ಪ್ರಚಲಿತ

ಮುಂದಿನ ಚುನಾವಣೆಯೊಳಗೆ ಮೋದಿ, ಯೋಗಿಯನ್ನು ಮುಗಿಸಿ ಬಿಡಿ! ಭಾರತದಲ್ಲಿ ಬಿಜೆಪಿ ಮುಖಂಡರು ಯಾರೂ ಉಳಿಯಬಾರದು.!

ಬಿಜೆಪಿ ಪಕ್ಷದ ಉನ್ನತಿಯನ್ನು ಸಹಿಸಲಾರದೆ ಭಯೋತ್ಷಾದನಾ ಸಂಘಟನೆಗಳೀಗ ದೊಡ್ಡದೊಂದು ಮಾಸ್ಟರ್ ಪ್ಲ್ಯಾನ್ ಮಾಡಿದೆ. ಕಾಶ್ಮೀರ ಸೇರಿದಂತೆ ಭಾರತದಾದ್ಯಂತ ಉಗ್ರ ಚಟುವಟಿಕೆಗೆ ಕಡಿವಾಣ ಬೀಳುತ್ತಿರುವುದರಿಂದ ಕಂಗಾಲಾಗಿರುವ ಭಯೋತ್ಪಾದನಾ ಸಂಘಟನೆಗಳೀಗ ಬಿಜೆಪಿ ಮುಖಂಡರೂ ಸೇರಿದಂತೆ ಕಮಲ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳನ್ನು ಹತ್ಯೆಗೈಯ್ಯಲು ಸಂಚು ರೂಪಿಸಿರುವ ಆತಂಕಕಾರಿ ಮಾಹಿತಿ ಬಹಿರಂಗಗೊಂಡಿದೆ.!!

ಒಂದೆಡೆ ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳ ಜತೆಗೆ ಉಗ್ರ ಚಟುವಟಿಕೆಗಳನ್ನು ಸೇನಾಪಡೆ ಯಶಸ್ವಿಯಾಗಿ ಹತ್ತಿಕ್ಕುತ್ತಿದ್ದರೆ ಮತ್ತೊಂದೆಡೆ ಐಸಿಸ್ ಬೇರುಗಳಿಗೆ ಕತ್ತರಿ ಬೀಳುತ್ತಿರುವುದು ಉಗ್ರರ ನಿದ್ದೆಗೆಡಿಸಿದೆ. ಇದರ ಜತೆಯಲ್ಲೇ ಜಾಗತಿಕವಾಗಿ ಹೆಚ್ಚುತ್ತಿರುವ ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ, ವಿದೇಶಗಳ ಎದುರು ಪಾಕ್‍ನ ಭಯೋತ್ಪಾದನೆ ಪೆÇೀಷಣೆ ಮುಖ ಬಯಲು ಮಾಡುತ್ತಿರುವ ಕೇಂದ್ರ ಸರ್ಕಾರದ ರಾಜತಾಂತ್ರಿಕ ನಡೆ ವಿರುದ್ಧ ಸೇಡು ತೀರಿಸಿಕೊಳ್ಳುವ ಕ್ರಮವಾಗಿ ಉಗ್ರರು ಈ ಸಂಚು ರೂಪಿಸಿದ್ದಾರೆನ್ನಲಾಗಿದೆ.

ಆಫ್ಘನ್ ಉಗ್ರ ಪಡೆ:

ಗುಪ್ತಚರ ದಳದ ಮಾಹಿತಿ ಪ್ರಕಾರ ಕಳೆದ ವಾರ ನಡೆದ ವಿಶೇಷ ಸಭೆಯಲ್ಲಿ ಜೈಷ್-ಎ-ಮೊಹಮ್ಮದ್ ಸಂಘಟನೆ ಮುಖ್ಯಸ್ಥ ಮೌಲಾನ ಮಸೂದ್ ಅಜರ್ ಲಷ್ಕರ್ -ಎ-ತೊಯ್ಬಾ ಜತೆ ಕೈಜೋಡಿಸಿ ಬಿಜೆಪಿ ನಾಯಕರ ವಿರುದ್ಧ ದಾಳಿಗೆ ಸಿದ್ಧತೆ ನಡೆಸಿದ್ದಾನೆಂದು ತಿಳಿದುಬಂದಿದೆ. ಅಫ್ಘಾನಿಸ್ತಾನದಲ್ಲಿ ವಿಶೇಷ ತರಬೇತಿ ಪಡೆದಿರುವ ಪ್ರತ್ಯೇಕ ಉಗ್ರರ ಪಡೆಯನ್ನು ಇದಕ್ಕೆಂದು ಕಾಶ್ಮೀರ ಮೂಲಕ ಭಾರತಕ್ಕೆ ನುಸುಳಿಸಲಾಗಿದೆ ಎಂದು ಗುಪ್ತಚರ ಅಧಿಕಾರಿಗಳು ತಿಳಿಸಿದ್ದಾರೆ.

ಯೋಗಿ ಆದಿತ್ಯನಾಥರ ಮೇಲೆ ಕಣ್ಣು:

ಅಹಮದಾಬಾದ್ ಸ್ಪೋಟದ ಸಂಚುಕೋರ ಅಬು ಬಶೀರ್ ಪರವಾಗಿ ನಿಂತಿದ್ದ ಮುಖಂಡರ ವಿರುದ್ಧ 2008ರಲ್ಲಿ ಯೋಗಿ ಆದಿತ್ಯನಾಥ ಆಕ್ರೋಶ ವ್ಯಕ್ತಪಡಿಸಿದ್ದರು. ಸೆ.7, 2008ರಂದು ಅಜಂಗಢಕ್ಕೆ 40 ವಾಹನಗಳಲ್ಲಿ ಯೋಗಿ ಜತೆಗೆ ಹಿಂದು ಯುವ ವಾಹಿನಿ ಕಾರ್ಯಕರ್ತರು ತೆರಳುತ್ತಿದ್ದಾಗ ದಿಢೀರ್ ದಾಳಿ ನಡೆದಿತ್ತು. ಮುನ್ನೆಚ್ಚರಿಕೆಯಾಗಿ ಯೋಗಿ ಇದ್ದ ಕೆಂಪು ಬಣ್ಣದ ವಾಹನ ಸಾಲಿನಲ್ಲಿ ಏಳನೇ ಸ್ಥಾನದಲ್ಲಿತ್ತು. ಅಜಂಗಢ ತಲುಪುವ ಮುನ್ನ ಟಾಕಿಯಾದಲ್ಲಿ ಏಳನೇ ಕಾರನ್ನು ಗುರಿಯಾಗಿಸಿ ಇದ್ದಕ್ಕಿದ್ದಂತೆ ಕಲ್ಲುಗಳು ತೂರಿಬರಲಾರಂಭಿಸಿದವು. ಕೆಲವೇ ಕ್ಷಣದಲ್ಲಿ ಹತ್ತಾರು ಪೆಟ್ರೋಲ್ ಬಾಂಬ್‍ಗಳ ಸುರಿಮಳೆಯಾಯಿತು. ದುಷ್ಕರ್ವಿಗಳು ಚಾಕು, ಪಿಸ್ತೂಲ್ ಹಿಡಿದು ಕಾರನ್ನು ಸುತ್ತುವರಿದ ಒಳನುಗ್ಗಿದಾಗ ಯೋಗಿ ಕಾರಿನಲ್ಲಿರಲಿಲ್ಲ. ಅದಕ್ಕೆ ಕೆಲವೇ ಕ್ಷಣಗಳ ಹಿಂದೆ ಪ್ರಯಾಣದ ಆಯಾಸ ನಿವಾರಣೆಗೆಂದು ವಾಹನಗಳನ್ನು ಹಿಂದಿನ ವಿಶ್ರಾಂತಿ ಗೃಹದ ಬಳಿ ನಿಲ್ಲಿಸಿದ್ದಾಗ ಯೋಗಿ ಮೊದಲನೇ ಕಾರಿಗೆ ಶಿಫ್ಟ್ ಆಗಿದ್ದರು. ದಾಳಿಯಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡು, ಒಬ್ಬ ಮೃತಪಟ್ಟಿದ್ದ.ಹೀಗಾಗಿ ಅಂದು ಯೋಗಿ ಆದಿತ್ಯನಾಥರು ಪಾರಾಗಿದ್ದರು.

ಕುಂಭಮೇಳಕ್ಕೂ ಆತಂಕ:

ಯುರೋಪಿಯನ್ ರಾಷ್ಟ್ರಗಳಲ್ಲಿ ಸಾರ್ವಜನಿಕರನ್ನು ಗುರಿಯಾಗಿಸಿ ಐಸಿಸ್ ನಡೆಸುತ್ತಿರುವ ಒಂಟಿ ತೋಳ ಮಾದರಿ ದಾಳಿ ಕುಂಭಮೇಳದಂಥ ಜನಸಂದಣಿಯಲ್ಲಿ ನಡೆಯುವ ಅಪಾಯದ ಹಿನ್ನೆಲೆ ರಾಷ್ಟ್ರೀಯ ಭದ್ರತಾ ಪಡೆ (ಎನ್‍ಎಸ್‍ಜಿ) ಎಚ್ಚೆತ್ತಿದೆ. ದಾಳಿ ತಡೆಗೆ ವಿಶೇಷ ತರಬೇತಿ ಪಡೆಯಲು ಕಮಾಂಡೋಗಳನ್ನು ವಿದೇಶಗಳಿಗೆ ಕಳುಹಿಸಲು ಎನ್‍ಎಸ್‍ಜಿ ಸಿದ್ಧತೆ ನಡೆಸಿದೆ. ವಿಶ್ವದ ಪ್ರಮುಖ ನಗರಗಳಲ್ಲಿ ಟ್ರಕ್ ಹರಿಸುವ ಮೂಲಕ ಮತ್ತು ಗನ್ ಹಿಡಿದು ಸಾರ್ವಜನಿಕ ಜಮಾವಣೆ ಮಧ್ಯೆ ಎರಗಿ ಐಸಿಸ್ ದಾಳಿ ನಡೆಸುತ್ತಿದೆ. ಲಾಸ್ ವೆಗಾಸ್‍ನಲ್ಲಿ ನಡೆದ ದಾಳಿ ಉಲ್ಲೇಖಿಸಿ ಭಾರತದಲ್ಲಿಯೂ ನರಹತ್ಯೆ ನಡೆಯಲಿದೆ ಎಂದು ಇತ್ತೀಚೆಗೆ 10 ನಿಮಿಷದ ಆಡಿಯೋ ಕ್ಲಿಪ್‍ನಲ್ಲಿ ಉಗ್ರರು ಎಚ್ಚರಿಸಿದ್ದರು.

ಸಚಿವರು, ಸಿಎಂ ಟಾರ್ಗೆಟ್:

ಕೇಂದ್ರ ಸಂಪುಟದ ಹಿರಿಯ ಸಚಿವರ ಜತೆಗೆ ಪ್ರಭಾವಿ ಬಿಜೆಪಿ ಮುಖಂಡರ ಪಟ್ಟಿಯನ್ನು ಈ ಹಂತಕ ಪಡೆಗೆ ನೀಡಲಾಗಿದೆ!!… ಕನಿಷ್ಠ ಭದ್ರತೆಯೊಂದಿಗೆ ಸಂಚರಿಸುವ ಮುಖ್ಯಮಂತ್ರಿಗಳ ಮೇಲೆ ಮೊದಲ ದಾಳಿ ನಡೆಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಢಾಕಾದಲ್ಲಿ ಉಗ್ರರು ಅಡಗಿಕೊಂಡು ತರಬೇತಿ ಪಡೆಯುತ್ತಿರುವ ಮಾಹಿತಿ ಮೇರೆಗೆ ವಿದೇಶಿ ಗುಪ್ತಚರ ಸಂಸ್ಥೆಯ ತಂಡವೊಂದು ಭೇಟಿ ನೀಡಿದಾಗ ಉಗ್ರರು ಜಾಗ ಖಾಲಿಮಾಡಿರುವುದು ತಿಳಿದುಬಂದಿದೆ. ಇವರು ಕಾಶ್ಮೀರ ಅಥವಾ ದೆಹಲಿಯಲ್ಲಿ ಅಡಗಿರುವ ಶಂಕೆಯಿದೆ. ಪಂಜಾಬ್ ಪ್ರಾಂತ್ಯದಲ್ಲಿ ಆರ್‍ಎಸ್‍ಎಸ್ ಮುಖಂಡರನ್ನು ಗುರಿಯಾಗಿಸಿ ಇತ್ತೀಚೆಗೆ ನಡೆದ ಸರಣಿ ಹತ್ಯೆಗಳಿಗೂ ಉಗ್ರರ ನಂಟಿರುವುದು ತಿಳಿದುಬಂದಿತ್ತು.

200 ಉಗ್ರರು ಫಿನಿಷ್, 25 ಯೋಧರು ಹುತಾತ್ಮ:

ಉತ್ತರ ಕಾಶ್ಮೀರದ ಹಂದ್ವಾರದಲ್ಲಿ ಸೇನಾ ಕಾರ್ಯಾಚರಣೆಯಲ್ಲಿ ಮಂಗಳವಾರ 3 ಉಗ್ರರನ್ನು ಹೊಡೆದುರುಳಿಸಿದ ಬೆನ್ನಿಗೆ 2017ರಲ್ಲಿ ಹತ್ಯೆಯಾದ ಉಗ್ರರ ಸಂಖ್ಯೆ 200ರ ಗಡಿ ದಾಟಿದೆ. ಕಳೆದ 11 ತಿಂಗಳಲ್ಲಿ 202 ಉಗ್ರರನ್ನು ಜಮ್ಮು ಮತ್ತು ಕಾಶ್ಮೀರ ಪೆÇಲೀಸ್, ಸೇನೆ ಮತ್ತು ಸಿಆರ್‍ಪಿಎಫ್ ಜಂಟಿ ಕಾರ್ಯಾಚರಣೆಯಲ್ಲಿ ಕಣಿವೆ ರಾಜ್ಯದಲ್ಲಿ ಹತ್ಯೆಗೈಯಲಾಗಿದೆ. ಪಾಕಿಸ್ತಾನ ಪೆÇೀಷಿತ ಲಷ್ಕರ್-ಎ- ತೊಯ್ಬಾ, ಜೈಷ್-ಎ-ಮೊಹಮ್ಮದ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ 25ಕ್ಕೂ ಹೆಚ್ಚು ಮುಖಂಡರು ಬಲಿಯಾಗಿದ್ದಾರೆ. ಸೇನಾ ನೆಲೆ ಮತ್ತು ಪಡೆಗಳನ್ನು ಗುರಿಯಾಗಿಸಿ ಉಗ್ರರಿಂದ ದಾಳಿ ಪ್ರಮಾಣದಲ್ಲಿ ಇಳಿಕೆಯಾಗಿದ್ದರೆ, ಸೆಪ್ಟೆಂಬರ್ ವರೆಗೆ 291 ಅಕ್ರಮ ನುಸುಳುವಿಕೆ ಪ್ರಕರಣಗಳು ವರದಿಯಾಗಿದ್ದು, ಗಣನೀಯ ಏರಿಕೆ ಕಂಡುಬಂದಿದೆ.

source:http://vijayavani.net/%E0%B2%AC%E0%B2%BF%E0%B2%9C%E0%B3%86%E0%B2%AA%E0%B2%BF%E0%B2%97%E0%B2%B0-%E0%B2%AE%E0%B3%86%E0%B3%95%E0%B2%B2%E0%B3%80%E0%B2%97-%E0%B2%86%E0%B2%AB%E0%B3%8D%E0%B2%98%E0%B2%A8%E0%B3%8D-%E0%B2%89/

-ಪವಿತ್ರ

Tags

Related Articles

Close