ಪ್ರಚಲಿತ

ಭಾರತೀಯ ಸೈನಿಕರನ್ನು ಅತ್ಯಾಚಾರಿಗಳೆಂದ ಕನ್ಹಯ್ಯಾ ಕುಮಾರ್ ನನ್ನು ಮೊನ್ನೆ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಹಿಗ್ಗಾ-ಮುಗ್ಗಾ ಥಳಿಸಿದ ವಿದ್ಯಾರ್ಥಿಗಳು!!

ಯಾವಾಗಲೂ ದೀಪಾವಳಿಯ ಸಂಭ್ರಮವೇ ಇರುವುದಿಲ್ಲ! ಯಾವಾಗಲೂ ಭಾರತೀಯರು ಹೇಳಿದ್ದನ್ನೆಲ್ಲ ಕೇಳಿಸಿಕೊಂಡು ಮುಂದೆ ಹೋಗುವುದಿಲ್ಲ! ಹೌದು! ಭಾರತದ ಸಿಕ್ಯುಲರ್ ಸಿಕಂದರ್ ಗಳ ಪೋಸ್ಟರ್ ಬಾಯ್ ಆದ ಕನ್ಹಯ್ಯಾ ಕುಮಾರ್ ಭಾರತೀಯ ಸೈನಿಕರನ್ನು ಅತ್ಯಾಚಾರಿಗಳು ಎಂದೆಲ್ಲ ನಾಲಗೆ ಹರಿಬಿಟ್ಟು ಬಹುದೊಡ್ಡ ಅವಮಾನವೆಸಗಿದ್ದದ್ದು ಗೊತ್ತೇ ಇದೆ. ಆದರೆ, ಇತ್ತೀಚೆಗೆ ಆತನ ಅದೃಷ್ಟವೊಂದು ಕೈ ಕೊಡುತ್ತಿದೆ!

ಲಖ್ನೋದಲ್ಲಿ ನಡೆದ ಮೂರು ದಿನದ ಸಾಹಿತ್ಯ ಸಮ್ಮೇಳನದಲ್ಲಿ, ವಿದ್ಯಾರ್ಥಿ ಒಕ್ಕೂಟ ಸಂಘದ ಮಾಜಿ ಅಧ್ಯಕ್ಷನಾದ ಕನ್ಹಯ್ಯ ಕುಮಾರ್ ಭಾರತವನ್ನು ಹಾಗೂ ಸೈನಿಕರನ್ನು ಬಯ್ಯುತ್ತಲೇ ಪ್ರಸಿದ್ಧಿಗೆ ಬಂದು, ಎಡಪಂಥೀಯರ ‘ಅಚ್ಛಾ ಬೇಟಾ’ ಆಗಿದ್ದು ಹೌದಾದರೂ ಮೊನ್ನೆ ವಿದ್ಯಾರ್ಥಿಗಳೇ ಧಿಕ್ಕಾರ ಕೂಗಿದ್ದಾರೆ. ಯಾವಾಗ ಕನ್ಹಯ್ಯಾ ಕುಮಾರ್ ವೇದಿಕೆ ಏರಿದನೋ, ಸುತ್ತಲಿದ್ದ ವಿದ್ಯಾರ್ಥಿಗಳು ಧಿಕ್ಕಾರ ಕೂಗಿದ್ದಲ್ಲದೇ, ‘ದೇಶದ್ರೋಹಿ’ ಎಂಬ ಹಣೆಪಟ್ಟಿಯನ್ನೂ ಕಟ್ಟಿ ಇದ್ದ ಮೂರು ಕಾಸಿನ ಮರ್ಯಾದೆಯನ್ನೂ ಹರಾಜು ಹಾಕಿದ್ದಾರಷ್ಟೇ!

ಭಾರತೀಯ ಸೈನಿಕರನ್ನು ಅವಮಾನ ಮಾಡಿದ! ಕಪಾಳಮೋಕ್ಷದ ರುಚಿಯನ್ನೂ ನೋಡಿದ!

“ಕನ್ಹಯ್ಯ ಭಗಾವೋ, ದೇಶ್ ಬಚೋ” (ಕನ್ಹಯ್ಯನನ್ನು ಓಡಿಸಿ, ದೇಶ ಉಳಿಸಿ)!!! ಎಂಬ ಧಿಕ್ಕಾರ ಘೋಷವನ್ನು ಕೂಗಿದ ವಿದ್ಯಾರ್ಥಿಗಳು ಕನ್ಹಯ್ಯಾನ ನಡೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಯಾವಾಗಲೂ ದೇಶದ್ರೋಹಿ ಹೇಳಿಕೆಗಳಿಂದಲೇ ಪ್ರಸಿದ್ಧಿಗೆ ಬಂದ ಕನ್ಹಯ್ಯಾ ಕುಮಾರ್ ನ ಸೈನಿಕರ ಬಗೆಗಿನ ಅವಮಾನಕರ ಹೇಳಿಕೆಗೆ ವಿದ್ಯಾರ್ಥಿಗಳು ಕೆರಳಿ ಅಟ್ಟಾಡಿಸಿ ಹೊಡೆದಿದ್ದಾರೆ!

[http://www.livehindustan.com/uttar-pradesh/lucknow/story-kanhaiyas-huge-protest-came-to-lucknow-1637450.html ]

ಪೋಲಿಸರು ಬರುವವರೆಗೂ ಸಹ ಪರಿಸ್ಥಿತಿ ತೀರಾ ಬಿಗಡಾಯಿಸಿತ್ತು. ತದನಂತರ, ಧಿಕ್ಕಾರ ಕೂಗುತ್ತಿದ್ದ ವಿದ್ಯಾರ್ಥಿಗಳನ್ನು ಚದುರಿಸಿದರು! ಕನ್ಹಯ್ಯಾನನ್ನು ವಿರೋಧಿಸಿದ್ದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾಗೂ ಹಿಂದೂ ಯುವ ವಾಹಿನಿಯ ಸ್ವಾಭಿಮಾನಿ ಭಾರತೀಯರು! ಕಾರ್ಯಕರ್ತರನ್ನು ಚದುರಿಸುವವರೆಗೂ ಸಹ, ಕನ್ಹಯ್ಯಾ ಹೆದರಿ ಬಾಯಿ ಮುಚ್ಚಿಕೊಂಡೇ ಕುಳಿತಿದ್ದನಾದರೂ ಸಹ, ಕೊನೆಗೆ ನಾಯಿ ಬಾಲ ಡೊಂಕೆನ್ನುವ ಹಾಗೆ ಮತ್ತೆ ತನ್ನ ಹಳೇ ಚಾಳಿಯನ್ನು ಮುಂದುವರೆಸಿದ್ದಾನೆ.

ಕನ್ಹಯ್ಯಾ ಸ್ವತಂತ್ರ್ಯ ಹೋರಾಟಗಾರನ ಕುಟುಂಬದಿಂದ ಬಂದವನೇ?!

“ನೀವು 18 ರಾಜ್ಯಗಳಲ್ಲಿ ನಿಮ್ಮ ಅಧಿಕಾರವನ್ನು ಹೊಂದಿರಬಹುದು. ಆದರೆ, ನೀವು ಒಬ್ಬ ಸ್ವತಂತ್ರ್ಯ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ. ನೀವು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವ ಯಾರನ್ನೇ ಆದರೂ ತಡೆಯಲು ಸಾಧ್ಯವಿಲ್ಲ. ನಾನು ಸ್ವತಂತ್ರ್ಯ ಹೋರಾಟಗಾರನ ಕುಟುಂಬದಿಂದ ಬಂದವನು! ನನ್ನನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ!”

ಹೀಗೆ ಸುತ್ತುವರೆದಿದ್ದ ಸಮೂಹವನ್ನು ಆಕರ್ಷಿಸಲು ಕನ್ಹಯ್ಯಾ ಭಾಷಣ ಬಿಗಿದನಷ್ಟೇ! ಆದರೆ, ಇದೇ ಸ್ವತಂತ್ರ್ಯ ಹೋರಾಟಗಾರರ ಕುಟುಂಬದಿಂದ
ಬಂದೆನೆಂದು ಹೇಳಿಕೊಂಡವನು ಭಾರತೀಯ ಸೈನಿಕರನ್ನು ಅತ್ಯಾಚಾರಿಗಳೆಂದಿದ್ದ!

“ನಾನು ಗುಂಡುಗಳನ್ನು ಬೇಕಾದರೂ ಎದುರಿಸುತ್ತೇನೆ. ಆದರೆ, ದೇಶವನ್ನು ತಪ್ಪು ದಾರಿಗೆ ಕೊಂಡುಯ್ಯುತ್ತಿರುವವರನ್ನು ವಿರೋಧಿಸುವುದನ್ನು ನಿಲ್ಲಿಸುವುದಿಲ್ಲ.’ ಎಂಬ ನಾಟಕದ ಡೈಲಾಗ್ ಗಳನ್ನು ಮುಂದುವರೆಸಿದ ಕನ್ಹಯ್ಯಾ ಕೇವಲ ಮೈಕಿನ ಎದುರುಗಿಷ್ಟೇ ಸೀಮಿತ ಹಾಗೂ ಇವತ್ತಿನವರೆಗೆ ಯಾವುದೇ ಕ್ರಾಂತಿಕಾರಕ ಹೆಜ್ಜೆಗಳಲ್ಲಿ ಈತನ ಹೆಸರಿಲ್ಲ ಎಂಬುದು ಆತನನ್ನು ನೋಡಿದವರಿಗೆ ಅರಿವಿದೆ.

“ಭಾರತೀಯ ಸೈನಿಕರು ಮಹಿಳೆಯರನ್ನು ಅತ್ಯಾಚಾರ ಮಾಡುತ್ತಾರೆ!” : ಕನ್ಹಯ್ಯಾ!

ಅರೇ ಕನ್ಹಯ್ಯಾ!!! ಭಾರತೀತ ಸೇನೆ ಮಹಿಳೆಯರನ್ನು ಅತ್ಯಾಚಾರ ಮಾಡುತ್ತದೆಯೆಂದಾದರೆ, ಕಾಶ್ಮೀರದಲ್ಲಿ ಇವತ್ತಿಗೂ ಹೆಣ್ಣು ಮಕ್ಕಳನ್ನು ಜಿಹಾದಿ ಶಕ್ತಿಗಳಿಂದ ರಕ್ಷಿಸುತ್ತಿರುವವರಾರು ಹಾಗಾದರೆ?! ಅಲ್ಲಿನ ಭಾರತೀಯ ಸೈನಿಕರೇ!

“ನಾವು ಸೈನಿಕರನ್ನು ತೀರಾ ಗೌರವಿಸಿದರೂ ಸಹ, ಕಾಶ್ಮೀರದಲ್ಲಿರುವ ಭದ್ರತಾಸಿಬ್ಬಂದಿಗಳು ಮಹಿಳೆಯನ್ನು ಅತ್ಯಾಚಾರ ಮಾಡುವುದನ್ನು ಮರೆಯಬಾರದು!” ಇದು, ಮಾರ್ಚ್ 2016 ರಲ್ಲಿ ಕನ್ಹಯ್ಯಾ ನೀಡಿದ ಹೇಳಿಕೆ.

” ನೀವು ಎಷ್ಟೇ ನಮ್ಮನ್ನು ತಡೆದರೂ, ನಾವು ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದ್ದನ್ನು ವಿರೋಧಿಸಿಯೇ ತೀರುತ್ತೇವೆ! AFSPA ವಿರುದ್ಧ ನಾವು ಹೋರಾಡುತ್ತೇವೆ! ನಾವೆಷ್ಟೇ ಸೈನಿಕರನ್ನು ಗೌರವಿಸಿದರೂ ಸಹ, ಕಾಶ್ಮೀರದಲ್ಲಿ ಭದ್ರತಾ ಸಿಬ್ಬಂದಿಗಳಿಂದ ನಡೆಯುವ ಅತ್ಯಾಚಾರವನ್ನು ನಾವು
ವಿರೋಧಿಸುತ್ತೇವೆ!”

ಇಷ್ಟೆಲ್ಲ ಹೇಳಿದರೂ ಸಹ, ಇವತ್ತಿನವರೆಗೂ ಕೂಡ, ಯಾವೊಬ್ಬ ಎಡಪಂಥೀಯನಿಗೂ ಈ ಹೇಳಿಕೆಗೆ ಸಾಕ್ಷ್ಯಾಧಾರಗಳನ್ನೊದಗಿಸಲು ಸಾಧ್ಯವಾಗಿಲ್ಲ.

ದುರಂತವೆಂದರೆ, ಕಾಂಗ್ರೆಸ್ ಹಾಗೂ ಉಳಿದ ಕೆಲವು ರಾಜಕೀಯ ಪಕ್ಷಗಳು ಇಂತಹ ದೇಶದ್ರೋಹಿಯನ್ನು ಬೆಂಬಲಿಸುತ್ತಿವೆ!

ಉತ್ತರಾಖಂಡ್ ನ ಮಾಜಿ ಗವರ್ನರ್ ಆದ ಆಜಿಜ್ ಖುರೇಶಿ, ಅಸಾಸುದ್ದಿನ್ ಓವೈಸಿ, ಶತೃಘನ್ ಸಿನ್ಹಾ, ಬಾಲಿವುಡ್ ನ ನಟಿಯರಾದ ದಿವ್ಯಾ ದತ್ತಾ, ಬರುನ್ ಗಾಂಧಿ, ಜಯಂತ್ ಛೌಧರಿ, ಜ್ಯೋತಿರಾಜ್ ಸಿಂಧಿಯಾ, ಸುಶ್ಮಿತಾ ಸೇನ್, ಸುರೇಶ್ ರೈನಾ, ಆರ್.ಪಿ.ಸಿಂಗ್ ನಂತಹವರು ಸಾಹಿತ್ಯ ಸಮ್ಮೇಳನದಲ್ಲಿ ಭಾಗಿಯಾದವರು.

https://twitter.com/TradHin/status/929613603270934528

Source : http://www.dnaindia.com/india/report-i-am-ready-to-face-bullets-no-one-cane-stop-me-from-expressing-myself-kanhaiya-kumar-at-lucknow-literary-festival-2559181

– ಪೃಥು ಅಗ್ನಿಹೋತ್ರಿ

Tags

Related Articles

Close