ಅಂಕಣಪ್ರಚಲಿತ

ಪ್ರಧಾನಿ ಮೋದಿಯನ್ನು ಭೇಟಿಯಾಗುವಾಗ ಕಪ್ಪು ಕನ್ನಡಕ ಧರಿಸಿದ್ದ ಅಧಿಕಾರಿಯೊಬ್ಬರು ಮತ್ತೆ ಸುದ್ದಿಯಲ್ಲಿದ್ದಾರೆ! ಹೇಗೆ ಗೊತ್ತೇ?

ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸುವ ವೇಳೆ ಸನ್ ಗ್ಲಾಸ್ ಧರಿಸಿದ್ದ ಬಸ್ತರ್ ಜಿಲ್ಲೆಯ ಜಿಲ್ಲಾ ಮ್ಯಾಜಿಸ್ಟ್ರೇಟ್‍ಗೆ ಛತ್ತೀಸ್‍ಘಡ್ ಸರ್ಕಾರ
ನೋಟಿಸ್ ಜಾರಿಗೊಳಿಸಿತ್ತು. ಜಗದಲ್‍ಪುರ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಧಾನಿಯನ್ನು ಸ್ವಾಗತಿಸುವ ವೇಳೆ ಐಎಎಸ್ ಅಧಿಕಾರಿ ಅಮಿತ್ ಕಟಾರಿಯಾ ಅವರು ಸನ್ ಗ್ಲಾಸ್ ಧರಿಸಿದ್ದರು. ಈ ಮೂಲಕ ಶಿಷ್ಟಾಚಾರದ ಉಲ್ಲಂಘನೆ ಮಾಡಿದ್ದರು ಎಂಬುವುದು ನಮಗೆಲ್ಲಾ ತಿಳಿದ ವಿಷಯ. ಈ ವಿಷಯ ಕಳೆದು ವರ್ಷ ಸಂದರೂ ಮತ್ತೆ ಮೋದಿ ಹಾಗೂ ಅಮಿತ್ ಕಟಾರಿಯಾ ಸುದ್ದಿಯಲ್ಲಿದ್ದಾರೆ.!!

ಅಮಿತ್ ಕಟಾರಿಯಾ ಬಬ್ಬ ಪ್ರಾಮಾಣಿಕ ಹಾಗೂ ನಿಷ್ಟಾವಂತ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದು ನಮಗೆಲ್ಲಾ ತಿಳಿದ ವಿಷಯ. ಕಟಾರಿಯಾ ಇವರು ಎಲ್ಲಿ ಕೆಲಸ ಮಾಡಿರುವರೋ ಅಲ್ಲಿ ತುಂಬಾ ಆಡಳಿತಾತ್ಮಕವಾಗಿ ಕೆಲಸ ಮಾಡಿದ್ದಾರೆ. ಇವರ ಆಡಳಿತವು ಗಡಿಯಾರದ ಸುತ್ತ ಕಲಸ ಮಾಡುತ್ತಿದೆ ಮತ್ತು ಸಾಮಾಜಿಕ ರಚನೆಯನ್ನು ಮಾರ್ಪಡಿಸುತ್ತದೆ ಎಂದು ಅವರು ಖಚಿತಪಡಿಸಿದ್ದಾರೆ. ಅದಕ್ಕೆ ಈಗ ನರೇಂದ್ರ ಮೋದಿ ಸರಕಾರವು ಒಳ್ಳೆ ಪ್ರತಿಫಲವನ್ನು ಕೊಟ್ಟಿದೆ.
ನಾವು ಈ ವಿಷಯವನ್ನು ಮರೆತಿದ್ದರೂ, ಮೋದಿ ಮಾತ್ರ ಕಟಾರಿಯಾ ಮಾಡುತ್ತಿದ್ದ ಕೆಲಸಗಳನ್ನು ಗಮನಿಸುತ್ತಲೆ ಬಂದಿದ್ದಾರೆ. ನರೇಂದ್ರ ಮೋದಿ ಮಾತ್ರ ಕಟಾರಿಯಾ ಇವರು ಸನ್ ಗ್ಲಾಸ್ ಹಾಕಿ ಅವರನ್ನು ಬರ ಮಾಡಿಕೊಂಡಿದ್ದಕ್ಕೆ ಶಿಷ್ಟಾಚಾರದ ಉಲ್ಲಂಘನೆಗೆ ಒಳಗಾಗಿದ್ದರು. ಇದರ ನಂತರ ಅಮಿತ್ ಕಟಾರಿಯಾ ನಗರಾಭಿವೃದ್ಧಿ ಸಚಿವಾಲಯದಲ್ಲಿ ಪ್ರಮುಖ ಪಾತ್ರವಹಿಸಿ ಕೆಲಸ ನಿರ್ವಹಿಸುತ್ತಿದ್ದರು.

ಮೋದಿ ಸರಕಾರವು ಅಮಿತ್ ಕಟಾರಿಯಾ ಅವರ ಕೆಲಸಗಳನ್ನೆಲ್ಲಾ ಗಮನಿಸಿ ಅವರನ್ನು ಉನ್ನತ ಹುದ್ದೆಗೆ ಆಯ್ಕೆ ಮಾಡಿಕೊಂಡಿದ್ದಾರೆ. ದೆಹಲಿಯ ಲ್ಯಾಂಡ್ ಆಂಡ್ ಡೆವಲಪ್‍ಮೆಂಟ್ ಆಫೀಸರ್ ದರ್ಜೆಗೆ ಅಮಿತ್ ಕಟಾರಿಯಾರನ್ನು ನೇಮಕ ಮಾಡಿದ್ದಾರೆ.

ಈ ಹುದ್ದೆಗೆ ವರ್ಗಾವಣೆ ಯಾಗುವುದಕ್ಕಿಂತ ಮುಂಚೆ ಅವರು ಸಂಗ್ರಾಹಕರಾಗಿ ಜಗದಾಲ್‍ಪುರ ಮತ್ತು ಛತೀಘಡ್‍ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿಯವರ ಸರಳತೆ ಮತ್ತು ಅಗಾಧವಾಗಿ ಯೋಚಿಸುವ ರೀತಿ ನಾವು ಇಲ್ಲಿ ಗಮನಿಸಬಹುದಾಗಿದೆ. ಇದನ್ನೆಲ್ಲಾ ಅಮಿತ್ ಕಟಾರಿಯಾರವರು ತಮ್ಮ ಫೇಸ್‍ಬುಕ್ ಅಕೌಂಟ್‍ನಲ್ಲಿ ಅಪ್‍ಲೋಡ್ ಮಾಡಿದ್ದರೆ.

ಕಟಾರಿಯಾರವರು ಪ್ರಾಮಾಣಿಕತೆಯಿಂದ ಎಲ್ಲಾ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಸರಕಾರಕ್ಕೆ ಅಮಿತ್ ಕಟಾರಿಯವರ ಬಗ್ಗೆ ಒಳ್ಳೆಯ ಗೌರವವಿದೆ. ಅವರು ಕೆಲಸ ಮಾಡಿದಂತಹ ರೆಕಾರ್ಡ್‍ಗಳನೆಲ್ಲ ಗಮನಿಸಿದರೆ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ ಅನ್ನೋದಕ್ಕೆ ನಿಸ್ಸಂದೇಹವಿಲ್ಲ. ಇವರು ಸರಕಾರಕ್ಕೆ ಒಂದು ಆಸ್ತಿ ಎಂದು ಪ್ರಧಾನಿ ಮೋದಿ ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲು ಪಾಲಾದ ಶಶಿಕಲಾ ಬೆಂಗಳೂರಿನ ಜೈಲು ವಾಸ ಅನುಭವಿಸುತ್ತಿದ್ದ ಸಮಯದಲ್ಲಿ ಇಡೀ ಕರ್ನಾಟಕ ಬೆಚ್ಚಿ ಬೀಳಿಸುವ
ಸ್ಫೋಟಕ ಮಾಹಿತಿಯನ್ನು ಮಹಿಳಾ ಐಪಿಎಸ್ ಅಧಿಕಾರಿ ಡಿ.ರೂಪಾ ಹೊರಹಾಕಿದ್ದರು. ತನ್ನ ದಕ್ಷತೆಯಿಂದ ಮನೆ ಮಾತಾಗಿದ್ದ ಲೇಡಿ ಸಿಂಗಂ ಖ್ಯಾತಿಯ ಡಿ.ರೂಪಾ ಕಾರಾಗೃಹದ ಕರಾಳ ಮುಖ ಮತ್ತು ಅಲ್ಲಿ ನಡೆಯುತ್ತಿರುವ ಅಕ್ರಮವನ್ನು ಕಂಡು ದಂಗಾಗಿದ್ದರು. ಶಶಿಕಲಾಗೆ ನೀಡುತ್ತಿದ್ದ ಆಡಂಬರದ ಸವಲತ್ತುಗಳ ವಿಷಯವನ್ನು ಬಹಿರಂಗಪಡಿಸುತ್ತಾರೆ.

ಆದರೆ ಈ ನಿಷ್ಠಾವಂತ ಅಧಿಕಾರಿಗೆ ಕಾಂಗ್ರೆಸ್ ಸರಕಾರ ಕೊಟ್ಟಿದ್ದೇನು?? ಡಿ ರೂಪಾ ಅವರನ್ನು ಬೆಂಗಳೂರಿನಿಂದ ಬೇರೆ ಕಡೆಗೆ ಕಾಂಗ್ರೆಸ್ ಸರಕಾರ ವರ್ಗಾವಣೆ ಮಾಡಲಾಯಿತು. ಬೆಂಗಳೂರು ಜೈಲಿನಲ್ಲಿ ಹೇಗೆ ಖೈದಿಯೊಬ್ಬಳು ತುಂಬಾ ಆಡಂಬರದಿಂದ ಜೀವನ ಮಾಡುವ ವಿಷಯವನ್ನು ಬಯಲಿಗೆಳೆದಾಗ ಅವರನ್ನು ಪ್ರಶಂಸಿಸದೆ ಬೇರೆ ಊರಿಗೆ ವರ್ಗಾವಣೆ ಮಾಡುತ್ತಾರೆ.

ಪ್ರಾಮಾಣಿಕತೆಯಲ್ಲಿ ಯಾರೂ ಕೆಲಸ ಮಾಡುತ್ತಾರೋ ಅಂತವರಿಗೆ ಇಲ್ಲಿ ಬೆಲೆ ಇಲ್ಲ.. ನಿಷ್ಠಾವಂತ ಅಧಿಕಾರಿಗಳಿಗೆ ಕಾಂಗ್ರೆಸ್ ಸರಕಾರ ಯಾವತ್ತೂ ಪ್ರೋತ್ಸಾಹಿಸಲ್ಲ ಎಂಬುವುದು ಇದಕ್ಕಿಂತ ನಿದರ್ಶನ ಬೇಕೇ??

ಭ್ರಷ್ಟಾಚಾರ ಮತ್ತು ಕಳಂಕವನ್ನು ಉತ್ತೇಜಿಸುವ ಭಾರತೀಯ ರಾಜಕೀಯವು ಕಟುವಾದ ಇತಿಹಾಸವನ್ನು ಹೊಂದಿದೆ. ತಾವು ಒಳ್ಳೆಯ ಕೆಲಸ ಮಾಡುವುದಕ್ಕಿಂತ ಒಳ್ಳೇ ಕೆಲಸ ಮಾಡುವವರ ಬಗ್ಗೆ ಬೇರೆಯವರು ಟೀಕಿಸುವುದೇ ಕೆಲವರ ಚಾಳಿಯಾಗಿರುತ್ತದೆ. ಹಾಗಾಗಿ ಭಾರತೀಯ ಆಡಳಿತಶಾಹಿ ಯಾವಾಗಲೂ ಅಸಮರ್ಥತೆ ಮತ್ತು ಭ್ರಷ್ಟಾಚಾರದಿಂದ ಅಳಿದು ಹೋಗಿದೆ. ಭ್ರಷ್ಟಾಚಾರದಿಂದ ಯಾರು ಆಡಳಿತ ನಡೆಸುತ್ತಾರೋ ಅವರಿಗೆ ಮಾತ್ರ ಕಾಂಗ್ರೆಸ್ ಸರಕಾರ ಮುಕ್ತ ಅವಕಾಶ ನೀಡುತ್ತದೆ.

Image result for amith kataria with modi

ಅಮಿತ್ ಕಟಾರಿಯಾ ವರ್ಗಾವಣೆ ಎಲ್ಲಾ ನಿಷ್ಟಾವಂತ ಅಧಿಕಾರಿಗಳಿಗೆ ಮಾದರಿಯಾಗಬೇಕಿದೆ. ಮೋದಿಯವರನ್ನು ಸ್ವಾಗತಿಸಲು ಒಬ್ಬ ನಿಷ್ಠಾವಂತ ಅಧಿಕಾರಿ ಪ್ರಧಾನಿಯನ್ನು ಸನ್ ಗ್ಲಾಸ್ ಹಾಕಿ ಬರಮಾಡಿಕೊಂಡದ್ದು ವಿಷಾದನೀಯ.. ಆದರೆ ಇದು ಆಲ್ ಇಂಡಿಯಾ ಸರ್ವಿಸ್ ರೂಲ್ಸ್‍ನ ಸೆಕ್ಷನ್3(1) ರಲ್ಲಿ ಉಲ್ಲಂಘನೆಯಾಗಿತ್ತು.

ವ್ಯಕ್ತಿಯು ಸೇವೆ ಮಾಡುವ ಸಮಯದಲ್ಲಿ ತಮ್ಮ ಘನತೆ ಮತ್ತು ಕರ್ತವ್ಯವನ್ನು ಕರಾರುವಕ್ಕಾಗಿ ಪಾಲಿಸಬೆಕೆಂದು ನಿಯಮವಾಗಿದೆ. ಆದರೆ
ಪ್ರಧಾನಿ ನರೇಂದ್ರ ಮೋದಿ ಮಾತ್ರ ಅದನ್ನೆಲ್ಲಾ ಮರೆತು ತಮ್ಮ ಸರಕಾರಕ್ಕೆ ಆಯ್ಕೆ ಮಾಡಿದ್ದಾರೆ. ಒಬ್ಬ ನಿಷ್ಟಾವಂತ ಅಧಿಕಾರಿಗೆ ಯಾವ ರೀತಿ ಗೌರವ ಸಲ್ಲಿಸಬೇಕೋ ಆ ಗೌರವ ಸಲ್ಲಿಸಿದ್ದಾರೆ.. ಕಾಂಗ್ರೆಸ್‍ನ ಹಾಗೆ ನರಿ ಬುದ್ಧಿ ತೋರಿಸಿಲ್ಲ ಎಂಬುವುದು ನೆನಪಿರಲಿ.

-ಪವಿತ್ರ

Tags

Related Articles

Close