ಪ್ರಚಲಿತ

ಮೋದಿಯ ಜನಪ್ರಿಯತೆ ಏರಿದೆ! ಅದರಲ್ಲಿಯೂ ದಕ್ಷಿಣ ಭಾರತದಲ್ಲಿ ಅತೀ ಹೆಚ್ಚು ಪ್ರಸಿದ್ಧಿ ಗಳಿಸಿರುವುದು ಯಾಕೆ ಗೊತ್ತೇ?!

ಪ್ರತೀ ಬಾರಿಯೂ ಇನ್ನೇನು ಪ್ರಧಾನಿ ಮೋದಿಯ ಪ್ರಸಿದ್ಧತೆಯೊಂದನ್ನು ಕೆಳಗಿಳಿಸಿಯೇ ಬಿಟ್ಟೆವು ಎಂದು ಮೋದಿ ವಿರೋಧಿಗಳು ಸಂಭ್ರಮಿಸುವಾಗಲೇ, ಜಗತ್ತಿನ
ಅತ್ಯಂತ ಪ್ರಸಿದ್ಧ ಸಮೀಕ್ಷಾ ಏಜೆನ್ಸಿಗಳೆಲ್ಲ ಮೋದಿಯನ್ನು ಹೊಗಳಿಬಿಡುತ್ತದೆ! ಸಾಕ್ಷ್ಯಾಧಾರಗಳನ್ನೂ ನೀಡಿ! ಪಾಪಾ! ವಿರೋಧಿಗಳ ಅಷ್ಟೂ ದಿನದ ಶ್ರಮವೊಂದು
ನೀರುಪಾಲಾಗುವುದರ ಜೊತೆಗೆ ಉಳಿದ ಪ್ರಜೆಗಳಿಂದ ಮಹಾ ಮಂಗಳಾರತಿಯೂ ಸಿಕ್ಕಿ ಬಿಡುತ್ತದೆ!

“ಕೇಂದ್ರದಲ್ಲಿ ಸರಕಾರ ರಚಿಸಿ ಮೂರು ವರುಷವಾದರೂ, ಅದೆಷ್ಟೋ ಕ್ರಾಂತಿಕಾರಕ ಹೆಜ್ಜೆಗಳನ್ನಿಟ್ಟ ಮೇಲೂ, ಪ್ರಧಾನಿ ಮೋದಿಯ ಜನಪ್ರಿಯತೆ ಕಡಿಮೆಯಾಗದೇ, ಇನ್ನೂ ಹೆಚ್ಚಾಗಿದೆ ಎಂದು ‘ಫ್ಯೂ ರಿಸರ್ಚ್’ ತನ್ನ ಸಮೀಕ್ಷಾ ವರದಿಯಲ್ಲಿ ಹೇಳಿದೆ.

ಅಲ್ಲದೇ, ” ದೇಶದ ಆರ್ಥಿಕತೆ ಪ್ರಗತಿಯ ಹಾದಿಯಲ್ಲಿದೆ ಎಂದು ಮುಕ್ಕಾಲು ಪಾಲು ಭಾರತೀಯರು ಹೇಳಿದ್ದಾರೆ.” ಎಂದು ಹೇಳಿದೆ. ವರದಿಗೂ ಮುನ್ನ ಹಲವಾರು ರಾಜ್ಯಗಳನ್ನು ಸಮೀಕ್ಷೆಗೆ ಒಳಪಡಿಸಿದ್ದ ‘ಫ್ಯೂ’ ಕೊನೆಗೆ ಉತ್ತಮವಾದ ವರದಿಯನ್ನು ನೀಡಿದ್ದು ಮೋದಿ ವಿರೋಧಿಗಳಿಗೆ ತಣ್ಣೀರೆರೆಚಿದಂತಾಗಿದೆ!

ಸಮೀಕ್ಷೆಗೆ 16 ರಾಜ್ಯಗಳು, ಕೇಂದ್ರಾಡಳಿತದ 2 ಪ್ರದೇಶಗಳನ್ನು 2017 ಫೆಬ್ರುವರಿ-ಮಾರ್ಚ್ ಅವಧಿಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಒಳಪಡಿಸಿತ್ತು. ವರದಿಯ
ಪ್ರಕಾರ, ದೇಶದ ವಿವಿಧೆಡೆ, ಮೋದಿಯ ಜನಪ್ರಿಯತೆ, ಉತ್ತರ ಭಾರತದಲ್ಲಿ 84%, ಪೂರ್ವ ಭಾರತದಲ್ಲಿ 85%, ಪಶ್ಚಿಮ ಭಾರತದಲ್ಲಿ 92% ಹಾಗೂ ದಕ್ಷಿಣ
ಭಾರತದಲ್ಲಿ 95% ಎಂದು ತಿಳಿಸಿದೆ.

ಒಂದೇ ಸಮಸ್ಯೆಯನ್ನು ಯಾವ ಪಕ್ಷ ಹೆಚ್ಚು ಪರಿಣಾಮಕಾರಿಯಾಗಿ ಪರಿಹರಿಸುತ್ತದೆಂದು ಅಂಕಗಳ ರೂಪದಲ್ಲಿ ಸೂಚಿಸಲಾಗಿತ್ತು. ಅದರ ಪ್ರಕಾರ,

ನಿರುದ್ಯೋಗ ಸಮಸ್ಯೆ ಪರಿಹಾರ :
ಬಿಜೆಪಿ : 81
ಕಾಂಗ್ರೆಸ್ : 46

ಭ್ರಷ್ಟಾಚಾರ ನಿಗ್ರಹ :
ಬಿಜೆಪಿ : 78
ಕಾಂಗ್ರೆಸ್ : 45

ಬಡವರಿಗೆ ನೆರವು :
ಬಿಜೆಪಿ : 81
ಕಾಂಗ್ರೆಸ್ : 48

ವಾಯು ಮಾಲಿನ್ಯ ತಡೆ :
ಬಿಜೆಪಿ : 52
ಕಾಂಗ್ರೆಸ್ : 21

ಭಯೋತ್ಪಾದನೆ ನಿಗ್ರಹ :
ಬಿಜೆಪಿ : 78
ಕಾಂಗ್ರೆಸ್ : 51

ಬೆಲೆ ಹೆಚ್ಚಳ ನಿಗ್ರಹ :
ಬಿಜೆಪಿ : 62
ಕಾಂಗ್ರೆಸ್ : 35

ಕೋಮು ಸೌಹಾರ್ದ :
ಬಿಜೆಪಿ : 55
ಕಾಂಗ್ರೆಸ್ : 29

ಕಾಶ್ಮೀರ ಬಿಕ್ಕಟ್ಟು ಪರಿಹಾರ :
ಬಿಜೆಪಿ : 65
ಕಾಂಗ್ರೆಸ್ : 40

ದೇಶದ ಪ್ರಮುಖ ಸಮಸ್ಯೆಗಳ ಪಟ್ಟಿಯನ್ನು ತಯಾರಿಸಿದ ಭಾರತೀಯರು!

ಅಪರಾಧಗಳು : 84%
ಭಯೋತ್ಪಾದನೆ : 76%
ಭ್ರಷ್ಟಾಚಾರ : 74%
ನಿರುದ್ಯೋಗ : 73%
ಬೆಲೆ ಹೆಚ್ಚಳ : 71%
ಕಾಶ್ಮೀರ ಬಿಕ್ಕಟ್ಟು : 62%
ಬಡವ – ಶ್ರೀಮಂತರ ನಡುವಿನ ಅಂತರ : 61%
ಭ್ರಷ್ಟ ಉದ್ಯಮಿಗಳು : 59%
ವಾಯು ಮಾಲಿನ್ಯ : 54%
ಆರೋಗ್ಯ ಸೇವೆ : 54%
ಕಳಪೆ ಗುಣಮಟ್ಟದ ಶಿಕ್ಷಣ : 48%
ದೈನಂದಿನ ವ್ಯವಹಾರದಲ್ಲಿ ನಗದು ಕೊರತೆ : 45%
ಕೋಮು ಬಿಕ್ಕಟ್ಟು : 37%

“”ಈ ಸಮೀಕ್ಷೆ ನಡೆದ ನಂತರದ ದಿನಗಳಲ್ಲಿ ಸರ್ಕಾರದ ನೀತಿ, ದೇಶದ ಆರ್ಥಿಕ ಪ್ರಗತಿಯಲ್ಲಿ ಸಾಕಷ್ಟು ಬದಲಾವಣೆಯಾಗಿರುವುದರಿಂದ ಈ ಸಮೀಕ್ಷೆ ಸದ್ಯದ ಪರಿಸ್ಥಿತಿಯನ್ನು ಬಿಂಬಿಸುವುದಿಲ್ಲ.” ಎಂದು ಗ್ಲೋಬಲ್ ಎಕನಾಮಿಕ್ಸ್ ಆಟಿಟ್ಯೂಡ್, ಫ್ಯೂ ರಿಸರ್ಚ್ ನ ನಿರ್ದೇಶಕ ಬ್ರೂಸ್ ಸ್ಟೋಕ್ಸ್ ಹೇಳಿದ್ದಾರೆ!

ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥನಾದ ಒಮರ್ ಅಬ್ದುಲ್ಲಾ, “ಬಹುಷಃ ಇದು ನಿಜವಿದ್ದಿರಬಹುದು. ರಾಜಕಾರಣದಲ್ಲಿ ಒಂದು ವಾರವೂ
ಬಹುದೊಡ್ಡ ಅವಧಿ. ಈ ಸಮೀಕ್ಷೆ ನಡೆದದ್ದು ಫೆಬ್ರುವರಿಯಲ್ಲಿ. ಈಗವೆಲ್ಲವೂ ಬದಲಾಗಿರಬಹುದು.” ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಷಾ, “ ಸಮೀಕ್ಷೆಯ ವರದಿ ಸರಿಯಾಗಿದೆ. ಮೋದಿಯವರ ಜನಪ್ರಿಯತೆ ದೇಶದಾದ್ಯಂತ ಹೆಚ್ಚುತ್ತಿದೆ. ಅವರು ಸರಕಾರ ರಚಿಸಿದ ನಂತರ ಜನರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಹೆಚ್ಚಾಗಿದೆ.” ಎಂದಿದ್ದಾರೆ.

ದಕ್ಷಿಣ ಭಾರತದಲ್ಲಿಯೇ ಮೋದಿ ಜನಪ್ರಿಯತೆ ಜಾಸ್ತಿ!!!

ದಕ್ಷಿಣ ಭಾರತದಲ್ಲಿಯೇ ಮೋದಿ ಜನಪ್ರಿಯತೆ ಹೆಚ್ಚಿರುವುದಕ್ಕೆ ಕಾರಣವೂ ಇದೆ.

ಒಂದು, ಸಾಕ್ಷರತೆಯ ಪ್ರಮಾಣ ಉತ್ತರ ಭಾರತಕ್ಕಿಂತ ದಕ್ಷಿಣ ಭಾರತದಲ್ಲಿ ಜಾಸ್ತಿ ಇರುವುದರಿಂದ ಪ್ರತಿದಿನದ ಆಗು ಹೋಗುಗಳು ಗೊತ್ತಾಗುತ್ತದೆ. ಎರಡನೆಯದು, ದೇಶಭಕ್ತರ ಕೂಗೇಳುವುದೂ ಇಲ್ಲಿಯೇ!

ಎಲ್ಲದಕ್ಕಿಂತ ಹೆಚ್ಚಾಗಿ, ದಕ್ಷಿಣ ಭಾರತದಲ್ಲಿ ದೇಶದ ಆಗುಹೋಗುಗಳ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿರುವ ಯುವಜನತೆ! ಉದ್ಯೋಗವಕಾಶಗಳು!
ಇವೆಲ್ಲವೂ, ಮೋದಿ ಸರಕಾರದ ಯೋಜನೆಗಳಿಂದ ನೇರವಾಗಿ ಪ್ರಭಾವೀಕರಿಸಲ್ಪಡುವುದರಿಂದ, ಜನರಿಗೆ ಮೋದಿಯ ಬಗ್ಗೆ ನಂಬಿಕೆಯೂ ಹೆಚ್ಚಾಗಿದೆ.

ಇದೆಲ್ಲ ಸಮೀಕ್ಷೆಗಳು ದಿನೇ ದಿನೇ ಮೋದಿ ವಿರೋಧಿಗಳ ನಿದ್ದೆಗೆಡಿಸುತ್ತಿದ್ದರೆ, ಮೋದಿ ಮಾತ್ರ ನಿಶ್ಯಬ್ದದಲ್ಲಿಯೇ ಸಾಧಿಸುತ್ತಿದ್ದಾರೆ!!

– ಪೃಥು ಅಗ್ನಿಹೋತ್ರಿ

Tags

Related Articles

Close