ಪ್ರಚಲಿತ

ಬಿಗ್ ಬ್ರೇಕಿಂಗ್! ಡಿವೈಎಸ್ಪಿ ಗಣಪತಿಯ ಸಾವಿಗೆ ಮತ್ತೆ ಸಿಕ್ಕಿತು ಹೊಸ ತಿರುವು!! ಇದು ಆತ್ಮಹತ್ಯೆಯೋ ಅಥವಾ. . . .?!

ಮತ್ತೆ ಮತ್ತೆ ಡಿವೈಎಸ್ಪಿ ಗಣಪತಿಯವರ ಸಾವಿಗೆ ತಿರುವು ಸಿಗುತ್ತಲಿದೆ. ಅವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ! ಮಡಿಕೇರಿಯ ವಿನಾಯಕ ಲಾಡ್ಜಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಕೊಠಡಿಯಲ್ಲಿ ಸಿಬಿಐ ಅಧಿಕಾರಿಗಳಿಗೆ ಒಂದು ಗುಂಡು ಸಿಕ್ಕಿದ್ದು, ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಅದಲ್ಲದೇ, ಇಷ್ಟು ದಿನವೂ ನಾಪತ್ತೆಯಾಗಿದ್ದ ಕೆಲವು ದಾಖಲೆಗಳು ಲಭ್ಯವಾಗಿದೆ.

ಡಿವೈಎಸ್ಪಿ ಗಣಪತಿಯವರ ಸಾವಿಗೆ ನೇರವಾಗಿ ಗೃಹಸಚಿವರಾಗಿದ್ದ ಕೆ.ಜೆ .ಜಾರ್ಜ್, ಹಿರಿಯ ಐಪಿಎಸ್ ಅಧಿಕಾರಿಗಳಾದ ಪ್ರಣವ್ ಮೊಹಾಂತಿ ಮತ್ತು ಎ.ಎಂ.ಪ್ರಸಾದ್ ಅವರೇ ಕಾರಣ ಎಂದು ಕುಟುಂಬವೂ ಆರೋಪಿಸಿದ್ದಲ್ಲದೇ, ಆತ್ಮಹತ್ಯೆಗೂ ಮುನ್ನ ಸ್ವತಃ ಗಣಪತಿಯವರೇ ತನ್ನ ಜೀವಕ್ಕೆ ಯಾವುದೇ ತೊಂದೆರೆಯಾದರೂ ಕೂಡ ಈ ಮೂವರೇ ಕಾರಣ ಎಂದಿದ್ದ ವೀಡಿಯೋವನ್ನು ಪತ್ತೆ ಹಚ್ಚಿದ ಸಿಬಿಐ ತನ್ಮೂಲಕ ಈ ಮೂವರು ಆರೋಪಿಗಳ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾದರೂ, ಜೆ.ಜೆ.ಜಾರ್ಜ್ ರಾಜೀನಾಮೆ ಕೊಡದಿರುವುದು ಹಾಗೂ ಕಾಂಗ್ರೆಸ್ ನಾಯಕರೆಲ್ಲ ಬೆಂಬಲಿಸುತ್ತಿರುವುದನ್ನು ನೋಡಿದರೆ, ಗಣಪತಿಯವರದು ಆತ್ಮಹತ್ಯೆಯಲ್ಲ, ಬದಲಿಗೆ ಹತ್ಯೆ ಎಂಬ ಗುಮಾನಿಯೊಂದು ಕಾಡುತ್ತಿದೆ!

Image result for dysp ganapathi

ಸಿಬಿಐನ ಕಲೈಮಣಿ ನೇತೃತ್ವದಲ್ಲಿ ನಡೆಯುತ್ತಿರುವ ತನಿಖಾ ತಂಡ ಮಡಿಕೇರಿಯ ಲಾಡ್ಜಿನಲ್ಲಿ ಸಿಕ್ಕ ಗುಂಡೊಂದನ್ನು ವರದಿ ಮಾಡಿದ್ದು ಸದ್ಯದಲ್ಲಿಯೇ ಪ್ರಕರಣ ಹೊಸ ತಿರುವೊಂದನ್ನು ಪಡೆದುಕೊಳ್ಳಲಿದೆ. ವಿನಾಯಕ ಲಾಡ್ಜಿನ ರೂಮ್ ನಂ 315 ನಲ್ಲಿ ಅಧಿಕಾರಿಗಳಿಗೆ ಒಂದು ಗುಂಡು ಪತ್ತೆಯಾಗಿದ್ದು, ಹೆಚ್ಚಿನ ತನಿಖೆಗಾಗಿ ತಂಡ ವಿಚಾರಣೆ ಆರಂಭಿಸಿದೆ.

ಆತ್ಮಹತ್ಯೆ ಮಾಡಿಕೊಂಡರು ಎನ್ನಲಾದ ಗಣಪತಿಯವರ ರೂಮಿನಲ್ಲಿ ಗುಂಡು ಹೇಗೆ ಬಂತೆಂಬುದು ಯಕ್ಷ ಪ್ರಶ್ನೆಯಾಗಿದೆ! ವಿಧಾನಸಭೆಯಲ್ಲಿ ಈ ಪ್ರಕರಣದ ಬಗ್ಗೆ ಬಹಳ ಚರ್ಚೆಯಾಗುತ್ತಿದ್ದು, ಜಾರ್ಜ್ ರವರ ರಾಜೀನಾಮೆಗೆ ಒತ್ತಾಯಿಸಿದ್ದಲ್ಲದೇ, ಪ್ರಕರಣದ ದಿಕ್ಕು ತಪ್ಪಿಸುವ ಕಾರ್ಯವನ್ನೂ ಕಾಂಗ್ರೆಸ್ ಮಾಡುತ್ತಿದೆಯೆಂದು ವಿರೋಧ ಪಕ್ಷಗಳು ಆರೋಪಿಸಿದೆ.

Related image

ಇದು ಆತ್ಮಹತ್ಯೆಯೇ ಆಗಿದ್ದರೆ,…

ಪರರ ಬದುಕಿನ ಬಗ್ಗೆ ಯಾವತ್ತೂ ತಲೆ ಕೆಡಿಸಿಕೊಳ್ಳದ ಕಾಂಗ್ರೆಸ್ ಇದ್ದಕ್ಕಿದ್ದಂತೆ ಮುಗಿಬಿದ್ದು ಗಣಪತಿಯವರ ಸಾವಿನ ಹಿಂದೆ ಬಿದ್ದಿದ್ಯಾಕೆ?!

ಸಾವಾದ ನಂತರವೂ ಕೂಡ, ವಿಚಾರಣೆಯ ನೆಪದಲ್ಲಿ ಎಸಿಬಿಯವರ ಮುಖಾಂತರ ಮೂಲದಾಖಲೆಗಳನ್ನು ಗಣಪತಿಯವರ ಕುಟುಂಬದಿಂದ ವಶಪಡಿಸಿಕೊಂಡು ಬೆದರಿಕೆ ಹಾಕಿದ್ದೇಕೆ?!

ಅದಾದ ನಂತರವೂ, ದುರ್ಲಭ ದಾಖಲೆಗಳನ್ನೆಲ್ಲ ನಾಶಪಡಿಸಿದ್ದಲ್ಲದೇ, ಜಾರ್ಜ್ ರವರ ಪರ ನಿಂತಿದ್ಯಾಕೆ?! ವಿಚಾರಣೆಯೇ ಇಲ್ಲದೇ ಕ್ಲೀನ್ ಚಿಟ್ ಜಾರ್ಜ್ ಗೆ ಸಿಕ್ಕಿದ್ದು ಹೇಗೆ?!

ಪ್ರಕರಣವನ್ನು ಸಿಬಿಐಗೆ ಕೊಡಲು ತಕರಾರು ತೆಗೆದಿದ್ಯಾಕೆ?!

Image result for dysp ganapathi

ಸಿಬಿಐಗೆ ಪ್ರಕರಣವನ್ನು ಕೊಟ್ಟ ನಂತರ ದುರ್ಲಭವಾದ ದಾಖಲೆಗಳೆಲ್ಲ ಮತ್ತೆ ಸಿಕ್ಕವಾದರೂ,. ಕೆಲವೊಂದನ್ನು ಈ ಮುಂಚೆಯೇ ನಾಶ ಪಡಿಸಲಾಗಿದೆ ಎಂದಿತು ಸಿಬಿಐ! ಹಾಗಾದರೆ, ದಾಖಲೆಗಳನ್ನು ನಾಶ ಪಡಿಸಿದ್ಯಾರು?! ಎಸಿಬಿಯನ್ನು ಬಿಟ್ಟು ಬೇರೆ ಯಾರ ಹತ್ತಿರವೂ ಸಹ ಆ ದಾಖಲೆಗಳಿರಲಿಲ್ಲ!

ತನಿಖೆಯ ಪ್ರತಿಯನ್ನೂ ಬಿಡದೇ ರಾಜ್ಯ ಕಾಂಗ್ರೆಸ್ ಸರಕಾರ ಎಸಿಬಿಯಿಂದ ಪಡೆದಿದ್ಯಾಕೆ?!

ಎಲ್ಲದಕ್ಕಿಂತ ಹೆಚ್ಚಾಗಿ, ಇನ್ನೂ ಸಹ ಎ1 ಆರೋಪಿ ಕೆ.ಜೆ.ಜಾರ್ಜ್ ನನ್ನು ಬೆಂಬಲಿಸುತ್ತಿರುವುದ್ಯಾಕೆ?!

ಇಷ್ಟೆಲ್ಲ ನೋಡಿದ ಮೇಲೆ. . . .ಇದು ಆತ್ಮಹತ್ಯೆಯಾ?! ಅಥವಾ ಕೊಲೆಯೋ?!

ತನಿಖೆಯಲ್ಲಷ್ಟೇ ಅಧಿಕೃತವಾಗಿ ಗೊತ್ತಾಗಬೇಕಿದೆಯಷ್ಟೇ!

– ಪೃಥು ಅಗ್ನಿಹೋತ್ರಿ

Tags

Related Articles

Close