ಪ್ರಚಲಿತ

ನೀರೊಳಗಿದೆ ಎನ್ನುವುದನ್ನು ಯಾರಿಂದಲೂ ಪತ್ತೆ ಹಚ್ಚಲು ಸಾಧ್ಯವಾಗದ ಮೇಡ್ ಇನ್ ಇಂಡಿಯಾ “ಕಾಲ್ವಾರಿ ಸಬ್‌ಮರೀನ್‌ “!! ಇದು ಹೇಗೆ ಕೆಲಸ ಮಾಡುತ್ತೆ ಗೊತ್ತಾ?

ಪ್ರಧಾನಿ ನರೇಂದ್ರ ಮೋದಿಯ ಮಹತ್ವಾಕಾಂಕ್ಷೆ ಯೋಜನೆ!!

ಪ್ರಧಾನಿ ನರೇಂದ್ರ ಮೋದಿ ಮಹತ್ವಾಕಾಂಕ್ಷೆಯ ಯೋಜನೆಯೊಂದನ್ನು ದೇಶಕ್ಕೆ ಸಮರ್ಪಿಸಿದ್ದಾರೆ. ದೇಶೀ ನೀರ್ಮಿತ ಐಎನ್‍ಎಸ್ ಕಲ್ವಾರಿ ಸಬ್ ಮರಿನ್’ನನ್ನು ಮುಂಬೈನಲ್ಲಿಂದು ಲೋಕರ್ಪಣೆಗೊಳಿಸಿದ್ದಾರೆ.!! ಇದರಿಂದ ನೌಕಾಸೇನೆಗೆ ಮತ್ತೊಂದು ಆನೆ ಬಲ ಬಂದಂತಾಗಿದೆ.!! ಫ್ರಾನ್ಸ್ ಸಹಯೋಗದಲ್ಲಿ ಮುಂಬೈ ಮೂಲದ ಎಂಡಿಎಲ್ ಎನ್ನುವ ಕಂಪನಿ ಈ ಸಬ್ ಮರೀನನ್ನು ನಿರ್ಮಿಸಿದೆ.

ಮೊಟ್ಟ ಮೊದಲ ಮೇಡ್ ಇನ್ ಇಂಡಿಯಾ ಸಬ್ ಮೆರಿನ್ ಲೋಕಾರ್ಪಣೆ

ನಮ್ಮದೇ ನೆಲದಲ್ಲಿ ಸೃಷ್ಟಿಯಾದ ಕೂಸು ಎಂಬ ಕಾರಣಕ್ಕೆ ಕಲ್ವಾರಿ ಮೇಲೆ ತುಸು ಹೆಚ್ಚೇ ಪ್ರೀತಿ ಭಾರತೀಯರಿಗೆ! ಹೌದು, ಐಎನ್‍ಎಸ್ ಕಲ್ವಾರಿ ಮೊಟ್ಟ ಮೊದಲ ಮೇಡ್ ಇನ್ ಇಂಡಿಯಾ ಸ್ಕಾರ್ಪಿನ್ ಕ್ಲಾಸ್ ಸಬ್ ಮೆರಿನ್. ಭಾರತದಲ್ಲಿರುವ ಇದುವರೆಗಿನ 15 ಸಬ್ ಮೆರಿನ್‍ಗಳಿಗಿಂತ ಹೆಚ್ಚು ತಾಂತ್ರಿಕವಾಗಿ ಮುಂದಿರುವ ಈ ಜಲಾಂತರಗಾಮಿ ನೌಕೆಯನ್ನು ನೀರೊಳಗೆ ಎಲ್ಲಿದೆ ಎಂದು ಪತ್ತೆ ಮಾಡುವುದು ಸುಲಭದ ಕೆಲಸವಲ್ಲ..

2020ರೊಳಗೆ ಆರು ಸಬ್ ಮೆರಿನ್!

ಮೂರುಕಡೆ ಕಡಲಿನಿಂದಲೇ ಸುತ್ತುವರಿಸಿಕೊಂಡಿರುವ ಭಾರತಕ್ಕೆ ಭಯೋತ್ಪಾದಕರು, ಕಡಲ್ಗಳ್ಳರು, ಶತ್ರುರಾಷ್ಟ್ರದ ಸೈನಿಕರಿಂದ ರಕ್ಷಣೆ ಪಡೆಯುವುದಕ್ಕೆ ಜಲಾಂತರ್ಗಾಮಿ ನೌಕೆಗಳು ಅತ್ಯಗತ್ಯ. ಆದ್ದರಿಂದಲೇ ಇಂದು ಪ್ರಧಾನಿ ಮೋದಿ ಐಎನ್‍ಎಸ್ ಕಲ್ವಾರಿಯನ್ನು ಅಧಿಕೃತವಾಗಿ ಲೋಕಾರ್ಪಣೆಗೊಳಿಸುತ್ತಿದ್ದಂತೆಯೇ ಒಂದು ಥರದ ಭದ್ರತಾ ಭಾವ ಮನಸ್ಸಿನಲ್ಲಿ ಮೊಳೆತುಕೊಂಡಿತ್ತು. ಸರ್ಕಾರದ ಪ್ರಾಜೆಕ್ಟ್ 75 ಅಡಿಯಲ್ಲಿ ಮುಂಬೈಯ ಮಜಾಗಾನ್ ಡಾಕ್ ಲಿಮಿಟೆಡ್ ತಯಾರಿಸಿದ ಈ ಜಲಾಂತರ್ಗಾಮಿ ನೌಕೆ ಇದೀಗ ಭಾರತೀಯ ನೌಕಾಪಡೆಯ ಅತ್ಯಂತ ಬಲಾಡ್ಯ ಸದಸ್ಯ!

2020ರೊಳಗೆ ಆರು ಸಬ್ ಮೆರಿನ್!

2006 ರಲ್ಲೇ 6 ಸ್ಕಾರ್ಪಿನ್ ಕ್ಲಾಸ್ ಸಬ್ ಮೆರಿನ್ ಗಳನ್ನು 3 ಶತಕೋಟಿ ಡಾಲರ್ ವೆಚ್ಚದಲ್ಲಿ ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿತ್ತು. ಆ ಆರರಲ್ಲಿ ಐಎನ್ ಎಸ್ ಕಲ್ವಾರಿ ಹೆಸರಿನಲ್ಲಿ ಇಂದು ಲೋಕಾರ್ಪಣೆಗೊಂಡಿದ್ದು, ಉಳಿದ ಐದನ್ನು 2020ರೊಳಗೆ ನೌಕಾಪಡೆಗೆ ಒಪ್ಪಿಸುವ ಯೋಚನೆ ಸರ್ಕಾರದ್ದು.

ಅತ್ಯಂತ ಆಧುನಿಕ ತಂತ್ರಜ್ಞಾನ

ಅತ್ಯಂತ ಆಧುನಿಕ ತಂತ್ರಜ್ಞಾನ ಕಲ್ವಾರಿಯು ಅತ್ಯಂತ ಆಧುನಿಕ ತತ್ರಜ್ಞಾನವನ್ನು ಹೊಂದಿದ್ದು, ಇದರಲ್ಲಿರುವ ಡಿಸೆಲ್-ಇಲೆಕ್ಟ್ರಿಕ್ ಮೋಟಾರ್ ಯಾವುದೇ ಶಬ್ದ ಮಾಡದಿರುವುದರಿಂದ ಇದು ಎಲ್ಲಿದೆ ಎಂದು ಎದುರಾಳಿಗಳಿಗೆ ಪತ್ತೆ ಮಾಡುವುದೇ ಕಷ್ಟವಾಗುತ್ತದೆ

ಭಾರದ ಸ್ಫೋಟಕಗಳನ್ನೂ ಹೊತ್ತೊಯ್ಯುವ ಸಾಮಥ್ರ್ಯ

ಇದು ಅತ್ಯಂತ ಭಾರದ ಸ್ಫೋಟಕಗಳನ್ನೂ ಹೊತ್ತೊಯ್ಯುವ ಸಾಮಥ್ರ್ಯ ಹೊಂದಿದ್ದು, ಇದು ನೀರಿನೊಳಗಿಮದ ಮತ್ತು ಹೊರಗಿನಿಂದಲೂ ಸ್ಫೋಟಕಗಳನ್ನು ಎಸೆಯುವ ಸಾಮಥ್ರ್ಯ ಹೊಂದಿದೆ.

ಭಾರದ ಸ್ಫೋಟಕಗಳನ್ನೂ ಹೊತ್ತೊಯ್ಯುವ ಸಾಮರ್ಥ್ಯ

ಜಲಾಂತರ್ಗಾಮಿಯ ಸ್ವರೂಪ ಕಲ್ವಾರಿ

ಜಲಾಂತರ್ಗಾಮಿಯು 67.5 ಮೀ ಉದ್ದ ಮತ್ತು 12.3 ಮೀ. ಎತ್ತರವಾಗಿದೆ. ಭಾರತದಲ್ಲಿ ಈಗ ಕೇವಲ 15 ಜಲಾಂತರ್ಗಾಮಿಗಳಿದ್ದು ಅವೆಲ್ಲವೂ ರಷ್ಯಾ, ಜರ್ಮನಿಯ ತಂತ್ರಜ್ಞಾನದಲ್ಲಿ ನಿರ್ಮಾಣವಾದವು. ಚೀನಾದಲ್ಲಿ ಭಾರತಕ್ಕಿಂತ ನಾಲ್ಕು ಪಟ್ಟು ಹೆಚ್ಚು ಜಲಾಂತರ್ಗಾಮಿ ನೌಕೆಗಳಿವೆ ಎಂಬುದು ಭಾರತ ಸದಾ ಆತಂಕದಲ್ಲಿರಬೇಕಾದ ಸೂಚನೆಯಾಗಿದೆ.

ಕಲ್ವಾರಿಯ ಹೃದಯವಿರುವುದು ಇಲ್ಲಿ!

ಕಲ್ವಾರಿ ಜಲಾಂತರ್ಗಾಮಿಯ ಹೃದಯವಿರುವುದು ಅದರ ಆಯುಧಾಗಾರದಲ್ಲಿ! ಕಲ್ವಾರಿಯಲ್ಲಿ ಉಪಯೋಗಿಸುವುದು .ಪದ್ಧತಿಯು ಜಲಾಂತರ ಶಬ್ದಶೋಧಕ(ಸೋನಾರ್)ಗಳ ಮೂಲಕ ಮಾಹಿತಿ ಕಲೆಹಾಕಿ ಆಯುಧಗಳನ್ನು ಎಲ್ಲಿ ಗುರಿಯಾಗಿಸಬೇಕು ಎಂಬುದನ್ನು ಪತ್ತೆಮಾಡಬಲ್ಲದು.

ಪತ್ತೆಧಾರಿ ಕೆಲಸ ಮಾಡುವ ಕಲ್ವಾರಿ!

ಈ ಜಲಾಂತರ್ಗಾಮಿಯು ತನ್ನಲ್ಲಿರುವ ಕಡಿಮೆ ಬೆಳಕಿನ ಕ್ಯಾಮೆರಾ ಮತ್ತು ಲೇಸರ್ ಬೆಳಕಿನ ಮೂಲಕ ಸಮುದ್ರದ ಮೇಲೆ ಏನು ನಡೆಯುತ್ತಿದೆ ಎಂಬುದನ್ನೂ ಪತ್ತೆ ಮಾಡಬಲ್ಲದು. ಮೇಡ್ ಇನ್ ಇಂಡಿಯಾದ ಎರಡನೇ ಸ್ಕಾರ್ಪಿನ್ ಜಲಾಂತರ್ಗಾಮಿ ಐಎಸ್ ಎಸ್ ಖಾಂಡೇರಿ ಈಗಾಗಲೇ ಟ್ರಯಲ್ ಹಂತದಲ್ಲಿದ್ದು, ಇನ್ನು ಕೆಲವೇ ದಿನದಲ್ಲಿ ಇದೂ ಲೋಕಾರ್ಪಣೆಗೊಳ್ಳಲಿದೆ.

ಕಲ್ವಾರಿ ಅಂದ್ರೆ… ಮಲಯಾಳಂ ಭಾಷೆಯಲ್ಲಿ ಕಲ್ವಾರಿ ಎಂದರೆ ಟೈಗರ್ ಶಾರ್ಕ್ ಎಂದರ್ಥ. ಟೈಗರ್ ಶಾರ್ಕ್ ತನ್ನ ಪರಾಕ್ರಮ, ಚುರುಕುತನ ಮತ್ತು ಬಲಕ್ಕೆ ಹೆಸರಾಗಿರುವ ಕಾರಣ ಈ ಜಲಾಂತರ್ಗಾಮಿಗೆ ಈ ನಾಮಕರಣ ಮಾಡಲಾಗಿದೆ. 1967 ರಲ್ಲಿ ಭಾರತೀಯ ನೌಕಾಪಡೆಯನ್ನು ಸೇರಿದ ಮೊದಲ ಜಲಾಂತರ್ಗಾಮಿಯ ಹೆಸರೂ ಕಲ್ವಾರಿಯೆಂದೇ ಆಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

# ಭಾರತೀಯ ನೌಕಾಪಡೆಯ 17ನೇ ಜಲಾಂತರ್ಗಾಮಿ

# 2006ರ ಡಿಸೆಂಬರ್ 14ರಂದು ನಿರ್ಮಾಣ ಆರಂಭ

# ಉದ್ದ 67.5 ಮೀಟರ್, ಎತ್ತರ 12.3 ಮೀಟರ್

# 1,800 ಟನ್ ತೂಕ

# 36 ಸಿಬ್ಬಂದಿ

# 50 ದಿನ ಸಹಿಸಿಕೊಳ್ಳುವ ಸಾಮಥ್ರ್ಯ

# ನೀರಿನೊಳಗೆ 1,020 ಕಿ.ಮೀ. ಕ್ರಮಿಸಲು ಸಮರ್ಥ

# 300 ಮೀ. ಆಳಕ್ಕೆ ಇಳಿಯಬಲ್ಲದು

# 750 ಕೆ.ಜಿ. ತೂಕದ 360ಬ್ಯಾಟರಿ ಸೆಲ್?ಗಳಿವೆ.

# ಪರಮಾಣೇತರ ಕಲ್ವರಿಯನ್ನು ನೀರಿನೊಳಗೆ ಪತ್ತೆಹಚ್ಚಲಾಗದು

# 50 ವರ್ಷಗಳಿಂದ ನೌಕಾಪಡೆ ಜಲಾಂತರ್ಗಾಮಿ ಬಳಸುತ್ತಿದೆ.
ಮುಂಬೈನ್ ಮಜಗಾಂವ್ ಹಡಗುಕಟ್ಟೆ(ಎಂಡಿಎಲ್)ಯಲ್ಲಿ ನಿರ್ಮಿಸಲಾಗಿರುವ ಮೊದಲ ಸ್ಕಾರ್ಪಿಯನ್ ದರ್ಜೆಯ ಜಲಾಂತರ್ಗಾಮಿ ಕಲ್ವಾರಿ. ಈಗಾಗಲೇ ಸಾಕಷ್ಟು ಬಾರಿ ಸಮುದ್ರ ಯಾನದ ಪರೀಕ್ಷೆಗೆ ಒಳಪಡಿಸಲಾಗಿದೆ. ಫ್ರೆಂಚ್ ನೌಕಾಪಡೆಯ ಡಿಸಿಎನ್‍ಎಸ್ ಈ ಜಲಾಂತರ್ಗಾಮಿಯ ವಿನ್ಯಾಸ ಮಾಡಿತ್ತು. ಭಾರತೀಯ ನೌಕಾದಳದ ಮಹತ್ವಾಕಾಂಕ್ಷೆಯ ಜಲಾಂತರ್ಗಾಮಿ 75 ಯೋಜನೆ ಅಡಿ ಇದರ ನಿರ್ಮಾಣವಾಗಿದೆ. ಪ್ರಾಜೆಕ್ಟ್ 75: ಫ್ರಾನ್ಸ್ ಸಹಯೋಗದಲ್ಲಿ 23,000 ಕೋಟಿ ವೆಚ್ಚದಲ್ಲಿ ಒಟ್ಟು ಆರು `ಸ್ಕಾರ್ಪಿಯನ್’­ ಜಲಾಂತರ್ಗಾಮಿಗಳನ್ನು ನಿರ್ಮಿಸುವ ಯೋಜನೆಯನ್ನು ಮಾಡಲಾಗಿದೆ.

ಕಲ್ವರಿ ವರ್ಗ ಭಾರತೀಯ ನೌಕಾಪಡೆಗೆ ನಿರ್ಮಿಸಲಾದ ಸ್ಕಾರ್ಪೇನ್-ವರ್ಗದ ಜಲಾಂತರ್ಗಾಮಿ ಆಧಾರಿತ ಜಲಾಂತರ್ಗಾಮಿ ವರ್ಗವಾಗಿದೆ. ಇದು ಡೀಸೆಲ್-ವಿದ್ಯುತ್ ದಾಳಿಯ ಜಲಾಂತರ್ಗಾಮಿಯ ಒಂದು ವರ್ಗವಾಗಿದ್ದು, ಇದನ್ನು ಫ್ರೆಂಚ್ ನೌಕಾ ರಕ್ಷಣಾ ಮತ್ತು ಇಂಧನ ಕಂಪನಿ ಡಿಸಿಎನ್‍ಎಸ್ ವಿನ್ಯಾಸಗೊಳಿಸಿದೆ ಮತ್ತು ಮುಂಬೈಯಲ್ಲಿ ಮಜಾಗನ್ ಡಾಕ್ ಲಿಮಿಟೆಡ್ನಿಂದ ತಯಾರಿಸಲಾಗಿದೆ. 2005 ರಲ್ಲಿ ಭಾರತವು ಸ್ಕಾರ್ಪೇನ್ ವಿನ್ಯಾಸವನ್ನು ಆಯ್ಕೆ ಮಾಡಿ ಕೊಂಡಿತ್ತು. ಪ್ರಾಜೆಕ್ಟ್ 75 ಅಡಿಯಲ್ಲಿ ಆರು ಜಲಾಂತರ್ಗಾಮಿಗಳನ್ನು $ 3 ಶತಕೋಟಿಯವರೆಗೆ ($ 500 ಮಿಲಿಯನ್ ದೋಣಿಗೆ) ಖರೀದಿಸಿ. ಈ ಯೋಜನೆಯು ಭಾರತೀಯ ನೌಕಾಪಡೆಯಲ್ಲಿ ಜಲಾಂತರ್ಗಾಮಿಗಳ ಸಂಖ್ಯೆಯು ಕ್ಷೀಣಿಸುತ್ತಿರುವುದರಿಂದ ಅನಿವಾರ್ಯವಾಯಿತು. ಹಳೆಯ ಸಿಂಧುಘೋಷ್ (ಕಿಲೊ) ಮತ್ತು ಶಿಶುಮಾರ್ ಜಲಾಂತರ್ಗಾಮಿ ನೌಕೆಗಳ ವರ್ಗಕ್ಕೆ ಭಾರತೀಯ ನೌಕಾಪಡೆಗೆ ಬದಲಿ ಅಗತ್ಯವಿದೆ. ಸ್ಕಾರ್ಪೇನ್ ವಿನ್ಯಾಸವು ಎದುರಾಳಿಯಅನ್ನು ಎಕ್ಸೊಸೆಟ್ ವಿರೋಧಿ-ಹಡಗು ಕ್ಷಿಪಣಿಗಳನ್ನು ಮತ್ತು ವಾಯು-ಸ್ವತಂತ್ರ ಪೆÇ್ರಪಲ್ಶನ್ (ಎಐಪಿ) ಮೇಲೆ ಒಪ್ಪಂದವೊಂದನ್ನು ಉತ್ತಮ ಪ್ರದರ್ಶನದ ಮೂಲಕ ಸೋಲಿಸಿ ಈ ಒಪ್ಪಂದವನ್ನು ಗೆದ್ದಿತು.

ಮುಂಬೈಯಲ್ಲಿನ ಸರ್ಕಾರಿ ಸ್ವಾಮ್ಯದ ಮಜಾಗನ್ ಡಾಕ್ಸಿನಿಂದ ತಂತ್ರಜ್ಞಾನ ವರ್ಗಾವಣೆ ಒಪ್ಪಂದದಡಿಯಲ್ಲಿ ಜಲಾಂತರ್ಗಾಮಿಗಳನ್ನು ಉತ್ಪಾದಿಸಬೇಕು. ಭಾರತವು ಡಿಆರ್ಡಿಓ-ಅಭಿವೃದ್ಧಿಪಡಿಸಿದ ಏರ್ ಸ್ವತಂತ್ರ ಪೆÇ್ರಪಲ್ಷನ್ (ಎಐಪಿ) ಸಿಸ್ಟಮ್‍ನ ಕೊನೆಯ ಎರಡು ಜಲಾಂತರ್ಗಾಮಿಗಳಿಗೆ ನಿರ್ಮಿಸಿ, ಪಿ 75 ಐ ಜಲಾಂತರ್ಗಾಮಿಗಳನ್ನು ಸಜ್ಜುಗೊಳಿಸಲು ಸಹಕರಿಸುತ್ತದೆ, ಅದರಲ್ಲಿ ಡಿಸಿಎನ್‍ಎಸ್ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿದೆ. ಮೊದಲ ಜಲಾಂತರ್ಗಾಮಿ ನಿರ್ಮಾಣ 23 ಮೇ 2009 ರಂದು ಪ್ರಾರಂಭವಾಯಿತು. ಈ ಯೋಜನೆಯು ನಾಲ್ಕು ವರ್ಷಗಳ ವೇಳಾಪಟ್ಟಿಯನ್ನು ಹೊಂದಿದ್ದು, ಮಂದಗತಿಯಲ್ಲಿ ಹೋಗುತ್ತಿತ್ತು… ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಹೊಸ ಸರಕಾರವು ಒಮ್ಮೆ ಪರಿಶೀಲಿಸಿದ ನಂತರ, ವಿಳಂಬ  ತಡೆಯಲು ಯೋಜನೆಯು ಕ್ರಮ ಕೈಗೊಂಡರು ಪ್ರಧಾನಿ ಮೋದಿ..

ಸಬ್ ಮರೀನನ್ನು ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ, ಐಎನ್‍ಎಸ್ ಕಲ್ವಾರಿ ನಿರ್ಮಾಣದಲ್ಲಿ ಭಾಗಿಯಾದ ಎಲ್ಲಾ ಕೆಲಸಗಾರರಿಗೂ ಅದೇ ರೀತಿ, ಸಂಪೂರ್ಣ ಸಹಕಾರ ನೀಡಿದ ಫ್ರಾನ್ಸ್‍ಗೂ ಕೂಡಾ ಕೃತಜ್ಞತೆಗಳು ಎಂದಿದ್ದಾರೆ. ಭಾರತ-ಫ್ರಾನ್ಸ್ ನಡುವಿನ ಸಹಭಾಗಿತ್ವ ತ್ವರಿತಗತಿಯಲ್ಲಿ ಅಭಿವೃದ್ಧಿಯಾಗುತ್ತಿರುವುದಕ್ಕೆ ಇದೊಂದು ಉದಾಹರಣೆ ಎಂದು ಹೇಳಿದ್ದಾರೆ. ಇಂದು ನಮ್ಮ ಪಾಲಿಗೆ ಸುದಿನ. ಇಂತಹದ್ದೊಂದು ಐತಿಹಾಸಿಕ ದಿನದಂದು ದೇಶದ ಎಲ್ಲಾ ನಾಗರೀಕರಿಗೂ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

-ಪವಿತ್ರ

Tags

Related Articles

Close