ಅಂಕಣ

ಪಾಕಿಸ್ತಾನದ ಪ್ಯಾಂಟ್ ಒದ್ದೆಯಾಗುವಂತೆ ಮಾಡಿದೆ ಮೋದಿಯ ಪರಮಾಣು ಸಿದ್ಧಾಂತ ಪರಿಷ್ಕರಣೆ!

ಮೋದಿಯಿಂದಾಗಿ ಭಾರತದ ಪರಮಾಣು ಸಿದ್ಧಾಂತ ಪರಿಷ್ಕರಣೆ; ಶತ್ರುರಾಷ್ಟ್ರ ಪಾಕಿಸ್ತಾನ ಗಢಗಢ

ಭಾರತ ಮತ್ತು ಚೀನಾದ ಮಧ್ಯೆ ಉದ್ವಿಗ್ನ ಸ್ಥಿತಿ ಇರುವಂತೆಯೇ ಅತ್ತ ಪಾಕಿಸ್ತಾನ ಕೂಡಾ ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಯತ್ನಿಸುತ್ತಿದೆ. ಎರಡು ಖತರ್ನಾಕ್ ರಾಷ್ಟ್ರಗಳ ಸವಾಲನ್ನು ಮೆಟ್ಟಿನಿಲ್ಲಲು ಭಾರತ ಕೂಡಾ ಸಾಕಷ್ಟು ಪೂರ್ವತಯಾರಿಯನ್ನು ನಡೆಸಿದ್ದು, ಯುದ್ಧ ಸಂಭವಿಸಿದರೆ ಎರಡೂ ವೈರಿ ರಾಷ್ಟ್ರಗಳನ್ನು ಸೋಲಿಲು ಭಾರತ ಪಣತೊಟ್ಟಿದೆ. ಯುದ್ದಾಂತಕ ದಟ್ಟವಾಗಿರುವುದರಿಂದ ಭಾರತವೂ ತನ್ನ ಯುದ್ಧ ಸಿದ್ಧಾಂತವನ್ನು ಬದಲಿಸಿದ್ದು, ಶತ್ರುಗಳ ಜೊತೆ ಇನ್ನಷ್ಟು ನಿರ್ದಯದಿಂದ ವರ್ತಿಸಲು ಮುಂದಾಗಿದೆ. ಅದಕ್ಕಾಗಿಯೇ ಭಾರದ ಪರಮಾಣು ಸಿದ್ಧಾಂತದ ಪರಿಷ್ಕರಣೆಗೆ ಮುಂದಾಗಿದೆ.

ಹೇಳಿಕೇಳಿ ಭಾರತ ಪರಮಾಣು ರಾಷ್ಟ್ರ. ಅಲ್ಲದೆ ಚೀನಾ-ಪಾಕಿಸ್ತಾನ ಕೂಡಾ ಪರಮಾಣು ರಾಷ್ಟ್ರಗಳು. ಒಂದು ವೇಳೆ ಯುದ್ಧ ಸಂಭವಿಸಿದರೆ ಪರಮಾಣು ಬಾಂಬ್‍ನ ಪ್ರಯೋಗ ಕೂಡಾ ನಡೆಯಬಹುದು ಎನ್ನುತ್ತಾರೆ ವಿಶ್ಲೇಷಕರು. ಆದರೆ ಭಾರತ ಪರಮಾಣು ಬಾಂಬ್ ಪ್ರಯೋಗದ ಬಗ್ಗೆ ಒಂದು ಸಿದ್ಧಾಂತವನ್ನು ಹೊಂದಿದೆ. ಅದೇನೆಂದರೆ ಇತರ ರಾಷ್ಟ್ರಗಳು ಪರಮಾಣು ಬಾಂಬ್ ಪ್ರಯೋಗಿಸದ ಹೊರತು ಭಾರತ ಮೊದಲಾಗಿ ಪರಮಾಣು ಬಾಂಬ್ ಪ್ರಯೋಗಿಸುವುದಿಲ್ಲ ಎಂಬ ಸಿದ್ಧಾಂತ. ಈ ಸಿದ್ಧಾಂತ ಎಷ್ಟೊಂದು ಹಾಸ್ಯಾಸ್ಪದ ಎಂದರೆ ಒಂದು ವೇಳೆ ಭಾರತದ ಮೇಲೆ ಪರಮಾಣು ಬಾಂಬ್ ದಾಳಿ ನಡೆದಿದ್ದೇ ಆದರೆ ಭಾರತ ಉಳಿಯುವುದು ಸಾಧ್ಯವೇ? ಎಲ್ಲಾ ನಾಶವಾದ ಮೇಲೆ ಭಾರತದ ಮೇಲೆ ಪರಮಾಣು ಬಾಂಬ್ ದಾಳಿ ನಡೆಸಿದವರ ವಿರುದ್ಧ ಪರಮಾಣು ದಾಳಿ ಯಾರು ನಡೆಸುವುದು? ಇಂಥಾ ಹಾಸ್ಯಾಸ್ಪದ ಸಿದ್ಧಾಂತವನ್ನು ಕಳೆದ 70 ವರ್ಷಗಳಿಂದ ನಮ್ಮನ್ನಾಳುತ್ತಿದ್ದ ಕಾಂಗ್ರೆಸ್ ಸರಕಾರ ಪಾಲಿಸಿಕೊಂಡು ಬರುತ್ತಿತ್ತು. ಆದರೆ ಇಂದು ಅಂಥಾ ಪೊಳ್ಳು ಸಿದ್ಧಾಂತಕ್ಕೆ ಎಳ್ಳು ನೀರು ಬಿಡಲು ನರೇಂದ್ರ ಮೋದಿ ಸರಕಾರ ಸಿದ್ಧತೆ ನಡೆಸಿದೆ.

ವೈರಿ ರಾಷ್ಟ್ರಗಳ ಯುದ್ಧ ತತ್ಪರತೆ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಭಾರತವನ್ನು ರಕ್ಷಿಸಲು ನರೇಂದ್ರ ಮೋದಿ ಸರಕಾರ ಪರಮಾಣು ಪ್ರಯೋಗಕ್ಕಿರುವ ಸಿದ್ಧಾಂತವನ್ನೇ ಪರಿಷ್ಕರಿಸಲಿದೆ ಎಂದು ಸೆಂಟರ್ ಫಾರ್ ಇಂಟರ್ನಾಷ್ಯನಲ್ ಸ್ಟ್ರಾಟೆಜಿಕ್ ಸ್ಟಡೀಸ್(ಸಿಐಎಸ್‍ಎಸ್) ಹೇಳಿಕೊಂಡಿದೆ. ಭಾರತ ಸರಕಾರದ ಈ ದಿಟ್ಟ ನಿರ್ಧಾರದಿಂದ ವೈರಿ ರಾಷ್ಟ್ರ ಪಾಕಿಸ್ತಾನ ಥರಥರಗುಟ್ಟಿದೆ. ಪಾಕಿಸ್ತಾನ ಅಥವಾ ಚೀನಾ ಯವುದೇ ಪರಮಾಣು ಸಿದ್ಧಾಂತವನ್ನು ಹೊಂದಿಲ್ಲ. ಮೊದಲು ಬಳಸುವುದಿಲ್ಲ ಎಂಬ ಭಾರತದ ಪರಮಾಣು ಸಿದ್ಧಾಂತದಿಂದ ಭಾರತದ ಸಾರ್ವಭಾಮತೆಗೆ ಧಕ್ಕೆ ಉಂಟಾಗುವುದರಿಂದ ಭಾರತ ತನ್ನ ಸಿದ್ಧಾಂತದಲ್ಲಿ ಪರಿಷ್ಕರಣೆ ಮಾಡಿಕೊಂಡಿದೆ ಎಂಬುವುದು ಸಿಐಎಸ್‍ಎಸ್ ವಾದ. ಇಷ್ಟು ಮಾತ್ರವಲ್ಲದೆ ಭಾರತ  ತನ್ನ ಯುದ್ಧದ ಕಾರ್ಯತಂತ್ರವನ್ನೂ ಬದಲಿಸಿದ್ದು, ದೇಶದ ಭದ್ರತೆಗೆ ಸವಾಲು ಎದುರಾದರೆ ಪರಮಾಣು ಬಾಂಬ್ ದಾಳಿ ನಡೆಸಲು ಸಿದ್ಧ ಎಂದು ಹೇಳಿರುವುದೇ ಪಾಕಿಸ್ತಾನ ಭಯಪಡಲು ಕಾರಣ. ದೇಶ ಅಪಾಯಕ್ಕೆ ತುತ್ತಾದರೆ ಆಕ್ರಮಣಕಾರಿ ಹೆಜ್ಜೆ ಇಡಲೂ ಭಾರತ ಮುಂದಾಗಿದೆ.

ಪಾಕಿಸ್ತಾನ ರಾಷ್ಟ್ರ ತನ್ನ ದೇಶದಲ್ಲಿ ಪರಮಾಣು ಶಕ್ತಿಯನ್ನು ಗಣನೀಯವಾಗಿ ಹೆಚ್ಚಿಸುತ್ತಿರುವುದರಿಂದ ಭಾರತದ ಪರಮಾಣು ಸಿದ್ಧಾಂತದಲ್ಲಿ ಬದಲಾವಣೆಯಾಗಲು ಕಾರಣ. ಅಲ್ಲಿನ ಚಟುವಟಿಕೆಗಳು ದೇಶದ ಭದ್ರತೆಗೂ ಸವಾಲಾಗಿ ಪರಿಣಮಿಸಿದೆ. ಪರಿಣತರ ವಾದದ ಪ್ರಕಾರ ಭಾರತದಲ್ಲಿ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದಿರುವುದರಿಂದ ಪಾಕಿಸ್ತಾನ ಭಾರತದ ವಿರುದ್ಧ ದಾಳಿ ನಡೆಸಲು ಮುಂದಾಗಿದೆ. ದೇಶಕ್ಕೆ ಭಯೋತ್ಪಾದಕರ ಭಯವೂ ಇದೆ. ಈ ಬಗ್ಗೆ ಮಾಹಿತಿ ಇರುವುದರಿಂದ ಭಾರತ ಕೂಡಾ ಶತ್ರುಗಳ ವಿರುದ್ಧ ಅತ್ಯಂತ ಕಠಿಣ ರೀತಿಯಲ್ಲಿ ನಿರ್ದಯೆಯಿಂದ ವರ್ತಿಸಲು ಮುಂದಾಗಿದೆ. ಈ ಹಿಂದೆ ಭಾರತ ಯಾವುದೇ ಶತ್ರುಗಳ ವಿರುದ್ಧ ತಾನೇ ಮುಂದಾಗಿ ಯುದ್ಧ ಮಾಡಿದ್ದಿಲ್ಲ. ಶತ್ರುಗಳ ದಾಳಿ ನಡೆದಾಗ ಅವರನ್ನು ಹಿಮ್ಮೆಟ್ಟಿಸುವುದನ್ನು ಮಾತ್ರ ಮಾಡಿಕೊಂಡಿರುತ್ತಿತ್ತು. ಆದರೆ ಇಂದು ಆ ನಿಲುವನ್ನು ಭಾರತ ಬದಲಾಯಿಸಿದ್ದು, ಅಗತ್ಯ ಬಿದ್ದರೆ ಶತ್ರುಗಳ ವಿರುದ್ಧ ಮುಗಿಬಿದ್ದು ಯುದ್ಧ ನಡೆಸಲು ಸಿದ್ಧವಾಗಿದೆ ಎನ್ನುವುದು ವಿಶ್ಲೇಷಕರ ವಾದ.

ಜಗತ್ತಿನ ಹಲವು ಪ್ರಮುಖ ರಾಷ್ಟ್ರಗಳು ಶತ್ರುಗಳ ಜೊತೆ ವ್ಯಗ್ರವಾಗಿ ವರ್ತಿಸುತ್ತದೆ. ಆದರೆ ಭಾರತ ಮಾತ್ರ ಹಿಂದಿನ ಶಾಂತ ಸ್ಥಿತಿಯಲ್ಲಿಯೇ ಇರುವುದರಿಂದ ಭಾರತ ಶತ್ರು ರಾಷ್ಟ್ರಗಳ ಮೊದಲ ತುತ್ತಾಗುತ್ತಿತ್ತು. ಭಾರತದ ಮೊದಲಾಗಿ ಶಸ್ತ್ರ ಎತ್ತುವುದಿಲ್ಲ ಎಂಬ ನೀತಿಯಿಂದ ಭಾರತಕ್ಕೆ ಅಪಾಯವಿದೆ. ಅಲ್ಲದೆ ಪಾಕಿಸ್ತಾನ ಭಾರತದ ಪ್ರಮುಖ ನಗರಗಳನ್ನು ಗುರಿಯಾಗಿಸಿ ಪರಮಾಣು ಸಿದ್ಧ ಸ್ಥಿತಿಯಲ್ಲಿಟ್ಟಿರುವುದರಿಂದ ಅವರೇನಾದರೂ ಭಾರತದ ಮೇಲೆ ದಾಳಿ ನಡೆಸಿದ್ದೇ ಆದರೆ ಭಾರತಕ್ಕೆ ಪ್ರತೀಕಾರ ನಡೆಸಲು ಸಾಧ್ಯವೇ? ಇಂಥಾ ಲೋಪಗಳನ್ನು ಮನಗಂಡು ಭಾರತ ತನ್ನ ಯುದ್ಧ ಸಿದ್ಧಾಂತವನ್ನು ಬದಲಿಸಲಿದೆ ಎಂದು ಸಿಐಎಸ್‍ಎಸ್ ಅಭಿಪ್ರಾಯ.

ವಿಶ್ವದಲ್ಲಿ ಇಸ್ರೇಲ್ ಮತ್ತು ಅಮೇರಿಕಾ ಅಕ್ರಮಣಕಾರಿ ಮನೋಸ್ಥಿತಿಯನ್ನು ಹೊಂದಿದೆ. ತನ್ನ ದೇಶದ ಮೇಲೆ ಶತ್ರು ರಾಷ್ಟ್ರ ದಾಳಿ ನಡೆಸಲಿದೆ ಎಂಬ ಮುನ್ಸೂಚನೆ ಸಿಕ್ಕಿದರೆ ಈ ರಾಷ್ಟ್ರಗಳು ತಾವೇ ಮುಂದಾಗಿ ದಾಳಿ ನಡೆಸಿ ಶತ್ರುಗಳನ್ನು ಮಟ್ಟಹಾಕುತ್ತಿದೆ. ಅಮೇರಿಕಾ ಮತ್ತು ಇಸ್ರೇಲ್ ಭಾರತದ  ಪರಮಾಪ್ತ ದೇಶಗಳು. ಆದ್ದರಿಂದ ಭಾರತ ಕೂಡಾ ತನ್ನ ಯುದ್ಧ ನಿಲುವಿನಲ್ಲಿ ಬದಲಾವಣೆ ಹೊಂದುವುದರಲ್ಲಿ ಅಚ್ಚರಿಯಿಲ್ಲ ಎಂದು ನ್ಯೂಯಾರ್ಕ್‍ನ ಯುನಿವರ್ಸಿಟಿ ಆಫ್ ಅಲ್ಬೆನಿಯ ರಾಜ್ಯಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಡಾ. ಕ್ರಿಸ್ಟೋಫೆರ್ ಕ್ಲಾರಿ ಅವರ ಅಭಿಪ್ರಾಯವಾಗಿದೆ.

ಭಾರತದ ಯುದ್ಧ ನೀತಿಯ ಬಗ್ಗೆ ಸ್ವತಃ ದೇಶದಲ್ಲಿ  ಬದಲಯಿಸಬೇಕೆಂಬ ಒತ್ತಾಯವನ್ನು ವಿದ್ವಾಂಸರು ಮಾಡಿದ್ದರು. ಸಾರ್ವಜನಿಕ ಅಭಿಪ್ರಾಯಗಳು ಕೂಡಾ ಇದೇ ಆಗಿತ್ತು.

ಪಾಕಿಸ್ತಾನದಂಥಾ ನಂಬಿಕೆದ್ರೋಹಿ ಪರಮಾಣು ರಾಷ್ಟ್ರವನ್ನು ಹೊಂದಿರುವ ಭಾರತ ತನ್ನ ಯುದ್ಧ ನೀತಿಯಲ್ಲಿ ಬದಲಾವಣೆ ಮಾಡಿರುವುದು ಸಹಜವೇ ಆಗಿದೆ. ಅಲ್ಲದೆ ಸೈನ್ಯ, ಶಸ್ತ್ರಾಸ್ತ್ರದಲ್ಲಿ ಭಾರತ ವಿಶ್ವದಲ್ಲೇ ಬಲಾಢ್ಯವಾಗಿದೆ. ಭಾರತ ಇಷ್ಟೆಲ್ಲಾ ಶಕ್ತ ರಾಷ್ಟ್ರವಾಗಿದ್ದರೂ ತನ್ನ ಹಿಂದಿನ ಮೊದಲಾಗಿ ಪ್ರಯೋಗಿಸುವುದಿಲ್ಲ ಎಂಬ ಸಿದ್ದಾಂತದಿಂದ ಭಾರತಕ್ಕೆ ಅಪಾಯವೇ ಜಾಸ್ತಿ. ಸುತ್ತಮುತ್ತ ಪಾಕಿಸ್ತಾನ, ಚೀನಾದಂಥಾ ರಾಷ್ಟ್ರಗಳು ಭಾರತದ ಮೇಲೆ ಮುಗಿಬೀಳಲು ಕಾಯುತ್ತಿರುವುದರಿಂದ ತನ್ನ ಹಳೆಯ ಯುದ್ಧ ಸಿದ್ದಾಂತವನ್ನು ಬದಲಿಸದಿದ್ದರೆ ಭಾರತಕ್ಕೆ ಅಪಾಯವಾಗಿರುತ್ತಿತ್ತು. ಆದ್ದರಿಂದ ಭಾರತ ಕೂಡಾ ಯುದ್ಧ ಸಿದ್ಧಾಂತದಲ್ಲಿ ಬದಲಾವಣೆ ತಂದಿದೆ ಎಂದು ವಿಶ್ಲೇಷಕರ ಅಭಿಪ್ರಾಯವಾಗಿದೆ.

ಚೇಕಿತಾನ

Tags

Related Articles

Close