ಅಂಕಣ

ಮುಂಚೆ ಕಾಶ್ಮೀರದಲ್ಲಿ ಹತ್ಯೆಯಾಗುತ್ತಿದ್ದ ಸೈನಿಕರ ಬದಲಾಗಿ ಕ್ರಮೇಣ ಉಗ್ರರೇ ಹತರಾಗಲು ಪ್ರಾರಂಭವಾದ ಕಾರಣವೇನು ಗೊತ್ತೇ?

ನಿಜಕ್ಕೂ ಗ್ರೇಟ್!! ಒಂದು ಕಡೆ ಭಾರತವನ್ನು ಎತ್ತರಕ್ಕೆ ಕೊಂಡೊಯ್ಯುವ ಪ್ರಧಾನಿ ನರೇಂದ್ರ ಮೋದಿ…. ಮತ್ತೊಂದು ಕಡೆ ಭಾರತವನ್ನು ರಕ್ಷಿಸಲು ಸರ್ವ ರೀತಿಯಲ್ಲಿ ಸನ್ನದ್ಧವಾಗಿರುವ ಸೇನೆ… ಅದಕ್ಕೊಬ್ಬ ಉತ್ಸಾಹಿ ಸೇನಾಧಿಕಾರಿ ಬಿಪಿನ್ ರಾವತ್… ನಿಜಕ್ಕೂ ಹೆಮ್ಮೆ ಎನಿಸುತ್ತದೆ. ಪಾಕಿಸ್ತಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂಲೆಗುಂಪು ಮಾಡಿದ ಭಾರತ ಅತ್ತ ಪಾಕ್ ಪ್ರೇರಿತ ಭಯೋತ್ಪಾದನೆಗೂ ತಕ್ಕ ಮದ್ದು ಅರೆಯುತ್ತಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ವಿದ್ವಂಸಕ ಕೃತ್ಯ ನಡೆಸಿ ಮುಗ್ಧರನ್ನು , ಜವಾನರನ್ನು ಹತ್ಯೆಗೊಳಿಸುತ್ತಿದ್ದ ಉಗ್ರ ಸಂಘಟನೆಗಳು ಇಂದು ತನ್ನ ಮುಖ್ಯಸ್ಥರನ್ನೇ
ಕಳೆದುಕೊಳ್ಳುತ್ತಿದೆ ಎಂದರೆ ಇದಕ್ಕಿಂತ ಗುಡ್‍ನ್ಯೂಸ್ ಬೇರೆ ಇದೆಯಾ…. ನಮ್ಮ ಸೇನಾಪಡೆ ಎಷ್ಟು ಮಂದಿ ಉಗ್ರ ಸಂಘಟನೆಯ ಮುಖ್ಯಸ್ಥರನ್ನು ಹೊಸಕಿ ಹಾಕಿದೆ ಗೊತ್ತಾ…? ಉಗ್ರವಾದಿಗಳ ರುಂಡವನ್ನು ಚೆಂಡಾಡುತ್ತಾ, `ಜಗತ್ತಿಗೆ ಭಯೋತ್ಪಾದನೆ ಶತ್ರುವಾಗಿದ್ದು, ಅವರನ್ನು ನಿರ್ದಾಕ್ಷಿಣ್ಯವಾಗಿ ಕೊಂದು ಬಿಡಿ’ ಎಂದು ಇಡೀ ಜಗತ್ತಿಗೆ ಕರೆ ನೀಡುತ್ತಾ ತನ್ನ ಬದ್ಧತೆಯನ್ನು ಭಾರತ ಪ್ರದರ್ಶಿಸುತ್ತಲೇ ಬರುತ್ತಿದೆ. ಇದು ಯಾವ ಮಟ್ಟಕ್ಕೆ ತಲುಪಿದೆ ಎಂದರೆ ಒಂದು ಕಾಲದಲ್ಲಿ ಪಾಕಿಸ್ತಾನವನ್ನು ಹೆಗಲಲ್ಲಿಟ್ಟು ಪೋಷಿಸುತ್ತಿದ್ದ ಚೀನಾ ಕೂಡಾ ಇಂದು ಅದೇ ಪಾಕಿಸ್ತಾನ ಉಗ್ರರನ್ನು ರಫ್ತು ಮಾಡುತ್ತಿದೆ ಎಂದು ಹೇಳುವಂತಾಗಿದೆ.
ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಭಾರತದ ಪರಿಸ್ಥಿತಿ ಹೇಗಿತ್ತು ಗೊತ್ತಾ…? `ಉಗ್ರರ ಜೊತೆ ಗುಂಡಿನ ಚಕಮಕಿ, ಓರ್ವ ಯೋಧ ಸಾವು’ ಇಂತಹುದೇ ಸುದ್ದಿಗಳನ್ನು ಓದುತ್ತಿದ್ದ ನಾವು ಇಂದು ಪತ್ರಿಕೆಗಳ ಪುಟವನ್ನು ತಿರುವಿ ಹಾಕಿದರೆ, `ಕಾಶ್ಮೀರದಲ್ಲಿ ಎನ್‍ಕೌಂಟರ್, ಉಗ್ರ ಮುಖಂಡನ ಹತ್ಯೆ’ ಎಂಬ ಸುದ್ದಿಗಳನ್ನೇ ಓದುವಂತಾಗಿದೆ ಎಂದರೆ ಇದಕ್ಕೆ ಕಾರಣ ಮೋದಿ ಎಂಬ ದಿಟ್ಟ ವ್ಯಕ್ತಿ ಪ್ರಧಾನಿ ಪಟ್ಟದಲ್ಲಿ ಕುಳಿತಿರುವುದೇ ಕಾರಣವಾಗಿದೆ.

ಉಗ್ರರನ್ನು ಕೊಲ್ಲಲು ನಮ್ಮ ಸೇನಾಪಡೆ ನಡೆಸಿದ ಆಪರೇಷನ್ ಹೇಗಿದೆ ಗೊತ್ತಾ..?

ಜಮ್ಮು ಮತ್ತು ಕಾಶ್ಮೀರದ ಜನರನ್ನು ಹಾದಿ ತಪ್ಪಿಸುತ್ತಿದ್ದ ಉಗ್ರ ಸಂಘಟನೆಗಳು ಅವರನ್ನು ತನ್ನ ಗುರಾಣಿಯನ್ನಾಗಿ ಮಾಡುತ್ತಿದ್ದವು. ಅವರಿಗೆ ಸಾಕಷ್ಟು ಹಣ ಕೊಟ್ಟು, ಕಲ್ಲೆಸೆಯಿಸಿ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಲಾಗುತ್ತಿತ್ತು. ಅದಕ್ಕಾಗಿಯೇ ಸೇನಾಪಡೆ ಸ್ಥಳೀಯರ ವಿಶ್ವಾಸವನ್ನು ಪಡೆದುಕೊಂಡು ಸೇನೆಯ ಬಗ್ಗೆ ಸ್ಥಳೀಯರಲ್ಲಿ ಹೆಮ್ಮೆ ಮೂಡುವಂತೆ ಮಾಡಿಸಿದೆ. ಇಂದು ಉಗ್ರರ ಬಗ್ಗೆ ಸ್ಥಳೀಯರೇ ಹೆಚ್ಚಿನ ಮಾಹಿತಿ ಕೊಡುತ್ತಿದ್ದಾರೆ. ಅಲ್ಲದೆ ಉಗ್ರ ಬುರ್ಹಾನ್ ವಾನಿಯ ಹತ್ಯೆಯ ಬಳಿಕ ಕಣಿವೆಯಲ್ಲಿ ಎದ್ದ ಅಶಾಂತತೆ, ಕಲ್ಲೆಸೆತದ ಗಂಭೀರ ಪ್ರಕರಣಗಳು ಇಂದು ವರದಿಯಾಗುತ್ತಲೇ ಇಲ್ಲ ಎಂದರೆ ಭಾರತೀಯ ಸೇನೆ ಸ್ಥಳೀಯರ ವಿಶ್ವಾಸ ಗಳಿಸಿದೆ ಎಂದೇ ಅರ್ಥ ಮಾಡಿಕೊಳ್ಳಬಹುದು.

ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಹತ್ಯೆಯಾದ ಉಗ್ರರೆಷ್ಟು ಗೊತ್ತಾ…. ನೀವು ನಂಬ್ತೀರೋ ಇಲ್ಲವೋ ಗೊತ್ತಿಲ್ಲ. ನಮ್ಮ ಸೇನಾಪಡೆ ಉಗ್ರರನ್ನು
ಭರ್ಜರಿಯಾಗಿ ಬೇಟೆಯಾಡಿದೆ. ಭದ್ರತಾ ಅಧಿಕಾರಿಗಳ ಮಾಹಿತಿಯ ಪ್ರಕಾರ ಬರೇ ಏಳು ತಿಂಗಳ ಅವಧಿಯಲ್ಲಿ ಹತ್ಯೆಯಾದ ಉಗ್ರರೆಷ್ಟು ಗೊತ್ತಾ…. ಬರೋಬ್ಬರಿ
135… ಇದರಲ್ಲಿ ಹತ್ಯೆಯಾದ ಹೆಚ್ಚಿನ ಉಗ್ರರೆಲ್ಲಾ ಕಮಾಂಡರ್‍ಗಳು…. ಯುಪಿಎ ಸರಕಾರ ಸೇನಾಪಡೆಗೆ ಸ್ವಾತಂತ್ರ್ಯವನ್ನು ಕೊಡದ ಕಾರಣ ಉಗ್ರಸಂಘಟನೆಗಳು ತಿಂದುಂಡು ಕೊಬ್ಬಿದ್ದವು. ಆದರೆ ಮೋದಿ ಸರಕಾರ ಬಂದ ಬಳಿಕ ಕಳೆದ ಏಳು ತಿಂಗಳ ಅವಧಿಯಲ್ಲಿ 38 ಲಷ್ಕರೆ ಉಗ್ರರು, 37 ಹಿಜ್ಬುಲ್ ಭಯೋತ್ಪಾದಕರು, ಮೂವರು ಅಲ್‍ಖಾಯಿದಾ ಟೆರರಿಸ್ಟ್‍ಗಳು, 54 ಇನ್ನಿತರ ಉಗ್ರರನ್ನು ನಿರ್ದಾಕ್ಷಿಣ್ಯವಾಗಿ ಕೊಂದುಬಿಡಲಾಗಿದೆ.

ಸರ್ಜಿಕಲ್ ದಾಳಿ ನಡೆಸಿ ಪಾಕಿಸ್ತಾನಕ್ಕೆ ನುಗ್ಗಿ ಬರೋಬ್ಬರಿ 150ಕ್ಕಿಂತಲೂ ಅಧಿಕ ಮಂದಿ ಉಗ್ರರನ್ನು ನಾಶ ಮಾಡಲಾಗಿದ್ದು, ಅವರ ಸೇನಾ ಬಂಕರ್‍ಗಳನ್ನು
ಸಂಪೂರ್ಣವಾಗಿ ನಾಶಗೊಳಿಸಲಾಗಿದೆ. ಈ ಬಿಪಿನ್ ರಾವತ್ ಗುಡುಗಿದ್ದೇನು ಗೊತ್ತಾ… ಅಗತ್ಯಬಿದ್ದರೆ ಮತ್ತೊಮ್ಮೆ ಸರ್ಜಿಕಲ್ ದಾಳಿ ನಡೆಸುತ್ತೇವೆ. ಕಳೆದ ಬಾರಿ
ನಡೆಸಿದ ದಾಳಿ ಜಸ್ಟ್ ಸ್ಯಾಂಪಲ್ ಅಷ್ಟೆ…. ಭಯೋತ್ಪಾದಕರ ಅಡುಗುತಾಣಕ್ಕೆ ದಾಳಿ ನಡೆಸಿ ಅಪಾರ ಪ್ರಮಾಣದ ಶಶ್ತ್ರಾಸ್ತ್ರಗಳನ್ನು ಸೇನಾಪಡೆ ವಶಪಡಿಸಿಕೊಂಡಿದೆ. ಇಷ್ಟು ಎಷ್ಟಿದೆಯೆಂದರೆ ಅದೇ ಉಗ್ರರನ್ನು ಅವರದ್ದೇ ಶಸ್ತ್ರಾಸ್ತ್ರಗಳಿಂದ ಸುಲಭವಾಗಿ ಹೊಸಕಿಹಾಕಬಹುದು. ಉಗ್ರವಾದಿಗಳಿಗೆ ಹಣ ಪೂರೈಸುತ್ತಿದ್ದವರನ್ನೆಲ್ಲಾ ಹಿಡಿದು ಜೈಲಿಗೆ ಹಾಕಲಾಗಿದೆ. ಒಟ್ಟಾರೆ ಹೇಳುವುದಾದರೆ ಉಗ್ರರ ಬೆನ್ನುಮೂಳೆಯನ್ನು ಮುರಿಯಲಾಗಿದೆ.

ಒಂದು ಅಂದಾಜಿನ ಪ್ರಕಾರ ಈಗಾಗಲೇ ಲಷ್ಕರ್, ಹಿಜ್ಬುಲ್ ಸಂಘಟನೆಗಳ 11 ಉನ್ನತ ಕಮಾಂಡರ್‍ಗಳ ತಲೆಯನ್ನು ಉರುಳಿಸಲಾಗಿದೆ. ಇಂದು ಹಲವು
ಸಂಘಟನೆಗಳು ನಾಯಕರಿಲ್ಲದೆ ಕುಸಿಯುವ ಹಂತಕ್ಕೆ ಬಂದು ನಿಂತಿದೆ. ಇದು ಹೀಗೆಯೇ ಮುಂದುವರಿದರೆ ಕೆಲವೇ ತಿಂಗಳಲ್ಲಿ ಕಾಶ್ಮೀರವನ್ನು ಉಗ್ರಮುಕ್ತ ರಾಜ್ಯವನ್ನಾಗಿ ಮಾಡುತ್ತೇವೆ ಎಂದು ಸೇನಾಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ ನಮ್ಮ ಹೆಮ್ಮೆಯ ಸೇನಾಪಡೆ ಎಷ್ಟು ಮಂದಿ ಉಗ್ರ ಕಮಾಂಡರ್‍ಗಳನ್ನು ಹೊಡೆದುರುಳಿಸಿದೆ ಗೊತ್ತಾ?

ಉಗ್ರ ಬುರ್ಹಾನ್ ವಾನಿಯ ತಲೆ ಉರುಳಿಸಿದ ಸೇನೆ:

ಉಗ್ರ ಬುರ್ಹಾನ್‍ವಾನಿ ಎಷ್ಟೊಂದು ಕ್ರೂರಿ ಎಂದರೆ ಈತ 15 ವರ್ಷಕ್ಕೇ ಉಗ್ರವಾದಕ್ಕೆ ಎಂಟ್ರಿ ಕೊಟ್ಟ. ಹಫೀಜ್ ಸಯೀದ್‍ನ ಸಂಪರ್ಕದಲ್ಲಿದ್ದುಕೊಂಡು ಜಾಲತಾಣಗಳ ಬಗ್ಗೆ ಗೀಳು ಇಟ್ಟುಕೊಂಡಿದ್ದ ಆತ ಅದನ್ನು ಭಯೋತ್ಪಾದನೆಗೆ ತಕ್ಕಂತೆ ಬಳಸಿಕೊಂಡ. ಈತ ಭಾರತೀಯ ಸೇನೆಯನ್ನು ಖಳರಂತೆ ಚಿತ್ರಿಸಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದ. ಜನರನ್ನು ಸೇನಾಪಡೆಯ ವಿರುದ್ಧ ಎತ್ತಿಕಟ್ಟಿಸಿ ಅವರಿಂದ ಕಲ್ಲುತೂರಾಟ ಮಾಡಿಸಿದ. ಈತನಿಗೆ ಕೆಲವು ಮಾನವ ಸಂಘಟನಾ ಹಕ್ಕುಗಳು ಬೆಂಬಲಿಸಿದ್ದಲ್ಲದೆ ಆತನನ್ನು ಸ್ವತಂತ್ರಹೋರಾಟಗಾರನಂತೆ ಚಿತ್ರಿಸಿದವು. ಈತ ಹಲವಾರು ಮಂದಿ ಯುವಕರನ್ನು ಭಯೋತ್ಪಾಕರನ್ನಾಗಿ ರೂಪಿಸಿದ. ಮೋಸ್ಟ್ ವಾಂಟೆಡ್ ಪಟ್ಟಿಗೆ ಸೇರಿದ ಬುರ್ಹಾನ್‍ವಾನಿಯ ತಲೆಯನ್ನು ಸೇನಾಪಡೆ ಉರುಳಿಸಿಯೇಬಿಟ್ಟಿತು. ಈತನ ಹತ್ಯೆಯನ್ನು ಹುತಾತ್ಮ ಎಂಬಂತೆ ಪ್ರತ್ಯೇಕತಾವಾದಿಗಳು ಬಿಂಬಿಸಿದರು. ಆತನ ಶವಯಾತ್ರೆ ನಡೆದ ಕಡೆ ತೀವ್ರ ಹಿಂಸಾಚಾರ ನಡೆಯಿತು. ಆ ಬಳಿಕ ಕಲ್ಲು ತೂರಾಟ ಘಟನೆಯೂ ನಡೆಯಿತು. ಈತನ ಹತ್ಯೆಯ ಬಳಿಕ ಕಾಶ್ಮೀರ ಮತ್ತಷ್ಟು ಅಪಾಯಕ್ಕೆ ಸಿಲುಕಬಹುದು ಎಂದು ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಎಚ್ಚರಿಕೆಯನ್ನೂ ನೀಡಿದರು. ಆದರೆ ಯಾವುದನ್ನೂ ಕ್ಯಾರ್ ಮಾಡದ ಸೇನಾಪಡೆ ಅಡ್ಡ ಬಂದ ಉಗ್ರರನ್ನು ಮುಲಾಜಿಲ್ಲದೆ ಹೊಸಕಿ ಹಾಕಿತು.

ಅಬು ದುಜಾನಾ: 

ಲಷ್ಕರ್ ಇ ತೈಬಾ ಸಂಘಟನೆಯ ಕಮಾಂಡರ್ ಆಗಿದ್ದ ಅಬು ದುಜಾನಾ ಪಾಂಪೆÇೀರ್‍ನ ಸಿಆರ್‍ಪಿಎಫ್ ಕ್ಯಾಂಪ್‍ನ ಮೇಲೆ ದಾಳಿ ಯೋಜಿಸಿದ ಪಾತಕಿ. ಈತನ ತಲೆಗೆ 15 ಲಕ್ಷ ರೂ. ಹಣ ಕಟ್ಟಲಾಗಿತ್ತು. ಬುರ್ಹಾನ್‍ವಾನಿ ಹತ್ಯೆಯ ಬಳಿಕ ನಡೆದ ಪ್ರತಿಭಟನೆಗೆ ಈತ ಮುಸುಕುಧರಿಸಿ ಭಾಗವಹಿಸಿ ಪ್ರಚೋದನಕಾರಿ ಭಾಷಣ ಮಾಡಿದ್ದನಂತೆ. ಪುಲ್ವಾಮಾ ಕೇಂದ್ರವಾಗಿಟ್ಟುಕೊಂಡು, ದಕ್ಷಿಣ ಕಾಶ್ಮೀರದಲ್ಲಿ ಕಾರ್ಯಾಚರಿಸುತ್ತಿದ್ದ ಈತ ಲಷ್ಕರ್ ತೊರೆದು ಅಲ್‍ಖೈದಾ ಸೇರಿದ್ದ. ಹಲವಾರು ಬಾರಿ ತಪ್ಪಿಸಿಕೊಂಡ ಈತ ಹರ್ಕಿಪೆÇರಾ ಗ್ರಾಮದಲ್ಲಿ ಸಿಕ್ಕಿಬಿದ್ದ. ಈತನಿಗೆ ಅಧಿಕಾರಿಗಳು ಶರಣಾಗುವಂತೆ ಅಧಿಕಾರಿ ಸೂಚಿಸಿದರೂ ಪ್ರತಿದಾಳಿ ನಡೆಸಲು ಮುಂದಾದಾಗ ಈತನನ್ನು ಎನ್‍ಕೌಂಟರ್‍ನಲ್ಲಿ ಮುಗಿಸಲಾಯಿತು.

ಬಷೀರ್ ಲಷ್ಕರಿ :

ಲಷ್ಕರ್ ಇ ತೈಬಾ ಸಂಘಟನೆಯ ಕಮಾಂಡರ್ ಆಗಿದ್ದ 28 ವರ್ಷದ ಬಷೀರ್ ಲಷ್ಕರಿ ಅನಂತನಾಗ್‍ನಲ್ಲಿ ಸ್ಟೇಷನ್‍ಹೌಸ್ ಅಧಿಕಾರಿ ಹಾಗೂ ಐವರು ಪೆÇಲೀಸರ
ಹತ್ಯೆಯಲ್ಲಿ ಈತನ ಕೈವಾಡವಿದೆ. ಪೊಲೀಸರ ಹಿಟ್‍ಲಿಸ್ಟ್‍ನಲ್ಲಿದ್ದ ಬಷೀರ್‍ನ ತಲೆಗೆ 10 ಲಕ್ಷ ರೂ ಕಟ್ಟಲಾಗಿತ್ತು. ಬೇರೆ ಬೇರೆ ಉಗ್ರ ಸಂಘಟನೆಯ ಜೊತೆ
ನಿಕಟವರ್ತಿಯಾಗಿದ್ದ ಈತ ಹುಡುಗರನ್ನು ಉಗ್ರ ತಂಡಕ್ಕೆ ಸೇರಿಸುತ್ತಿದ್ದ. ಈತನನ್ನು ಅನಂತನಾಗ್ ಜಿಲ್ಲೆಯ ದೈಲ್‍ಗಾಂವ್ ಹಳ್ಳಿಯಲ್ಲಿ ಮುಗಿಸಲಾಯಿತು. ಆಗ
ಸ್ಥಳೀಯರು ಕಾರ್ಯಾಚರಣೆಗೆ ತಡೆಯೊಡ್ಡಿದ್ದರು. ಈ ವೇಳೆ ಗುಂಡಿಗೆ ಇಬ್ಬರು ನಾಗರಿಕರು ಹತರಾಗಿದ್ದರು.

ಯಾಸಿನ್ ಯಾತೂ :

ಪ್ರಚೋದನಕಾರಿ ಭಾಷಣ ಮಾಡುವ ಯಾಸಿನ್ ಯಾತೂ ಅಲಿಯಾಸ್ ಮಹಮದ್ ಘಜ್ನವಿ ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಕಮಾಂಡರ್ ಆಗಿದ್ದ. ತೆಹ್ರೀಕ್ ಇ ಹರಿಯತ್ ಸಂಘಟನೆಯಲ್ಲಿದ್ದ ಈತ ಕೊನೆಗೆ ಹಿಜ್ಬುಲ್ ಸಂಘಟನೆಗೆ ಸೇರಿದ್ದ. ಖತರನಾಕ್ ಮೈಂಡೆಡ್ ಆಗಿದ್ದ ಈತ ಯಾವುದೇ ವಿಧ್ವಂಸಕ ಕೃತ್ಯ ನಡೆಸಲು ನಿಸ್ಸೀಮನಾಗಿದ್ದ. ಗೆರಿಲ್ಲಾದಲ್ಲಿ ಪರಿಣತಿ ಹೊಂದಿದ್ದ ಈತ ಸೇನಾಪಡೆಗೆ ದೊಡ್ಡ ತಲೆನೋವಾಗಿದ್ದ. ಈತ ಅಡಗಿಕೊಂಡಿದ್ದ ಶೋಪಿಯಾನ್‍ನ ಅವ್ನೇರಾ ಹಳ್ಳಿಗೆ ದಾಳಿ ನಡೆಸಿದಾಗ ಪೊಲೀಸರಿಂದ ತಪ್ಪಿಸಿಕೊಳ್ಳಲು ತಾನು ಸತ್ತಿರುವಂತೆ ಬಿಂಬಿಸಿಸ ನಾಟಕವಾಡಿ ಶವಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದ್ದ. ಆದರೆ ಸೇನಾಪಡೆ ಅನುಮಾನದಿಂದ ದಾಳಿ ನಡೆಸಿದಾಗ ಅತ್ತ ಕಡೆಯಿಂದಲೂ ಗುಂಡಿನ ಪ್ರತಿದಾಳಿ ನಡೆಯಿತು. ಒಂದು ದಿನ ಕಾರ್ಯಾಚರಣೆ ನಡೆಸಿದ ಬಳಿಕ ಯಾಸಿನ್‍ನ ಹೆಣ ಉರುಳಿಬಿದ್ದಿತು.

ಅಯೂಬ್ ಲೆಲ್ಹರಿ :

ಈತ ಕೂಡಾ ಲಷ್ಕರ್ ಇ ತೈಬಾ ಸಂಘಟನೆಯ ಕಮಾಂಡರ್. ಉಗ್ರರನ್ನು ವಾಹನಗಳಲ್ಲಿ ಸಾಗಿಸುವುದರಲ್ಲಿ, ಉಗ್ರರಿಗೆ ಕಮಾಂಡರ್ ತರಬೇತಿ ನೀಡುವುದರಲ್ಲ
ನಿಸ್ಸೀಮನಾಗಿದ್ದ. ಸಂಘಟನೆಗೆ ಜನ ಸೇರಿಸುವುದರಲ್ಲಿ ಇವನಷ್ಟು ಪಳಗಿದವರು ಬೇರ್ಯಾರೂ ಇರಲಿಲ್ಲ. ಸಂಬೂರಾ ಹಳ್ಳಿಯ ಚೆಕ್‍ಪೋಸ್ಟ್ ಬಳಿ ಈತನ ವಾಹನವನ್ನು ತಡೆದಾಗ ಆತ ದಾಳಿ ನಡೆಸಿದ. ಈ ವೇಳೆ ಅಲ್ಲಿಂದ ತಪ್ಪಿಸಿಕೊಂಡು ಪಲಾಯನ ಮಾಡುತ್ತಿದ್ದಾಗ ಹೆದ್ದಾರಿಯಲ್ಲಿ ಸೈನಿಕರು ಜೀಪನ್ನು ತಡೆದು ಎನ್‍ಕೌಂಟರ್‍ನಲ್ಲಿ ಮುಗಿಸಿದರು. ಈತನ ಹತ್ಯೆ ಉಗ್ರರಿಗೆ ದೊಡ್ಡ ಹೊಡೆತವಾಗಿದೆ.

ಸಬ್ಝಾರ್ ಅಹ್ಮದ್ ಭಟ್ :
ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಈತ ಬುರ್ಹಾನ್‍ವಾನಿಯ ಉತ್ತರಾಧಿಕಾರಿಯೆಂದೇ ಬಿಂಬಿಸಲ್ಪಟ್ಟಿದ್ದ. ಬುರ್ಹಾನ್ ವಾನಿಯ
ಅಣ್ಣ ಮುಝಾಫರ್‍ನನ್ನು ಸೇನೆ ಕೊಂದಾಗ, ಆತನ ಶವಸಂಸ್ಕಾರದಲ್ಲಿ ಭಾಗವಹಿಸಿದ್ದ ಸಬ್ಝಾರ್, ಶವಯಾತ್ರೆಯ ವೇಳೆ ಸಿಆರ್‍ಪಿಎಫ್ ಯೋಧನೊಬ್ಬನ ರೈಫಲ್
ಕಸಿದುಕೊಂಡು ಪರಾರಿಯಾಗಿ ಭೂಗತನಾಗಿದ್ದ. ಈತನಿಗೆ 10 ಲಕ್ಷ ತಲೆದಂಡವಿತ್ತು. ವಾನಿಯಂತೆ ಈತ ಕೂಡಾ ಜಾಲತಾಣಗಳಲ್ಲಿ ವೈರಲ್ ಆಗಿದ್ದ. ಈತನನ್ನು
ಟ್ರಾಲ್‍ನ ಸೈಮೂ ಎಂಬ ಗ್ರಾಮದಲ್ಲಿ ಕೊಲ್ಲಲಾಯಿತು. ಈತನನ್ನೂ ಸಹ ಸ್ಥಳೀಯರು ರಕ್ಷಿಸಲು ನೋಡಿದ್ದರು.

ಜುನೈದ್ ಮತ್ತೂ
ಲಷ್ಕರ್ ಇ ತೈಬಾ ಸಂಘಟನೆಯ ಕಮಾಂಡರ್ ಆಗಿರುವ ಜುನೈದ್ ಇಬ್ಬರು ಪೊಲೀಸರನ್ನು ಹತ್ಯೆ ನಡೆಸಿದ್ದ. ಇದಕ್ಕಾಗಿ ಆತನನ್ನು ಕಮಾಂಡರ್ ಆಗಿ
ನೇಮಿಸಲಾಯಿತು. ನುಸುಳುಕೋರರಿಗೆ ಅಡಗುತಾಣ ಕಲ್ಪಿಸುವುದರಲ್ಲಿ ನಿಸ್ಸೀಮನಾಗಿದ್ದ. ಅರ್ವಾನಿಯಲ್ಲಿ ಈತನಿದ್ದ ಕಟ್ಟಡವನ್ನು ಸೈನ್ಯ ಸುತ್ತುವರಿದಾಗ ಸ್ಥಳೀಯರು ತಡೆ ಒಡ್ಡಿದರು. ಕೊನೆಗೆ ತಡೆಯಲಾರದೆ ಮನೆಯೊಳಗಿನಿಂದ ಸೈನಿಕರತ್ತ ಗುಂಡು ಹಾರಿಸಿದ. ಸುಮಾರು 9 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಈತನನ್ನು ಮತ್ತು ಈತನ ಇಬ್ಬರು ಸಹಾಯಕರನ್ನು ಮುಗಿಸಿ ಈತನ ಅಡಗಿದ್ದ ಕಟ್ಟಡವನ್ನೇ ಧ್ವಂಸಗೊಳಿಸಲಾಯಿತು. ದುರದೃಷ್ಟವಶಾತ್ ಇಬ್ಬರು ನಾಗರಿಕರೂ ಹತರಾದರು.

ಪರ್ವೇಜ್ ಅಹ್ಮದ್ :

ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಕಮಾಂಡರ್ ಆಗಿರುವ ಈತ ಖಯೂಮ್ ನಜರ್ ಎಂಬಾತ ಹಿಜ್ಬುಲ್ ತೊರೆದು ಹೋದ ನಂತರ ಅದರ ಕಮಾಂಡರ್ ಆದ. ಈತನನ್ನು ಚೆಕ್ ಎ ಬ್ರಾತ್ ಹಳ್ಳಿಯಲ್ಲಿ ಭದ್ರತಾ ಪಡೆಗಳು ಕೊಂದು ಹಾಕಿದ್ದಾರೆ. ಇವನ ಹತ್ಯೆ ಹಿಜ್ಬುಲ್ ಸಂಘಟನೆಯ ಬಲ ಕಳೆದುಕೊಂಡಿದೆ ಎಂದೇ ಹೇಳಬಹುದು.

ಅಖೀಬ್ ಮೋಲ್ವಿ :

ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಕಮಾಂಡರ್ ಆಗಿರುವ ಈತ ಇಸ್ಲಾಂ ವಿಸ್ತರಣಾವಾದಿ ಮತ್ತು ವಾಗ್ಮಿ. ಪ್ರಚೋದನಕಾರಿ ಭಾಷಣ ಮಾಡಿ ಫೇಸ್‍ಬುಕ್
ವಾಟ್ಸಾಪ್‍ಗಳಲ್ಲಿ ಹರಿಯಬಿಡುತ್ತಿದ್ದ. ಹಿಜ್ಬುಲ್‍ನ ಕಮಾಂಡರ್ ಪಟ್ಟಕ್ಕೇರಿ ಟ್ರಾಲ್‍ನ ನಜ್ನೀನ್ ಪೆÇರಾ ಹಳ್ಳಿಯಲ್ಲಿ ಪೆÇಲೀಸರೊಂದಿಗೆ ಗುಂಡಿನ ಚಕಮಕಿ ನಡೆಸಿ
ಹತ್ಯೆಗೊಂಡ. ಸತ್ತ. ಈತನ ಜೊತೆಗೆ ಜೈಷೆ ಮೊಹ್ಮದ್ ಸಂಘಟನೆಯ ಉಗ್ರ ಒಸಾಮಾ ಎಂಬವನೂ ಮೃತಪಟ್ಟ.

ಮುಝಾಫರ್ ಅಹ್ಮದ್ ನೈಕೂ ಅಲಿಯಾಸ್ ಮುಝ್ ಮೋಲ್ವಿ ಅಲ್ ಬದ್ರ್ ಸಂಘಟನೆಯಲ್ಲಿದ್ದುಕೊಂಡು ವಿಧ್ವಂಸಕ ಕೃತ್ಯ ನಡೆಸುತ್ತಿದ್ದ. ಈತನ ಸಂಘಟನೆಗೆ ಪಾಕಿಸ್ತಾನ ನಿಷೇಧ ಹೇರಿತ್ತು. ಕಾಶ್ಮೀರಕ್ಕೆ ಬಂದಿದ್ದ ಈತನ
ಸಹಚರರನ್ನೆಲ್ಲಾ ಪೊಲೀಸರು ಕೊಂದು ಹಾಕಿದ್ದರು. ಸೋಪೆÇೀರ್ ಜಿಲ್ಲೆಯಲ್ಲಿ ನಡೆದ ಅನೇಕ ನಾಗರಿಕರ, ಪೆÇಲೀಸರ ಹತ್ಯೆಗಳಿಗೆ ಕಾರಣನಾಗಿದ್ದಾನೆ.
ಶ್ರೀನಗರದಲ್ಲಿ ಈತನ ಹತ್ಯೆಯಾಯಿತು. ಈತನ ಹತ್ಯೆಯೊಂದಿಗೆ ಅಲ್ ಬದ್ರ್ ಉಗ್ರ ಸಂಘಟನೆ ನಾಮಾವಶೇಷಗೊಂಡಿದೆ ಎಂದೇ ಹೇಳಬಹುದು.

ಅಬು ಮುಸೈಬ್ ಲಷ್ಕರ್ ಈ ತೈಬಾ ಸಂಘಟನೆಯ ಈತನನ್ನು ಹತ್ಯೆನಡೆಸಿರುವುದು ದೊಡ್ಡ ತಲೆನೋವೊಂದು ನಿವಾರಣೆಯಾದಂತಾಗಿದೆ. ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ ಅಬು ಮುಸೈಬ್ ಹತ್ಯೆಗೆ ಸೇನಾಪಡೆ ಭಾರೀ ಪ್ರಯತ್ನ ನಡೆಸಿತ್ತು. ಬಂಡಿಪೆÇರಾ ಮತ್ತು ಗಂದೇರ್‍ಬಾಲ್ ಜಿಲ್ಲೆಯನ್ನು ನೆಲೆಯಾಗಿಟ್ಟುಕೊಂಡಿದ್ದ ಈತ ಒಮ್ಮೆ ಶ್ರೀನಗರದ ನೌಹಟ್ಟಾದಲ್ಲಿ ಸಿಆರ್‍ಪಿಎಫ್ ನೆಲೆಯ ಮೇಲೆ ನಡೆದ ದಾಳಿ ನಡೆಸಿದ್ದ. ಈತನನ್ನು ಕಾಶ್ಮೀರದ ಹಾಜಿನ್‍ನಲ್ಲಿ ಹತ್ಯೆ ನಡೆಸಲಾಯಿತು.

ಅಬು ಇಸ್ಮಾಯಿಲ್

ಅಮರನಾಥ ಯಾತ್ರಿಕರ ಬಸ್‍ಗೆಎ ದಾಳಿ ನಡೆಸಿ 8 ಮಂದಿಯನ್ನು ಕೊಂದ ಮಹಾಪಾತಕಿಯಾದ ಅಬು ಇಸ್ಮಾಯಿಲ್‍ನನ್ನು ಶ್ರೀನಗರದ ಅರಿಬಾದ್‍ನಲ್ಲಿ ಹತ್ಯೆ ನಡೆಸಿ ರಿವೆಂಜ್ ತೀರಿಸಿದರು. ಅಬು ದುಜಾನಾನ ಬಳಿಕ ಲಷ್ಕರ್‍ನ ಕಮಾಂಡರ್ ಆಗಿ ತಲೆನೋವಾಗಿ ಪರಿಣಮಿಸಿದ್ದ. ಈತನೊಂದಿಗೆ ಈತನ ಬಲಗೈ ಬಂಟ ಛೋಟಾ ಖಾಸಿಂನನ್ನೂ ಮುಗಿಸಲಾಯಿತು.

ಕಾಂಗ್ರೆಸ್ ಸರಕಾರ ಭಾರತವನ್ನು ಇಷ್ಟು ವರ್ಷಗಳ ಕಾಲ ಆಳಿದೆ. ಆದರೆ ಇಷ್ಟೊಂದು ಉಗ್ರರನ್ನು ಹೊಡೆದುರುಳಿಸಲು ಮೋದಿಯೇ ಬರಬೇಕಾಯಿತು. ಇಂದು ಕಣಿವೆ ರಾಜ್ಯದಲ್ಲಿ ಭಯೋತ್ಪಾದನೆ ನಿಧಾನವಾಗಿ ಕಡಿಮೆಯಾಗುತ್ತಾ ಬರುತ್ತಿದೆ. ಸಾಧಾರಣವಾಗಿ ಸಾಕಷ್ಟು ಉಗ್ರ ಕಮಾಂಡರ್‍ಗಳು ಹೇಳಹೆಸರಿಲ್ಲದಂತೆ
ನಾಶವಾಗಿರುವುದರಿಂದ ಸೇನಾಪಡೆಗೆ ಸಿಕ್ಕ ಭರ್ಜರಿ ಯಶಸ್ವಿ ಎಂದೇ ಹೇಳಬಹುದು. ಮೋದಿ ಸರಕಾರ ಸೇನಾಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿರುವುದರಿಂದ ಉಗ್ರರನ್ನು ಹುಡುಕಿ ಹುಡುಕಿ ಹೊಸಕಿ ಹಾಕುತ್ತಿದೆ.

-ಚೇಕಿತಾನ

Tags

Related Articles

Close