ಅಂಕಣ

ಮುಸಲ್ಮಾನನೆನ್ನುವ ಕಾರಣಕ್ಕೆ ಕಾಂಗ್ರೆಸ್ಸಿಗೆ ಒಬ್ಬ ಉಗ್ರನೂ ಅಳಿಯನಾಗಿಬಿಟ್ಟಿದ್ದ! ಅದೇ, ಒಬ್ಬ ನಿರಪರಾಧಿ ಹಿಂದೂ ಮಹಿಳೆ ಮಾತ್ರ ಜೈಲಿನಲ್ಲಿ ನರಳುತ್ತಿದ್ದಳು!

ಅಜ್ಮಲ್ ಕಸಬ್ ನನ್ನು ಅಳಿಯಂತೆ ಗೌರವದಿಂದ ನೋಡಿಕೊಂಡ ಕಾಂಗ್ರೆಸ್ ಸಾಧ್ವಿಗೇಕೆ ಹೀಗೆ ಮಾಡಿತು? ಹಿಂದುವಾಗಿ ಹುಟ್ಟಿದ್ದೇ ತಪ್ಪಾ? ಎಲ್ಲಿದೆ ನ್ಯಾಯಾಂಗ
ವ್ಯವಸ್ಥೆ? ಈ ಲೇಖನ ಪೂರ್ತಿ ಓದಿದ ಮೇಲೆ ಮೇಲಿನ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಖಂಡಿತವಾಗಿಯೂ ಮೂಡುತ್ತೆ. ಪ್ರಜಾಪ್ರಭತ್ವದ ಅತಿ ದೊಡ್ಡ ದೇಶವಾಗಿರುವ ಭಾರತ ಕಾಂಗ್ರೆಸ್ ನಿಂದ ಆಳಲ್ಪಟ್ಟು ಪಾಪಿಗಳಿಗೆ ಸತ್ಕಾರ , ನಿರಪರಾಧಿಗಳಿಗೆ ಶಿಕ್ಷೆ ಆದಂತಿದೆ. ಹಾಗಾದರೆ ನ್ಯಾಯಾಂಗ ವ್ಯವಸ್ಥೆಗೆ ತಾಕತ್ತೆ ಇಲ್ವಾ? ಹೌದು ಸಾಧ್ವಿಗೆ ಆದ ಅನ್ಯಾಯವನ್ನು ಗಮನಿಸಿದರೆ ನಮ್ಮ ನ್ಯಾಯಾಂಗ ವ್ಯವಸ್ಥೆಯ ಮೇಲೆ ಅನುಮಾನ ಬರುತ್ತೆ. ಕಾಂಗ್ರೆಸ್ ನ ದೃಷ್ಟಿಯಲ್ಲಿ ಹಿಂದುವಾಗಿ ಹುಟ್ಟಿದ್ದೇ ತಪ್ಪಾದಂತಿದೆ.

ಅದು 2008 ಮಾಲೆಗಾಂವ್ ನಲ್ಲಿ ಒಂದು ಮಸೀದಿಯ ಹತ್ತಿರ ಬಾಂಬ್ ಸ್ಪೋಟಗೊಂಡು 35ಕ್ಕೂ ಹೆಚ್ಚು ಜನ ಮೃತರಾಗಿದ್ದರು. ಈ ಬಾಂಬ್ ಸ್ಪೋಟಕ್ಕೆ ತುಂಬಾ ದಿನಗಳ ಹಿಂದೆಯೇ ಯೋಜನೆ ನಡೆದಿತ್ತು. ಪಾಕಿಸ್ತಾನದ ಇಬ್ಬರು ಭಯೋತ್ಪಾದಕರು ಮತ್ತು ಆ ಭಯೋತ್ಪಾದಕರಿಗೆ ಬೆಂಬಲ ಕೊಟ್ಟಿದ್ದು ಮಾಲೆಗಾಂವ್ ನ ಸ್ಥಳೀಯ ಏಳು ಜನ ಮುಸಲ್ಮಾನರು. ಬಾಂಬ್ ಸ್ಪೋಟಗೊಂಡ ಸ್ವಲ್ಪ ದಿನಗಳಲ್ಲೇ ಆ ಕೃತ್ಯದಲ್ಲಿ ಪಾಲ್ಗೊಂಡ ಇಬ್ಬರು ಭಯೋತ್ಪಾದಕರು ಮತ್ತು ಅವರಿಗೆ ಬೆಂಬಲ ಕೊಟ್ಟ ಏಳು ಜನ ಸ್ಥಳಿಯರು ಸಿಕ್ಕಿಬಿದ್ದರು. ಅವರನ್ನು ಬಂಧಿಸಿ ಬಾಯಿಬಿಡಿಸಿದಾಗ ಹಿಂದೂ-ಮುಸ್ಲಿಂಮರ ನಡುವೆ ಗಲಭೆಯೆಬ್ಬಿಸುವ ಸಲುವಾಗಿ ಆ ಸ್ಪೋಟ ಮಾಡಲಾಗಿತ್ತು. ಈ ಸುದ್ದಿಯೇನೋ ಹೊರಬಿತ್ತು ಆದರೆ ಮಾಧ್ಯಮಗಳು ಜನರಿಗೆ ಮಾತ್ರ ತಲುಪಿಸಲಿಲ್ಲ. ಬದಲಿಗೆ ಬಾಂಬ್ ಸ್ಪೋಟಗೊಂಡ ದಿನ ಆ ಮಸೀದಿಯ ಹತ್ತಿರ ಸಾಧ್ವಿ ಪ್ರಜ್ಞಾರ ಬೈಕ್ ಸಿಕ್ಕಿತೆಂಬ ಕಾರಣಕ್ಕೆ ಅವರನ್ನು ಟಾರ್ಗೆಟ್ ಮಾಡಲು ಕಾಂಗ್ರೆಸ್ ಪೋಲಿಸರಿಗೆ ಸೂಚಿಸಿತು. ಕಾಂಗ್ರೆಸ್ ನ ದೃಷ್ಟಿಯಲ್ಲಿ ಹಿಂದುವಾಗಿ ಹುಟ್ಟಿದ್ದೇ ತಪ್ಪು. ಅದು ನೆಹರೂ ಕಾಲದಿಂದ ಹಿಡಿದು ಇಂದಿನ ರಾಹುಲ್ ಗಾಂಧಿಯವರೆಗೆ ನಡೆದುಕೊಂಡು ಬಂದಿದೆ. ಕಾಂಗ್ರೆಸ್ ಅದೇಶದ ಮೇರೆಗೆ ಪೋಲಿಸರು ಸಾಧ್ವಿ ಪ್ರಜ್ಞಾರ ಬೈಕ್ ಮಸೀದಿಯ ಸಮೀಪ ಇದ್ದಿತೆಂಬ ಕಾರಣಕ್ಕಾಗಿ ಅದನ್ನೇ ಮುಂದಿಟ್ಟುಕೊಂಡು ಸಾಧ್ವಿ ಪ್ರಜ್ಞಾರನ್ನು ಹಿಡಿಯಲು ಹೊರಟಾಗ ಯಾವುದೇ ಸಾಕ್ಷಿಗಳು ಸಿಗಲಿಲ್ಲ. ಆಗ ಪೋಲಿಸರು ಸ್ವಾಮಿ ಆಸೀಮಾನಂದರನ್ನು ಬಂಧಿಸಿ ಚಿತ್ರಹಿಂಸೆ ಕೊಟ್ಟು ತಪ್ಪೊಪ್ಪಿಗೆ ಬರೆಸಿಕೊಂಡರು ಜೊತೆಗೆ ಸಾಧ್ವಿ ಪ್ರಜ್ಞಾರ ಹೆಸರನ್ನೂ ಬರೆಸಿಕೊಂಡಿದ್ದರು. ಇದೇ ತರ ಆಗಬೇಕು , ಇದೇ ತರ ಸಾಧ್ವಿಯನ್ನು ಸಿಕ್ಕಿಹಾಕಿಸಿ ಬಂಧಿಸಬೇಕು ಎಂಬ ಯೋಜನೆ ಮತ್ತು ಆದೇಶವನ್ನು ಅಂದಿನ ಕಾಂಗ್ರೆಸ್ ಸರ್ಕಾರ ಪೋಲಿಸರಿಗೆ ಹೇಳಿತ್ತು.

Related image

ಸಾಧ್ವಿ ಪ್ರಜ್ಞಾರನ್ನು ಟಾರ್ಗೆಟ್ ಮಾಡಿದ್ದು ಯಾಕೆ ಗೊತ್ತಾ? ಸಾಧ್ವಿ ಪ್ರಜ್ಞಾ ಅಕ್ಷರಶಃ ಬೆಂಕಿ ಚೆಂಡು , ಅವರ ಮಾತು ಮತ್ತು ಭಾಷಣಗಳಿಂದ ಹಿಂದುಗಳಿಗೆ ಉತ್ಸಾಹ
ಬಂದಿತ್ತು ಅನೇಕರು ಪರಿವರ್ತನೆಯಾಗಿದ್ದರು. ಇದನ್ನು ಕಂಡ ಕಾಂಗ್ರೆಸ್ ಸಾಧ್ವಿ ಪ್ರಜ್ಞಾರನ್ನು ಮಟ್ಟಹಾಕಲೇಬೇಕೆಂಬ ನಿರ್ಧಾರ ಮಾಡಿ ಸುಳ್ಳು ಅರೋಪ ಹೊರೆಸಿ ಕೇಸ್ ಹಾಕುವ ಯೋಜನೆ ಮಾಡಿತ್ತು. ನೆಹರೂ ಕಾಲದಿಂದಲೂ ಕಾಂಗ್ರೆಸ್ ಹಿಂದೂ ವಿರೋಧಿನೀತಿಯನ್ನೇ ಅನುಸರಿಸಿಕೊಂಡು ಬಂದಿದೆ. ಅದು ಇಂದಿಗೂ ನಿಂತಿಲ್ಲ. ಅಷ್ಟಕ್ಕೂ ಹಿಂದೂ ಸಂತರನ್ನೇ ಟಾರ್ಗೆಟ್ ಮಾಡುವುದೇಕೆ? ಈ ರೀತಿ ಟಾರ್ಗೆಟ್ ಮಾಡಿ ಹಿಂದುಗಳನ್ನು ಹೆದರಿಸಿ ಭಾರತವನ್ನು ಇಸ್ಲಾಮೀಕರಣ , ಕ್ರೈಸ್ತೀಕರಣ ಮಾಡುವ ಉದ್ದೇಶವಾ?

ಅಂದು ಮಹಾರಾಷ್ಟ್ರ ಪೋಲಿಸ್ ಮತ್ತು ಅಂದಿನ ಕಾಂಗ್ರೆಸ್ ಸರ್ಕಾರದ ಆದೇಶದ ಮೇರೆಗೆ ಯಾವುದೇ ಸಾಕ್ಷಿ ಸಿಗದಿದ್ದರೂ ಸಾಧ್ವಿ ಪ್ರಜ್ಞಾಸಿಂಗ್ ರನ್ನು
ಬಂಧಿಸಿತು. ಅಂದಿನ ಸರ್ಕಾರಕ್ಕೆ ಆ ಬಾಂಬ್ ಸ್ಪೋಟಗೊಂಡಿದ್ದು ದೊಡ್ಡ ವಿಷಯವೇ ಆಗಿರಲಿಲ್ಲ , ಬಾಂಬ್ ಸ್ಪೋಟವನ್ನು ಮಾಡಿದವರನ್ನು ಹಿಡಿಯುವುದಿರಲಿ ಅವರಿಗೆ ಬೆಂಗಾವಲಾಗಿ ನಿಂತಿತ್ತು. ಅಂದಿನ ಸರ್ಕಾರಕ್ಕೆ ದೊಡ್ಡ ವಿಷಯವಾಗಿದ್ದು ಸಾಧ್ವಿ ಪ್ರಜ್ಞಾ ಹಿಂದೂವಾಗಿದ್ದು , ಹಿಂದುಗಳ ಪರ ಇದ್ದದ್ದು , ಹಿಂದುಗಳ ಪರ ಮಾತಾನಾಡಿ ಹಿಂದೂ ಪಕ್ಷಕ್ಕೆ ಬೆಂಬಲ ಕೊಡಿ ಎಂದದ್ದು ಮಾತ್ರ. ಅಂದ್ರೆ ನಾವು ಹಿಂದುವಾಗಿ ಹುಟ್ಟಿದ್ದೇ ತಪ್ಪಾ?

ಸಾಧ್ವಿ ಪ್ರಜ್ಞಾರನ್ನು ಬಂಧಿಸಿದ ಮಹಾರಾಷ್ಟ್ರದ ಪೋಲಿಸ್ ಇಲಾಖೆ ಕೊಡಬಾರದಷ್ಟು ಹಿಂಸೆಯನ್ನು ಕೊಟ್ಟಿತು. ಸಾಧ್ವಿ ಬೆನ್ನು ಮೂಳೆ ಸಮಸ್ಯೆಯಿಂದ ಬಳಲುತ್ತಿದ್ದಾಗ ಪೋಲಿಸ್ ಇಲಾಖೆ ಒಂದು ಅಂಬುಲೆನ್ಸ್ ವ್ಯವಸ್ಥೆ ಮಾಡಿಲಿಲ್ಲ. ಬೆನ್ನು ಮೂಳೆ ಸಮಸ್ಯೆಯಿಂದ ಬಳಲುತ್ತಿದ್ದ ಸಾಧ್ವಿಯನ್ನು ಗೌರವಯುತವಾಗಿ ಅಂಬುಲೆನ್ಸ ನಲ್ಲಿ ಒಯ್ಯುವುದಿರಲಿ , ಸರ್ಕಾರಿ ಜೀಪಿನಲ್ಲೇ ಕುಳ್ಳಿರಿಸಿಕೊಂಡು ಆಸ್ಪತ್ರೆಗೆ ಒಯ್ಯಲಾಗಿತ್ತು. ಆ ಸಮಸ್ಯೆ ಕಡಿಮೆಯಾಗುವ ಮೊದಲೇ ಅವರನ್ನು ಪುನಃ ಜೈಲಿಗೆ ಒಯ್ದು ಹಿಂಸಿಸಲಾಗಿತ್ತು. ಇಲ್ಲಿ ಹಿಂದೂ ಸಮಾಜ ಒಂದು ಅವಲೋಕನ ಮಾಡಿಕೊಳ್ಳಲೇಬೇಕು. ಮುಂಬೈ ತಾಜ್ ಹೊಟೇಲ್ ಅಟ್ಯಾಕ್(26/11) ಮಾಡಿ ಸಿಕ್ಕಿ ಬಿದ್ದ ಕಸಬ್ ನನ್ನು ಅಳಿಯನಂತೆ ಗೌರವದಿಂದ ನೋಡಿಕೊಂಡಿದ್ದರು. ಕಸಬ್ ನನ್ನು ಅಳಿಯನಂತೆ ಗೌರವದಿಂದ ನೋಡಿಕೊಂಡಿದ್ದ ಪೋಲಿಸರು ಸಾಧ್ಬಿಗೇಕೆ ಹೀಗೆ ಮಾಡಿದರು? ಅಂದ್ರೆ ನಾವು ಹಿಂದುವಾಗಿ ಹುಟ್ಟಿದ್ದೇ ತಪ್ಪಾ? ಕಾಂಗ್ರೆಸ್ ಗೆ ಇಂತಹ ಅನೇಕ ನಕಲಿ ಮುಖಗಳಿವೆ. ಅದನ್ನ ಬಯಲಿಗೆಳೆದರೆ ಯಾವುದೇ ಹಿಂದೂ ಯಾವತ್ತಿಗೂ ಕಾಂಗ್ರೆಸ್ ನ ಕಡೆ ತಿರುಗಿಯೂ ನೋಡಲ್ಲ , ನೋಡಲೂ ಬಾರದು. ನೋಡಿದರೆ ಅದು ಈ ದೇಶಕ್ಕೆ ಎಸಗುವ ದ್ರೋಹವೆನ್ನಬಹುದು.

ಸಾಧ್ವಿ ಪ್ರಜ್ಞಾ 2009 ಜುಲೈ 19ರಂದು ತನಗೆ ಜೈಲಿನಲ್ಲಿ ಅತ್ಯಂತ ದಾರುಣವಾಗೊ ಹಿಂಸಿಸುತ್ತಿದ್ದಾರೆ ಎಂದು ಮಾಧ್ಯಮಗಳಿಗೆ ಪತ್ರ ಬರೆದಿದ್ದರು. ಆದರೆ ಮಾಧ್ಯಮಗಳು ಕಿವಿಗೆ ಹಾಕಿಕೊಳ್ಳಲಿಲ್ಲ ಯಾಕಂದ್ರೆ ಬರೆದದ್ದು ಮುಸಲ್ಮಾನ , ಕ್ರಿಶ್ಚಿಯನ್ನರಲ್ಲವಲ್ಲ. ಮಾಧ್ಯಮದವರೇ ನಾವು ಹಿಂದುವಾಗಿ ಹುಟ್ಟಿದ್ದೇ ತಪ್ಪಾ? ಮಾಧ್ಯಮದವರೇ ಅನ್ಯ ಧರ್ಮೀಯರು ಈ ತರ ಪತ್ರ ಬರೆದಿದ್ದರೆ ಲಬೋ ಲಬೋ ಅಂತ ಬಾಯಿ ಬಡ್ಕೊಳ್ತಿದ್ರಿ ಅದೇ ಹಿಂದುಗಳು ಬರೆದರೆ ನಿಮ್ಮದು ನೀರಸ ಪ್ರತಿಕ್ರಿಯೆ ಅಂದ್ರೆ ನಿಮಗೆ ಇದರಿಂದ ಎಜಲು ಕಾಸು ಸಿಗುತ್ತಾ? 2010ರ ವೇಳೆಗೆ ಸಾಧ್ವಿ ಪ್ರಜ್ಞಾರಿಗೆ ಕ್ಯಾನ್ಸರ್ ಆಗಿ ಅದು ಮೂರನೇ ಹಂತದಲ್ಲಿತ್ತು ಆಗಲೂ ಮಾಧ್ಯಮದವರು ಬಾಯಿ ಬಿಚ್ಚಲೇ ಇಲ್ಲ , ಮಾನವ ಹಕ್ಕು ಹೋರಾಟಗಾರರು ಲಬೋ ಲಬೋ ಅಂತ ಹೊಯ್ಕೊಳ್ಳಲೇ ಇಲ್ಲ. ನಾಗರಿಕರ ಕಿವಿಗೆ ಈ ಸುದ್ಧಿ ಬೀಳಲೇ ಇಲ್ಲ. ಅಂದ್ರೆ ನಾವು ಹಿಂದುವಾಗಿ ಹುಟ್ಟಿದ್ದೇ ತಪ್ಪಾ?

Image result for sadhvi pragya singh thakur

ಇನ್ನು ನ್ಯಾಯಾಂಗ ವ್ಯವಸ್ಥೆ ಕಡೆ ಗಮನ ಹರಿಸಿದರೆ, 2g ಹಗರಣದ ಆರೋಪಿಗಳಿಗೆಲ್ಲಾ ಗೌರವಯುತವಾಗಿ ಜಾಮೀನು ಕೊಟ್ಟು ಕಳುಹಿಸಿದ ನ್ಯಾಯಾಲಯ ಸಾಧ್ವಿಗೆ ಮಾತ್ರ ಜಾಮೀನು ಕೊಡಲು ನಿರಕಾರಿಸಿತ್ತು. ಆ ಸ್ಪೋಟ ಮಾಡಿದ ಭಯೋತ್ಪಾದಕರು 2011ರೊಳಗೆ ಜಾಮೀನು ತೆಗೆದುಕೊಂಡು ಮನೆಯಲ್ಲಿ ಆರಾಮಾಗಿ ಮುಂದಿನ ಯೋಜನೆಯಲ್ಲಿ ನಿರತರಾಗಿಬಿಟ್ಟರು. ಆದರೆ ಸಾಧ್ವಿಗೆ ಮಾತ್ರ 2017 ಎಪ್ರಿಲ್ ವರೆಗೆ ನ್ಯಾಯಾಲಯ ಜಾಮೀನು ಕೊಡಲೇ ಇಲ್ಲ. ಸಾಧ್ವಿ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಕೂಡಾ ಜಾಮೀನು ಕೊಡಲು ನ್ಯಾಯಾಲಯ ನಿರಾಕರಿಸಿತ್ತು. 2g ಹಗರಣದ ಅರೋಪಿಗಳಿಗೆ ಜಾಮೀನು ನಿರಕಾರಿಸುವ ಕುರಿತು ಜನ ಮಾತನಾಡಿದರೆ , ವಿಶೇಷ ಪೀಠದ ನ್ಯಾಯಾಧೀಶರು ಜಾಮೀನು ನಿರಾಕರಿಸಲಾಗುವುದಿಲ್ಲ. ಜಾಮೀನು ಕೊಡಬೇಕಾಗುತ್ತದೆ. ಜಾಮೀನು ನಿರಾಕರಿಸುವುದೆಂದರೆ ಸಂವಿಧಾನದತ್ತ ವ್ಯಕ್ತಿ ಸ್ವಾತಂತ್ರ್ಯದ ಅಧಿಕಾರ ಕಸಿಯುವುದು ಎಂದರ್ಥವಾಗುತ್ತದೆ. ಹೀಗಾಗಿ 2g ಹಗರಣದ ಆರೋಪಿಗಳಿಗೆ ಜಾಮೀನು ಕೊಡಬೇಕು ಅಂದಿದ್ದರು. ಆದರೆ ಸಾಧ್ವಿ ಪ್ರಜ್ಞಾರವರು ಕ್ಯಾನ್ಸರಿನಿಂದ ಬಳಲುತ್ತಿದ್ದರೂ ಅವರಿಗೆ ಅದೇ ನ್ಯಾಯಾಲಯ ಜಾಮೀನು ಕೊಡಲು ನಿರಾಕರಿಸಿತು. ಇದೆಲ್ಲಿಯ ನ್ಯಾಯ? ನ್ಯಾಯಾಲಯಕ್ಕೂ ನಾವು ಹಿಂದುವಾಗಿ ಹುಟ್ಟಿದ್ದೇ ತಪ್ಪಾಗಿ ಕಾಣಿಸಿತಾ? ಹೀಗಾದರೆ ನಾವು ನ್ಯಾಯಾಂಗ ವ್ಯವಸ್ಥೆಯನ್ನು ಹೇಗೆ ನಂಬುವುದು?

ಇನ್ನು ಮಧ್ಯಮಗಳ ವಿಷಯಕ್ಕೆ ಬಂದರೆ ಕೊಳವೆ ಬಾವಿಯಲ್ಲಿ ಹುಡುಗ ಕಾಲು ಜಾರಿ ಬಿದ್ದರೆ 24 ಗಂಟೆಗಳೂ ಅದರದ್ದೇ ಚರ್ಚೆ ಆದರೆ ಸಾಧ್ವಿ ಪ್ರಜ್ಞಾ ಪತ್ರ ಬರೆದರೂ ಕೂಡಾ ಮಾಧ್ಯಮಗಳು ಮೌನ ವಹಿಸಿದ್ದವು. ಸಾಧ್ವಿ ಪ್ರಜ್ಞಾ ತಪ್ಪೇ ಮಾಡದೇ , ಸಾಕ್ಷಿಗಳು ಲಭ್ಯವಿರದೇ , ಚಿತ್ರಹಿಂಸೆಗೆ ಒಳಗಾಗುತ್ತಾ , ಕ್ಯಾನ್ಸರ್ ನಿಂದ ಬಳಲುತ್ತಾ ಜೈಲಿನಲ್ಲಿ ನರಕಯಾತನೆ ಅನುಭವಿಸಬೇಕಾಯಿತು. ಅದೇ ಮುಸ್ಲಿಂ ಹುಡುಗಿ ಏನಾದರೂ ಸಿಕ್ಕಿಬಿದ್ದು , ಜೈಲಿನೊಳಗೆ ಅನಾರೋಗ್ಯದಿಂದ ನರಳಿದ್ದರೆ ಮಾಧ್ಯಮಗಳು ಒಂದೇ ಕಣ್ಣಿನಲ್ಲಿ ಅತ್ತುಬಿಡುತ್ತಿದ್ದವು. ಕಣ್ಣೊರೆಸಲು ಎಲ್ಲಾ ಸೋ ಕಾಲ್ಡ್ ಸೆಕ್ಯುಲರ್ ರಾಜಕಾರಣಿಗಳ ಧಾವಿಸಿ ಬರುತ್ತಿದ್ದರು.

ನಮ್ಮ ದೇಶದಲ್ಲಿ ನೂರು ಅಪರಾಧಿಗಳಿಗೆ ಶಿಕ್ಷೆಯಾಗಲಿಲ್ಲವೆಂದರೂ ಪರವಾಗಿಲ್ಲ ಆದರೆ ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದೆಂಬ ಕಾನೂನಿದೆ. ಆದರೆ ಆಗಿದ್ದೇನು..??

-ಶಿವಾಂಶ

Tags

Related Articles

Close