ ಹೇಳಬೇಕು ಎಂದು ಹೇಳಿ.

5. ಯಾರೂ ಕೂಡ ತಮ್ಮ ಖಾಸಗಿ ಭಾಗಗಳ ಚಿತ್ರವನ್ನು ತೆಗೆಸಿಕೊಳ್ಳಲು ಬಿಡಲೇಬಾರದು ಎಂದು ನಿಮ್ಮ ಮಗುವಿಗೆ ತಿಳಿಸಿ

ಕೆಲವು ಸಲ ಪೋಷಕರು ಇದನ್ನು ಹೇಳಲು ಮರೆತುಬಿಡುತ್ತಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಮಕ್ಕಳ ನಗ್ನಚಿತ್ರಗಳನ್ನು ಹಾಕಿ ವ್ಯಾಪಾರ ಮಾಡುವ ಅದೆಷ್ಟೋ ಶಿಶುಕಾಮಿಗಳು ಇದಕ್ಕಾಗಿಯೇ ಕಾಯುತ್ತಿದ್ದಾರೆ. ಇದು ಶಿಶುಕಾಮಿಗಳಿಗೆ ಸಾಂಕ್ರಾಮಿಕ ರೋಗವಾಗಿದ್ದು ಮಾತ್ರವಲ್ಲದೇ ನಿಮ್ಮ ಮಗುವಿಗೆ ಅಪಾಯನ್ನುಂಟು ಮಾಡುತ್ತದೆ. ನಿಮ್ಮ ಮಕ್ಕಳಿಗೆ ಯಾರೂ ಕೂಡ ಖಾಸಗಿ ಭಾಗಗಳ ಚಿತ್ರವನ್ನು ತೆಗೆದುಕೊಳ್ಳಲು ಬಿಡಬಾರದು ಎಂದು ತಿಳಿಸಿ.

6. ನಿಮ್ಮ ಮಕ್ಕಳಿಗೆ ಹೆದರಿಕೆಯಿಂದ ಹೊರಬರಲು ಮತ್ತು ಅಹಿತಕರ ಸಂದರ್ಭಗಳನ್ನು ಎದುರಿಸುವುದು ಹೇಗೆ ಎಂದು ನಿಮ್ಮ ಮಕ್ಕಳಿಗೆ ತಿಳಿಸಿ

ಕೆಲವು ಮಕ್ಕಳಿಗೆ ಈ ವಿಚಾರದ ಬಗೆಗೆ ಕೆಲವರೊಂದಿಗೆ ಹೇಳಿಕೊಳ್ಳಲು ಮುಜುಗರವನ್ನು ಉಂಟು ಮಾಡುತ್ತದೆ. ವಿಶೇಷವಾಗಿ ವಯಸ್ಕರೊಂದಿಗೆ ಅಥವಾ
ಹಿರಿಯರೊಂದಿಗೆ ಹೇಳಿಕೊಳ್ಳಲು ಮಕ್ಕಳು ಹಿಂಜರಿಯುತ್ತಾರೆ. ಹಾಗಾಗಿ ಅಹಿತಕರವಾದ ಸಂದರ್ಭದಲ್ಲಿ ವಯಸ್ಕರೊಂದಿಗೆ ಹೇಳುವುದು ಸರಿ, ಅವರು ತಪ್ಪಾಗಿ
ಭಾವಿಸಿದರೆ ಪರವಾಗಿಲ್ಲ ನೀವು ಹೇಳಿದರೆ ಅಹಿತಕರ ಸಂದರ್ಭದಿಂದ ಹೊರಬರಲು ಸಹಾಯವಾಗುತ್ತದೆ ಎಂದು ನಿಮ್ಮ ಮಕ್ಕಳಿಗೆ ಹೇಳಿ ಕೊಡಿ. ಯಾರಾದರು ನಿಮ್ಮ ಮಕ್ಕಳ ಖಾಸಗಿ ಭಾಗವನ್ನು ನೋಡಲು ಅಥವಾ ಸ್ಪರ್ಶಿಸಲು ಬಯಸಿದರೆ ಕ್ಷುಲ್ಲಕರಾಗಿ ಸುಮ್ಮನೆ ಹಿಂತಿರುಗಿಬರುವಂತೆ ನಿಮ್ಮ ಮಕ್ಕಳಿಗೆ ಸಲಹೆ ನೀಡಿ.

7. ಅಸುರಕ್ಷಿತವಾಗಿದ್ದಾಗ, ಕೋಡ್‍ವರ್ಡ್‍ಗಳನ್ನು ಬಳಸುವಂತೆ ನಿಮ್ಮ ಮಕ್ಕಳಿಗೆ ಹೇಳಿ

ನಿಮ್ಮ ಮಕ್ಕಳು ಸ್ವಲ್ಪ ದೊಡ್ಡವರಾದಾಗ ಅವರಿಗೆ ಕೋಡ್‍ವರ್ಡ್‍ಗಳನ್ನು ನೀಡಬಹುದು, ಈ ಪದಗಳನ್ನು ಅವರು ಅಸುರಕ್ಷತೆಯಿಂದ ಇದ್ದಾಗ ಬಳಸಿಕೊಳ್ಳಬಹುದು. ಈ ಕೋಡ್‍ವರ್ಡ್‍ಗಳನ್ನು ಮನೆಗೆ ಯಾರಾದರೂ ಅತಿಥಿಗಳು ಬಂದಿದ್ದಾಗ ಅಥವಾ ಎಲ್ಲಾದರೂ ಹೊರಗಡೆ ಹೋದಾಗ ಅಥವಾ ನಿದ್ರೆಯ ಸಮಯದಲ್ಲಿ ಈ ಪದಗಳನ್ನು ಬಳಸಬಹುದು.

8. ನಮ್ಮ ದೇಹದ ಬಗೆಗಿನ ರಹಸ್ಯಗಳನ್ನು ತಿಳಿಸಿದರೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿ

ಮಕ್ಕಳು ಏನನ್ನು ಹೇಳಿಕೊಳ್ಳುವುದಿಲ್ಲ ಯಾಕೆಂದರೆ ಪೋಷಕರು ಹೇಳಿದ್ದನ್ನು ಕೇಳಿಸಿಕೊಳ್ಳುವುದಿಲ್ಲ ಅಥವಾ ಬೆದರಿಸುತ್ತಾರೆ ಎಂದು! ಈ ಭಯವನ್ನು ಸಾಮಾನ್ಯವಾಗಿ ಮಕ್ಕಳಿಗೆ ಅಪರಾಧಿಗಳು ಹೇಳಿಕೊಡುತ್ತಾರೆ. ದೇಹದ ಸುರಕ್ಷತೆ ಅಥವಾ ದೇಹದ ರಹಸ್ಯಗಳ ಬಗ್ಗೆ ಪೋಷಕರೊಂದಿಗೆ ಹೇಳಿದರೆ ಯಾವತ್ತು ತೊಂದರೆ ಆಗುವುದಿಲ್ಲ ಎಂದು ತಿಳಿಸಿ ಕೊಡಿ.

9. ದೇಹವನ್ನು ಸ್ಪರ್ಶಿಸುವಾಗ ಕೆರಳಿಸುವ ಹಾಗೆ ಅಥವಾ ಉತ್ತಮವಾಗಬಹುದೆಂದು ನಮ್ಮ ಮಕ್ಕಳಿಗೆ ತಿಳಿಸಿ

ಹಲವಾರು ಪೋಷಕರು ಮತ್ತು ಕೆಲವು ಪುಸ್ತಕಗಳು ಹೇಳುವ ಪ್ರಕಾರ “ಉತ್ತಮ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶದ” ಬಗ್ಗೆ ಹೇಳುತ್ತಾರೆ, ಆದರೆ ಇದು
ಗೊಂದಲಕ್ಕೊಳಗಾಗಬಹುದು. ಯಾಕೆಂದರೆ ಈ ಸ್ಪರ್ಶಗಳು ಯಾವತ್ತು ಕೆಟ್ಟದ್ದಾಗಿ ಅಥವಾ ಹಾನಿಯನ್ನು ಉಂಟುಮಾಡುವುದಿಲ್ಲ. “ರಹಸ್ಯ ಸ್ಪರ್ಶಗಳು”
ಉತ್ತಮವಾಗಿದ್ದರೂ ಕೂಡ ಲೈಂಗಿಕವಾಗಿ ಅಸಭ್ಯವೆಂದು ನಿಮ್ಮ ಮಕ್ಕಳಿಗೆ ತಿಳಿಸಿ.

10. ಈ ಎಲ್ಲಾ ನಿಯಮಗಳು ನಮಗೆ ಗೊತ್ತಿರುವ ಜನರಿಗೆ ಹಾಗೂ ನಿಮ್ಮೊಂದಿಗಿರುವ ಮಗುವಿಗೂ ಅನ್ವಯವಾಗುತ್ತೆ ಎಂದು ನಿಮ್ಮ ಮಗುವಿಗೆ ತಿಳಿಸಿ

ನಿಮ್ಮ ಮಗುವಿನೊಂದಿಗೆ ಚರ್ಚೆ ಮಾಡಲು ಇದು ಬಹಳ ಉತ್ತಮವಾದ ವಿಷಯವಾಗಿದೆ. ಕೆಲವು ಸಲ ನಿಮ್ಮ ಮಕ್ಕಳು “ಕೆಟ್ಟ ಮಕ್ಕಳು” ಹೇಗಿರುತ್ತಾರೆ ಎಂದಾಗ
ಹಾಸ್ಯಾಸ್ಪವಾಗಿ ಚಿತ್ರಣವನ್ನು ನೀಡುತ್ತೇವೆ. ಆಗ ಮಕ್ಕಳಿಗೆ ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡುತ್ತೆ. ಅಷ್ಟೇ ಅಲ್ಲದೇ ನೀವು ನಿಮ್ಮ ಮಕ್ಕಳಿಗೆ “ಅಮ್ಮ ಮತ್ತು ಅಪ್ಪ
ನಿಮ್ಮನ್ನು ಶುಚಿಗಳಿಸುವಾಗ ಖಾಸಗಿ ಭಾಗವನ್ನು ಮುಟ್ಟಬಹುದು, ಆದರೆ ಬೇರಾರು ಮುಟ್ಟುವ ಹಾಗಿಲ್ಲ. ಸ್ನೇಹಿತರಾಗಲಿ, ಚಿಕ್ಕಪ್ಪ ಚಿಕ್ಕಮ್ಮ, ಅತ್ತೆ ಮಾವ, ಶಿಕ್ಷಕರುಗಳೇ ಆಗಲಿ ಯಾರೂ ಕೂಡ ಖಾಸಗಿ ಭಾಗವನ್ನು ಮುಟ್ಟಬಾರದು ಎಂದು ತಿಳಿ ಹೇಳಿ. ಒಂದು ವೇಳೆ ಯಾರಾದರೂ ಮುಟ್ಟಿದರೆ ಅವರು ಕೆಟ್ಟ ವ್ಯಕ್ತಿಗಳಾಗುತ್ತಾರೆ ಎಂದು ಮಕ್ಕಳಿಗೆ ಹೇಳಿ ಕೊಡಿ.

ಆದರೆ ಇದರಿಂದ ಲೈಂಗಿಕ ದುರುಪಯೋಗ ಸಂಪೂರ್ಣವಾಗಿ ತಡೆಗಟ್ಟಬಹುದೆಂದು ಹೇಳಲಾಗುವುದಿಲ್ಲ. ಆದರೆ ಮುಗ್ದ ಮಕ್ಕಳೇ ಅಜ್ಞಾನಿ ಯುವಕರ ಕೆಂಗಣ್ಣಿಗೆ
ಗುರಿಯಾಗುತ್ತಾರೆ. ಆದರೆ ಇದರ ಬಗ್ಗೆ ಒಂದು ಚರ್ಚೆ ಸಾಕಾಗುವುದಿಲ್ಲ. ಮಕ್ಕಳು ಸ್ನಾನದ ಸಮಯದಲ್ಲಿ ಅಥವಾ ವಿವಸ್ತ್ರವಾಗಿದ್ದಾಗ ಯಾರೂ ಬರದಂತೆ ತಿಳಿ ಹೇಳಿ. ಹಾಗಾಗಿ ಮಕ್ಕಳ ಬಗ್ಗೆ ಕಾಳಜಿವಹಿಸುವುದು ಬಹು ಮುಖ್ಯವಾಗಿದ್ದಲ್ಲದೇ ಜಾಗೃತಿಯನ್ನು ವಹಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: https://dranupamaverma.com/home/

– ಅಲೋಖಾ

 

Teach Your Child The Skill To Protect Their Body From Abuse

Tags

Related Articles

Close