ಪ್ರಚಲಿತ

ಬಿಗ್ ಬ್ರೇಕಿಂಗ್: 4 ದಿನಗಳ ನಂತರ ಹಿಂದೂ ಯುವಕನ ಗುಂಡಿಟ್ಟು ಕೊಂದ ಹಂತಕನ ಹೆಡೆಮುರಿ ಕಟ್ಟಿದ ಯೋಗಿ ಸರ್ಕಾರ್. !! ಆ ಹಂತಕ ಯಾವ ಪಕ್ಷದವನು ಗೊತ್ತಾ.?!!

“ಚಂದನ್ ಗುಪ್ತಾ ಓರ್ವ ಅಪ್ರತಿಮ ದೇಶಭಕ್ತ. ಕೇವಲ ವಂದೇಮಾತರಂ ಗೀತೆ ಹಾಡಿದ್ದಕ್ಕೆ ಆತನನ್ನು ಮತಾಂಧರು ಗುಂಡಿಕ್ಕಿ ಕೊಂದಿದ್ದಾರೆ. ಆದರೆ ನಮ್ಮ ಸರ್ಕಾರ ಕೈಕಟ್ಟಿ ಕೂರೋದಿಲ್ಲ. ಚಂದನ್ ಗುಪ್ತಾನನ್ನು ಈ ರೀತಿ ಹತ್ಯೆ ಮಾಡಿದ್ದ ಆ ಹಂತಕ ಅದ್ಯಾವ ಗಲ್ಲಿಯಲ್ಲಿದ್ದರೂ ಹುಡುಕಿ ತಂದು ಶಿಕ್ಷೆಗೆ ಒಳಪಡಿಸುತ್ತೇವೆ. ತಪ್ಪಿಸಿಕೊಳ್ಳಲು ಯತ್ನಿಸಿದರೆ ಎನ್‍ಕೌಂಟರ್ ಮಾಡಿ ಬಿಸಾಕುತ್ತೇವೆ”…

ಇದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಉಗ್ರ ಹೇಳಿಕೆ. ಜನವರಿ 26ರಂದು ತಿರಂಗಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಎಬಿವಿಪಿ ಕಾರ್ಯಕರ್ತನನ್ನು ಮತಾಂಧ ಮುಸಲ್ಮಾನರ ಗುಂಪೊಂದು ಗುಂಡಿಕ್ಕಿ ಕೊಂದಿತ್ತು. ವಿರೋಧದ ನಡುವೆಯೂ ತ್ರಿವರ್ಣ ಧ್ವಜವನ್ನು ಹಾರಿಸಿ ವಂದೇ ಮಾತರಂ ಗೀತೆಯನ್ನು ಹಾಡಿದ್ದ ಉತ್ತರ ಪ್ರದೇಶದ ಎಬಿವಿಪಿ ಕಾರ್ಯಕರ್ತರ ಹಾಗೂ ಅಲ್ಲಿನ ಮತಾಂಧ ಮುಸಲ್ಮಾನ ವ್ಯಕ್ತಿಗಳಿಗೂ ಗಲಾಟೆಯಾಗಿತ್ತು. ಈ ಗಲಭೆಯ ಮಧ್ಯೆಯೇ ಆ ದೇಶಪ್ರೇಮಿ ಯುವಕರು ಮತಾಂಧರಿಗೆ ಎದೆಕೊಟ್ಟು ವಂದೇ ಮಾತರಂ ಹಾಡು ಹಾಡಿದ್ದರು. ಅಷ್ಟರಲ್ಲೇ ದೂರದಿಂದ ಬಂದ ಗುಂಡೊಂದು ಎಬಿವಿಪಿ ಕಾರ್ಯಕರ್ತ ಚಂದನ್ ಗುಪ್ತಾ ಎಂಬ ಯುವಕನ ದೇಹಕ್ಕೆ ಹೊಕ್ಕಿತ್ತು.

ಈ ಕ್ರೌರ್ಯವನ್ನು ಸವಾಲಾಗಿ ಸ್ವೀಕರಿಸಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಂತಕನ ಬಂಧನಕ್ಕೆ ಬಲೆ ಬೀಸುತ್ತಾರೆ. ನಿನ್ನೆ ತಾನೇ ಉತ್ತರ ಪ್ರದೇಶದ ಕಸ್ಗಂಜ್ ನಗರದ ಎಲ್ಲಾ ನಗರದಲ್ಲಿ ಪ್ರತಿ ಮನೆಯನ್ನೂ ಸರ್ಚ್ ಮಾಡಿ ಹಂತಕನ ಜಾಡನ್ನು ಪತ್ತೆ ಹಚ್ಚುವ ಪ್ರಯತ್ನವನ್ನು ಮಾಡಲಾಗಿತ್ತು. ಅರೆ ಸೇನಾ ಪಡೆಯನ್ನೇ ಆ ನಗರದಲ್ಲಿ ನಿಯೋಜಿಸಿ ತೀವ್ರ ಶೋಧವನ್ನು ಮಾಡಲಾಗಿತ್ತು. ಮಾತ್ರವಲ್ಲದೆ ಡ್ರೋನ್ ಕ್ಯಾಮರಾವನ್ನು ಬಳಸಿಕೊಂಡು ಆತನ ಚಹರೆಯನ್ನು ಪತ್ತೆ ಹಚ್ಚುವ ಪ್ರಯತ್ನವನ್ನು ಮಾಡಲಾಗಿತ್ತು. ನಿರಂತರ 4 ದಿನಗಳ ನಂತರ ಆರೋಪಿಯನ್ನು ಹೆಡೆಮುರಿ ಕಟ್ಟಿ ಬಂಧಿಸಲಾಗಿದೆ.

ಮನೆಯಲ್ಲಿ ಸಿಕ್ಕಿತ್ತು ಭಾರೀ ಶಸ್ತ್ರಾಸ್ತ್ರ…

ಸೇನಾ ಪಡೆಗಳಿಂದ ಗುಂಡಿಕ್ಕಿ ಕೊಂದ ಆ ಮತಾಂಧ ಉಗ್ರನ ಮನೆಯನ್ನು ಶೋಧ ಮಾಡಿದಾಗ ಭಾರೀ ಶಸ್ತ್ರಾಸ್ತ್ರ ಪತ್ತೆಯಾಗಿತ್ತು. ಹತ್ಯೆಗೆ ಬಳಸಿದ್ದ ಅಮೇರಿಕಾದ ಗನ್ ಆಗಿದ್ದು ಮತ್ತೊಂದು ಡಬಲ್ ಬ್ಯಾರಲ್ ಗನ್ ಸಹಿತ ಅನೇಕ ವೆಪನ್‍ಗಳು ಪತ್ತೆಯಾಗಿದೆ. ಈ ಎಲ್ಲಾ ವೆಪನ್‍ಗಳನ್ನು ಪೊಲೀಸರು ವಶಪಡಿಸಿಕೊಂಡು ಆತನ ಪತ್ತೆಗೆ ಬಲೆ ಬೀಸಿದ್ದರು.

ಇಂದು ಹಂತಕ ಅರೆಸ್ಟ್…

ಸತತ 4 ದಿನಗಳ ನಿರಂತರ ತನಿಖೆಯ ನಂತರ ಆರೋಪಿ ಪತ್ತೆಯಾಗಿದ್ದಾನೆ. ಗಣರಾಜ್ಯೋತ್ಸವದ ದಿನ ಎಬಿವಿಪಿ ಕಾರ್ಯಕರ್ತ ಚಂದನ್ ಗುಪ್ತಾ ಎನ್ನುವ ಯುವಕನನ್ನು ಗುಂಡಿಕ್ಕಿ ಕೊಂದ ಆ ಉಗ್ರನನ್ನು ಪೊಲೀಸರು ಬಂಧಿಸಿದ್ದಾರೆ. ವಸೀಂ ಜಾವೇದ್ ಎಂಬ ಮತಾಂಧ ಮುಸ್ಲಿಂ ಯುವಕನನ್ನು ಹೆಡೆ ಮುರಿ ಕಟ್ಟಿ ಬಂಧಿಸಿದ್ದಾರೆ. ಬೇರೆ ರಾಜ್ಯಗಳಿಗೆ ಪಲಾಯನ ಮಾಡಲು ಯತ್ನಿಸುತ್ತಿದ್ದ ಸಲೀಂ ಜಾವೇದ್‍ನ ಯೋಜನೆಯನ್ನು ವಿಫಲಗೊಳಿಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಇನ್ನು ಆತನ ಸಹೋದರರೂ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದ್ದು ಅವರ ಬಂಧನಕ್ಕೂ ಬಲೆ ಬೀಸಿದ್ದಾರೆ.

ಹಂತಕ ಎಸ್‍ಪಿ ಪಕ್ಷದ ಕಾರ್ಯಕರ್ತ..?

ಎಸ್… ಕಳೆದ ಐದು ವರ್ಷ ಉತ್ತರ ಪ್ರದೇಶದಲ್ಲಿ ಆಡಳಿತ ನಡೆಸುತ್ತಿದ್ದ ಅಖಿಲೇಶ್ ಸಿಂಗ್ ನೇತೃತ್ವದ ಸಮಾಜವಾದಿ ಪಕ್ಷದ ಕಾರ್ಯಕರ್ತನಾಗಿದ್ದನು ಈ ಹಂತಕ ವಾಸೀಂ ಜಾವೇದ್. ನಾವು ಉತ್ತಮ ಆಡಳಿತವನ್ನು ನೀಡುತ್ತೇವೆ ಎಂದು ಪೋಸು ನೀಡಿತ್ತಲೇ ಬಂದಿದ್ದ ಎಸ್‍ಪಿ ನಾಯಕರ ಮುಖವಾಡ ಮತ್ತೊಮ್ಮೆ ಸಾಭೀತಾಗಿದೆ. ಸದಾ ರೌಡಿಗಳನ್ನು ಬೆಳೆಸುತ್ತಲೇ ಬಂದಿದ್ದ ಎಸ್‍ಪಿ ಪಕ್ಷ ಹಾಗೂ ಕಾಂಗ್ರೆಸ್ ಈಗ ಬಾ6ಯಿ ಮುಚ್ಚಿ ಕುಳಿತಿದೆ. ಉತ್ತರ ಪ್ರದೇಶದಲ್ಲಿ ನಡೆಯುವ ಒಂದೊಂದು ಎನ್‍ಕೌಂಟರ್ ಕೂಡಾ ಎಸ್‍ಪಿ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರ ಎದೆಗೆ ಗುಂಡು ಹೊಡೆದಂತಾಗುತ್ತದೆ. ಕಳೆದ ಚುನಾವಣೆಯಲ್ಲಿ ರಾಹುಲ್ ಗಾಂಧಿಯೂ ಎಸ್‍ಪಿ ಜೊತೆಗೆ ಕೈಜೋಡಿಸಿ ಮತಾಂಧರಿಗೆ ಜೈ ಅಂದಿದ್ದರು. ಈಗ ಅದೇ ಮುಸ್ಲಿಂ ಮತಾಂಧರ ನಿಜಮುಖ ಅನಾವರಣವಾಗಿದೆ.

ಒಟ್ಟಿನಲ್ಲಿ ಹಿಂದೂ ಫೈರ್ ಬ್ರಾಂಡ್ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ನಂತರ ಸುಮಾರು ಒಂದು ಸಾವಿರಕ್ಕೂ ಅಧಿಕ ರೌಡಿಗಳನ್ನು ಎನ್‍ಕೌಂಟರ್ ಮಾಡಿ ಕೊಂದು ಬಿಸಾಕಲಾಗಿತ್ತು. ಈಗ ತನ್ನದೇ ದೇಶಪ್ರೇಮಿ ಕಾರ್ಯಕರ್ತನನ್ನು ಗುಂಡಿಕ್ಕಿ ಕೊಂದ ಆ ಕಿರಾತಕರನ್ನು ಬಿಡುತ್ತಾರೆಯೇ…? ಇದುವೇ ಉಳಿದ ರಾಜ್ಯಗಳಿಗೂ ಉತ್ತರ ಪ್ರದೇಶಕ್ಕೂ ಇರುವ ವ್ಯತ್ಯಾಸ… ಹಾಟ್ಸ್ ಅಪ್ ಟು ಯೂ ಯೋಗೀಜೀ…..

-ಸುನಿಲ್ ಪಣಪಿಲ

Tags

Related Articles

Close