ಪ್ರಚಲಿತ

ಬಳಸುವುದು ಬಿಎಮ್ ಡಬ್ಲ್ಯೂ ಎಕ್ಸ್ 5, ಬಿಎಮ್ ಡಬ್ಲ್ಯೂ ಎಕ್ಸ್ 6, ಆಡಿ, ರೋಲ್ಸ್ ರಾಯ್ಸ್, ಬಿಎಮ್ ಡಬ್ಲ್ಯೂ ಮಿನಿ ಕೂಪರ್ S ಕಾರುಗಳಾದರೂ ಬಡವರ ಬಗ್ಗೆ ಕಾಳಜಿಯಂತೆ ಈ ನಟನಿಗೆ!

ಯಾವಾಗ ಚಿತ್ರನಟ ಜೋಸೆಫ್ ವಿಜಯ್ ಭಾರತವನ್ನು ಹೇಗೆ ಅಭಿವೃದ್ಧಿಗೊಳಿಸಬಹುದೆಂದು ತನ್ನ ಸಿನಿಮಾದಲ್ಲಿ ಡೈಲಾಗ್ ಗಳನ್ನು ಹೇಳಿದರೋ, ಸ್ಫೂರ್ತಿಗೊಂಡ ವೀಕ್ಷಕರು ಚಪ್ಪಾಳೆಗಳ ಮೇಲೆ ಚಪ್ಪಾಳೆ ಹೊಡೆದು ನಾಯಕನನ್ನು ಹುರಿದುಂಬಿಸಿದರು!

ಆದರೆ, ವೀಕ್ಷಕರಲ್ಲಿ ಕೆಲವೇ ಕೆಲವು ಜನರಿಗೆ ಮಾತ್ರ ಭಾರತದ ಅಭಿವೃದ್ಧಿಯ ಬಗ್ಗೆ ಮಾತನಾಡುವ ರೀಲ್ ಹೀರೋ ಹೇಗೆ ವಾಸ್ತವದಲ್ಲಿ “ಫಾರಿನ್ ರಾಷ್ಟ್ರಗಳ”ನ್ನು ಅಭಿವೃದ್ಧಿ ಹೊಂದಲು ಸಹಾಯ ಮಾಡುತ್ತಿದ್ದಾನೆ ಎಂಹ ಅರಿವಿತ್ತು!

ಆಘಾತವಾಯಿತಾ?!

ಹಾ! ಇದು ತಮಿಳು ನಟ ಜೋಸೆಫ್ ವಿಜಯ್ ನ ವಾಸ್ತವದ ಬದುಕು! ಬರೀ ಐದು ವರ್ಷಗಳು ತೆರಿಗೆ ಕಟ್ಟದೇ ದೇಶದ್ರೋಹ ಮಾಡಿದ್ದು ಮಾತ್ರವಲ್ಲ, ಹಿರ ದೇಶದ ಕಾರುಗಳನ್ನು ಕೊಂಡು ಶೋಕಿ ಮಾಡುವ ಹುಚ್ಚೂ ಇದೆ! ಜೋಸೆಫ್ ವಿಜಯ್ ಬಳಸಿದ ವಾಹನವೆಲ್ಲವೂ ಸಹ ಹೊರದೇಶದ ಬ್ರಾಂಡೆಡ್ ಕಂಪೆನಿಗಳದ್ದೇ! Rolls Royce, Audi, BMW ಗಳಂತಹ ಕಾರುಗಳೆಲ್ಲವೂ ಸಹ ಬರೋಬ್ಬರಿ 1 ಕೋಟಿಯಿಂದ ಎರಡು ಕೋಟಿಯವರೆಗೆ ಬೆಲೆ ಬಾಳುವಂತಹುದ್ದೇ!

BMW X5, BMW X6, Rolls Royce Ghost, Nissan X- Trail, Audi A8, BMW Mini Cooper S! ಇವುಗಳೆಲ್ಲವೂ ಸಹ ವಿಜಯ್ ಹತ್ತಿರವಿರುವ ಕಾರುಗಳೇ!

ಜೋಸೆಫ್ ವಿಜಯ್ ರವರ ಆಸ್ತಿಯ ಮೊತ್ತ 400 ಕೋಟಿ ರೂ ಗಳಿಗಿಂತಲೂ ಹೆಚ್ಚು!

ದೇವಸ್ಥಾನ ಕಟ್ಟುವ ಬದಲು ಆಸ್ಪತ್ರೆ ಕಟ್ಟಿಸಿ ಮಾನವೀಯತೆ ತೋರಿ ಎಂದ ಜೋಸೆಫ್ ವಿಜಯ್ ರವ ಆಸ್ತಿಯ ಮೊತ್ತ ನೂರಾರು ಕೋಟಿ ಬೆಲೆ ಬಾಳುವಂತಹದ್ದೇ! ಅವರ ವರ್ಷದ ಆದಾಯದ ಅರ್ಧ ಪಾಲನ್ನಾದರೂ ಕೊಟ್ಟು ಆಸ್ಪತ್ರೆ ಕಟ್ಟಿಸಬಹುದಿತ್ತಲ್ಲವಾ ಸಾಮಾಜಿಕ ಕಾಳಜಿ ಇದ್ದದ್ದೇ ಆಗಿದ್ದರೆ?! ಸಿನಿಮಾದಲ್ಲಿ ದೇಶದ ಅಭಿವೃದ್ದಿಯ ಬಗ್ಗೆ, ದೇವಾಸ್ಥಾನಗಳ ಬಗ್ಗೆ, ಸಾಮಾಜಿಕ ಕಳಕಳಿಯ ಬಗ್ಗೆ ಭಾಷಣ ಮಾಡುವ ಜೋಸೆಫ್ ವಿಜಯ್ ನಿಜ ಬದುಕಿನಲ್ಲಿ ಅದೆಷ್ಟೋ ಬಡವರಿಗೆ ಸಹಾಯ ಮಾಡಬಹುದಿತ್ತಾದರೂ ಮಾಡಲಿಲ್ಲ! ಈಗಿರುವ ಆಸ್ತಿಯ ಮೊತ್ತದ ಅರ್ಧ ಭಾಗವನ್ನಾದರೂ ಸಮಾಜಕ್ಕೆ ಮೀಸಲಿರಿಸಿದರೆ ಉನ್ನತ ಸೌಲಭ್ಯಗಳನ್ನೊಳಗೊಂಡಂತಹ 30 ಆಸ್ಪತ್ರೆಗಳನ್ನು ನಿರ್ಮಿಸಬಹುದು! ವಿಜಯ್ ಗೆ ಅವೆಲ್ಲ ಬೇಕಿಲ್ಲ! ಯಾಕೆಂದರೆ ಬಡಬಗ್ಗರಿಗೆ ಸಹಾಯ ಮಾಡುವಂತೆ ಪರದೆಯ ಮೇಲಷ್ಟೇ ನಟಿಸುವ ನಟ ಅವರಷ್ಟೇ!

ಜೋಸೆಫ್ ವಿಜಯ್ ರವರ ಪ್ರತಿ ಸಿನಿಮಾಗಳು ಬಾಕ್ಸ್ ಆಫೀಸಿನಲ್ಲಿ ಕೊಳ್ಳೆ ಹೊಡೆಯುತ್ತದೆ! ಪ್ರತಿ ಸಿನಿಮಾಗಳಿಗೂ ಅವರ ಸಂಭಾವನೆ ಕೋಟಿಗಳ ಲೆಕ್ಕದಲ್ಲಿಯೇ ಇರುತ್ತದೆ! ಆದರೂ, ತೆರಿಗೆಯನ್ನು ಸತತ ಐದು ವರ್ಷ ಕಟ್ಟದೇ ವಂಚಿಸಿದ ಜೋಸೆಫ್ ವಿಜಯ್ ಗೆ ಕಳಕಳಿ ಇದ್ದಿದ್ದೇ ಆಗಿದ್ದರೆ ತನ್ನ ಒಂದು ಸಿನಿಮಾದ ಸಂಭಾವನೆಯಲ್ಲಿ ಬಡವರಿಗೆ ಸೂರು ಒದಗಿಸಿಕೊಡುವ ಎಲ್ಲಾ ಅವಕಾಶಗಳೂ ಇತ್ತು! ಆದರೂ, ಜೋಸೆಫ್ ವಿಜಯ್ ಒಂದು ರೂಪಾಯಿಯನ್ನೂ ಬಿಚ್ಚಲಿಲ್ಲ!

ಬಿಡಿ! ಅಕಸ್ಮಾತ್ ದುಡಿದ ಹಣಕ್ಕೆ ಮಾಡಿದ ಆಸ್ತಿಗೆ ಸರಿಯಾಗಿ ತೆರಿಗೆ ಕಟ್ಟಿದ್ದೇ ಆಗಿದ್ದರೆ ಅದೆಷ್ಟೋ ಬಡವರ ಬದುಕು ಸುಗಮವಾಗುತ್ತಿತ್ತೇನೋ! ಸರಕಾರದ ಖಜಾನೆ ತುಂಬಿದರಲ್ಲವೇ ರಾಜ್ಯಕ್ಕೆ ಒಳಿತಾಗುವುದು?! ದೇಶ ಅಭಿವೃದ್ಧಿಯಾಗುವುದು?! ಇದಾವುದನ್ನೂ ಯೋಚಿಸದ ಒಬ್ಬ ನಟ ಸಿನಿಮಾದಲ್ಲಿ ಮಾತ್ರ ಹೀರೋ ಆಗಿ ನಟಿಸಲು ಲಾಯಕ್ಕು ಅಷ್ಟೇ!

ಹೇಳುವುದೇ ಆದರೆ, ಜೋಸೆಫ್ ವಿಜಯ್ ಗೆ ನಿಜಕ್ಕೂ ತನ್ನ ತಾ ಸಿನಿಮಾದಲ್ಲಿ ಅಪ್ಪಟ ಸಾಮಾಜಿಕ ಕಳಕಳಿ ಹೊಂದಿರುವ ನಾಯಕನಂತೆ ಬಿಂಬಿಸಿಕೊಂಡು ಸಧೃಢ ಭಾರತಕ್ಕೆ ದುಡಿಯುತ್ತಿರುವ ಪ್ರಧಾನಿಯ ಬಗ್ಗೆ ವ್ಯಂಗ್ಯವಾಡುವ ಯಾವ ಹಕ್ಕಿದೆ?! ನೈತಿಕತೆಯ ಪರಾಮರ್ಶೆಯನ್ನು ಖಂಡಿತವಾಗಿ ವಿಜಯ್ ರವರು
ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ!

ದೇಶದ ಅಭಿವೃದ್ಧಿಯ ಬಗ್ಗೆ ಮಾತನಾಡುವ ಜೋಸೆಫ್ ವಿಜಯ್ ಗೆ ತನ್ನ ದೇಶದ ತಯಾರಿಕಾ ಕಂಪೆನಿಗಳ ಮೇಲೆಯೇ ನಂಬಿಕೆಯಿಲ್ಲ!

ಇತ್ತೀಚೆಗೆ ಫೋರ್ಬ್ಸ್ ಪತ್ರಿಕೆ ಮೋದಿಯವರ ಜಿಎಸ್ ಟಿ ತೆರಿಗೆ ಯಾವ ರೀತಿಯಾಗಿ ಉದ್ಯಮಗಳಿಗೆ, ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸರಕು
ಸಾಗಾಣಿಕೆಗಳಿಗೆ ಸಹಾಯ ಮಾಡುತ್ತದೆಯೆಂದು ಅಭಿನಂದಿಸಿ ಮಾತನಾಡಿದ್ದಲ್ಲದೇ, ಭಾರತ ಇನ್ನು ಎರಡು ವರ್ಷಗಳಲ್ಲಿ ಯಾವ ರೀತಿಯಾಗಿ ಅಭಿವೃದ್ಧಿ
ಹೊಂದಬಹುದೆಂಬ ಸಮೀಕ್ಷೆಯನ್ನೂ ನೀಡಿತ್ತು. ಆದರೆ, ಜೋಸೆಫ್ ವಿಜಯ್ ಮಾತ್ರ ತಮ್ಮ ಸಿನಿಮಾದಲ್ಲಿ ಜಿಎಸ್ ಟಿಯ ಬಗ್ಗೆ ಕುಹಕವಾಡಿದರು!

“ಡಿಜಿಟಲ್ ಇಂಡಿಯಾ” ದೇಶದಾದ್ಯಂತ ಹೊಸ ಹೊಸ ಉದ್ಯಮಕ್ಕೆ, ತೆರನಾದ ಅಭಿವೃದ್ಧಿಗೆ ಅವಕಾಶ ಕೊಡುವುದಲ್ಲದೇ, ಬೆಂಬಲವನ್ನೂ ನೀಡುತ್ತದೆ. ಸೂಪರ್ ಕಂಪ್ಯೂಟರ್ ಗಳನ್ನು ನಮ್ಮ ದೇಶದಲ್ಲಿಯೇ ತಯಾರಿಸಲು ಸಾಧ್ಯವಾಗಿದ್ದು ಇದೇ ರೀತಿಯ ಯೋಜನೆಗಳಿಂದ! ಸಾಮಾಜಿಕ ಕಳಕಳಿ ಇರುವ ಪ್ರತಿಯೊಬ್ಬನೂ ಸಹ ಡಿಜಿಟಲ್ ಇಂಡಿಯಾವನ್ನು ಪ್ರಶಂಸಿಸುತ್ತಾನೆ! ಆದರೆ, ಜೋಸೆಫ್ ವಿಜಯ್ ಮಾತ್ರ ಹೊರ ದೇಶಗಳ ಕಾರುಗಳನ್ನು ತರಿಸಿಕೊಂಡು ಭಾರತ ದೇಶದ ಅಭಿವೃದ್ಧಿಯ ಬಗ್ಗೆ ಸಲಹೆ ಕೊಡುತ್ತಾರೆಂದರೆ ಅದಕ್ಕಿಂತ ಬೇರೆ ಹಾಸ್ಯಾಸ್ಪದವೇನಿದೆ?!

ಹೊರ ದೇಶಗಳ ಕಾರುಗಳನ್ನು ಬಳಸುತ್ತಲೇ ದೇಶದ ತೆರಿಗೆಯನ್ನು ಕಟ್ಟದೇ, ಅಭಿವೃದ್ದಿಯ ಬಗ್ಗೆ ಮಾತನಾಡುವ ಜೋಸೆಫ್ ವಿಜಯ್ ! ವ್ಹಾ!

ಮಿಸ್ಟರ್ ಜೋಸೆಫ್ ವಿಜಯ್! ಮೊದಲು ಸಮಾಜ ಸೇವೆ ಮಾಡಿ! ನಂತರ ದೇಶದ ಪ್ರಧಾನಿಯ ಬಗ್ಗೆ ಅಣಕ ಮಾಡಿ!

ಅಭಿವ್ತಕ್ತಿ ಸ್ವಾತಂತ್ರ್ಯವೆನ್ನುವುದು ಎಲ್ಲರಿಗೂ ಇದೆ! ಪ್ರಶ್ನಿಸುವ ಹಕ್ಕು ಪ್ರತಿ ಒಬ್ಬ ಪ್ರಜೆಗೂ ಇದೆ! ಅದೇ ರೀತಿ ರಾಹುಲ್ ಗಾಂಧಿಯ ತರಹ ಜೋಸೆಫ್ ರಿಗೂ ಸಹ ಮೋದಿಯನ್ನು ಪ್ರಶ್ನಿಸುವ ಹಕ್ಕಿದೆ ಎಂದಾದರೆ, ಅದಕ್ಕಿಂತ ಮುಂಚೆ ಆತನ 400 ಕೋಟೆ ಆಸ್ತಿಯಲ್ಲಿ ಅರ್ಧ ಭಾಗವನ್ನಾದರೂ ಸಮಾಜ ಸೇವೆಗೆ ಮುಡಿಪಿಡಲಿ! ನಂತರ ಪ್ರಶ್ನೆ ಮಾಡಲಿ! ಯಾರನ್ನು ಬೇಕಾದರೂ! ಆಸ್ಪತ್ರೆಗಳನ್ನು ಕಟ್ಟಿಸಲಿ, ಸಿನಿಮಾಗಳಲ್ಲಿ ಬಿಂಬಿಸುವ ಕೋಮು ಸೌಹಾರ್ದವನ್ನು ನಿಜ ಜೀವನದಲ್ಲಿಯೂ ಅಳವಡಿಸಿಕೊಳ್ಳಲಿ! ಭ್ರಷ್ಟ ರಾಜಕಾರಣಿಗಳ ಬಗ್ಗೆ ಧ್ವನಿಯೆತ್ತಲಿ! ಆತನ ಘನತೆಯನ್ನು ಸ್ವಲ್ಪವಾದರೂ ಉಳಿಸಿಕೊಳ್ಳಲಿ! ಹಾ! ಎಲ್ಲದಕ್ಕಿಂತ ಮೊದಲು ಆತ ನ್ಯಾಯಯುತವಾಗಿ ಬದುಕಲಿ!

ಇಷ್ಟೆಲ್ಲವನ್ನು ಮಾಡಿದ ಮೇಲೆ ವಿಜಯ್ ದೇಶದ ಪ್ರಧಾನಿಗೆ ಪ್ರಶ್ನೆಗಳನ್ನು ಕೇಳಲಿ! ಅವರ ಯೋಜನೆಗಳ ಬಗ್ಗೆ ಅಣಕ ಮಾಡಲಿ! ಅಲ್ಲಿಯವರೆಗೂ, ಬಾಯಿ ಮುಚ್ಚಿಕೊಂಡು ಕುಳಿತಿರಲಿ! Atleast, ಮತ್ತೆ ಭಾರತ ಅಭಿವೃದ್ಧಿಯಿಂದ ವಿಮುಖವಾಗುವುದು ತಪ್ಪುತ್ತದೆ!

Source :https://finapp.co.in/vijay-net-worth/

– ತಪಸ್ವಿ

Tags

Related Articles

Close