ಅಂಕಣ

ಭಾರತದೊಳ ಶಂಖಾಕೃತಿ!!!⁠⁠⁠⁠ ಸನಾತನ ಹಿಂದೂಗಳ ಅಪಾರ ಪಾಂಡಿತ್ಯ ಹಾಗು ವಿಜ್ಞಾನದ ಬಗ್ಗೆ ನಿಮಗೆಷ್ಟು ಗೊತ್ತು?!⁠⁠⁠⁠

ನಮ್ಮ ಭಾರತದ ನೈಜ ಇತಿಹಾಸ, ಸನಾತನ ಹಿಂದೂಗಳ ಅದ್ವಿತೀಯ ಸಾಧನೆ ಹಾಗು ಅವರಿಗಿದ್ದ ಆಗಿನ ಕಾಲದ ವೈಜ್ಞಾನಿಕ ಮನೋಭಾವನೆಯನ್ನ ನಮ್ಮ ದೇಶದ ತಥಾಕಥಿತ ಬುದ್ಧಿಜೀವಿಗಳು, ಪ್ರಗತಿಪರರು, ಸಂಶೋಧಕರೇ ಅಲ್ಲಗಳೆದು ಇಡೀ ಪ್ರಪಂಚದ ಎದುರು ತಲೆ ತಗ್ಗಿಸುವಂತಹ ಅನೇಕ ವಾದಗಳನ್ನು ಮಂಡಿಸಿ, ಸಂಶೋಧನೆಗಳನ್ನ ಮಾಡಿಯೇ ಈ ಮಾತನ್ನ ಹೇಳ್ತಿದೀವಿ ಅಂತ ಬೇರೆ ಪೊಳ್ಳು ವಾದ ಮಾಡುತ್ತಾರೆ.

ಅದರೆ ಭಾರತದ ಬಗ್ಗೆ ಮಾತು ಬಂದರೆ ವಿಶ್ವದ ಕಣ್ಣು ಈಗ ಭಾರತದ ಮೇಲೆ, ಭಾರತದಲ್ಲಿ ಏನೇ ಬದಲಾವಣೆಯಾದರೂ ಅದನ್ನ ಜಗತ್ತು ಅನುಸರಿಸುತ್ತೆ, ನಮ್ಮ ಪೂರ್ವಜರು ಇಡೀ ವಿಶ್ವ ಪರ್ಯಟನೆ ಮಾಡಿದವರು ಇಡೀ ಪ್ರಪಂಚಕ್ಕೆ ನಾಗರೀಕತೆಯ ಪಾಠ ಹೇಳಿಕೊಟ್ಟವರು ಅನ್ನೋದನ್ನ ನಾವು ಭಾರತದ
ನೈಜ ಇತಿಹಾಸ ಹಾಗು ಭಾರತ ದರ್ಶನ ಮಾಡಿದರೆ ಅರ್ಥವಾಗುತ್ತದೆ.

ನಮ್ಮ ಪೂರ್ವಜರ ಅದ್ವಿತೀಯ ವಿಜ್ಞಾನವನ್ನ ಹಾಗು ಖಗೋಳಶಾಸ್ತ್ರದಲ್ಲಿ ಅವರಿಗಿದ್ದ ಪಾಂಡಿತ್ಯವನ್ನು ಒಂದೇ ಒಂದು ಉದಾಹರಣೆಯ ಮೂಲಕ ತಿಳಿಸುವುದೇ ಈ ಅಂಕಣದ ಉದ್ದೇಶ.

“ಮಹಾಕಾಲ”ದಿಂದ ಭಾರತದಲ್ಲಿರುವ ಶಿವನ ಜ್ಯೋತಿರ್ಲಿಂಗಗಳ ನಡುವಿನ ಸಂಬಂಧ ಮಾತ್ರ ನಂಬಲಸಾಧ್ಯ ಹಾಗು ರೋಚಕ.

ಈ ಭೂಮಂಡಲ ಅಥವಾ ಪೃಥ್ವಿಯ ಕೇಂದ್ರಸ್ಥಾನ ‘ಉಜ್ಜಯಿನಿ’ ಅನ್ನೋದನ್ನ ನಮ್ಮ ಸನಾತನಿಗಳು ಯಾವಾಗಲೋ ಸಾವಿರಾರು ವರ್ಷಗಳ ಹಿಂದೆಯೇ ತಿಳಿಸಿದ್ದರು, ಅದು ನಿಜವಂತ ಇತ್ತೀಚಿನ ಅನೇಕ ಸಂಶೋಧನೆಗಳೂ ಒಪ್ಪಿವೆ.

ಈ ಉಜ್ಜಯಿನಿಗೂ ನಮ್ಮ ಪೂರ್ವಜರಿಗೂ ಅವರಿಗಿದ್ದ ಖಗೋಳಶಾಸ್ತ್ರದ ಪಾಂಡಿತ್ಯಕ್ಕೂ ಸಂಬಂಧವೇನಂತ ಯೋಚಸುತ್ತಿದೀರಾ.

ಅದಕ್ಕೂ ಕಾರಣವಿದೆ. ಭಾರತದಲ್ಲಿರುವ ಶೇಷ ಜ್ಯೋತಿರ್ಲಿಂಗಗಳ ಸಂಬಂಧ ಉಜ್ಜಯಿನಿಯೊಂದಿಗಿದೆ.

ಅದನ್ನು ತಿಳಿಯೋಣ ಬನ್ನಿ

ಉಜ್ಜಯಿನಿಯಿಂದ ಶೇಷ ಜ್ಯೋತಿರ್ಲಿಂಗಗಳಿಗಿರುವ ದೂರವೂ(in KM’s) ಕೂಡ ಒಂದು ರೋಚಕವೇ.

ಉಜ್ಜಯಿನಿಯಿಂದ….

ಸೋಮನಾಥ – 777 ಕಿ.ಮೀ

ಓಂಕಾರೇಶ್ವರ – 111 ಕಿ.ಮೀ

ಭೀಮಾಶಂಕರ – 666 ಕಿ.ಮೀ

ಕಾಶಿವಿಶ್ವನಾಥ – 999 ಕಿ.ಮೀ

ಶ್ರೀಶೈಲ ಮಲ್ಲಿಕಾರ್ಜುನ – 999 ಕಿ.ಮೀ

ಕೇದಾರನಾಥ – 888 ಕಿ.ಮೀ

ತ್ರಿಯಂಬಕೇಶ್ವರ – 555 ಕಿ.ಮೀ

ಬೈಜನಾಥ – 999 ಕಿ.ಮೀ

ರಾಮೇಶ್ವರಂ – 1999 ಕಿ.ಮೀ

ಘೃಷ್ಣೇಶ್ವರ -555 ಕಿ.ಮೀ

ಸನಾತನ ಧರ್ಮದಲ್ಲಿ ಕಾರಣವಿಲ್ಲದ ಯಾವ ಸಂಗತಿಗಳೂ ಇಲ್ಲ ಅನ್ನೋದಕ್ಕೆ ಇದೊಂದು ಉದಾಹರಣೆ ಹಾಗು ಇದನ್ನ ನಮ್ಮ ಪೂರ್ವಜರು ಎರಡೂವರೆ ಸಾವಿರ ವರ್ಷಗಳ ಅಥವ ಅದಕ್ಕಿಂತ ಮುಂಚೆಯೇ ತಿಳಿಸಿದ್ದರು.

ನಂತರ ಬಂದ ಬ್ರಿಟಿಷ್ ವಿಜ್ಞಾನಿಗಳು 100 ವರ್ಷಗಳ ಹಿಂದೆ ಪೃಥ್ವಿಯ ಮೇಲೆ ಎಳೆದ ಕಾಲ್ಪನಿಕ ರೇಖೆಯ ಮಧ್ಯಭಾಗವು(center place of the earth) ಕೂಡ ಉಜ್ಜಯಿನಿಯನ್ನೇ ಸೂಚಿಸಿತ್ತು ಅನ್ನುವುದು ಕೂಡ ಸಾವಿರಾರು ವರ್ಷಗಳ ಹಿಂದೆಯೇ ನಮ್ಮಲ್ಲಿದ್ದ ಖಗೋಳ ಶಾಸ್ತ್ರ ಪಾಂಡಿತ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಈಗಲೂ ಸೂರ್ಯನ ಹಾಗು ಅಂತರಿಕ್ಷದ ಮಾಹಿತಿಗಾಗಿ ಜಗತ್ತಿನ ವಿಜ್ಞಾನಿಗಳು ಭಾರತದ ಉಜ್ಜಯಿನಿಗೇ ಬರುತ್ತಾರೆ.

ಈ ಜ್ಯೋತಿರ್ಲಿಂಗಗಳ ಮತ್ತೊಂದು ವಿಶೇಷತೆಯೆಂದರೆ ಭೂಪಟದಲ್ಲಿ ಈ ಜ್ಯೋತಿರ್ಲಿಂಗಗಳನ್ನ ಒಂದಕ್ಕೊಂದು ಲಿಂಕ್ ಮಾಡಿದರೆ ಅದು ಶಂಖದ ಆಕಾರವಾಗಿ ಗೋಚರಿಸುತ್ತದೆ.

ಇದು ಶೂನ್ಯದಿಂದ ಅನಂತ ಎಂಬ ಅದ್ಭುತವಾದ ಸಂದೇಶವನ್ನ ಸಾರುತ್ತದೆ.

ಹೀಗೆ ಅಗೋಚರ, ವಿಸ್ಮಯಗಳನ್ನಡಗಿಸಿಟ್ಟುಕೊಂಡಿರುವ ಹಲವಾರು ವಿಷಯಗಳು ನಮ್ಮ ಭಾರತದ ಪುರಾತನ ಗ್ರಂಥಗಳಲ್ಲಿವೆ.

ಭಾರತದಲ್ಲಿ ಇಲ್ಲಿಯವರೆಗೂ ಆಯುರ್ವೇದ, ವಿಜ್ಞಾನ, ಖಗೋಳಶಾಸ್ತ್ರ, ಪ್ಲಾಸ್ಟಿಕ್ ಸರ್ಜರಿ, ಜೀವನ ಪದ್ಧತಿ ಸಮೇತ ಸಿಕ್ಕ ಸುಮಾರು 12,000 ಪುರಾತನ ಗ್ರಂಥಗಳಲ್ಲಿ ಅಮೇರಿಕ ನಾಲ್ಕು ಸಾವಿರ ಹಾಗು ಜರ್ಮನಿ ಎರಡು ಸಾವಿರದ ಏಳು ನೂರು ಗ್ರಂಥಗಳ ಮೇಲೆ ಪೇಟೆಂಟ್ ಪಡೆದು ನಮ್ಮ ಭಾರತದ ಸಂಸ್ಕೃತಿಯನ್ನ ವಿಶ್ವವ್ಯಾಪಿ ಮಾಡುತ್ತ ಲಾಭ ಮಾಡಿಕೊಳ್ಳುತ್ತಿವೆ ಆದರೆ ನಮ್ಮದೇ ಇತಿಹಾಸವನ್ನ ನಮ್ಮದೇ ಪ್ರಾಚೀನ ಗ್ರಂಥಗಳ ಬಗ್ಗೆ ನಮಗೆ ಗೊತ್ತಿರದಿರುವುದು ಅಥವಾ ತಿಳಿದುಕೊಳ್ಳಲೂ ಪ್ರಯತ್ನ ಮಾಡದಿರುವುದು ಮಾತ್ರ ನಿಜಕ್ಕೂ ವಿಷಾದನೀಯ ಹಾಗು ನಾಚಿಕೆಗೇಡಿನ ಸಂಗತಿಯೇ.

ಇದರಿಂದ ಸ್ಪಷ್ಟವಾಗುವ ವಿಚಾರವೆಂದರೆ ನಮ್ಮ ಸನಾತನ ಹಿಂದೂ ಧರ್ಮ ವೈಜ್ಞಾನಿಕವಾಗಿಯೇ ನಿರ್ಮಿಸಿದಂತ ಧರ್ಮವಾಗಿದ್ದು ಇದನ್ನ ಯಾರು ಎಷ್ಟೇ ಹೀಗಳೆದರು, ನಿರಾಕರಿಸಿದರೂ ಇದು ವಿಶ್ವವ್ಯಾಪಿ ಸಾರ್ವತ್ರಿಕ ಸತ್ಯ ಆದರೆ ಇದನ್ನ ನಾವು ಪೆಟೆಂಟ್ ಮಾಡಿಸಿಲ್ಲ ಅಷ್ಟೇ.

ನಮ್ಮತನ, ಇತಿಹಾಸ, ಸಂಸ್ಕೃತಿ ಆಚಾರ ವಿಚಾರ ನಾವು ಮರೆತರೆ ನಾವು ಜಗತ್ತಿನಲ್ಲಿ ಕಾಲ ಕಸಕ್ಕಿಂತ ಕಡೆಯಾಗುತ್ತೇವೆ. ಬನ್ನಿ ಈಗಲಾದರೂ
ಇದರ ಬಗ್ಗೆ ಗಮನಹರಿಸಿ ನಮ್ಮ ಶಕ್ತಿಯನ್ನ ಬೌದ್ಧಿಕ ಸಾಮರ್ಥ್ಯವನ್ನ ಜಗತ್ತಿನೆದುರು ಅನಾವರಣವಗೊಳಿಸೋಣ.

– Vinod Hindu Nationalist

Tags

Related Articles

Close