ಪ್ರಚಲಿತ

ಬಿಗ್ ಬ್ರೇಕಿಂಗ್! ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸರ್ಕಾರ ಪತನ?! 20 ಶಾಸಕರನ್ನು ಚುನಾವಣಾ ಆಯೋಗ ಅನರ್ಹಗೊಳಿಸಿದ್ದು ಯಾಕೆ ಗೊತ್ತಾ?!

ದೆಹಲಿಯಲ್ಲಿ ನಾನೇ ಎಲ್ಲ ಎಂದು ಮೆರೆಯುತ್ತಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ಕಾರಕ್ಕೆ ಮಹಾ ಕಂಟಕ ಎದುರಾಗಿದೆ. ದೆಹಲಿಯ ಗದ್ದುಗೆ ಹಿಡಿದು ಕುಳಿತಿರುವ ಅರವಿಂದ ಕೇಜ್ರಿವಾಲ್ ಈಗ ಮತ್ತೆ ಸುದ್ಧಿಯಾಗಿದ್ದಾರೆ. ದೆಹಲಿಯ 20 ಶಾಸಕರನ್ನು ಅನರ್ಹ ಮಾಡಿಬೇಕೆಂಬ ಶಿಫಾರಸ್ಸನ್ನು ಚುನಾವಣಾ ಆಯೋಗವು ರಾಷ್ಟ್ರಪತಿಗಳಿಗೆ ಕಳಿಸಿಕೊಟ್ಟಿದೆ.

ಅಣ್ಣಾ ಕೊಟ್ಟ ಭಿಕ್ಷೆಯಿಂದ ತೂರಿಕೊಂಡು ಬಂದಿದ್ದ ತಮ್ಮ..!!!

Image result for anna hazare

ಈ ಅರವಿಂದ್ ಕೇಜ್ರಿವಾಲ್ ಅನ್ನುವ ವ್ಯಕ್ತಿ ಯಾರೆಂದು ಯಾರಿಗೂ ಗೊತ್ತೇ ಇರಲಿಲ್ಲ. ಯುಪಿಎ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಒಂದೊಂದಾಗಿಯೇ ಬಯಲಿಗೆಳೆದ ಅಣ್ಣಾ ಹಜಾರೆಯವರ ಹೋರಾಟದಲ್ಲಿ ಕರೆಯದೆಯೇ ಬಂದ ಅತಿಥಿಯಾಗಿ ಆ ಹೋರಾಟಕ್ಕೆ ಕೈಜೋಡಿಸಿ, ಮೈಕ್ ಹಿಡಿದು ಭಾಷಣ ಬಿಗಿದು, ಕೊನೆಗೆ ತಾನೊಬ್ಬ ಸೂಪರ್ ಸ್ಟಾರ್ ಆಗಿ ಮಿಂಚಿ, ಅದೇ ಅಣ್ಣಾ ಹಜಾರೆಯವರ ವಿರೋಧದ ನಡುವೆಯೂ ಆಮ್ ಆದ್ಮಿ ಪಕ್ಷವನ್ನು ಸ್ಥಾಪಿಸಿ ಗುರುವಿಗೇ ಟಾಂಗ್ ಕೊಟ್ಟಿದ್ದರು. ನಂತರ ನಡೆದದ್ದೇ ಇತಿಹಾಸ. ಆಮ್ ಆದ್ಮಿ ಪಕ್ಷ ಚುನಾವಣೆಗೆ ಸ್ಪರ್ಧಿಸುತ್ತೆ, ಯಾವ ಪಕ್ಷದ ವಿರುದ್ಧ ತೊಡೆ ತಟ್ಟಿ ಬ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದ್ದರೋ  ಅದೇ ಕಾಂಗ್ರೆಸ್‍ನೊಂದಿಗೆ ಒಳ ಒಪ್ಪಂದ ಮಾಡಿಕೊಂಡು ದೆಹಲಿಯಲ್ಲಿ ಸರ್ಕಾರವನ್ನು ರಚಿಸುತ್ತಾರೆ. ಆದರೆ ಇದು ತುಂಬಾ ಸಮಯ ಉಳಿಯೋದಿಲ್ಲ. ಅದೇಗೋ ಮತ್ತೆ ಬಂದ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಅಧಿಕಾರಕ್ಕೆ ಬರುತ್ತಾರೆ.

ಅರಾಜಕತೆ ಎದ್ದಿತ್ತು ಆಮ್ ಆದ್ಮೀ ಸರ್ಕಾರದಲ್ಲಿ..!!!

Image result for aam aadmi party

ಹೌದು… ತೆವಲಿಕೊಂಡು ತೆವಲಿಕೊಂಡು ಬರುತ್ತಿರುವ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮೀ ಸರ್ಕಾರ ಒಂದಲ್ಲಾ ಒಂದು ರೀತಿಯಲ್ಲಿ ಅರಾಜಕತೆಯನ್ನು ಸೃಷ್ಟಿಸಿತ್ತು. ಸರ್ಕಾರದ ಸಚಿವ ಶಾಸಕರಿಂದ ಲೈಂಗಿಕ ಪ್ರಕರಣಗಳು, ಭ್ರಷ್ಟಾಚಾರ ಪ್ರಕರಣಗಳು ಸಹಿತ ಇನ್ನಿತರ ಪ್ರಕರಣಗಳಿಂದ ಸುದ್ಧಿ ಮಾಡುತ್ತಲೇ ಇದ್ದರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್. ಒಟ್ಟು ದೆಹಲಿ ರಾಜ್ಯ ಮಾತ್ರವಲ್ಲದೆ ದೇಶದಲ್ಲೇ ಸುದ್ಧಿಯಾಗಿದ್ದ ಅರವಿಂದ್ ಕೇಜ್ರಿವಾಲ್ ಅರಾಜಕತೆಯ ನಾಯಕ ಎಂದೇ ಪ್ರಸಿದ್ಧಿಯಾಗಿದ್ದರು.

ಕೇಜ್ರಿವಾಲ್‍ಗೆ ಶಾಕಿಂಗ್ ನ್ಯೂಸ್-20 ಶಾಸಕರು ಲಾಸ್..!

ಇದು ದೆಹಲಿ ಶಾಸಕ ಅರವಿಂದ್ ಕೇಜ್ರಿವಾಲ್ ಎದೆ ಝಲ್ ಎನ್ನುವಂತಹ ಸುದ್ಧಿ. ದೆಹಲಿಯಲ್ಲಿ ರಾಜ್ಯಭಾರ ಮಾಡುತ್ತಿರುವ ಆಮ್ ಆದ್ಮಿ ಪಕ್ಷದ 20 ಶಾಸಕರನ್ನು ಅನರ್ಹಗೊಳಿಸಬೇಕೆಂದು ಚುನಾವಣಾ ಆಯೋಗ ರಾಷ್ಟ್ರಪತಿಗಳಿಗೆ ಶಿಫಾರಸ್ಸು ಕಳಿಸಿದ್ದಾರೆ. ಈ ಮೂಲಕ ಮತ್ತೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮೀ ಸರ್ಕಾರಕ್ಕೆ ಸಂಕಷ್ಟ ಶುರುವಾಗಿದೆ.

ಲಾಭದಾಯಕ ಹುದ್ದೆಗಳನ್ನು ಪಡೆದುಕೊಂಡಿದ್ದ ಶಾಸಕರು…

“ಸೆಕ್ಷನ್ 15 ಆಫ್ ದಿ ಗವರ್ನ್‍ಮೆಂಟ್ ಆಫ್ ಎನ್‍ಸಿಟಿ ಆಫ್ ದಿಲ್ಲಿ ಆಕ್ಟ್ 1991” ಪ್ರಕಾರ ರಾಜ್ಯದ ಶಾಸಕರು ಯಾವುದೇ ಲಾಭದಾಯಕ ಹುದ್ದೆಗಳನ್ನೂ
ಸ್ವೀಕರಿಸುವಂತಿಲ್ಲ. ಒಂದು ವೇಳೆ ಸ್ವೀಕರಿಸಿದ್ದೇ ಆದರೆ ಅವರ ಶಾಸಕ ಸ್ಥಾನ ಅನರ್ಹವಾಗುವ ಸಂಭವ ಹೆಚ್ಚಿರುತ್ತದೆ. ಈಗ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‍ಗೆ ಸಂಕಷ್ಟವಾಗಿರುವ ವಿಚಾರ ಇದುವೇ.

ಈ ಹಿಂದೆಯೇ 21 ಆಪ್ ಶಾಸಕರ ಮೇಲೆ ಲಾಭದಾಯಕ ಹುದ್ದೆಗಳ ಮೇಲೆ ತನ್ನ ಅಧಿಕಾರದ ಬಗ್ಗೆ ದೂರು ನೀಡಲಾಗಿತ್ತು. ಆದರೆ ಅದು ತನಿಖೆಯನ್ನು ಕೈಗೊಂಡು ಈಗ 20 ಶಾಸಕರು ಲಾಭದಾಯಕ ಹುದ್ದೆಯನ್ನು ಪಡೆಯುತ್ತಿದ್ದಾರೆ ಎಂದು ಖಚಿತಪಡಿಸಿದೆ. ಇನ್ನು ಓರ್ವ ಶಾಸಕ ಪಂಜಾಬ್ ಚುನಾವಣೆಯ ವೇಳೆ ಪಂಜಾಬ್‍ನಲ್ಲಿ ಸಕ್ರಿಯನಾಗಿ ದೆಹಲಿಯಲ್ಲಿ ರಾಜೀನಾಮೆ ನೀಡಿದ್ದ. ಹೀಗಾಗಿ ಆತನನ್ನು ಹೊರತುಪಡಿಸಿ ಒಟ್ಟು 20 ಶಾಸಕರ ಸ್ಥಾನವನ್ನು ಅನರ್ಹಗೊಳಿಸುವ ಬಗ್ಗೆ ಚುನಾವಣಾ ಆಯೋಗ ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಲಾಗಿದೆ.

ಅರವಿಂದ್ ಕೇಜ್ರಿವಾಲ್ ರಾಜೀನಾಮೆಗೆ ಪಟ್ಟು…

ಈ ಬೆನ್ನಲ್ಲೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲರ ರಾಜೀನಾಮೆಗೆ ಕಾಂಗ್ರೆಸ್ ಹಾಗೂ ಭಾರತೀಯ ಜನತಾ ಪಕ್ಷ ಆಗ್ರಹವನ್ನು ಮಾಡಿದೆ. ಇದು ಕೇವಲ ಶಾಸಕರು ಹೊತ್ತಿರುವ ಕಳಂಕವಲ್ಲ. ಇದು ಅರವಿಂದ್ ಕೇಜ್ರಿವಾಲ್‍ಗೆ ಹೊತ್ತಿರುವ ಕಳಂಕ. ಹೀಗಾಗಿ ಈ ಎಲ್ಲಾ ಪ್ರಕರಣಗಳ ಹೊಣೆ ಹೊತ್ತು ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Image result for aravind kejrival party members

ಪತನವಾಗುತ್ತಾ ದೆಹಲಿ ಸರ್ಕಾರ..?

ಇನ್ನು ದೆಹಲಿ ಸರ್ಕಾರ ಪತನವಾಗುತ್ತಾ ಎನ್ನುವ ಊಹಾ ಪೋಹ ಆರಂಭವಾಗಿದೆ. ಅನೇಕ ಬಾರಿ ಉಪಚುನಾವಣೆಗಳನ್ನು ಎದುರಿಸಿಕೊಂಡೇ ಬರುತ್ತಿದ್ದ ಕೇಜ್ರಿವಾಲ್ ಸರ್ಕಾರ ಈಗ ಮತ್ತೆ ಚುನಾವಣೆ ಎದುರಿಸುವಂತಾಗಿದೆ. ಸದ್ಯ ಚುನಾವಣಾ ಆಯೋಗ ರಾಷ್ಟ್ರಪತಿಗಳಿಗೆ ಶಿಫಾರಸ್ಸನ್ನು ಸಲ್ಲಿಸಿದ್ದು, ರಾಷ್ಟ್ರಪತಿಗಳು ಈ ಬಗ್ಗೆ ಕ್ರಮ ಕೈಗೊಂಡಿದ್ದೇ ಆದರೆ ಈ 20 ಶಾಸಕರೂ ಅಮಾನತು ಹೊಂದುತ್ತಾರೆ. ನಂತರ ಮತ್ತೆ ಚುನಾವಣೆ ಎದುರಿಸಬೇಕಾದ ಅನಿವಾರ್ಯತೆಯನ್ನು ಹೊಂದಿರುತ್ತಾರೆ.

ಬಂಡಾಯವೆದ್ದಿದ್ದಾರೆ ಶಾಸಕರು..?

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‍ಗೆ ಕೇವಲ ಇದಷ್ಟೇ ಭಯವಲ್ಲ. ಬದಲಾಗಿ ಹಲವು ಶಾಸಕರು ಬಂಡಯವೆದ್ದು ಸರ್ಕಾರಕ್ಕೆ ತಲೆನೋವಾಗಿದ್ದಾರೆ. ಕಪಿಲ್ ಮಿಶ್ರಾ ಎಂಬ ಆಮ್ ಆದ್ಮಿ ಶಾಸಕ ಪಕ್ಷದ ವಿರುದ್ಧ ಬಂಡಾಯವೆದ್ದಿದ್ದು ಮಾತ್ರವಲ್ಲದೆ ತನ್ನ ಜೊತೆಗೆ 13 ಶಾಸಕರಿದ್ದಾರೆ. ತನಗೆ ಸರ್ಕಾರವನ್ನು ಬೀಳಿಸುವಷ್ಟು ತಾಕತ್ತಿದೆ ಎಂದೇ ಹೇಳಿಕೊಂಡು ಬರುತ್ತಿದ್ದಾರೆ. ಇದು ಒಂದು ತಲೆನೋವಾದರೆ ಮತ್ತೊಂದು ಕಡೆ ಕುಮಾರ್ ವಿಶ್ವಾಸ್ ಕೂಡಾ ಆಮ್ ಆದ್ಮಿ ಪಕ್ಷದ ವಿಶ್ವಾಸವನ್ನು ಕಳೆದುಕೊಂಡಿದ್ದು ಮತ್ತೊಂದು ತಲೆನೋವಗಿ ಪರಿಣಮಿಸಿದೆ.

Image result for pranab mukherjee

ಪ್ರಣಬ್ ಮುಖರ್ಜಿಯೂ ಬೀಸಿದ್ದರು ಚಾಟಿ…

ಈ ಹಿಂದೆ ರಾಷ್ಟ್ರಪತಿಯಾಗಿದ್ದ ಪ್ರಣಬ್ ಮುಖರ್ಜಿಯೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಅಸಮಧಾನ ಹೊಂದಿದ್ದರು. ಅವರ ನಡೆ ಸರಿ ಇಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದರು. ಓರ್ವ ರಾಷ್ಟ್ರಪತಿಯಾಗಿ ಓರ್ವ ಮುಖ್ಯಮಂತ್ರಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು ಇದೇ ಮೊದಲ ಬಾರಿ ಎಂದು ಹೇಳಲಾಗುತ್ತಿದೆ.

ಒಟ್ಟಾರೆ ದೆಹಲಿಯಲ್ಲಿ ಆಪ್ ಶಾಸಕರ ಹೈಡ್ರಾಮ ಆರಂಭವಾಗಿದ್ದು, ಅರವಿಂದ್ ಕೇಜ್ರಿವಾಲ್ ಅವರ ಮುಂದಿನ ನಡೆ ಏನು ಎಂಬುವುದು ಬಹಿರಂಗವಾಗಬೇಕಾಗಿದೆ. ಈ ಎಲ್ಲಾ ಸಮಸ್ಯೆಗಳು ಮತ್ತೆ ಆರಂಭವಾಗಿ ವಿಧಾನ ಸಭೆ ವಿಸರ್ಜಿಸಿ ಚುನಾವಣೆಗೆ ಹೋಗಬೇಕಾದ ಅನಿವಾರ್ಯತೆಯೂ ಬರಬಹುದು. ಭ್ರಷ್ಟಾಚಾರ ತೊಡೆದು ಹಾಕುತ್ತೇವೆ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಅರವಿಂದ ಕೇಜ್ರಿವಾಲ್ ತನ್ನ ಸರ್ಕಾರದಲ್ಲೇ ನಡೆಯುವ ಭ್ರಷ್ಟಾಚಾರವನ್ನು ನಿಯಂತ್ರಿಸುವಲ್ಲಿ ವಿಫಲವಾಗಿದ್ದಾರೆ ಎನ್ನುವುದು ಮಾತ್ರ ಸುಳ್ಳಲ್ಲ.

Image result for election commission

-ಸುನಿಲ್ ಪಣಪಿಲ

Tags

Related Articles

Close