ಪ್ರಚಲಿತ

ಮತ್ತೆ ಬಯಲಾಯ್ತು ಮುಖ್ಯಮಂತ್ರಿಗಳ ಢೋಂಗಿ ಸಮಾಜವಾದಿ ಮುಖ!! ಕಾಂಗ್ರೆಸ್ ಶಾಸಕನ ಮನೆಯಲ್ಲಿ ಮುಖ್ಯಮಂತ್ರಿಗಳು ಮಾಡಿದ್ದಾದರೂ ಏನು ಗೊತ್ತಾ?!

ಅದೇನೋ ಗೊತ್ತಿಲ್ಲ ಹೋದ ಹೋದಲ್ಲೆಲ್ಲಾ ರಾಹುಲ್ ಗಾಂಧಿ ತರಹ ಸಿಎಂ ಸಿದ್ದರಾಮಯ್ಯನವರು ಒಂದಲ್ಲ ಒಂದು ವಿಷಯದಲ್ಲಿ ಎಡವಟ್ಟು ಮಾಡುತ್ತಾನೇ ಬರುತ್ತಿದ್ದಾರೆ…
ಅದು ಸುಮಾರು ಒಂದು ವರ್ಷಗಳ ಹಿಂದಿನ ಕಥೆ. ಕರ್ನಾಟಕದ ಮುಖ್ಯಮಂತ್ರಿಗಳ ಐಷಾರಾಮಿ ಜೀವನ ಮಾಧ್ಯಮಗಳಲ್ಲಿ ಬಟಬಯಲಾಗಿತ್ತು. ತಾನೊಬ್ಬ ಸಮಾಜವಾದಿ ಎಂದು ಹೇಳಿಕೊಂಡೇ ಬರುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಐಷಾರಾಮಿ ಜೀವನ ಕಂಡು ರಾಜ್ಯದ ಜನತೆ ಬೆಚ್ಚಿ ಬಿದ್ದಿದ್ದರು. ಅಹಿಂದ ಅಹಿಂದ ಎಂದು ಬಡಿದಾಡಿಕೊಳ್ಳುವ ಮುಖ್ಯಮಂತ್ರಿಗಳು ಹೀಗೂ ಇದ್ದಾರಾ ಎಂದು ಮೂಗಿನ ಮೇಲೆ ಬೆರಳಿಟ್ಟಿದ್ದರು. ಸದಾ ಬಡವರ ಪರ ಎಂದು ಮಾತನಾಡುವ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಇಷ್ಟೊಂದು ಶೋಕಿಲಾಲನೇ ಎಂದು ಮಾತನಾಡಿಕೊಳ್ಳುತ್ತಿದ್ದರು..

ಅಂದಹಾಗೆ ಮುಖ್ಯಮಂತ್ರಿಗಳನ್ನು ಸಾರ್ವಜನಿಕರು ಇಷ್ಟೊಂದು ಅಚ್ಚರಿಯಿಂದ ನೋಡಲೂ ಕಾರಣವಿದೆ. ಮುಖ್ಯಮಂತ್ರಿಗಳು ತಾನು ಬಡವರ ಪರ ಎಂದು ಜಪ ಮಾಡುತ್ತಾ ರಾಜ್ಯಬಾರ ಮಾಡುತ್ತಿದ್ದ ವಿಷಯ ಎಲ್ಲರಿಗೂ ಗೊತ್ತಿರುವಂತದ್ದೇ. ಆದರೆ ಅವರ ಮತ್ತೊಂದು ಮುಖ ಅದಾಗಲೇ ಬಯಲಾಗಿತ್ತು. ಮುಖ್ಯಮಂತ್ರಿಗಳು 80 ಲಕ್ಷದ ಕೈಗಡಿಯಾರವನ್ನು ಕಟ್ಟಿಕೊಂಡು ತಾನೊಬ್ಬ ಶೋಕಿಲಾಲಾ ಎಂದು ಗುರುತಿಸಿ ಕೊಂಡಿದ್ದರು. ತಾನು 80 ಲಕ್ಷದ ವಾಚ್ ಕಟ್ಟಿಕೊಂಡು ಪೋಸು ಕೊಡುತ್ತಿದ್ದ ಮುಖ್ಯಮಂತ್ರಿಗಳು ಹೇಳುತ್ತಿದದ್ದು ಮಾತ್ರ ತಾನೊಬ್ಬ ಬಡವರ ಬಂಧು ಎಂದು.

ಮಾತ್ರವಲ್ಲದೆ ತಾನು ಉಡುವ ಶಾಲು ಹಾಗೂ ಪಂಚೆಗೆ ಲಕ್ಷಾನು ಗಟ್ಟಲೆ ಖರ್ಚು ಮಾಡಿ ಟೀಕೆಗೆ ಗುರಿಯಾಗಿದ್ದರು. ತಾನು ತಿನ್ನುವ ಬಿಸ್ಕತ್‍ಗೂ ಲಕ್ಷಾಂತರ ರೂಪಾಯಿಗಳಷ್ಟು ಖರ್ಚು ಮಾಡಿ ತಾನೊಬ್ಬ ಶೋಕಿಲಾಲ ಎಂಬುವುದನ್ನು ನಿರೂಪಿಸಿ ಬಿಟ್ಟಿದ್ದರು. ಓರ್ವ ಮುಖ್ಯಮಂತ್ರಿಯಾಗಿ ಜನರ ಕೆಲಸಗಳನ್ನು ಮಾಡಿ, ಬಡವರ ಕಣ್ಣೀರೊರೆಸುವ ಧೀಮಂತ ವ್ಯಕ್ತಿಯಾಗಬೇಕಿತ್ತು. ಆದರೆ ಐಶಾರಾಮಿ ಜೀವನವನ್ನು ನಡೆಸಿಕೊಂಡು ಬರುತ್ತಿರುವುದು ವಿಪರ್ಯಾಸವೇ. ಆದರೆ ಅದನ್ನೆಲ್ಲಾ ಮರೆಮಾಚುವ ಮುಂಚೆಯೇ ಮತ್ತೊಂದು ಐಶಾರಾಮಿ ಜೀವನ ಬೆಳಕಿಗೆ ಬಂದಿತ್ತು… ಆ ದಿನವೇ ಎಲ್ಲಾ ಜನರಿಗೆ ತಿಳಿದಿತ್ತು ಯಾರು ಬಡವರ ಬಂಧು ಎಂದು…. ಕೆಲವಷ್ಟೇ ದಿನಗಳ ಹಿಂದೆ ಬೆಳ್ಳಿ ತಟ್ಟೆಯಲ್ಲಿ ಊಟ ಮಾಡಿ ಸುದ್ಧಿಯಾಗಿದ್ದ ಈತ ಮತ್ತೇ ಅದೇ ಸುದ್ದಿಯಲ್ಲಿದ್ದಾರೆ…

ಶಾಸಕ ಕೆ.ಎನ್ ರಾಜಣ್ಣ ಮನೆಯಲ್ಲಿ ಬೆಳ್ಳಿ ತಟ್ಟೆಯಲ್ಲಿ ಉಪಹಾರ ಸೇವನೆ

ರಾಜ್ಯದಲ್ಲಿ ಅದೆಷ್ಟೋ ಜನರು ಒಂದೊತ್ತಿನ ಊಟಕ್ಕೂ ಗತಿ ಇಲ್ಲದೆ ಪರದಾಡುವ ಸ್ಥಿತಿಯಲ್ಲಿದ್ದರೆ ಈ ಸಿದ್ದರಾಮಯ್ಯನವರು ಮಾತ್ರ ಬೆಳ್ಳಿ ತಟ್ಟೆಯಲ್ಲಿ ಊಟ ಮಾಡುವುದು ಎಷ್ಟರ ಮಟ್ಟಿಗೆ ಸರಿ!..ಕೇವಲ ಮತ ಗಳಿಕೆಗೋಸ್ಕರ ಮಾತ್ರ ನಾನು ಬಡವರ ಬಂಧು…ಅದು ..ಇದು.. ಎಂದು ಬೊಗಳೆ ಬಿಡುವ ಸಿದ್ದರಾಮಯ್ಯನವರ ಮತ್ತೊಂದು ಮುಖ ಅನಾವರಣಗೊಂಡತಾಯ್ತು…ಈ ಬಾರಿ ಶಾಸಕ ಕೆ.ಎನ್ ರಾಜಣ್ಣ ಮನೆಯಲ್ಲಿ ಉಪಹಾರ ಸೇವನೆ ಮಾಡಿದ್ದಾರೆ…


ಕೆಲವು ದಿನಗಳ ಹಿಂದೆ ಕೂಡಾ ಬೆಳ್ಳಿ ತಟ್ಟೆಯಲ್ಲಿ ಊಟ ಮಾಡಿ ಸುದ್ದಿಯಲ್ಲಿದ್ದರು. ಆ ದಿನ ಮಂತ್ರಿಯೊಬ್ಬನ ಊಟದ ಖರ್ಚೇ ಎಂದು ಮೂಗಿಗೆ ಬೆರಳಿಡಬಹುದು. ಆದರೆ ಇದು ಸತ್ಯವಾದ ವಿಷಯ. ಈ ವಿಷಯ ರಾಜ್ಯವನ್ನು ಮಾತ್ರವಲ್ಲದೇ ದೇಶವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ. ಜಿಲ್ಲೆಯಲ್ಲಿ ನಡೆದ ಸಾಧನಾ ಸಮಾವೇಶ ಸಂದರ್ಭದಲ್ಲೂ ಕೂಡಾ ಸಿಎಂ ಸಿದ್ದರಾಮಯ್ಯ ಮತ್ತು ತಂಡ ಬೆಳ್ಳಿ ತಟ್ಟೆಯಲ್ಲಿ ಊಟ ಮಾಡಿರುವುದು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ. ಸಿಎಂ ಡಿಸೆಂಬರ್.16ರ ರಾತ್ರಿ ಕಲಬುರಗಿ ನಗರದಲ್ಲಿರುವ ಐಒನ್ ಶಾಹಿ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದರು. ರಾತ್ರಿ ಸಿಎಂ ಸಿದ್ದರಾಮಯ್ಯ, ಸಚಿವರಾದ ಎಂ.ಬಿ ಪಾಟೀಲ್, ಪ್ರಿಯಾಂಕ್ ಖರ್ಗೆ, ಶಾಸಕ ಅಜಯ್ ಸಿಂಗ್ ಸೇರಿದಂತೆ ಕೆಲವು ಮುಖಂಡರು ಹಾಗೂ ಅಧಿಕಾರಿಗಳು ಬೆಳ್ಳಿ ತಟ್ಟೆಯಲ್ಲಿ ಭರ್ಜರಿ ಭೋಜನ ಸವಿದಿದ್ದಾರೆ ಎನ್ನಲಾಗುತ್ತಿದೆ.

ಕಲಬುರಗಿ ಐವಾನ್ ಇ ಶಾಹಿ ಗೆಸ್ಟ್ ಹೌಸ್ ನಲ್ಲಿ ಊಟವನ್ನು ಆಯೋಜಿಸಲಾಗಿತ್ತು. ಸಿಎಂಗೋಸ್ಕರ ಶರಣ ಪ್ರಕಾಶ್ ಪಾಟೀಲ್ ಬೆಳ್ಳಿ ತಟ್ಟೆಯಲ್ಲಿ ಊಟ ಆಯೋಜಿಸಿದ್ದರು. 1 ಊಟಕ್ಕೆ 800 ರೂಪಾಯಿಯಂತೆ 1000 ಜನರಿಗೆ ಊಟ ವ್ಯವಸ್ಥೆ ಮಾಡಲಾಗಿತ್ತು. ಉಸ್ತುವಾರಿ ಸಚಿವರು 10 ಲಕ್ಷ ರೂಗಳನ್ನು ನೀರಿನಂತೆ ಖರ್ಚು ಮಾಡಿದ್ದಾರೆ. ರೈತರ ಉದ್ದು, ಹೆಸರು, ತೊಗರಿ ಬೆಳೆಗೆ ಉತ್ತಮ ಬೆಲೆ ಕೊಡಿಸಲು ಆಗಿಲ್ಲ. ಸಿಎಂ ಮೆಚ್ಚಿಸುವುದಕ್ಕೆ ಬೆಳ್ಳಿ ತಟ್ಟೆಯಲ್ಲಿ ಭರ್ಜರಿ ಭೋಜನ ವ್ಯವಸ್ಥೆ ಮಾಡಿದ್ದು ಸರಿನಾ? ಸರ್ಕಾರಿ ಖರ್ಚಿನಲ್ಲಿ ಮೋಜಿ ಮಸ್ತಿ ಮಾಡಿದ್ದಾರೆ ಎಂದು ರಾಜಕುಮಾರ ಪಾಟೀಲ್ ಆರೋಪಿಸಿದ್ದಾರೆ.

ಸಿಎಂ ಅವರಿಗೆ ಭೂರಿ ಬೋಜನ ಮಾಡಿಸಿದ್ದು ಸ್ವತಃ ಕಾಂಗ್ರೆಸ್‍ನ ಮುಖಂಡರೊಬ್ಬರು ಎಂಬುವುದು ಸದ್ಯ ಕಾಂಗ್ರೆಸ್‍ನ ಲೀಡರ್ ಒಬ್ಬರು ಬಾಯಿಬಿಟ್ಟಿದ್ದರು. ಇತ್ತ ಅಡುಗೆ ಭಟ್ಟರು ಸೇರಿ ಇಡೀ ಟೀಮ್‍ನ್ನು ಹೈದ್ರಾಬಾದ್ ನಿಂದ ಕರೆಸಲಾಗಿತ್ತು.!! ಸುಮಾರು 50ಕ್ಕೂ ಅಧಿಕ ಜನರು ಈ ತಂಡದಲ್ಲಿದ್ದು ಒಂದು ಊಟಕ್ಕೆ 800ರೂ. ನೀಡಲಾಗಿದೆ ಎನ್ನಲಾಗುತ್ತಿದೆ. ಇನ್ನೂ 500ಕ್ಕಿಂತ ಅಧಿಕ ಊಟದ ಆರ್ಡರ್ ಇವರಿಗೆ ನೀಡಲಾಗಿತ್ತು. ಆದ್ರೇ ಅಂದು ರಾತ್ರಿ ಊಟ ಮಾಡಿದ್ದು ಸುಮಾರು 200ಕ್ಕೂ ಅಧಿಕ ಜನರು. ಇದರಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ಕಾರ್ಯಕರ್ತರು ಊಟ ಮಾಡಿದ್ದು,ಇವರಿಗೆ ಮಾತ್ರ ಪ್ಲಾಸ್ಟಿಕ್ ತಟ್ಟೆಯಲ್ಲಿ ಊಟ ನೀಡಲಾಗಿತ್ತು.

ಇನ್ನು ಸಿಎಂ ಸಿದ್ದರಾಮಯ್ಯ ಅಫಜಲಪುರ್ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಮಾಲಿಕಯ್ಯ ಗುತ್ತೆದಾರ್ ಅವರಿಂದ ಬಂಗಾರದ ಕಿರೀಟವನ್ನು ಉಡುಗೊರೆಯಾಗಿ ಪಡೆದುಕೊಂಡಿರುವುದೂ ಟೀಕೆಗೆ ಗುರಿಯಾಗಿದ್ದರು… ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಸಿದ್ದರಾಮಯ್ಯ ಸರಕಾರ ಕೊಟ್ಟಿದ್ದು ಸಾವಿರ ರೂಪಾಯಿಗಳ ಪರಿಹಾರ.!! ಬೆಳ್ಳಿ ತಟ್ಟೆಯಲ್ಲಿ ಊಟ ಮಾಡಿದ್ದಲ್ಲದೆ, ಸಿಎಂ ಮನೆಯ ಬಿಸ್ಕೆಟ್ ಖರ್ಚು ಲಕ್ಷಾಂತರ ರೂಪಾಯಿ ಅನ್ನೋದು ನಿಮಗೆ ಗೊತ್ತಾ?

ಹೌದು. ಕಳೆದ 4 ವರ್ಷಗಳಲ್ಲಿ ಸಿಎಂ ಸಿದ್ದರಾಮಯ್ಯ ತಮ್ಮ ಕಾವೇರಿ ಮನೆ ಹಾಗೂ ಗೃಹ ಕಚೇರಿ ಕೃಷ್ಣದಲ್ಲಿನ ಮನೆಗೆ ಕಾಫಿ, ಟೀ, ಬಿಸ್ಕೆಟ್ ಹಾಗೂ ನೀರಿಗೆ ಬರೋಬ್ಬರಿ 60 ಲಕ್ಷ ಹಣ ಖರ್ಚು ಮಾಡಿದ್ದಾರೆ. ಗಣ್ಯರು, ಅತಿಗಣ್ಯರಿಗೆ ಲೆಕ್ಕ ಬಿಟ್ಟು ಇದು ಕೇವಲ ಸಿಎಂ ನಿವಾಸಕ್ಕೆ ಆಗಿರೋ ಖರ್ಚು ಮಾತ್ರ. ಈ ವಿಚಾರ ಈಗ ಮಾಹಿತಿ ಹಕ್ಕು ಕಾಯ್ದೆಯಡಿ ಬಯಲಾಗಿದೆ.

2013-2014 ಸಾಲಿನಲ್ಲಿ ಬಿಸ್ಕೆಟ್‍ಗೆ 3.65 ಲಕ್ಷ ರೂ. ಖರ್ಚು ಮಾಡಲಾಗಿದೆ. ಕಾಫಿ, ಟೀ, ಮಿನರಲ್ ವಾಟರ್ಗೆ 10 ಲಕ್ಷ ರೂ. ಖರ್ಚು ಮಾಡಲಾಗಿದ್ದು, ಒಟ್ಟಾರೆ 13.65 ಲಕ್ಷ ರೂ. ಕಾಫಿ, ಟೀ, ಬಿಸ್ಕೆಟ್‍ಗೆ ಖರ್ಚು ಮಾಡಲಾಗಿದೆ. ಇದೇ ರೀತಿ 2014-15ರಲ್ಲಿ ಬಿಸ್ಕೆಟ್‍ಗೆ 4.56 ಲಕ್ಷ, ಕಾಫಿ, ಟೀ, ನೀರಿಗೆ 6.5 ಲಕ್ಷ ರೂ. ಖರ್ಚು ಮಾಡಲಾಗಿದೆ. 2015-16ರಲ್ಲಿ ಬಿಸ್ಕೆಟ್‍ಗೆ 4.56 ಲಕ್ಷ ರೂ., ಕಾಫಿ, ಟೀ, ನೀರಿಗೆ 6.7 ಲಕ್ಷ ರೂ. ಖರ್ಚಾಗಿದೆ.

2016-17 ಸಾಲಿನಲ್ಲಿ ಬಿಸ್ಕೆಟ್ ಗೆ 4.5 ಲಕ್ಷ ರೂ., ಕಾಫಿ,ಟೀ,ನೀರು 7 ಲಕ್ಷ ರೂ. ವೆಚ್ಚ ಮಾಡಿದರೆ 2017-18 ನೇ ಸಾಲಿನಲ್ಲಿ ಬಿಸ್ಕೆಟ್‍ಗೆ 4.5 ಲಕ್ಷ ರೂ., ಕಾಫಿ, ಟೀ, ನೀರು 7.2 ಲಕ್ಷ ರೂ. ಖರ್ಚಾಗಿದೆ. ಒಟ್ಟಾರೆ ಬಿಸ್ಕೆಟ್‍ಗೆ 22 ಲಕ್ಷ ರೂ. ಖರ್ಚಾಗಿದ್ದು ಕಾಫಿ, ಟೀ, ನೀರಿಗೆ 38 ಲಕ್ಷ ರೂಪಾಯಿ ಆಗಿದೆ.

ಇನ್ನೊಂದು ಇಂಟ್ರಸ್ಟಿಂಗ್ ವಿಷಯ ಅಂದ್ರೆ ನಾಲ್ಕು ವರ್ಷಗಳಲ್ಲಿ ಬಿಸ್ಕೆಟ್ ಖರೀದಿಗೆ ಪ್ರತೀ ವರ್ಷ ನೀಡಿರೋದು 4.5 ಲಕ್ಷ ರೂ. ಯಾವ ವರ್ಷವೂ ಒಂದು ರೂಪಾಯಿ ಹೆಚ್ಚು ಕಡಿಮೆ ಆಗಿಲ್ಲ. ಅದೇ ರೀತಿ ನೀರಿಗೂ ಕೂಡ 1.75 ಲಕ್ಷ ರೂ. ಪ್ರತಿ ವರ್ಷ ಬಿಲ್ ಮಾಡಲಾಗಿದೆ. ಇಷ್ಟು ಲೆಕ್ಕ ಜಸ್ಟ್ ಸಿಎಂ ನಿವಾಸಕ್ಕೆ ಮಾತ್ರ. ಸಿಎಂ ನಿವಾಸಕ್ಕೆ ಬರೋ ಗಣ್ಯರು, ಅತೀ ಗಣ್ಯರಿಗೆ ಬಿಟ್ಟು ಖರ್ಚು ಮಾಡಿರೋ ಲೆಕ್ಕ ಇದು….

ಹೀಗೆ ತಾನು ಶಾಲು ಪಂಚೆ ದಿಂಬು ಕಂಬಳಿ ಅಂತ ಖರ್ಚು ಮಾಡಿದ್ದೇ ಮಾಡಿದ್ದು… ಇದಕ್ಕೆಲ್ಲಾ ಮಾಡಿದ ಖರ್ಚು ಲೆಕ್ಕಕ್ಕೆ ಸಿಗದಿರುವಂತಹದ್ದು….ಒಂದು ಕಡೆಯಲ್ಲಿ ರಾಜ್ಯದಲ್ಲಿ ಅದೆಷ್ಟೋ ಜನ ಊಟವಿಲ್ಲದೆ ಪರದಾಡುತ್ತಿದ್ದಾರೆ. ಇದೆಲ್ಲಾ ಇವರಿಗೆಲ್ಲಿ ಕಾಣಬೇಕು…ಈ ಸಿಎಂ ಸಿದ್ದುರವರಿಗೆ ಮಾತ್ರ ಐಷಾರಾಮಿ ಜೀವನ ನಡೆಸಬೇಕು ಅಷ್ಟೇ….!! ಯಾವಾಗ ನೋಡಿದರೂ ಇತರನ್ನು ಟಿಕಿಸುತ್ತಿರುವ ಬದಲು ನಿಮ್ಮನ್ನು ನೀವು ತಿದ್ದಿಕೊಳ್ಳಿ..

 

-ಪವಿತ್ರ

Tags

Related Articles

Close