ಪ್ರಚಲಿತ

ನೆಹರೂ ಜನುಮದಿನವೇ ಪರದೆ ಸರಿಯಿತು! ಎನಿವೇಸ್! ಹ್ಯಾಪಿ ಬರ್ತಡೇ ಚಾಚಾ!

ಮಕ್ಕಳ ದಿನಾಚರಣೆಯ ಹಾರ್ಧಿಕ ಶುಭಾಶಯಗಳು. ಹ್ಯಾಪೀ ಬರ್ತ್‍ಡೇ ನೆಹರೂಜೀ…

ಇಂದು ದೇಶದಾದ್ಯಂತ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ನವೆಂಬರ್ 14 ಬಂತೆಂದರೆ ಸಾಕು! ಮಕ್ಕಳಿಗೇನೋ ಖುಷಿ. ಶಾಲೆಗಳಲ್ಲಿ ಪಾಠಗಳನ್ನು ಕೇಳಿ ಕೇಳಿ ಬೋರು ಹೊಡೆಸಿಕೊಂಡ ಮಕ್ಕಳಿಗೆ ಈ ದಿನವೆಂದರೆ ಅಚ್ಚು ಮೆಚ್ಚು. ಓದುಗಳನ್ನು ಬದಿಗಿಟ್ಟು ಆಟಗಳನ್ನು ಆಡುತ್ತಾ ಸಂಭ್ರಮಿಸುವ ದಿನ.

ನಾನೂ ಶಾಲಾ ದಿನಗಳಲ್ಲಿ ಮಕ್ಕಳ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದಲೇ ಆಚರಿಸುತ್ತಿದ್ದೆ. ನಮ್ಮ ಹುಟ್ಟು ಹಬ್ಬಕ್ಕಿಂತಲೂ ನಮಗೆ ನೆಹರೂ ಹುಟ್ಟು
ಹಬ್ಬವೆಂದರೆ ಅದೇನೋ ಉತ್ಸಾಹ. ಆವಾಗ ನಾವು ಕಲರ್ ಕಲರ್ ಬಟ್ಟೆಗಳಲ್ಲಿ ಮಿಂಚುತ್ತಿದ್ದೆವು. ಇದು ಹೈಸ್ಕೂಲ್ ಜೀವನದಲ್ಲೂ ಮುಂದುವರೆಯಿತು. ಮತ್ತದೇ ಆಟ, ಸಂಭ್ರಮ ಹೀಗೆ ಮುಂದುವರೆದಿತ್ತು. ಅಷ್ಟರವರೆಗೂ ನಾನು ಇಷ್ಟ ಪಡುವ ರಾಷ್ಟ್ರ ನಾಯಕರಲ್ಲಿ ನೆಹರೂ ಒಬ್ಬರಾಗಿದ್ದರು. ನನ್ನ ಆಟೋಗ್ರಾಫ್ ಪುಸ್ತಕದಲ್ಲೂ ನೆಹರೂ ನನ್ನ ನೆಚ್ಚಿನ ರಾಷ್ಟ್ರ ನಾಯಕ ಎಂದೇ ಬರೆದಿದ್ದೆ.

ನಂತರ ಬಂದಿದ್ದು ಕಾಲೇಜು ದಿನಗಳು. ಮತ್ತೆ ಬಂತು ಮಕ್ಕಳ ದಿನಾಚರಣೆ. ಎಷ್ಟಾದರೂ ಮಕ್ಕಳ ಹಾಗೆ ಆಡೋ ಹಾಗಿಲ್ಲ. ಸ್ವಲ್ಪ ಸೀರಿಯಸ್ ಆಗಿಯೇ ಇರಬೇಕಿತ್ತು. ಆವಾಗ ರಾಷ್ಟ್ರದ ಚಿಂತನೆಗಳು ಕೂಡಾ ನನ್ನನ್ನು ಸರಿ ಸುಮಾರು ಆವರಿಸಿತ್ತು. ನೆಹರೂರ ಕೆಲವೊಂದು ತಪ್ಪುಗಳನ್ನು ನಾನು ಆವಾಗಲೇ ಖಂಡಿಸುವ ಹಂತದಲ್ಲಿದ್ದೆ. ಆದರೆ ಅಷ್ಟೊಂದು ದೃಢ ನಿರ್ಧಾರ ಹಾಗೂ ಧೈರ್ಯ ಖಂಡಿತಾ ಇದ್ದಿರಲಿಲ್ಲ.

ಅದೊಂದು ದಿನ ನಮ್ಮ ಕಾಲೇಜಿನಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮ. ನೆಹರೂ ಭಾವಚಿತ್ರವನ್ನಿಟ್ಟು ಆಗರಬತ್ತಿ ಹಚ್ಚಿ, ಹೂ ಹಾಕಿ ಗೌರವಿಸಿದೆವು.
ಆವಾಗಲೂ ನನಗೇನೂ ಅನ್ನಿಸಲೇ ಇಲ್ಲ. ಗುರುಗಳು ನನ್ನನ್ನು ಕರೆದು ನೆಹರೂ ಬಗ್ಗೆ ಭಾಷಣ ಮಾಡಬೇಕು ಎಂದು ಹೇಳಿದ್ದರು. ನಾನೂ ವಿನಯದಿಂದಲೇ
ಒಪ್ಪಿಕೊಂಡಿದ್ದೆ. ಅಂದಿನ ದಿನ ಪತ್ರಿಕೆಗಳನ್ನೆಲ್ಲ ಹುಡುಕಾಡಿ ನೆಹರೂ ಬಗ್ಗೆ 2 ಪುಟಗಳಷ್ಟು ಭಾಷಣವನ್ನು ತಯಾರಿಸಿದೆ. ಹೊಗಳಿಕೆಯ ಸುರಿಮಳೆಯನ್ನೇ ಹರಿಸುವಂತಿತ್ತು ನಾ ಬರೆದ ಭಾಷಣ. ನೆಹರೂಗೆ ಮಕ್ಕಳಂದ್ರೆ ತುಂಬಾ ಇಷ್ಟವಂತೆ. ಕ್ರಿಕೆಟ್ ಆಟ ಆಡುವಾಗ ಚೆಂಡು ಮರದ ಪೊಟರೆಯೊಳಗೆ ಬಿದ್ದಿದ್ದಕ್ಕೆ ನೆಹರೂ ತೆಗೆದುಕೊಟ್ಟಿದ್ದರಂತೆ, ಹೀಗಾಗಿ ಮಕ್ಕಳಿಗೂ ನೆಹರೂ ಅಂದ್ರೆ ಇಷ್ಟವಂತೆ. ಮಕ್ಕಳು ಅವರನ್ನು ಪ್ರೀತಿಯಿಂದ “ಚಾಚಾ” ಎಂದು ಕರೆಯುತ್ತಿದ್ದರಂತೆ. ಹೀಗೆ ಹೇಗೆಲ್ಲಾ ಹೊಗಳಬಹುದೋ ಅಷ್ಟು ಎತ್ತರಕ್ಕೆ ಕೊಂಡೊಯ್ದು ಕೂರಿಸಿಬಿಟ್ಟೆ.

ಕಾರ್ಯಕ್ರಮ ಆರಂಭವಾಯಿತು. ಮೊದಲ ಭಾಷಣ ಓರ್ವ ಉಪನ್ಯಾಸಕರು ಮಾಡುತ್ತಾರೆ. ನೆಹರೂ ಬಗ್ಗೆ ಹೊಗಳಿಕೆಗಳ ಸುರಿಮಳೆಗಳನ್ನೇ ಹರಿಸುತ್ತಾರೆ. “ನೆಹರೂ ಶ್ರೀಮಂತಿಕೆ ಎಷ್ಟಿತ್ತೆಂದರೆ, ಅವರ ಬಟ್ಟೆಗಳನ್ನು ವಿದೇಶದಲ್ಲಿ ವಾಶ್ ಮಾಡಿ, ಇಸ್ತ್ರಿ ಹಾಕಿಸಿ ತರಿಸುತ್ತಿದ್ದರು” ಎಂಬೆಲ್ಲಾ ಉಧ್ಘಾರಗಳನ್ನು ಮಾಡುತ್ತಾ ಹೋದರು. ಇದೆಲ್ಲಾ ಯಾಕೋ ಸರಿ ಎನಿಸಲಿಲ್ಲವಾದರೂ ಸುಮ್ಮನೆ ಕೇಳತೊಡಗಿದೆ.

ನಂತರ ಮತ್ತೊಬ್ಬ ಉಪನ್ಯಾಸಕರ ಮಾತಿನ ಹೊತ್ತು. ಅವರು ವೇದಿಕೆಗೆ ಆಗಮಿಸುತ್ತಲೇ ಮಾತು ಆರಂಭಿಸುತ್ತಾರೆ. ಆ ಹಿಂದೆ ಭಾಷಣ ಮಾಡಿದ್ದ ಉಪನ್ಯಾಸಕರ ಮಾತನ್ನು ಪ್ರಶ್ನಿಸುತ್ತಲೇ ಮಾತನಾಡತೊಡಗಿದರು. “ನೆಹರೂಗೆ ದೇಶದ ಮೇಲೆ ಪ್ರೀತಿ ಇದ್ದಿದ್ದರೆ ವಿದೇಶ ಮೋಹ ಬೇಕಿತ್ತಾ? ಅವರಿಗೆ ಸಿಗರೇಟ್ ಸೇದುವ ಹವ್ಯಾಸವಿತ್ತು. ಇದು ಗಾಂಧೀ ತತ್ವಕ್ಕೆ ವಿರುದ್ಧವಲ್ಲವೇ” ಎಂದು ಪ್ರಶ್ನಿಸಿಯೇ ಬಿಟ್ಟರು. ಅಷ್ಟರವರೆಗೆ 2 ಪುಟಗಳ ಭಾಷಣ ಓದಲು ತಯಾರಾಗಿದ್ದ ನಾನು ಮತ್ತಷ್ಟು ವಿಚಲಿತನಾದೆ. ನನ್ನಲ್ಲೇ ಪ್ರಶ್ನೆಗಳು ಮೂಡುವಂತಾಯಿತು. ನೆಹರೂ ಬಗೆಗಿನ ಋಣಾತ್ಮಕ ಕಲ್ಪನೆಗಳು ನಿಜವಾಗುವಂತೆ ಭಾಸವಾಯಿತು.

ನಂತರ ವಿದ್ಯಾರ್ಥಿಗಳ ಭಾಷಣಗಳ ಸರದಿ. ನನಗ್ಯಾಕೋ ನೆಹರೂರನ್ನು ಹೊಗಳಬೇಕೆಂದು ಅನ್ನಿಸಲೇ ಇಲ್ಲ. ಆದರೂ ನನ್ನ ಹೊತ್ತು ಬಂದಾಗ ವೇದಿಕೆ ಮೇಲೆ ನಿಂತು ನಾನು ಬರೆದಿದ್ದ ಒಂದು ಪುಟಗಳ ಭಾಷಣವನ್ನು ಓದಿ ಉಳಿದೆಲ್ಲಾ ಮಾತುಗಳು ನನ್ನಲ್ಲಿ ಇನ್ನೂ ಪ್ರಶ್ನಾರ್ಥಕವಾಗಿಯೇ ಉಳಿದಿದೆ ಎನ್ನುತ್ತಾ ಕೆಳಗಿಳಿದು ಬಂದೆ.

ಆವತ್ತು ನನ್ನಲ್ಲಿ ನೆಹರೂ ಬಗ್ಗೆ ತಿಳಿಯುವ ಆಸಕ್ತಿ ಹೆಚ್ಚಾಗತೊಡಗಿತು. ಉಪನ್ಯಾಸಕರಲ್ಲಿ ಸರಿಯಾದ ಮಾಹಿತಿಗಳು ಸಿಗಲೇ ಇಲ್ಲ. ಯಾಕೆಂದರೆ ಅವರು ಕೇವಲ
ಪಠ್ಯ ಪುಸ್ತಕಗಳನ್ನು ಮಾತ್ರವೇ ಅಧ್ಯಯನ ಮಾಡಿರುತ್ತಾರೆ. ಹೀಗಾಗಿ ನಾನು ನೆಹರೂ ಕುರಿತಂತೆ ಪುಸ್ತಕವನ್ನು ತಡಕಾಡಿದೆ. ಆವಾಗ ನನಗೆ ಸಿಕ್ಕ ಪುಸ್ತಕವೇ ಖ್ಯಾತ ಅಂಕಣಕಾರ ಶ್ರೀ ಚಕ್ರವರ್ತಿ ಸೂಲಿಬೆಲೆಯವರ “ನೆಹರೂ ಪರದೆ ಸರಿಯಿತು” ಎಂಬ ಪುಸ್ತಕ.

ಅಬ್ಭಾ… ಶಾಲಾ ಪಠ್ಯ ಪುಸ್ತಕಗಳಲ್ಲಿ ಹಾಡಿ ಹೊಗಳುವಂತಿದ್ದ, ನಾವೆಲ್ಲಾ “ಚಾಚಾ” ಎಂದು ಅತ್ಯಂತ ಗೌರವದಿಂದ ಕಾಣುತ್ತಿದ್ದ ನೆಹರೂ ಇವರೇನಾ ಎಂದು ಮೂಗಿನ ಮೇಲೆ ಬೆರಳಿಡುವಂತಾಯಿತು. ಆ ಪುಸ್ತಕ ಓದುತ್ತಿರುವಂತೆ ತೀವ್ರ ಅಸಹ್ಯವನ್ನು ಮೂಡಿಸಿತ್ತು. ಮೊದಲ ಪ್ರಧಾನಿ, ಮಕ್ಕಳ ಪ್ರೇಮಿ, ಸ್ವಾತಂತ್ರ್ಯ ಹೋರಾಟಗಾರ ಎಂದು ಹೊಗಳುತ್ತಿದ್ದ ಮೋತಿಲಾಲರ ಕಂದ ಇವರೇನಾ ಎಂಬ ಪ್ರಶ್ನೆ ಪದೇ ಪದೇ ಕಾಡುವಂತಾಯಿತು. ನಂತರ ಅನ್ನಿಸಿತ್ತು, ನಾವೆಲ್ಲಾ ಅತಿ ಗೌರವದಿಂದ ಕಾಣುತ್ತಿದ್ದ ಇವರು “ಚಾಚಾ” ಅಲ್ಲ, ಬದಲಾಗಿ ದೇಶವನ್ನು ಮತ್ತಷ್ಟು ಹಳ್ಳಕ್ಕೆ ದೂಡಲು ಯತ್ನಿಸಿ, ಬ್ರಿಟಿಷ್ ಅಧಿಕಾರಿಗಳೊಂದಿಗೆ ತನ್ನ ಚಪಲತೆಯನ್ನು ಮೆರೆಯುತ್ತಿದ್ದ “ಚಮಚ” ಎಂದು…

ಕ್ಷಮಿಸಿ ನೆಹರೂಜೀ… ನಾನು ನಿಮಗೆ ವಿಶ್ ಮಾಡುವುದರೊಂದಿಗೆ, ನನ್ನಲ್ಲಿರುವ ಕೆಲವು ಪ್ರಶ್ನೆಗಳನ್ನು ಇಲ್ಲಿ ಕೇಳಲೇ ಬೇಕು…

ನೆಹರೂಜಿ. ಕ್ರಿಕೆಟ್ ಆಟ ಆಡುವಾಗ ನೀವು ಚೆಂಡು ತೆಗೆದು ಕೊಟ್ಟಿದ್ದಿರಿ ಎನ್ನುವ ಕಾರಣಕ್ಕೆ ಮಕ್ಕಳಂದ್ರೆ ನೆಹರೂಗೆ ತುಂಬಾನೆ ಇಷ್ಟವೆಂದು ಬಿಂಬಿಸಿ ನಿಮ್ಮ ಹುಟ್ಟಿದ ದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸುವಂತೆ ಮಾಡಿದ್ರು ನಿಮ್ಮ ನಂತರದ ಕಾಂಗ್ರೆಸ್ ನಾಯಕರು. ಆದರೆ ನನ್ನಲ್ಲಿ ಕೆಲವು ಪ್ರಶ್ನೆಗಳು ಹಾಗೆನೇ ಉಳಿದುಕೊಂಡಿವೆ.

ಇಂದು ಕಾಶ್ಮೀರದಲ್ಲಿ ಶಾಂತಿ ಅನ್ನೋದು ಊಹಿಸೋಕು ಸಾಧ್ಯವಿಲ್ಲ. ಅಷ್ಟೊಂದು ಹಾಳಾಗಿ ಹೋಗಿದೆ ಅಲ್ಲಿನ ಪರಿಸ್ಥಿತಿ. ಇಂದಿನ ಕಾಶ್ಮೀರದ ಅಶಾಂತಿಗೆ ನೀವು
ಕಾರಣ ಅನ್ನೋವಾಗ ನಿಮ್ಮನ್ನು ಹೇಗೆ ನಾವು ಚಾಚಾ ಎಂದು ಕರೆಯಬೇಕು ಹೇಳಿ. ಕಾಶ್ಮೀರದಲ್ಲಿ ಹಿಂದೂ ರಾಜನೊಬ್ಬ ರಾಜ್ಯಾಡಳಿತವನ್ನು ನಡೆಸುತ್ತಿದ್ದ ಎನ್ನುವುದನ್ನು ಎನಿಸೋಕು ಕಷ್ಟವಾಗುತ್ತಿದೆ. ಕಾಶ್ಮೀರದಲ್ಲಿ “ಹರಿ ಸಿಂಗ್” ಎನ್ನುವ ರಾಜನು ರಾಜ್ಯವನ್ನು ಆಳುತ್ತಿದ್ದ. ಆ ರಾಜನು “ನನಗೆ ದೇಶ ಮೊದಲು, ನಂತರ ನನ್ನ ಪಟ್ಟ” ಎಂದು ಘೋಷಿಸಿ, ಕಾಶ್ಮೀರವನ್ನು ಭಾರತಕ್ಕೆ ಸೇರಿಸಲು ಸಂಪೂರ್ಣ ಪ್ರಯತ್ನ ಪಟ್ಟಿದ್ದನು. ಆದರೆ ರಾಜ ಹರಿ ಸಿಂಗರನ್ನು ಕಂಡರೆ ನೀವು(ನೆಹರು) ಕೆಂಡಕಾರುತ್ತಿದ್ದಿರಿ. ರಾಜ ಹರಿ ಸಿಂಗರಲ್ಲಿ ನೀವು ಧ್ವೇಷವನ್ನು ಸಾರುತ್ತಿದ್ದಿರಿ. ಈ ಕಾರಣಕ್ಕಾಗಿಯೇ ಶೇಕ್ ಅಬ್ದುಲ್ಲಾನನ್ನು ಕಾಶ್ಮೀರದಲ್ಲಿ ಹರಿಸಿಂಗ್‍ರ ವಿರುದ್ಧ ಪ್ರತಿಭಟಿಸುವಂತೆ ಪ್ರೋತ್ಸಾಹಿಸಿದಿರಿ. ಆದರೆ ಶೇಕ್ ಅಬ್ದುಲ್ಲಾನನ್ನು ಹರಿ ಸಿಂಗ್ ಜೈಲಿಗೆ ಹಾಕುತ್ತಾರೆ. ನಂತರ ನೀವು ಹೋಗಿ ಹರಿಸಿಂಗರ ಬಳಿ, ಶೇಕ್ ಅಬ್ದುಲ್ಲಾನನ್ನು ಕಾಶ್ಮೀರದ ಪ್ರಧಾನಿ ಮಾಡಬೇಕೆಂದು ಹಠ ಹಿಡಿಯುತ್ತೀರಿ. ನೀವು ಹೇಳಿದ ಹಾಗೆನೇ ಆಯಿತು. ಅಲ್ಲಿಂದ ಅಲ್ಲವೇ ಕಾಶ್ಮೀರದಲ್ಲಿ ಅಶಾಂತಿ ನಿರ್ಮಾಣವಾಗಿದ್ದು. ನೆಹರೂಜೀ… ನೀವು ಮಾಡಿದ ಆ ತಪ್ಪಿನಿಂದ ಇಂದಿಗೂ ಕಾಶ್ಮೀರ ನರಕ ಯಾತನೆಯಲ್ಲಿ ಬಳಲುತ್ತಿದೆ. ಅದಕ್ಕೆಲ್ಲಾ ನೀವೇ ಕಾರಣವಲ್ಲವೇ…

ದೇಶವನ್ನು ಅತಿಯಾಗಿ ಪ್ರೀತಿಸುತ್ತಿದ್ದ, ದೇಶಕ್ಕಾಗಿ ತನ್ನ ಜೀವವನ್ನೇ ಸಮರ್ಪಿಸಿದ ಸ್ವಾತಂತ್ರ್ಯ ವೀರ ಸಾವರ್ಕರ್‍ರವರ ಬಗ್ಗೆ ನೀವು ವರ್ತಿಸಿದ ರೀತಿ ತುಂಬಾನೆ
ನೋವಾಗಿತ್ತು. ದೇಶಕ್ಕಾಗಿ 2 ಬಾರಿ ಅಂಡಮಾನಿನ ಆ ಜೈಲಿನಲ್ಲಿ ಕರಾಳ ದಿನಗಳನ್ನು ಕಳೆದಿದ್ದಾಗ, ನೀವು ಅವರನ್ನು ಬಿಡಿಸಲು ಪ್ರಯತ್ನಿಸದೆ ಪಿತೂರಿ ಮಾಡಿ ಮತ್ತೆ ಬಂಧನ ಆಗುವ ಹಾಗೆ ಮಾಡಿದ್ದಿರಲ್ಲಾ… ನಿಮ್ಮನ್ನು ಅದ್ಯಾವ ಬಾಯಲ್ಲಿ ಚಾಚಾ ಎಂದು ಕರೆಯಲಿ.

ದೇಶ ಕಂಡ ಮಹಾ ಸೇನಾನಿ, ನೇತಾಜಿ ಸುಭಾಷ್‍ಚಂದ್ರ ಬೋಸರು ದೇಶದ ಸ್ವಾತಂತ್ರ್ಯಕ್ಕಾಗಿ ಟೊಂಕ ಕಟ್ಟಿಕೊಂಡು ಕೆಲಸ ಮಾಡಿದ್ದರು. ಇಲ್ಲಿ ನಿಮ್ಮ ರಾಜಕೀಯ ಆಟಗಳಿಂದ ಬೇಸತ್ತು ದೇಶ ಬಿಟ್ಟು ಜರ್ಮನ್‍ನಲ್ಲಿ ತನ್ನ ಸೈನ್ಯವನ್ನು ಕಟ್ಟಿದ್ದರು. ಆದರೆ ವಿದೇಶದ ನೆಲದಲ್ಲೂ ತನ್ನ ಛಾಪನ್ನು ಮೂಡಿಸಿ, 50 ಸಾವಿರ ಸೈನಿಕರ ಸೈನ್ಯವನ್ನು ಕಟ್ಟಿ ಭಾರತದಲ್ಲಿರುವ ಬ್ರಿಟಿಷರ ವಿರುದ್ಧ ಯುದ್ಧ ಸಾರಲು ಮುಂದಾದಾಗ, “ಬೋಸ್ ಸೈನ್ಯ ಭಾರತಕ್ಕೆ ಬಂದರೆ ತನ್ನೆಲ್ಲಾ ಸಾಮಥ್ರ್ಯವನ್ನು
ಉಪಯೋಗಿಸಿಕೊಂಡು ಬೋಸ್‍ರ ಸೈನ್ಯವನ್ನು ಕತ್ತಿಯಿಂದ ಎದುರಿಸುತ್ತೇನೆ” ಎಂದು ಬ್ರಿಟಿಷರ ಪರವಾಗಿ ಗಂಟಾಘೋಷವಾಗಿ ಹೇಳಿದ್ದಿರಲ್ಲಾ… ನಿಮಗೆ ಅದ್ಯಾವ ರೀತಿಯಲ್ಲಿ ದೇಶ ಪ್ರೇಮಿ ಅನ್ನಬೇಕೋ ನಾಕಾಣೆ.

ದೇಶದಲ್ಲಿ ಸ್ವಾತಂತ್ರ್ಯ ಸಿಕ್ಕೇ ಬಿಡ್ತು ಎನ್ನುವ ಕುಷಿಯಿಂದ ತೇಲಾಡುವ ಸಮಯ ಬಂದಾಗ, 1947 ಆಗಸ್ಟ್ 14ರಂದು ಭಾರತವನ್ನು ವಿಭಜಿಸಿ ಪಾಕಿಸ್ಥಾನವನ್ನು
ಬೇರ್ಪಡಿಸಿ ಲಕ್ಷಾಂತರ ದೇಶವಾಸಿಗಳ ಹತ್ಯೆಗೆ ಕಾರಣರಾದಿರಲ್ಲಾ. ನೀವು ಮಾಡಿದ ಆ ತಪ್ಪು ಇಂದಿಗೂ ವಿಜ್ರಂಭಿಸುತ್ತಿದೆ ನೆಹರೂಜೀ… ಆ ಕರಿ ಛಾಯೆ ಇಂದಿಗೂ ಅನೇಕ ದೇಶವಾಸಿಗಳ ಬಾಳನ್ನೇ ಕತ್ತಲಾಗಿಸಿದೆ. ಯಾವ ಕಾರಣಕ್ಕಾಗಿ ನಾನು ನಿಮ್ಮನ್ನು ಸ್ವಾತಂತ್ರ್ಯ ಹೋರಾಟಗಾರ ಎನ್ನಲಿ ಹೇಳಿ ನೆಹರೂಜೀ…

ದೇಶಕ್ಕಾಗಿ ಹಗಲಿರುಳು ಹೋರಾಡಿ, ನಿಮ್ಮ ವಿರೋಧದ ನಡುವೆಯೂ ನಿಜಾಮರನ್ನು, ನವಾಬರನ್ನು ಸಹಿತ ಅನೇಕ ದೇಶದ್ರೋಹಿಗಳನ್ನು ಭಾರತದಿಂದ ಓಡಿಸಿ,
ದೇಶದ ಏಕತೆಗಾಗಿ ಹೋರಾಡಿದ ಸರ್ಧಾರ್ ವಲ್ಲಬಭಾಯಿ ಪಟೇಲರನ್ನು ಮೂಲೆಗುಂಪು ಮಾಡಿ, ಪ್ರಧಾನಿಯಾಗಬಹುದಾದ ಎಲ್ಲಾ ಅರ್ಹತೆಗಳಿದ್ದ ಪಟೇಲರನ್ನು
ಹಿಂದಿಕ್ಕಿ, ಗಾಂಧಿಯವರ ಕೈಕಾಲು ಹಿಡಿದು ಪ್ರಧಾನಿ ಪಟ್ಟಕ್ಕೇರಿ ದೇಶ ಸ್ವಾತಂತ್ರ್ಯಗೊಂಡರೂ ಮತ್ತೆ ಅನ್ಯಾಯಕ್ಕೊಳಗಾಗುವಂತೆ ಮಾಡಿದ್ದಿರಲ್ಲಾ… ನಿಮ್ಮನ್ನು ಅದೇಗೆ ಮೊದಲ ಪ್ರಧಾನಿ ಎಂದು ಗೌರವಿಸಲಿ ಹೇಳಿ ನೆಹರೂಜಿ…

ದೇಶದಲ್ಲಿ 17 ವರ್ಷಗಳ ಕಾಲ ಆಡಳಿತವನ್ನು ಮಾಡಿ ಅದೇನು ಸಾಧನೆ ಮಾಡಿದ್ದೀರೋ ದೇವರಾಣೆಗೂ ಕಾಣುತ್ತಿಲ್ಲ. ಆದರೆ ನಿಮ್ಮ ಸಂತಾನ ಮಾತ್ರ ಇಂದಿಗೂ ಈ ದೇಶವನ್ನು ನುಂಗಿ ನೀರು ಕುಡಿಯುವಂತೆ ಮಾಡಿದ್ದೀರಿ. ನಿಮ್ಮ ಕುಟುಂಬವೇ ಈ ದೇಶದಲ್ಲಿ ರಾಜ್ಯಭಾರ ನಡೆಸಬೇಕೆಂಬ ಉದ್ಧೇಶದೊಂದಿಗೆ ತರಾತುರಿಯಲ್ಲಿ ನಿಮ್ಮ ಮಗಳು ಇಂದಿರಾ ಗಾಂಧಿಯನ್ನು ಕಾಂಗ್ರೆಸ್‍ನ ಅಧ್ಯಕ್ಷೆಯನ್ನಾಗಿಸಿ ಆಯ್ಕೆ ಮಾಡಿ, ಅದೆಷ್ಟೇ ಹಿರಿಯರು ಪ್ರಧಾನಿ ಪಟ್ಟಕ್ಕೆ ಅರ್ಹರಿದ್ದರೂ ಇಂದಿರಾ ಗಾಂಧಿಯೇ ಪ್ರಧಾನಿಯಾಗಬೇಕೆಂಬ ದೂರಾಲೋಚನೆಯನ್ನು ಇಟ್ಟುಕೊಂಡಿದ್ದಿರಿ. ಪರಿಣಾಮ ಇಂದಿಗೂ ಅದೇ ನಿಮ್ಮ ಕುಟುಂಬ ಈ ದೇಶವನ್ನು ಕೊಳ್ಳೆ ಹೊಡೆದು ವಿನಾಶದ ಅಂಚನ್ನು ತಲುಪಿಸಿ ಬಿಟ್ಟಿದ್ದಾರೆ. ನೀವೇ ಹೇಳಿ, ನೀವು ಕುಟುಂಬ ರಾಜ್ಯಭಾರಕ್ಕೆ ಪ್ರಾಶಸ್ತ್ಯ ಕೊಟ್ಟದ್ದು ಸರಿನಾ… ಹಾಗಾದರೆ ನಾವು ಹೇಗೆ ನಿಮ್ಮನ್ನು “ಚಾಚಾ” ಎಂದು ಸಂಬಂಧವಿಟ್ಟು ಕರೆಯಲಿ..?

ನೆಹರೂಜೀ… ನಿಮ್ಮಲ್ಲಿ ನನ್ನ ಹಲವಾರು ಪ್ರಶ್ನೆಗಳಿವೆ. ಆದರೆ ಅದಕ್ಕೆಲ್ಲಾ ಉತ್ತರಿಸಲು ನೀವೇ ಇಲ್ಲವಲ್ಲಾ. ಖಂಡಿತವಾಗಿಯೂ ಈ ಸಮಯದಲ್ಲಿ ಗಾಂಧೀಜಿ ಇದ್ದಿದ್ದರೆ ನಿಮ್ಮನ್ನು ಕ್ಷಮಿಸುತ್ತಿದ್ದರಾ… ಈ ದೇಶ ಈ ಹಂತಕ್ಕೆ ಬರಲು ನಿಮ್ಮ ಕುಟುಂಬ ರಾಜಕಾರಣವೇ ಕಾರಣ ಎನ್ನುವಾಗ ಮೈ ಕುದಿಯೋದಿಲ್ವಾ. ನಾನೇನೂ ನಿಮ್ಮನ್ನು ಕ್ಷಮಿಸಿ ವಿಶ್ ಮಾಡುತ್ತೇನೆ ಎಂದಿಟ್ಟಕೊಳ್ಳಿ. ಆದರೆ ದೇಶದ ಲಕ್ಷಾಂತರ ಕ್ರಾಂತಿಕಾರಿಗಳು, ದೇಶಕ್ಕಾಗಿ ಪ್ರಾಣತೆತ್ತ ಹುತಾತ್ಮರು, ಅಣ್ಣ-ತಮ್ಮಂದಿರಂತಿದ್ದ ಹಿಂದೂ-ಮುಸಲ್ಮಾನರು ಬದ್ಧ ವೈರಿಗಳಂತಾಗಲು ನೀವೇ ಕಾರಣ ಎನ್ನುವವರು ನಿಮ್ಮನ್ನು ಕ್ಷಮಿಸಿಯಾರೇ. ಎಲ್ಲಾ ಬಿಡಿ, ವಿರೋಧದ ನಡುವೆಯೂ ಸಿಗರೇಟ್ ಹಾಗೂ ಮಧ್ಯ ಸೇವನೆ ಮಾಡುತ್ತಾ, ಹುಡುಗಿಯರೊಂದಿಗೆ ಸರಸವಾಡುತ್ತಿದ್ದ ನಿಮ್ಮನ್ನು ಬೆಳೆಸಿದ್ದ, ನಿಮಗೆ ಪ್ರಾಶಸ್ತ್ಯ ನೀಡಿದ್ದ ಗಾಂಧೀಜಿಯೇ ಕ್ಷಮಿಸಿಯಾರೇ..?

ಇರಲಿ. ದೇಶಕ್ಕೊಬ್ಬ ಮಹಾ ಪುರುಷ ಸಿಕ್ಕಿದ್ದಾನೆ ಎನ್ನುವ ಸಂತಸದಲ್ಲಿ ನಾವಿದ್ದೇವೆ. ನೀವು ಮಾಡಿರುವ ಅನೇಕ ತಪ್ಪುಗಳನ್ನು ತಿದ್ದಲು ಬಂದಿರುವ ಅಭಿನವ ಸರ್ಧಾರ್ ಪಟೇಲರಾದ ನರೇಂದ್ರ ಭಾಯಿ ಮೋದೀಜಿ ನಮ್ಮೊಂದಿಗೆ ದೇಶ ಕಟ್ಟಲು ಮುಂದಾಗಿದ್ದಾರೆ ಎಂದು ನಾವು ಈ ವರೆಗೂ ಸುಮ್ಮನಿದ್ದೇವೆ. ಆದರೂ ನಿಮ್ಮ ಸಂತಾನದ ಕುಡಿ ರಾಹುಲ್ ಗಾಂಧಿ ಮತ್ತೆ ನಿಮ್ಮ ತರಹ ಪ್ರಧಾನಿ ಆಗುವ ಕನಸು ಕಾಣುತ್ತಿದ್ದಾನೆ. ಕನಸಲ್ಲಾದರೂ ಬಂದು ಹೇಳಿ ಬಿಡಿ ನೆಹರೂಜಿ, “ಮರಿಮೊಮ್ಮಗ ಪಪ್ಪೂ… ದೇಶವನ್ನು ನಾಶ ಮಾಡಲು ಯತ್ನಿಸಿದ ನಾನು ಮಾಡಿದ ತಪ್ಪೂ, ಹಿಂದೂ ವಿರೋಧಿ ನೀತಿ ಅನುಸರಿಸಿ, ದೇಶದಲ್ಲಿ ತುರ್ತು ಪರಿಸ್ಥಿತಿ ತಂದು ದಬ್ಬಾಳಿಕೆ ಮಾಡಿದ್ದ ನನ್ನ ಮಗಳು, ಅಂದರೆ ನಿನ್ನ ಅಜ್ಜಿ ಮಾಡಿದ್ದ ತಪ್ಪೂ, ಇಟಲಿಯ ಬಾರ್ ಡಾನ್ಸರ್ ಸೋನಿಯಾಳನ್ನು ಮದುವೆಯಾಗಿದ್ದ ನಿನ್ನ ಅಪ್ಪ ಮಾಡಿದ್ದ ತಪ್ಪನ್ನೂ ಮತ್ತೆ ನೀನು ಮಾಡಬೇಡ ಕಂದಾ” ಎಂದು… ಅಲ್ಲಿಗೆ ನಿಜವಾಗಿಯೂ ದೇಶ ಸುಭೀಕ್ಷೆಯಾಗಿರುತ್ತೆ… ಎಗೆಯಿನ್ ಹ್ಯಾಪಿ ಬರ್ತ್‍ಡೇ ನೆಹರೂಜೀ…

-ಸುನಿಲ್ ಪಣಪಿಲ

Tags

Related Articles

Close