ಅಂಕಣ

ಬಿ.ಆರ್ .ಅಂಬೇಡ್ಕರ್ : ಸಂವಿಧಾನ ಶಿಲ್ಪಿಯ ಈ 10 ವಾಸ್ತವಗಳು ಬಹುಷಃ ನಿಮಗೆ ಗೊತ್ತಿರಲಾರದು!!

ಭಾರತದೇಶವನ್ನು ಕಾಡುತ್ತಿದ್ದ ಅಸ್ಪ್ಕಶ್ಯತೆ ಎಂಬ ಅನಿಷ್ಟವನ್ನು ಮೂಲೋತ್ಪಾಟನೆ ಮಾಡಿದ ಮಹಾಪುರುಷ ಅಂಬೇಡ್ಕರ್. ಸ್ವತಂತ್ರ ಭಾರತದ ಸಂವಿಧಾನ ರಚಿಸಿದ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್!! ಅನ್ಯಾಯ, ಶೋಷಣೆ, ಅಸ್ಪೃಶ್ಯತೆ ಮೊದಲಾದ ಸಾಮಾಜಿಕ ಅನಿಷ್ಟಗಳ ವಿರುದ್ದ ಹೋರಾಡಿ ಜಯಗಳಿಸಿದ ವ್ಯಕ್ತಿ. ಅಶಕ್ತ ದಲಿತ ಸಮೂಹದ ನೋವಿನ ಮಾರ್ದನಿ ಎಂದೇ ಪ್ರಸಿದ್ದರಾಗಿದ್ದರು. ಮೇಲಾಗಿ ಮಾನವತಾವಾದಿ ಸಂವಿಧಾನ ಶಿಲ್ಪಿ ಎಂದು ಪರಿ ಗಣಿತರಾದವರು. ಇವರು ಭಾರತ ದೇಶದ ನಾಯಕರಲ್ಲ ಅವರು ವಿಶ್ವದ ನಾಯಕರಾಗಿದ್ದು, ಮಾತ್ರವಲ್ಲದೇ ಅವರ ಹುಟ್ಟಿದ ದಿನವನ್ನು 143 ರಾಷ್ಟ್ರಗಳಲ್ಲಿ ಆಚರಣೆ ಮಾಡುವ ಮೂಲಕ ವಿಶೇಷ ಗೌರವ ನೀಡಲಾಗುತ್ತಿರುವ ಮಹಾನ್ ವ್ಯಕ್ತಿ!!

1891ರ ಏಪ್ರಿಲ್ 14 ರಂದು ರಾಮ್‍ಜಿ ಸಕ್‍ಪಾಲ್ ಮತ್ತು ಭೀಮಾಬಾಯ್ ದಂಪತಿಯ ಮಗನಾಗಿ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ಜನಿಸಿದ ಭೀಮರಾವ್
ರಾಮ್‍ಜೀ ಅಂಬೇಡ್ಕರ್, ಶಾಲಾ ದಿನಗಳಲ್ಲೇ ಅಸ್ಪøಶ್ಯತೆ ಪಿಡುಗಿನ ಕರಾಳ ಅನುಭವವಾಯಿತು. 1908 ರಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ತೇರ್ಗಡೆಯಾದಾಗ, ಅಸ್ಪೃಶ್ಯವಾಗಿದ್ದ ಅವರ ಸಮಾಜದಲ್ಲಿ ಮೊದಲನೆಯವರು ಎಂಬ ಹೆಗ್ಗಳಿಕೆಯನ್ನು ಸಂಪಾದಿಸಿದರು. ಅವರ ಓದು ಕೇವಲ ಇಲ್ಲಿಗೆ ಸೀಮಿತವಾಗಲಿಲ್ಲ. ನಾಲ್ಕು ವರ್ಷಗಳ ನಂತರ ಮುಂಬಯಿ ವಿಶ್ವವಿದ್ಯಾನಿಲಯದಿಂದ ಅರ್ಥ ಶಾಸ್ತ್ರ ಮತ್ತು ರಾಜನೀತಿ ವಿಷಯಗಳಲ್ಲಿ ಅವರು ಬಿ.ಎ. ಪದವಿ ಸಂಪಾದಿಸಿದರು. ನಂತರ ನ್ಯೂಯಾರ್ಕಿನ ಕೊಲಂಬಿಯಾ ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಗಳಿಸಿ ನಂತರ ಪಿಎಚ್.ಡಿ ಪದವಿಯನ್ನು ಸಹ ಗಳಿಸಿದ್ದು ಅವರ ಸಾಧನೆಯನ್ನು ಪ್ರತಿಬಿಂಬಿಸುತ್ತದೆ. ಇದಷ್ಟೇ ಅಲ್ಲ 1952 ರವರೆಗೆ ದೇಶ ವಿದೇಶಗಳಲ್ಲಿ ಅನೇಕ ಪ್ರಬಂಧಗಳನ್ನು ಮಂಡಿಸಿದ್ದಲ್ಲದೇ, ಹಲವು ಪದವಿಗಳನ್ನು ಗಳಿಸಿದ್ದು ಅಂಬೇಡ್ಕರ್‍ರ ಮಹಾನ್ ಸಾಧನೆಯೆಂದೇ ಹೇಳಬೇಕು.

126ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಭೀಮರಾವ್ ರಾಮ್‍ಜೀ ಅಂಬೇಡ್ಕರ್‍ರವರ ಬಗ್ಗೆ ನಿಮಗೆ ತಿಳಿಯದಿರುವ 10 ಸಂಗತಿಗಳನ್ನು ನಾವು ತಿಳಿಸುತ್ತೇವೆ.

1. ಅಂಬೇಡ್ಕರ್ ಅವರ ಮೂಲ ಹೆಸರೇ ಅಂಬವಡೆಕರ್!

ಅಂಬೇಡ್ಕರ್ ಅವರ ಮೂಲ ಉಪನಾಮವೇ ಅಂಬವಡೆಕರ್( ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಖೇಡಾ ತಾಲೂಕಿನ ಊರಿನ ಹೆಸರೇ ಅಂಬೆವಾಡ್ಕರ್). ಆದರೆ ಇವರ ಶಿಕ್ಷಕ ಮಹಾದೇವ್ ಅವರು ಈ ಬಾಲಕನ ಪ್ರತಿಭೆಯನ್ನು ನೋಡಿ ಪೋತ್ಸಾಹಿಸಿದ್ದಲ್ಲದೇ ಬ್ರಾಹ್ಮಣನಾಗಿದ್ದ ಈ ಶಿಕ್ಷಕ ತಮ್ಮ ಅಡ್ಡ ಹೆಸರಾದ ಅಂಬೇಡ್ಕರ್ ಎನ್ನುವ ಉಪನಾಮವನ್ನು ಹಾಜರಾತಿಯಲ್ಲಿ ಭೀಮರಾವ್ ರಾಮಜಿ ಅಂಬೇಡ್ಕರ್ ಎಂದು ತಿದ್ದಿದರು!!

2. ವಿದೇಶದಲ್ಲಿ ಅಂಬೇಡ್ಕರ್ ಅರ್ಥಶಾಸ್ತ್ರ ವಿಷಯದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದ ಮೊದಲ ಭಾರತೀಯ!

ಅಂಬೇಡ್ಕರ್ ಅವರು ಅರ್ಥಶಾಸ್ತ್ರ ವಿಷಯದಲ್ಲಿ ಡಾಕ್ಟರೇಟ್ ಪದವಿ ಪಡೆದುಕೊಂಡವರಲ್ಲಿ ಮೊದಲಿಗರು ಎನ್ನುವ ಖ್ಯಾತಿಗೆ ಹೆಸರಾದವರು!! ಮಾತ್ರವಲ್ಲದೇ
ಅರ್ಥಶಾಸ್ತ್ರ ವಿಷಯದಲ್ಲಿ ಪಿಹೆಚ್‍ಡಿಯನ್ನು ಮಾಡಿದ ಮೊದಲ ವ್ಯಕ್ತಿ ಕೂಡ!! ಅಷ್ಟೇ ಅಲ್ಲದೇ, ದಕ್ಷಿಣ ಏಷ್ಯಾದಲ್ಲಿ ಅರ್ಥಶಾಸ್ತ್ರ ವಿಚಾರದಲ್ಲಿ ಎರಡು
ಡಾಕ್ಟರೇಟ್‍ಪದವಿಯನ್ನು ಪಡೆದ ಮೊದಲ ವ್ಯಕ್ತಿ ಮತ್ತು ಅವರು ಪೀಳಿಗೆಯಲ್ಲಿ ಅತ್ಯುನ್ನತ ಶಿಕ್ಷಣವನ್ನು ಪಡೆದ ಭಾರತೀಯರಲ್ಲಿ ಒಬ್ಬರು ಎಂದೆನಿಸಿದ್ದಾರೆ!!

ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಮೂರು ವರ್ಷಗಳಲ್ಲಿ ಅರ್ಥಶಾಸ್ತ್ರದಲ್ಲಿ 29 ವಿಷಯಗಳು, ಇತಿಹಾಸದಲ್ಲಿ ಹನ್ನೊಂದು, ಸಮಾಜಶಾಸ್ತ್ರದಲ್ಲಿ ಆರು, ತತ್ವಶಾಸ್ತ್ರದಲ್ಲಿ ಐದು, ಮಾನವಶಾಸ್ತ್ರದಲ್ಲಿ ನಾಲ್ಕು, ರಾಜಕೀಯದಲ್ಲಿ ಮೂರು ಮತ್ತು ಪ್ರಾಥಮಿಕ ಫ್ರೆಂಚ್ ಮತ್ತು ಜರ್ಮನ್ ಭಾಷೆಗಳಲ್ಲಿ ಅಂಬೇಡ್ಕರ್ ಪದವಿ ಪಡೆದಿದ್ದಾರೆ!!

3. 1935ರಲ್ಲಿ ರಿಸರ್ವ್ ಬ್ಯಾಂಕ್ ಸ್ಥಾಪನೆಯಲ್ಲಿ ಅಂಬೇಡ್ಕರ್ ಪ್ರಮುಖ ಪಾತ್ರ ವಹಿಸಿದರು!

ಹಿಲ್ಟನ್ ಯಂಗ್ ಕಮಿಷನ್ ಅಥವಾ ರಾಯಲ್ ಕಮೀಷನ್ ಆನ್ ಇಂಡಿಯನ್ ಕರೆನ್ಸಿ ಅ್ಯಂಡ್ ಫೈನಾನ್ಸ್‍ನ ಮಾರ್ಗದರ್ಶಿ ಸೂತ್ರಗಳನ್ನು, ತನ್ನ ‘ದಿ ಪ್ರಾಬ್ಲಮ್ ಆಫ್ ದಿ ರೂಪಿ’- ಇಟ್ಸ್ ಒರಿಜಿನ್ ಅ್ಯಂಡ್ ಇಟ್ಸ್ ಸೊಲ್ಯೂಷನ್’ ಎಂಬ ಪುಸ್ತಕದಿಂದ ಭಾರತೀಯ ಸಂಪುಟ ಮತ್ತು ಹಣಕಾಸಿನ ಬಗೆಗಿನ ಎಷ್ಟೋ ವಿಷಯಗಳನ್ನು,
ರಿಸರ್ವ್‍ಬ್ಯಾಂಕ್ ಸ್ಥಾಪನೆಯಲ್ಲಿ ಅಳವಡಿಸಿಕೊಂಡಿದ್ದಾರೆ.

ರೂಪಾಯಿ ಸಮಸ್ಯೆಯು ಅಂತಿಮವಾಗಿ ಹಣದುಬ್ಬರ ಸಮಸ್ಯೆಗೆ ಮೂಲ ಕಾರಣ ಎಂದು ಅಂಬೇಡ್ಕರ್‍ಗೆ ತಿಳಿದಿದ್ದರು. ಹಾಗಾಗಿ ತನ್ನ ಪ್ರಬಂಧ ಪುಸ್ತಕದ ಆವೃತ್ತಿಯ ಮುನ್ನುಡಿಯಲ್ಲಿ: “… ನಾವು ಸಾಮಾನ್ಯ ಖರೀದಿ ಶಕ್ತಿಯನ್ನು ನಾವು ಸ್ಥಿರೀಕರಿಸದೇ ಹೊರತು ರೂಪಾಯಿಗಳನ್ನು ಸ್ಥಿರೀಕರಿಸುವುದಿಲ್ಲ” ಎಂದು ಹೇಳಿದ್ದಾರೆ.

4. 1927ರ ಮಹದ್ ಸತ್ಯಾಗ್ರಹವು ಅಂಬೇಡ್ಕರ್ ಅವರ ಮೊದಲ ಪ್ರಮುಖ ಹೋರಾಟವಾಗಿತ್ತು.

1927ರಲ್ಲಿ ಮಹಾದ್ ಸತ್ಯಾಗ್ರಹವು ಅಂಬೇಡ್ಕರ್ ಅವರ ರಾಜಕೀಯ ಚಿಂತನೆಯಲ್ಲಿ ಮತ್ತು ದಲಿತರ ಪರ ಹೋರಾಟದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಮಹಾರಾಷ್ಟ್ರ ಮಹಾದ್ ಎಂಬ ಸಣ್ಣ ಪಟ್ಟಣದಲ್ಲಿ ನಡೆದ ಈ ಸತ್ಯಾಗ್ರಹವು ಗಾಂಧಿಯವರ ದಂಡಿ ಯಾತ್ರೆಯ ಮೂರು ವರ್ಷಗಳ ಹಿಂದೆಯೇ ನಡೆದಿತ್ತು ಮತ್ತು
ಕುಡಿಯುವ ನೀರಿನ ವಿಚಾರವೇ ಅಂಬೇಡ್ಕರ್ ಹೋರಾಟದ ಕೇಂದ್ರ ಭಾಗವಾಗಿತ್ತು.

ಮಹದ್‍ನ ಚಾವದರ್ ಸರೋವರದಿಂದ ನೀರು ಕುಡಿಯಲು ದಲಿತರಿಗೆ ಅವಕಾಶ ನೀಡುತ್ತಿರಲಿಲ್ಲ. ಹಾಗಾಗಿ ಸಾರ್ವಜನಿಕ ನೀರಿನ ಮೂಲಗಳಿಂದ ನೀರನ್ನು
ತೆಗೆದುಕೊಳ್ಳಲು ದಲಿತರಿಗೆ ಅವಕಾಶ ನೀಡಬೇಕೆಂದು ಅಂಬೇಡ್ಕರ್, ದಲಿತರ ಹಕ್ಕನ್ನು ಪ್ರತಿಪಾದಿಸಿದ್ದರು. ಅಷ್ಟೇ ಅಲ್ಲದೇ ದಲಿತ ವಿಮೋಚನೆಯ ಬೀಜಗಳನ್ನು ಆ ಸಂದರ್ಭದಲ್ಲಿ ಬಿತ್ತಿದ್ದರು!!

5. ಅಂಬೇಡ್ಕರ್ ಭಾರತದಲ್ಲಿನ ಕೆಲಸದ ಸಮಯವನ್ನು 14ಗಂಟೆಯಿಂದ 8 ಗಂಟೆಗೆ ಬದಲಾಯಿಸಿದರು.

ವೈಸ್ರಾಯ್ ಕೌನ್ಸಿಲ್‍ನಲ್ಲಿ 1942 ರಿಂದ 1946ರವರೆಗಿನ ಕಾರ್ಮಿಕರ ಸದಸ್ಯರಾಗಿ ಡಾ. ಅಂಬೇಡ್ಕರ್ ಅನೇಕ ಕಾರ್ಮಿಕ ಸುಧಾರಣೆಗಳನ್ನು ತರುವಲ್ಲಿ ಪ್ರಮುಖ
ಪಾತ್ರ ವಹಿಸಿದವರೇ ಇವರು! ಅಷ್ಟೇ ಅಲ್ಲದೇ, ನವೆಂಬರ್ 1942ರಲ್ಲಿ ನವದೆಹಲಿಯ ಇಂಡಿಯನ್ ಲೇಬರ್ ಕಾನ್ಪರೆನ್ಸ್‍ನಲ್ಲಿ 7ನೇ ಅಧಿವೇಶನದಲ್ಲಿ 12
ಗಂಟೆಗಳಿಂದ 8 ಗಂಟೆಗಳವರೆಗೆ ಕೆಲಸದ ಸಮಯವನ್ನು ಬದಲಾಯಿಸಿದರು.

ಭತ್ಯೆ, ರಜೆ, ಉದ್ಯೋಗ ವಿಮೆ, ವೈದ್ಯಕೀಯ ರಜೆ, ಸಮಾನ ಕೆಲಸಕ್ಕೆ ಸಮಾನ ವೇತನ, ಕನಿಷ್ಠ ವೇತನ ಮತ್ತು ವೇತನದ ಆವರ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ಅವರು ಹಲವಾರು ಕ್ರಮಗಳನ್ನು ಪರಿಚಯಿಸಿದರು. ಇವಿಷ್ಟೇ ಅಲ್ಲದೇ ಟ್ರೇಡ್ ಯೂನಿಯನ್‍ಗಳನ್ನು ಬಲಪಡಿಸಿದ್ದು ಮಾತ್ರವಲ್ಲದೇ ಭಾರತದಾದ್ಯಂತ ಉದ್ಯೋಗ ವಿನಿಮಯವನ್ನು ಸ್ಥಾಪಿಸಿದ ಮಹಾನ್ ವ್ಯಕ್ತಿ!!

6. ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅಂಬೇಡ್ಕರ್ ಆತ್ಮಚರಿತ್ರೆಯನ್ನು ಪಠ್ಯಪುಸ್ತಕವಾಗಿ ಬಳಸಲಾಗುತ್ತದೆ!

20 ಪುಟಗಳ ಆತ್ಮಚರಿತ್ರೆಯ ಕಥೆಯನ್ನು 1935-26ರಲ್ಲಿ ಅಂಬೇಡ್ಕರ್ ಬರೆದಿದ್ದು,( ಅಮೆರಿಕಾ ಮತ್ತು ಯುರೋಪ್‍ನಿಂದ ಹಿಂತಿರುಗಿದ ನಂತರ) ಆದರೆ ಇವರ
ಬಾಲ್ಯವೇ ಅಸ್ಪøಶ್ಯತೆಯ ಅನುಭವಗಳನ್ನು ಕೂಡಿದ್ದ ಜೀವನವಾಗಿದ್ದು ಅದನ್ನು ‘ವೇಟಿಂಗ್ ಫಾರ್ ಎ ವೀಸಾ’ ಎನ್ನುವ ಪುಸ್ತಕದಲ್ಲಿ ಪ್ರಸ್ತುತ ಪಡಿಸಲಾಗಿದೆ! ಹಾಗಾಗಿ ಈ ಪುಸ್ತಕವನ್ನು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಪಠ್ಯಪುಸ್ತಕವಾಗಿ ಬಳಸಲಾಗುತ್ತಿದೆ!!!

7. ಭಾರತೀಯ ಸಂವಿಧಾನದ 370ನೇ ವಿಧಿಯನ್ನು ಅಂಬೇಡ್ಕರ್ ವಿರೋಧಿಸಿದ್ದರು!!

ಸಂವಿಧಾನದ 370ನೇ ವಿಧಿಯು(ಜಮ್ಮು ಮತ್ತು ಕಾಶ್ಮೀರದ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಲಾಗಿತ್ತು) ತಾರತಮ್ಯ ಮತ್ತು ರಾಷ್ಟ್ರದ ಐಕ್ಯತೆ ಮತ್ತು
ಸಮಗ್ರತೆಯ ತತ್ವಗಳ ವಿರುದ್ದ ಎಂದು ಅಂಬೇಡ್ಕರ್ ನಿರಾಕರಿಸಿದ್ದರು.

8.ಅಂಬೇಡ್ಕರ್ ಸಮಗ್ರ ಹಿಂದೂ ಕೋಡ್ ಮಸೂದೆ ಜಾರಿಗೆ ತರಲು ಮೂರು ವರ್ಷಗಳ ಕಾಲ ಹೋರಾಡಿದರು. ಇದರ ಫಲವಾಗಿ ಮಹಿಳೆಯರಿಗೆ ಹಲವು ಪ್ರಮುಖ ಹಕ್ಕುಗಳನ್ನು ನೀಡಿತು!!

ಸಮಗ್ರ ಹಿಂದೂ ಕೋಡ್ ಮಸೂದೆಯನ್ನು ಭಾರತೀಯ ಸಂಸತ್ತು ಕೈಬಿಟ್ಟಾಗ ಭಾರತದ ಮೊದಲ ಕಾನೂನು ಸಚಿವ ಹುದ್ದೆಗೆ ಅಂಂಬೇಡ್ಕರ್ ಅವರು ರಾಜೀನಾಮೆ ನೀಡಿದರು. ಈ ಮಸೂದೆಯಲ್ಲಿ ಎರಡು ಮುಖ್ಯ ಉದ್ದೇಶಗಳನ್ನು ಹೊಂದಿತ್ತು- ಮೊದಲನೇಯದಾಗಿ, ಸಾಮಾಜಿಕ ಅಸಮಾನತೆ ಮತ್ತು ಜಾತಿ ಅಸಮಾನತೆಗಳನ್ನು ತೊಡೆದುಹಾಕುವುದು. ಎರಡನೇಯದಾಗಿ, ಹಿಂದೂ ಮಹಿಳೆಯರ ಸಾಮಾಜಿಕ ಸ್ಥಾನಮಾನವನ್ನು ಹೆಚ್ಚಿಸುವುದು, ಅವರ ಹಕ್ಕುಗಳನ್ನು ಕಾಪಾಡುವುದು ಆಗಿತ್ತು.

ಈ ಮಸೂದೆಯ ಕೆಲವು ಪ್ರಮುಖ ಲಕ್ಷಣಗಳು ಹೀಗಿವೆ: ಮಹಿಳೆಯರು ಕುಟುಂಬದ ಆಸ್ತಿಯನ್ನು ಪಡೆದುಕೊಳ್ಳಬಹುದಲ್ಲದೇ ವಿಚ್ಛೇದನೆ ಮತ್ತು ಹೆಣ್ಣುಮಕ್ಕಳನ್ನು ದತ್ತು ಸ್ವೀಕಾರಕ್ಕೆ ಅನುಮತಿಸಲಾಗಿತ್ತುಮದುವೆಯು ಸರಿಹೊಂದದಿದ್ದರೆ ಪುರುಷರು ಮತ್ತು ಮಹಿಳೆಯರಿಗೆ ವಿಚ್ಛೇದನ ಪಡೆದುಕೊಳ್ಳಬಹುದು
ವಿಧವೆಯರು ಮತ್ತು ವಿಚ್ಛೇದನ ಹೊಂದಿದವರು ಮರುಮದುವೆ ಮಾಡುವ ಹಕ್ಕನ್ನು ನೀಡಲಾಯಿತುಬಹುಪತ್ನಿತ್ವವನ್ನು ನಿಷೇಧಿಸಲಾಯಿತು
ಅಂತರ್ಜಾತಿ ವಿವಾಹ ಮತ್ತು ಯಾವುದೇ ಜಾತಿ ಮಕ್ಕಳನ್ನು ದತ್ತು ಸ್ವೀಕಾರ ಮಾಡಲು ಅನುಮತಿ ನೀಡಲಾಗಿತ್ತು

9. ಬಿಹಾರ ಮತ್ತು ಮಧ್ಯಪ್ರದೇಶದ ವಿಭಜನೆಗೆ ಅಂಬೇಡ್ಕರ್ ಮೊದಲ ಬಾರಿಗೆ ಸಲಹೆ ನೀಡಿದ್ದರು.

‘ಭಾಷಾವಾರು ರಾಜ್ಯಗಳ ಬಗ್ಗೆ ಸಿದ್ದಾಂತ'(ಪ್ರಕಟವಾಗಿದ್ದು 1995ರಲ್ಲಿ)ಎನ್ನುವ ಪುಸ್ತಕದಲ್ಲಿ ಮಧ್ಯಪ್ರದೇಶ ಮತ್ತು ಬಿಹಾರ ವಿಭಜನೆಯ ಬಗ್ಗೆ ಸಲಹೆಯನ್ನು ನೀಡಿದ್ದರು. ಆದರೆ ಪುಸ್ತಕವನ್ನು ಬರೆದ 45 ವರ್ಷಗಳ ನಂತರ 2000ದಲ್ಲಿ ವಿಭಜನೆಯು ಅಂತಿಮವಾಗಿ ಬಿಹಾರದಿಂದ ಜಾರ್ಖಂಡ್, ಛತ್ತೀಸ್‍ಗಡ್‍ದಿಂದ ಮಧ್ಯಪ್ರದೇಶ್ ವಿಭಜನೆಯಾಯಿತು!!

10. ನೀರು ಮತ್ತು ವಿದ್ಯುತ್‍ನ ವಿಷಯದಲ್ಲಿ ಭಾರತದ ರಾಷ್ಟ್ರೀಯ ನೀತಿಯನ್ನು ಅಭಿವೃದ್ಧಿಪಡಿಸುವಲ್ಲಿ ಅಂಬೇಡ್ಕರ್ ಅವರ ಪ್ರಯತ್ನಗಳು ವಿಭಿನ್ನವಾಗಿದ್ದವು!

ಭಾರತದ ವಿವಿದ್ದೋದೇಶ ನದಿ ಕಣಿವೆಯ ಯೋಜನೆಗಳ ಪ್ರವರ್ತಕರಾಗಿದ್ದ ಅಂಬೇಡ್ಕರ್, ದಾಮೋದರ ಕಣಿವೆ ಯೋಜನೆ, ಭಕ್ರನಂಗಲ್ ಅಣೆಕಟ್ಟು ಯೋಜನೆ, ಸನ್ ರಿವರ್ ವ್ಯಾಲಿ ಯೋಜನೆ ಮತ್ತು ಹಿರಕುಡ್ ಅಣೆಕಟ್ಟು ಯೋಜನೆಗಳನ್ನು ಪ್ರಾರಂಭಿಸಿದರು. ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ನೀರಾವರಿ ಯೋಜನೆಗಳ ಅಭಿವೃದ್ಧಿಗೆ ಅನುಕೂಲವಾಗುವಂತೆ ಅವರು ಕೇಂದ್ರ ಜಲ ಆಯೋಗವನ್ನು ಸ್ಥಾಪಿಸಿದರು!!

ಭಾರತದ ವಿದ್ಯುತ್ ಕ್ಷೇತ್ರದ ಅಭಿವೃದ್ಧಿಯಲ್ಲಿ ಪ್ರಗತಿ ಸಾಧಿಸಲು, ಕೇಂದ್ರ ತಾಂತ್ರಿಕ ವಿದ್ಯುತ್ ಶಕ್ತಿ ಮಂಡಳಿ (ಸಿಟಿಪಿಬಿ) ಮತ್ತು ಕೇಂದ್ರ ವಿದ್ಯುತ್ ಪ್ರಾಧಿಕಾರವನ್ನು ಜಲ ಮತ್ತು ಉಷ್ಣ ವಿದ್ಯುತ್ ಕೇಂದ್ರಗಳನ್ನು ಸ್ಥಾಪಿಸಲು ತಿಳಿಸಿದರು. ಅಷ್ಟೇ ಅಲ್ಲದೇ, ಭಾರತದಲ್ಲಿ ಉತ್ತಮ ತರಬೇತಿ ಪಡೆದ ವಿದ್ಯುತ್ ಎಂಜಿನಿಯರ್‍ಗಳ ಅಗತ್ಯವನ್ನು ಒತ್ತಿ ಹೇಳಿದ್ದರು!!

ಭಾರತದ ಸಂವಿಧಾನ ಶಿಲ್ಪಿ ಎಂದೇ ಹೆಸರು ವಾಸಿಯಾದ ಡಾ.ಬಿ.ಆರ್ ಅಂಬೇಡ್ಕರ್ ಭಾರತ ದೇಶಕ್ಕೆ ನೀಡಿದ ಕೊಡುಗೆ ಅಪಾರ. ಹಾಗಾಗಿ ಇದನ್ನೆಲ್ಲ
ಸ್ಮರಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯವಾಗಿದೆ!! ಅಷ್ಟೆ ಅಲ್ಲದೇ, ಅಸ್ಪೃಶ್ಯ ಚೇತನರಿಗೆ ಒಂದು ದನಿಕೊಟ್ಟು ನವ ಭಾರತ ನಿರ್ವಣಕ್ಕೆ ಕಂಕಣತೊಟ್ಟ ಬಾಬಾ ಸಾಹೇಬ್ ಅವರ ವಿಚಾರಗಳು ಇಂದಿಗೂ ನಮಗೆ ಅಗತ್ಯವಾಗಿದೆ.

ಮೂಲ: https://www.thebetterindia.com/95923/bhimrao-ambedkar-father-indian-constitution-little-known-facts-life/

-ಅಲೋಖಾ

Tags

Related Articles

Close