ಪ್ರಚಲಿತ

ಪ್ರಸ್ತುತ ಸಮಾಜದಲ್ಲಿ ಬ್ರಾಹ್ಮಣರೇ ನಿಜವಾದ ದಲಿತರು! ಹೇಗೆ ಗೊತ್ತೇ?!

ಬ್ರಾಹ್ಮಣರು ಇವತ್ತಿನ ಪ್ರಸ್ತುತ ಸಮಾಜದ ಹೊಸ ದಲಿತರೇ?!

ಇವತ್ತು ಈ ಪ್ರಶ್ನೆಯನ್ನು ಕೇಳಬೇಕಾದ ಪರಿಸ್ಥಿತಿ ಬಂದಿದೆ! ಕಾರಣವಿಷ್ಟೇ! ಬ್ರಾಹ್ಮಣರು ಮೇಲ್ವರ್ಗದವರು ಎನ್ನುತ್ತಲೇ, ಮೀಸಲಾತಿಗಳಿಂದ ಬ್ರಾಹ್ಮಣರನ್ನು ಹೊರಗಿಡುತ್ತಲೇ, ಸರಕಾರೀ ಸೌಲಭ್ಯಗಳಿಂದ ಬ್ರಾಹ್ಮಣರು ಕೊನೆಗೂ ವಂಚಿತರಾಗಿಯೇ ಉಳಿದುಬಿಟ್ಟರು!

ಒಬ್ಬ ಭಾರತೀಯನಾಗಿಯೋ, ಅಥವಾ ಮೇಲ್ವರ್ಗಕ್ಕೆ ಸೇರಿದನಾಗಿಯೋ ಬ್ರಾಹ್ಮಣರ ಇವತ್ತಿನ ಸ್ಥಿತಿಯ ಬಗ್ಗೆ ಹೇಳಿದರೆ, ಮತ್ತದೇ ಮಿಥ್ಯಾರೋಪಗಳು ತಲೆಗೇರುತ್ತವೆ! ಮನುಕುಲದವರು ದಲಿತರ ಶೋಷಣೆ ಮಾಡಲು ಹೀಗೆಲ್ಲ ಮಾಡುತ್ತಿದ್ದಾರೆ ಎಂಬ ಮತ್ತದೇ ಕೂಗು ಏಳಬಹುದು! ಆದರೆ, ಬ್ರಾಹ್ಮಣರ ಸ್ಥಿತಿಯ ಬಗ್ಗೆ ಸಂಪೂರ್ಣವಾಗಿ ಅಧ್ಯಯನ ಮಾಡಿದವರು ಫ್ರೆಂಚ್ ಪತ್ರಕರ್ತ ಫ್ರಾಂಕೋಯಿಸ್ ಗಾಟಿಯರ್! ಭಾರತದಲ್ಲಿ ಎರಡು ದಶಕಗಳ ಕಾಲ ವಿದ್ದು,
ಭಾರತೀಯ ಸಮಾಜದ ಪೂರ್ಣ ಚಿತ್ರಣ ಕೊಟ್ಟವರು ಈ ಪತ್ರಕರ್ತರೇ!

ಪ್ರತಿ ರಾಜಕೀಯ ಪಕ್ಷವೂ ಸಹ, ಮತಬ್ಯಾಂಕ್ ಗಳೆಂದು ಜಾತಿ ಆಧಾರಿತವಾಗಿಯೇ ಮೀಸಲಾತಿಯ ಅಸ್ತ್ರ ಹೂಡಿದರು! ಅಸ್ತ್ರಕ್ಕೆ ಬಲಿಯಾದವರು ಮತ್ತದೇ ಬ್ರಾಹ್ಮಣರು! ಮೂಢನಂಬಿಕೆಯೆನ್ನುತ್ತೀರೋ ಅಥವಾ ಭ್ರಮೆಯೆನ್ನುತ್ತೀರೋ?! ನೀವೇನಾದರೂ ಬ್ರಾಹ್ಮಣ ಪಂಗಡಕ್ಕೋ, ಅಥವಾ ಮೇಲ್ವರ್ಗಕ್ಕೋ ಸೇರಿದ್ದರೆ, ನೀವು ಇದ್ದಕ್ಕಿದ್ದಂತೆ ಶ್ರೀಮಂತರಾಗುತ್ತೀರಿ! ಸುಲಭವಾಗಿ ಪ್ರತಿ ಸೌಲಭ್ಯಗಳೂ ನಿಮಗೆ ಸಿಗುತ್ತವೆ! ಇವತ್ತಿನ ಭಾರತೀಯ ಸಮಾಜ ಇನ್ನೂ ಇದೇ ಭ್ರಾಂತಿಯಲ್ಲಿದೆ! ಆದರೆ, ವಾಸ್ತವ ಹೇಳಬೇಕೆಂದರೆ,ಇಂತಹುದ್ದೇ ಭ್ರಮೆಗಳನ್ನಿಟ್ಟು ಪ್ರತಿ ರಾಜಕೀಯ ಪಕ್ಷಗಳೂ ಬ್ರಾಹ್ಮಣ ಸಮುದಾಯವನ್ನು 70 ವರ್ಷಗಳಿಂದ ಕಡೆಗಣಿಸುತ್ತ ಬಂದುದರ ಫಲವಾಗಿ, ಇವತ್ತು ಬ್ರಾಹ್ಮಣರು ಪ್ರಸ್ತುತ ಸಮಾಜದ ಹೊಸ ದಲಿತರಾಗಿ ಮಾರ್ಪಾಟಾಗಿದ್ದಾರೆ!

ಗಾಟಿಯರ್ ಪರಿಗಣಿಸಿದ್ದು ಇದನ್ನೇ! ಹಿಂದುಗಳ ಏಳಿಗೆಗೆ ಮಾರಕವಾದ ಅಂಶಗಳನ್ನು ಬಹಳಷ್ಟು ಕಡೆ ಬೆಟ್ಟು ಮಾಡಿ ತೋರಿಸಿದರು! ಅದರಲ್ಲಿಯೂ, ಬ್ರಾಹ್ಮಣರು ಇವತ್ತಿನ ಸಮಾಜದಲ್ಲಿರುವ ದಲಿತರೆಂಬುದನ್ನು ಬಹಳ ಸ್ಪಷ್ಟವಾಗಿಯೇ ತೋರಿಸಿದರು!

“ರಾಜಕೀಯ ಪಕ್ಷಗಳ ಮತಗಳ ಬೇಟೆ, ಓಲೈಕೆಯ ಸ್ವರೂಪವನ್ನು ಪಡೆದುಕೊಂಡಿತು! ಮೊದಲನೆಯದಾಗಿ, ಮತಕ್ಕೋಸ್ಕರ ತುಷ್ಟೀಕರಣ ಮಾಡಲು ಪ್ರಾರಂಭಿಸಿದ ಕಾಂಗ್ರೆಸ್, ಅಲ್ಪಸಂಖ್ಯಾತರೆಂದು ಮುಸಲ್ಮಾನರ ಓಲೈಕೆಗೆ ಪ್ರಾರಂಭಿಸಿತು! ತದನಂತರ, ಕ್ರೈಸ್ತರನ್ನು! ಕೊನೆಗೆ, ಹಿಂದೂಗಳಲ್ಲಿಯೂ ‘ದಲಿತ’ ರು, ಕೆಳವರ್ಗದವರು ಎಂದು ಓಲೈಕೆಗಿಟ್ಟುಕೊಂಡ ಕಾಂಗ್ರೆಸ್ ಬ್ರಾಹ್ಮಣರನ್ನು ಸಂಪೂರ್ಣವಾಗಿ ಮೂಲೆ ಗುಂಪಾಗಿಸಿತು! ಕಾಂಗ್ರೆಸ್ ನ ಮುಸ್ಲಿಂ ಹಾಗೂ ಕ್ರೈಸ್ತರ ಓಲೈಕೆ ನಿಲ್ಲಲೂ ಇಲ್ಲ! ಹಿಂದೂಗಳನ್ನು ಕೊನೆ ಕೊನೆಗೆ ಮರೆಯುತ್ತಲೇ ನಡೆದರು!

“ಯಾವಾಗ ಕಾಂಗ್ರೆಸ್ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಪ್ರೈವೇಟ್ ಹಾಗೂ ಪಬ್ಲಿಕ್ ಸೆಕ್ಟರ್ ಗಳಲ್ಲಿ 49.5% ರಷ್ಟು ಹೆಚ್ಚಿಸಬೇಕೆಂದು ತೀರ್ಮಾನಿಸಿತೋ, ಯಾರೂ ಸಹ ಮೇಲ್ವರ್ಗದ ಜನರ ಕಷ್ಟಗಳ ಬಗ್ಗೆ ಅರಿಯಲೂ ಇಲ್ಲ, ಧ್ವನಿಯನ್ನೂ ಎತ್ತಲಿಲ್ಲ. ಇಂತಹ ನಿರ್ಧಾರಗಳು ನಿರುದ್ಯೋಗದಂತಹ ಸಮಸ್ಯೆಗಳನ್ನು ಹೆಚ್ಚಿಸಿದವಲ್ಲದೇ, ಸರಕಾರೀ ಕೆಲಸಗಳಲ್ಲಿ ಬ್ರಾಹ್ಮಣರನ್ನು ಸಂಪೂರ್ಣವಾಗಿ ಕಡೆಗಣಿಸಲಾಯಿತು.”

“ಇವತ್ತಿನ ಸಮಾಜದಲ್ಲಿ, ಸುಲಭವಾಗಿ ಶೌಚಾಲಯ ಸ್ವಚ್ಛಗೊಳಿಸುತ್ತಲೋ, ಇಲ್ಲದೇ ಇನ್ಯವುದೋ ತೀರಾ ಕೆಳ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವ ಬ್ರಾಹ್ಮಣರನ್ನು ನೋಡಬಹುದು! ಯಾವ ಕೆಲಸವೂ ಕೀಳಲ್ಲ ಎಂಬುವುದು ಸತ್ಯವೇ ಆದರೂ ಕೂಡ, ಸರಕಾರೀ ಕೆಲಸಗಳು ಬ್ರಾಹ್ಮಣರಿಗಿಲ್ಲದ ಪರಿಣಾಮ ಅನಿವಾರ್ಯವಾಗಿ ಅಂತಹ ಕೆಲಸಗಳನ್ನು ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ. ”

“ನಿಜವಾಗಲೂ ನೋಡಿದರೆ, ಕೇವಲ ದಲಿತರು ಅಥವಾ ಹಿಂದುಳಿದ ವರ್ಗಗಳ ಜನರು ಮಾತ್ರವೇ ಶೌಚಾಲಯವನ್ನು ಸ್ವಚ್ಛಗೊಳಿಸುತ್ತಿರುವುದು ಎಂಬುದು ಸತ್ಯವಲ್ಲ. ದೆಹಲಿಯಲ್ಲಿ 50 ಸುಲಭ ಶೌಚಾಲಯಗಳಲ್ಲಿ, ಬ್ರಾಹ್ಮಣರು ಪ್ರತಿದಿನ ಶೌಚಾಲಯದ ಸ್ವಚ್ಛತೆಯನ್ನು ಮಾಡುತ್ತಿದ್ದಾರೆ! ಪ್ರತಿ ಶೌಚಾಲಯವನ್ನು ಸ್ವಚ್ಛ ಮಾಡುವುದಕ್ಕಾಗಿ, 5 – 6 ಜನ ಬ್ರಾಹ್ಮಣರಿದ್ದಾರೆ! ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ, ಬಹಳಷ್ಟು ಸರಕಾರೀ ನೌಕರಿಗಳನ್ನು ದಲಿತರು ಹಿಂದುಳಿದ ವರ್ಗದವರೇ ಕಸಿಯುತ್ತಿದ್ದಾರೆ ಮೀಸಲಾತಿಯ ನೆಪದಲ್ಲಿ.”

“ದೆಹಲಿಯ ಪಟೇಲ್ ನಗರದಲ್ಲಿ 50% ಜನ ಬ್ರಾಹ್ಮಣರೇ ರಿಕ್ಷಾಗಾಡಿಗಳನ್ನು ಎಳೆಯುತ್ತಾರೆ., ಬನಾರಸ್ಸಿನಲ್ಲಂತೂ, ಬಹುತೇಕರು ಬ್ರಾಹ್ಮಣರೇ ಇರುವರು.”

“ಸರಕಾರಗಳು, ಮತಬ್ಯಾಂಕುಗಳಡಿಯಲ್ಲಿ, ಹಿಂದುಳಿದ ವರ್ಗಕ್ಕಷ್ಟೇ ಪ್ರಾಶಸ್ತ್ಯವನ್ನು ನೀಡಿದರು! ಮೀಸಲಾತಿಯ ನೆಪದಲ್ಲಿ, ಬ್ರಾಹ್ಮಣರನ್ನು ಕಡೆಗಣಿಸುತ್ತಲೇ, ತುಷ್ಟೀಕರಣ ಮಾಡಲು ತೊಡಗಿದರು.”

“ಇವೆಲ್ಲವನ್ನೂ ಬಿಡಿ. ತಮ್ಮ ಸ್ವಂತ ನೆಲದಲ್ಲಿಯೇ ಕಾಶ್ಮೀರಿ ಪಂಡಿತರು ನಿರಾಶ್ರಿತರಾದರು! ಬರೋಬ್ಬರಿ 4,00,000 ಜನ ಬ್ರಾಹ್ಮಣರು, ಅವರದೇ ನೆಲದಲ್ಲಿ ನಿರಾಶ್ರಿತರಾಗಿ ಬದುಕುತ್ತಿದ್ದಾರೆ. ಜಮ್ಮು ಕಾಶ್ಮೀರದ ನಿರಾಶ್ರಿತರ ಶಿಬಿರಗಳಲ್ಲಿ, ದೆಹಲಿಯ ರಸ್ತೆಗಳಲ್ಲಿ, ತೀರಾ ದುಸ್ಥರವಾಗಿ ಬದುಕು ಸಾಗಿಸುತ್ತಿದ್ದಾರೆ. ಕಾಶ್ಮೀರಿ ಪಂಡಿತರ ಮತ ಬ್ಯಾಂಕುಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗುವುದರ ಜೊತೆಗೆ, ಬದುಕನ್ನೂ ಕಡೆಗಣಿಸಲಾಯಿತು.”

“ದಕ್ಷಿಣ ಭಾರತದಲ್ಲಂತೂ, ಬ್ರಾಹ್ಮಣರ ಸ್ಥಿತಿ ಭೀಕರ! ಆಂಧ್ರದ 75% ಬ್ರಾಹ್ಮಣರು, ಮನೆಯ ಕೆಲಸದವರಾಗಿಯೋ, ಮುಸುರೆ ತಿಕ್ಕುವರಾಗಿಯೋ ಬದುಕು ನಡೆಸುತ್ತಿದ್ದಾರೆ!! ಜೆ.ರಾಧಾಕೃಷ್ಣರವರು ಬರೆದ Brahmins Of India ದಲ್ಲಿ ಪುರೋಹಿತರು ಮತ್ತು ಪಂಡಿತರು ಬಡತನ ರೇಖೆಗಳಿಗಿಂತ ಕೆಳಗೆ ಬದುಕುತ್ತಿ‌ದ್ದಾರೆಂದು ಸಾಕ್ಷ್ಯಾಧಾರಿಸಿದ್ದಾರೆ.”

‘ಇವತ್ತಿನ ಶಿಕ್ಷಣ ದಲ್ಲಾಗಿರಲಿ, ವೃತ್ತಿಪರ ಪದವಿಗಳಾಗಿರಲಿ, ಬ್ರಾಹ್ಮಣ ವಿದ್ಯಾರ್ಥಿಗಳು ಕಡಿಮೆ ಕಾಣ ಸಿಗುತ್ತಾರೆ. ಬ್ರಾಹ್ಮಣರ ಸರಾಸರಿ ಮೆರಿಟ್ ಯಾವ ಉಪಯೋಗಕ್ಕೂ ಬರದೇ ಇರುವ ಹಾಗಾಗಿದೆ. ಆಶ್ಚರ್ಯಕರವೆಂದರೆ, ಸರಕಾರದ ಸ್ಕಾಲರ್ ಶಿಪ್ಪುಗಳಲ್ಲಿ ಮೊದಲು ಮೀಸಲಾತಿಯವರಿಗೆ ನೀಡಿದ ನಂತರ, ಕೊನೆಗೆ ಬ್ರಾಹ್ಮಣ ವಿದ್ಯಾರ್ಥಿಗಳ ಕಡೆ ನೋಡಲಾಗುವುದರಿಂದ, ಶೈಕ್ಷಣಿಕವಾಗಿಯೂ ಬ್ರಾಹ್ಮಣರನ್ನು ಕಡೆಗಣಿಸಲಾಗಿದ್ದರ ಪರಿಣಾಮ, ಪ್ರಸ್ತುತ ಸಮಾಜದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸ ಮಾಡುವುದೂ ಕಷ್ಟವಾಗಿದೆ.”

“2006 ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, 55 % ಬ್ರಾಹ್ಮಣರು ಬಡತನ ರೇಖೆಗಳಿಗಿಂತ ಕೆಳಮಟ್ಟದಲ್ಲಿ ಬದುಕುತ್ತಿದ್ದಾರೆ. ದಕ್ಷಿಣ ಭಾರತದ ಸ್ಥಿತಿಯೂ ಇದಕ್ಕಿಂತ ಬೇರೆ ಹೊರತಲ್ಲ. ಕರ್ನಾಟಕದ ಹಣಕಾಸು ಸಚಿವಾಲಯದ ಸಮೀಕ್ಷಾ ವರದಿ ಪ್ರಕಾರ ವಿವಿಧ ಮತಗಳ ತಲಾ ಆದಾಯ, ಕ್ರೈಸ್ತರಿಗೆ 1,562 ರೂ, ವಕ್ಕಲಿಗರಿಗೆ 914 ರೂ, ಮುಸಲ್ಮಾನರಿಗೆ 794 ರೂ, SC ಗೆ 680 ರೂ, ST ಗೆ 577 ರೂ ಮತ್ತು ಬ್ರಾಹ್ಮಣರಿಗೆ 537 ರೂಗಳಷ್ಟಿದೆ!

“ದತ್ತಿ ಇಲಾಖೆಯ ಸಮೀಕ್ಷೆಯ ಪ್ರಕಾರ, ನೂರಾರು ಬ್ರಾಹ್ಮಣ ಕುಟುಂಬಗಳು ತಿಂಗಳಿಗೆ ಕೇವಲ 500 ರೂ ಆದಾಯಗಳಲ್ಲಿ ಬದುಕುತ್ತಿದ್ದಾರೆ ಎಂದು ವರದಿ ಮಾಡಿದೆ. ದೇವಸ್ಥಾನಗಳಲ್ಲಿ ಪೂಜೆ ಮಾಡಿ, ಬದುಕು ಪೂರ್ತಿ ವೇದವನ್ನು ಅಭ್ಯಸಿಸುತ್ತಾ, ಭಾರತದ ಸಂಸ್ಕೃತಿಯನ್ನು ಉಳಿಸುವ ಬ್ರಾಹ್ಮಣರನ್ನು ಕಡೆಗಣಿಸಿದ್ದಲ್ಲದೇ, ಅತಿರೇಕವೆನ್ನುವಷ್ಟು ಅಗೌರವ ತೋರಿದೆ ಭಾರತೀಯ ಸಮಾಜ!”

“ತಮಿಳುನಾಡಿನ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿರುವ ಅರ್ಚಕನಿಗೆ ತಿಂಗಳಿಗೆ ಮುನ್ನೂರು ರೂ ಗಳಷ್ಟು ಸಂಬಳ! ಮತ್ತು ದಿನಕ್ಕೆ ಒಂದು ಪಾವು ಅಕ್ಕಿ! (Census Department Studies)”

“ಕಾಂಗ್ರೆಸ್ ಪಕ್ಷವೊಂದು ತನ್ನ ಮತಬ್ಯಾಂಕ್ ಗಳಿಸುವುದಕ್ಕೋಸ್ಕರ ಬ್ರಾಹ್ಮಣರನ್ನು ಹೊರಗಿಟ್ಟು ಹಿಂದುಳಿದ ವರ್ಗದವರನ್ನು , ದಲಿತರನ್ನು ಬಳಸಿಕೊಂಡಿದ್ದರ ಪರಿಣಾಮ, ಇವತ್ತು ಭಾರತದಲ್ಲಿ ಬ್ರಾಹ್ಮಣರನ್ನು ಏಲಿಯನ್ ಗಳ ರೀತಿ ನೋಡಲಾಗುತ್ತಿದೆ. ಭಾರತ ಸರಕಾರ, ಮಸೀದಿಗಳ ಮುಲ್ಲಾಗಳಿಗೆ 10 ಬಿಲಿಯನ್ ರೂ ಗಳಷ್ಡು ಸಂಬಳವನ್ನು ನೀಡಿದರೆ, ಹಜ್ ಸಬ್ಸಿಡಿಯೆಂದು 2 ಬಿಲಿಯನ್ ರೂ ಗಳಷ್ಟು ಅನುದಾನ ನೀಡುತ್ತದೆ. ಆದರೆ,
ಮೇಲ್ವರ್ಗದವರೆಂಬ ಕಾರಣಕ್ಕೆ ಬ್ರಾಹ್ಮಣರು ಪ್ರತಿ ಸೌಲಭ್ಯಗಳಿಂದಲೂ ವಂಚಿತರಾದರು! ”

“ವಾಸ್ತವ ಇಷ್ಟೇ! ಹಿಂದುಳಿದ ವರ್ಗದವರನ್ನು ಎತ್ತಬೇಕೆಂಬ ದೃಷ್ಟಿಯಿಟ್ಟು ಬ್ರಾಹ್ಮಣರನ್ನು ತುಳಿಯಿತು ಕಾಂಗ್ರೆಸ್! ಸಮಾನವಾದ ಹಕ್ಕುಗಳನ್ನು ನೀಡದೇ, ತುಷ್ಟೀಕರಣಕ್ಕಿಳಿದ ಕಾಂಗ್ರೆಸ್ ಬ್ರಾಹ್ಮಣರನ್ನು ಮತ್ತು ಕೊನೆ ಕೊನೆಗೆ ಹಿಂದೂಗಳನ್ನು ತುಳಿಯತೊಡಗಿತು. 70 ವರ್ಷಗಳಲ್ಲಿ ಬ್ರಾಹ್ಮಣರು ಬಡತನ ರೇಖೆಗಳಿಗಿಂತ ಕೆಳಸ್ಥರದಲ್ಲಿ ನಿಂತರು. ಹಿಂದೆ, ದಲಿತರನ್ನು ಕೆಟ್ಟದಾಗಿ ನಡೆಸಿಕೊಂಡರಾದರೆ, ಇವತ್ತು ಬ್ರಾಹ್ಮಣರು ಪ್ರಸ್ತುತ ಸಮಾಜದಲ್ಲಿನ ದಲಿತರಾಗಿದ್ದಾರೆ!”

ಇದು ಗಾಟಿಯರ್ ಹೇಳುವ ಮಾತುಗಳು. ವೇದ ಶಿಕ್ಷಣವನ್ನು ಪಡೆದು, ಬದುಕು ಪೂರ್ತಿ ಭಾರತದ ಸಂಸ್ಕೃತಿಯನ್ನು ಜೀವಂತವಾಗಿಟ್ಟವರಿಗೆ ಕೊನೆಗೂ ಸಿಕ್ಕಿದ್ದು ಶೂನ್ಯವೇ ಹೊರತು ಬೇರೆ ಇನ್ನೇನಲ್ಲ. ಹಾಗೂ ನೋಡುವಾಗ, ಬ್ರಾಹ್ಮಣರನ್ನು ತುಳಿಯತೊಡಗಿದ ಹಿಂದುಳಿದ ವರ್ಗದವರು ತಾವೂ ಮುಂದೆ ಬರಲಿಲ್ಲ, ಬ್ರಾಹ್ಮಣರಿಗೂ ಅವಕಾಶ ಕೊಡಲಿಲ್ಲ. ಒಟ್ಟಾರೆಯಾಗಿ, ಬ್ರಾಹ್ಮಣರ ಕಡೆಗಣಿಸಿದ್ದರ ಫಲವಾಗಿ, ಭಾರತೀಯ ಸಮಾಜ ಅಭಿವೃದ್ಧಿಯಲ್ಲಿ ಆಮೆಗತಿಯಲ್ಲಿ ಸಾಗಿತೇ ವಿನಃ ಹೇಳಿಕೊಳ್ಳುವಂತಹ ಯಾವ ಉನ್ನತಿಯೂ ಕಾಣಲಿಲ್ಲ.

– ತಪಸ್ವಿ

Tags

Related Articles

Close