ಪ್ರಚಲಿತ

ಬ್ರೇಕಿಂಗ್ ನ್ಯೂಸ್!! ಯಡಿಯೂರಪ್ಪನವರು ಬರುವ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ!!

ಕರ್ನಾಟಕದಲ್ಲಿ ಬಿಜೆಪಿ ನಡೆ ಏನೆಂಬುವುದು ಮಾತ್ರ ಸದ್ಯಕ್ಕೆ ಗೊತ್ತಾಗುತ್ತಿಲ್ಲ!! ಯಾಕೆಂದರೆ ಕರ್ನಾಟಕದ ಬಿಜೆಪಿಯನ್ನು ನಿಯಂತ್ರಿಸುವುದು ಚುನಾವಣಾ ಚಾಣಕ್ಯನಾಗಿರುವ ಅಮಿತ್ ಶಾ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಶಿವಮೊಗ್ಗದ ಸಂಸದರಾಗಿರುವ ಬಿ.ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದು, ಈ ಬೆನ್ನಲ್ಲೇ ಇದೀಗ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ!!

ಹೌದು…. ಶಿಕಾರಿಪುರದಿಂದ ಸ್ಫರ್ಧಿಸಿ ಬಿಜೆಪಿಯ ಉತ್ತಮ ರಾಜಕಾರಣಿ ಎಂದೆನಿಸಿರುವ ಬಿ.ಎಸ್ ಯಡಿಯೂರಪ್ಪ ಅವರ ಬಗ್ಗೆ ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, ಈ ಬಾರಿಯ ವಿಧಾನ ಸಭೆ ಚುನಾವಣೆಯ ಅಭ್ಯರ್ಥಿ ಸ್ಥಾನದಲ್ಲಿ ಸ್ಪರ್ಧಿಸುವುದಿಲ್ಲ ಎನ್ನುವುದು ಇದೀಗ ತಿಳಿದು ಬಂದಿದೆ!! ಆದರೆ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿಯಾಗಿ ಘೋಷಣೆಯಾಗಿದ್ದು, ಇದೀಗ ಈ ಬಾರಿಯ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎನ್ನುವ ಮಾಹಿತಿ ಇದೀಗ ಸಿಕ್ಕಿದ್ದು, ಇದರ ಹಿಂದಿರುವ ಕಾರಣವೇನು ಎಂಬುವುದು ಮಾತ್ರ ಗೊತ್ತಾಗುತ್ತಿಲ್ಲ!! ಅಷ್ಟೇ ಅಲ್ಲದೇ, ಈ ಬಗ್ಗೆ ಕೇಂದ್ರದ ನಡೆ ಏನು ಎಂಬುವುದೂ ಕೂಡ ಗೊತ್ತಾಗುತ್ತಿಲ್ಲ!!

ಆದರೆ……

ಈ ಹಿಂದೆ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾಗಿದ್ದ ದೇವರಾಜ್ ಅರಸ್, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಗಳಾಗಿದ್ದ ಅಖಿಲೇಶ್ ಯಾದವ್, ಅಷ್ಟೇ ಅಲ್ಲದೇ, ಈಗೀನ ಮುಖ್ಯಮಂತ್ರಿಗಳಾಗಿರುವ ಯೋಗಿ ಆದಿತ್ಯನಾಥ್ ಅವರೂ ಕೂಡ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸದೇ ನೇರವಾಗಿ ಮುಖ್ಯಮಂತ್ರಿ ಪಟ್ಟವನ್ನು ಅಲಂಕರಿಸಿದ್ದ ಬಗ್ಗೆ ನಮಗೆ ತಿಳಿದೇ ಇದೇ!! ಹಾಗಾಗಿ, ಈ ಬಾರಿ ಕರ್ನಾಟಕದಲ್ಲಿಯೂ ಕೂಡ ಯಡಿಯೂರಪ್ಪ ಅವರ ವಿಚಾರವೂ ಹೀಗೆಯೇ ಆಗಿರಬಹುದೇ ಎನ್ನುವ ವಿಚಾರವನ್ನು ಯೋಚಿಸಬೇಕಾಗಿದೆ!!

ನಮಗೆ ತಿಳಿದಿರುವಂತೆ ರಾಜ್ಯ ಸರ್ಕಾರ ಯಾವುದೇ ಹುದ್ದೆ ಅಲಂಕರಿಸಬೇಕಾದರೆ ವಿಧಾನ ಸಭೆ ಅಥವಾ ವಿಧಾನ ಪರಿಷತ್ ನಲ್ಲಿ ಶಾಸಕನಾಗಿರಬೇಕು. ಹಾಗೆಯೇ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಬೇಕಾದರೂ ಕೂಡ ಶಾಸಕನಾಗಿದ್ದರೆ ಸಾಕಾಗುತ್ತದೆ. ಆದರೂ ವಿಧಾನ ಸಭೆ ಹಾಗೂ ವಿಧಾನ ಪರಿಷತ್ ನಲ್ಲಿ ಅಧಿಕಾರವಿಲ್ಲದಿದ್ದರೂ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಲಬಹುದು. ನಂತರ 6 ತಿಂಗಳ ಒಳಗಾಗಿ ವಿಧಾನ ಸಭೆ ಅಥವಾ ವಿಧಾನ ಪರಿಷತ್ ಅನ್ನು ಪ್ರವೇಶ ಮಾಡಬೇಕು. ಆದರೆ ಇದೀಗ ಯಡಿಯೂರಪ್ಪನವರು ಮುಂದಿನ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸದೇ,ಲೋಕಸಭೆಯ ಸಂಸದರಾಗಿದ್ದುಕೊಂಡೇ ಮುಖ್ಯಮಂತ್ರಿಯ ಸ್ಥಾನವನ್ನು ಏರಬಹುದು. ಆದರೆ 6 ತಿಂಗಳ ಒಳಗೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ವಿಧಾನ ಸಭೆ ಅಥವಾ ವಿಧಾನ ಪರಿಷತ್ ಪ್ರವೇಶ ಮಾಡಬೇಕು!!

ಇದಕ್ಕೆ ಉತ್ತಮ ಉದಾಹರಣೆ ಎಂದರೆ ಈ ಹಿಂದೆ ಕರ್ನಾಟಕದಲ್ಲಿ ಬಿಜೆಪಿ ಸರಕಾರ ಆಡಳಿತದಲ್ಲಿದ್ದಾಗ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಂದರ್ಭದಲ್ಲಿ ಸದಾನಂದ ಗೌಡರೂ ಸಂಸದರಾಗಿದ್ದರು ನಂತರ ಮುಖ್ಯಮಂತ್ರಿ ಸ್ಥಾನಕ್ಕೇರಿದ ಅವರು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ವಿಧಾನ ಪರಿಷತ್ ಅನ್ನು ಪ್ರವೇಶಿಸಿದರು. ಅಷ್ಟೇ ಅಲ್ಲದೇ, ಗುಜರಾತ್ ನಲ್ಲಿ ಕೇಶೂವ್ ಭಾಯಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಂದರ್ಭದಲ್ಲಿ ನರೇಂದ್ರ ಮೋದಿಯವರು ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ್ದರು!! ಹಾಗಾಗಿ ಯಡಿಯೂರಪ್ಪ ಅವರ ವಿಚಾರದಲ್ಲೂ ಈ ರೀತಿ ನಡೆಯಬಹುದೇ ಎನ್ನುವ ಪ್ರಶ್ನೆಯೂ ಮೂಡುತ್ತದೆ!!

ಯಡಿಯೂರಪ್ಪ ಅವರು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಣೆಯಾಗಿದ್ದರೂ ಕೂಡ ಕೇಂದ್ರದ ನಿಲುವು ಏನು ಎಂಬುವುದು ಗೊತ್ತಾಗುತ್ತಿಲ್ಲ!! ಆದರೆ ಕೇಂದ್ರದ ಈ ನಿಲುವು ಒಂದು ಕಡೆ ಒಳ್ಳೆಯದೇ ಆಗಿದ್ದರೂ ಕೂಡ ಮುಖ್ಯಮಂತ್ರಿ ಅಭ್ಯರ್ಥಿ ಬೇರೆಯೇ ಇದ್ದಾರೆಯೇ ಎನ್ನುವ ಪ್ರಶ್ನೆಯೂ ಇದೀಗ ಮೂಡುತ್ತದೆ!!!

ಆದರೆ ಯಡಿಯೂರಪ್ಪ ಅಧಿಕಾರವಾಧಿಯಲ್ಲಿ ಕೊನೆಯ ಚುನಾವಣೆ ಇದಾಗಿದ್ದು, ಇವರು ಮಾಡಿರುವ ನಿಸ್ವಾರ್ಥ ಸೇವೆಯನ್ನು ಎಲ್ಲರೂ ಮೆಚ್ಚುವಂತಹದ್ದು!! ಯಾಕೆಂದರೆ ಕರ್ನಾಟಕದಲ್ಲಿ ಮುಖ್ಯಮಂತ್ರಿಗಳಾಗಿದ್ದ ವೇಳೆ ಅವರು ಜಾರಿಗೆ ತಂದಂತಹ ಅನೇಕ ಯೋಜನೆಗಳು ಇಂದಿಗೂ ಜನಮಾನಸದಲ್ಲಿ ಅಚ್ಚಲಿಯಾಗಿ ಉಳಿದಿದೆ. ಈಗಾಗಲೇ ಅನೇಕ ಪ್ರಕರಣಗಳು ಎದುರಿಸಿರುವ ಇವರು, ಈ ಬಗ್ಗೆ ಕ್ಲೀನ್ ಚಿಟ್ ದೊರಕಿರುವುದು ಹೆಮ್ಮೆಯ ವಿಚಾರ. ಹಾಗಾಗಿ ಯಡಿಯೂರಪ್ಪನವರ ಮೇಲೆ ಯಾವುದೇ ಆಪಾದನೆಗಳಿದ್ದರೂ ಕೂಡ ತನ್ನ ನಾಡಿನ ಜನತೆಗಾಗಿ ಮಾಡಿರುವ ನಿಸ್ವಾರ್ಥ ಸೇವೆಯೇ ಅವರನ್ನು ಗೆಲ್ಲಿಸಿರುವುದು ಮಾತ್ರ ಅಕ್ಷರಶಃ ನಿಜ!!

ಯಡಿಯೂರಪ್ಪ ಫೀನಿಕ್ಸ್ ನಂತೆ ಮೇಲೆದ್ದು ಬರುವ ಎಲ್ಲಾ ತಾಕತ್ತು ಅವರಲ್ಲಿದೆ. ಹೌದು… ಹಠ, ಛಲಕ್ಕೆ ಬಿದ್ದರೆ ವಿರೋಧಿಗಳ ಜನ್ಮ ಜಾಲಾಡದೇ ಬಿಡೋರಲ್ಲ!! ತಳಮಟ್ಟದಿಂದ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಛಲಗಾರನಾಗಿರುವ ಇವರು ಕಾವೇರಿ ವಿಚಾರ ಬಂದಾಗ ತನ್ನ ಪಕ್ಷಕ್ಕೆ ಸೀಟ್ ಬರುತ್ತೋ ಇಲ್ಲವೋ ಎಂಬುದನ್ನೂ ಲೆಕ್ಕಿಸದೇ ತಲಕಾವೇರಿಯಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಿದ ಹುಟ್ಟು ಹೋರಾಟಗಾರನಾಗಿದ್ದಾರೆ!!. ತನ್ನ ಹರಿತವಾದ ಮಾತುಗಳಿಂದ ಆಡಳಿತ ಪಕ್ಷಗಳನ್ನು ತಿವಿದು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಹೊಸ ಭಾಷ್ಯ ಬರೆದ ವಾಗ್ಮಿ ಹಾಗೂ ಸಂಸದೀಯ ಪಟು.

ಕರ್ನಾಟಕದಲ್ಲಿ ಬಿಜೆಪಿ ಏನೂ ಅಲ್ಲದಿದ್ದಾಗ ಪಕ್ಷವನ್ನು ಅಧಿಕಾರಕ್ಕೇರುವಂತೆ ಮಾಡಿದವರು ಯಡಿಯೂರಪ್ಪನವರು ಖಂಡಿತವಾಗಿಯೂ ಇದರಲ್ಲಿ ಹಲವರ ಪರಿಶ್ರಮವಿದೆ, ತ್ಯಾಗ ಬಲಿದಾನಗಳಿವೆ. ಆದರೆ ಈ ಹೋರಾಟದಲ್ಲಿ ಬಹಳ ವರ್ಷಗಳಿಂದ ಮುಂಚೂಣಿಯಲ್ಲಿದ್ದವರು ಬಿಎಸ್ವೈ. ಪ್ರಥಮ ದರ್ಜೆ ಕ್ಲಾರ್ಕ್ ಹುದ್ದೆಯಿಂದ ನೇರವಾಗಿ ಆರೆಸ್ಸೆಸ್ ಮುಖಾಂತರ ರಾಜಕೀಯಕ್ಕೆ ಧುಮುಕಿದ ಯಡಿಯೂರಪ್ಪ ಆಮೇಲೆ ಹಿಂದಿರುಗಿ ನೋಡಿದವರಲ್ಲ. ಹಾಗಾಗಿ ವಿರೋಧ ಪಕ್ಷದ ನಾಯಕನಾಗಿ, ಉಪಮುಖ್ಯಮಂತ್ರಿಯಾಗಿ, ಕೊನೆಗೆ ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ ಮನೆಮಾತಾಗಿದ್ದಾರೆ!!
– ಅಲೋಖಾ

Tags

Related Articles

Close