ಪ್ರಚಲಿತ

ಮೋದಿ ಆಯ್ತು.. ಈಗ ಯೋಗಿ! ಯೋಗಿಯನ್ನು ಪ್ರಶ್ನಿಸಿದ್ದಕ್ಕೆ ಈ ಪ್ರಖ್ಯಾತ ನಟನನ್ನು ಹಿಗ್ಗಾಮುಗ್ಗಾ ಜಾಡಿಸಿದ ಪರಿ ಗೊತ್ತೇ..?!

ಪ್ರಕಾಶ್ ರೈ. ಚಲನಚಿತ್ರ ನಟ. ಈತನನ್ನು ಚಲನ ಚಿತ್ರ ನಟ ಎನ್ನುವುದಕ್ಕಿಂತ ಕಾಂಗ್ರೆಸ್ ಕುಣಿಸುತ್ತಿರುವ ರಾಜಕೀಯ ನಟ ಎಂದು ಅನ್ನಬಹುದೋ ಏನೋ. ಸದಾ ಕಾಂಗ್ರೆಸ್ ಪರ ಬ್ಯಾಟಿಂಗ್ ಮಾಡಿ ಕಾಂಗ್ರೆಸ್ ನಾಯಕರನ್ನು ಹೊಗಳಿಕೊಂಡು ಅವರನ್ನು ಮೆಚ್ಚಿಸಿಕೊಳ್ಳುವುದೇ ಈತನ ಮುಖ್ಯ ಕಾಯಕವಾಗಿದೆ. ಜಾತ್ಯಾತೀತ ಬುದ್ಧಿಜೀವಿಗಳಂತೆ ಮಾತನಾಡಿಕೊಂಡು ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿರುವ ಈ ಪ್ರಕಾಶ್ ರೈ ಹಿಂದೂಗಳನ್ನು ಕಂಡರೆ ಕೆಂಡ ಕಾರುತ್ತಾನೆ. ಕೇಸರಿ ಧ್ವಜವನ್ನು ಕಂಡರಂತೂ ಅದೇನೋ ಹೊಟ್ಟೆಯಲ್ಲಿ ಬೆಂಕಿ ಇಟ್ಟ ಹಾಗೆ ಆಗುತ್ತದೆ ಈ ಪ್ರಕಾಶನಿಗೆ.

ಮೋದೀಜಿಯನ್ನು ನಟ ಎಂದು ಪೇಚಿಗೆ ಸಿಲುಕಿದ್ದ ಈ ರೈ…

ಈ ಹಿಂದೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ನಟ ಎಂದು ಸಂಬೋದಿಸಿ ತೀವ್ರ ಟೀಕೆಗೆ ಗುರಿಯಾಗಿದ್ದನು ಈ ನಟ. “ಪ್ರಧಾನಿ ನರೇಂದ್ರ ಮೋದಿಯವರು ನನಗಿಂತ ಚೆನ್ನಾಗಿಯೇ ನಟಿಸುತ್ತಾರೆ. ರಾಜ್ಯದಲ್ಲಿ ಖ್ಯಾತ ಪತ್ರಕರ್ತೆ ಗೌರೀ ಲಂಕೇಶ್‍ರ ಕೊಲೆಯಾಗಿದೆ. ಇದರ ಬಗ್ಗೆ ಪ್ರಧಾನಿ ಮೋದಿ ಧ್ವನಿ ಎತ್ತುತ್ತಿಲ್ಲ. ಇದೆಲ್ಲಾ ನೋಡುತ್ತಿರುವಾಗ ನನಗೆ ತುಂಬಾನೆ ಬೇಸರವಾಗುತ್ತಿದೆ. ನನಗೆ ಸಿಕ್ಕಂತಹ 5 ರಾಷ್ಟ್ರ ಪ್ರಶಸ್ತಿಗಳನ್ನು ವಾಪಾಸು ಕೊಡಬೇಕು ಅಂತ ಅನಿಸುತ್ತಿದೆ” ಎಂದು ತನ್ನ ನಾಲಿಗೆಯನ್ನು ಹರಿಯಬಿಟ್ಟಿದ್ದ ಕಾಂಗ್ರೆಸ್ ಪ್ರೇರಿತ ನಟ ಪ್ರಕಾಶ್ ರೈ.

ಇದನ್ನು ಕಂಡ ಮೋದಿ ಅಭಿಮಾನಿಗಳು ಪ್ರಕಾಶ್ ರೈಯನ್ನು ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. “ನಿನಗೆ ಈ ದೇಶದಲ್ಲಿ ಬದುಕಲು ಸಾಧ್ಯವಾಗದಿದ್ದರೆ ಈ ದೇಶ ಬಿಟ್ಟು ಹೊರ ಹೋಗು. ನಾವೇ ಟಿಕೆಟ್ ಕೊಡುತ್ತೇವೆ. ಪ್ರಶಸ್ತಿಗಳನ್ನೆಲ್ಲಾ ವಾಪಾಸು ಕೊಟ್ಟರೂ ಚಿಂತೆಯಿಲ್ಲ. ನಿನಗೆ ಆ ಪ್ರಶಸ್ತಿಗಳನ್ನು ಸ್ವೀಕರಿಸುವ ಅರ್ಹತೆನೇ ಇಲ್ಲ. ಗೌರಿ ಲಂಕೇಶ್ ಸತ್ತಿದ್ದು ಕರ್ನಾಟಕದಲ್ಲಿ. ಆದರೆ ನೀನು ಮೋದಿಯವರನ್ನು ತೆಗಳುವೆ. ನಿನ್ನ ಅಜೆಂಡಾ ಏನು” ಎಂದು ಖಾರವಾಗಿ ಪ್ರಶ್ನಿಸಿದ್ದರು.

ಕರ್ನಾಟಕದಲ್ಲಿ ಉಸಿರಾಡಲು ಸಾಧ್ಯವಾಗುತ್ತಿಲ್ಲ ಎಂದ ಪ್ರಕಾಶ್…

ಕೇರಳದಲ್ಲಿ ಸ್ವಚ್ಛಂದವಾಗಿ ಬದುಕಬಹುದಾಗಿದೆ. ಆದರೆ ಕರ್ನಾಟಕದಲ್ಲಿ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ. ಇಲ್ಲಿ ಬದುಕಲು ಕಷ್ಟವಾಗುತ್ತಿದೆ ಎಂದು ಹೇಳುವ ಮೂಲಕ ನಾಡಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದ. “ನಿನಗೆ ಈ ರಾಜ್ಯದಲ್ಲಿ ಉಸಿರಾಡಲು ಸಾಧ್ಯವಾಗದಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಪ್ರಶ್ನಿಸು. ಬಿಜೆಪಿಯನ್ನು ಯಾಕೆ ಪ್ರಶ್ನಿಸುತ್ತೀಯಾ” ಎಂದು ಛಾಟಿ ಬೀಸಿದ್ದರು. ಮಾತ್ರವಲ್ಲದೆ ಕೇರಳಕ್ಕೆ ಹೋಗುವುದಾದರೆ ತುಂಬಾ ಸಂತೋಷ. ಆದಷ್ಟು ಬೇಗ ಹೋಗಪ್ಪಾ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಷ ವ್ಯಕ್ತಪಡಿಸಿದ್ದರು.

ಮೋದಿ ಆಯ್ತು. ಈಗ ಯೋಗಿಯನ್ನು ಹಿಡಿದ ಪ್ರಕಾಶ್…

ಪ್ರಕಾಶ್ ರೈಗೆ ಈಗ ಚಲನ ಚಿತ್ರದಲ್ಲಿ ಅವಕಾಶ ಸಿಗುತ್ತಿಲ್ಲ ಅಂತ ಕಾಣಿಸುತ್ತೆ. ಯಾವಾಗ ನೋಡಿದ್ರೂ ಭಾರತೀಯ ಜನತಾ ಪಕ್ಷ ಹಾಗೂ ಹಿಂದೂ ಸಂಘಟನೆಗಳನ್ನು ಟೀಕಿಸುವುದರಿಂದಲೇ ಕಾಲ ಕಳೆಯುತ್ತಾ ಇರುತ್ತಾರೆ. ಪ್ರಧಾನಿ ಮೋದಿ, ಮೈಸೂರು ಸಂಸದ ಪ್ರತಾಪ್ ಸಿಂಹ ಸಹಿತ ಎಲ್ಲರನ್ನೂ ಟೀಕಿಸಿ ಆಗಿತ್ತು. ಈಗ ಪ್ರಕಾಶ್ ದೃಷ್ಟಿ ನೆಟ್ಟಿದ್ದು ಉತ್ತರ ಪ್ರದೇಶದ ಮುಖ್ಯಮಂತ್ರಿ, ಹಿಂದುತ್ವದ ಫೈರ್ ಬ್ರಾಂಡ್ ಯೋಗಿ ಆದಿತ್ಯನಾಥ್ ಅವರತ್ತ.

ಇತ್ತೀಚೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹುಬ್ಬಳ್ಳಿಯಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಪರಿವರ್ತನಾ ಯಾತ್ರೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ರಾಜ್ಯ ಕಾಂಗ್ರೆಸ್ ಪಕ್ಷವನ್ನು ಹಿಗ್ಗಾಮುಗ್ಗ ಟೀಕಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ್ದರು. “ಇದು ಹನುಮ ಜನಿಸಿದ ರಾಜ್ಯ. ಹನುಮನ ಭಜನೆ ರಾಜ್ಯದ ಮೂಲೆ ಮೂಲೆಯಲ್ಲೂ ನಿರಂತರವಾಗಿ ನಡೆಯಬೇಕಿತ್ತು.

ಆದರೆ ಈ ರಾಜ್ಯದಲ್ಲಿ ಇಲ್ಲಿನ ಕಾಂಗ್ರೆಸ್ಸಿಗರು ಟಿಪ್ಪುವಿನ ಭಜನೆ ಮಾಡುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಹನುಮ ಪೂಜೆ ಬಿಟ್ಟು ಟಿಪ್ಪು ಪೂಜೆಯನ್ನು ಮಾಡುತ್ತಾ ಇದ್ದಾರೆ. ರಾಜ್ಯದಲ್ಲಿ ಹಿಂದೂಗಳ ಹತ್ಯೆಗಳು ಎಗ್ಗಿಲ್ಲದೆ ನಡೆಯುತ್ತಿದೆ. ಸಾಲು ಸಾಲು ಹಿಂದೂಗಳ ಹತ್ಯೆಗಳಿಂದ ಹಿಂದೂಗಳು ಬದುಕೋದೇ ಕಷ್ಟ ಎಂಬಂತಾಗಿದೆ. ರೈತರ ಆತ್ಮಹತ್ಯೆಗಳು ನೂರಾರು ಸಂಖ್ಯೆಯಲ್ಲಿ ನಡೆಯುತ್ತಿದೆ. ರೈತರ ಸಾಲಮನ್ನಾ ಮಾಡಿಲ್ಲ. ನಮ್ಮ ರಾಜ್ಯದಲ್ಲಿ ಎಲ್ಲಾ ರೈತರ ಸಂಪೂರ್ಣ ಸಾಲಮನ್ನಾ ಮಾಡಿದ್ದೇವೆ. ರಾಜ್ಯ ಟಿಪ್ಪು ಜಯಂತಿ ಬಿಟ್ಟು ಹನುಮ ಜಯಂತಿ ಮಾಡಲಿ” ಎಂದು ಯೋಗಿ ಆದಿತ್ಯನಾಥ್ ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸುವುದು ಕಾಂಗ್ರೆಸ್ ಪಕ್ಷದ ಕರ್ತವ್ಯ ಬಿಡಿ. ಆದರೆ ಈ ಪ್ರಕಾಶ್ ರೈ ಎಂಬ ಪುಣ್ಯಾತ್ಮ ಕಾಂಗ್ರೆಸ್ ನಾಯಕರಿಗಿಂತ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಟೀಕಿಸಲು ಆರಂಭಿಸಿದ್ದಾನೆ. ಯೋಗಿಯವರ ಮಾತುಗಳನ್ನು ಕೇಳಿ ಈ ಪ್ರಕಾಶ್ ರೈಗೆ ಎಲ್ಲೆಲ್ಲಿ ಉರಿ ಇಟ್ಟ ಹಾಗೆ ಆಗಿದ್ಯೋ ಏನೋ. “ಯೋಗಿಯವರೇ ಮೊದಲು ನಿಮ್ಮ ರಾಜ್ಯದ ಬಿಜೆಪಿ ನಾಯಕರನ್ನು ಒಮ್ಮೆ ನೋಡಿ. ಅವರು ಟಿಪ್ಪುವಿನ ಖಡ್ಘವನ್ನು ಹಿಡಿದಿದ್ದರು” ಎಂದು ಯೋಗಿಯನ್ನು ಪ್ರಶ್ನಿಸಿದ್ದನು.

ಹೀಗೆ ಟ್ವೀಟ್ ಮಾಡಿದ ಪ್ರಕಾಶ್ ರೈಯನ್ನು ರಾಜ್ಯದ ಜನತೆ ಹಿಗ್ಗಾ ಮುಗ್ಗ ತರಾಟೆಗೆ ತೆಗೆದುಕೊಂಡಿದ್ದರು. ಯೋಗಿಯನ್ನು ಪ್ರಶ್ನಿಸುವ ಯಾವ ನೈತಿಕತೆಯೂ ನಿನಗೆ ಇಲ್ಲಾ ಎಂದು ಟೀಕಿಸಿದ್ದಾರೆ. ಪ್ರಕಾಶ್ ರೈ ಟ್ವೀಟ್‍ಗೆ ಅನೇಕ ಜನರು ಕಾಮೆಂಟ್ಸ್ ಮಾಡಿದ್ದು ಅದರಲ್ಲಿ ಶೇಕಡಾ 90ರಷ್ಟು ಜನ ಪ್ರಕಾಶ್ ರೈಗೆ ಸಖತ್ತಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಪ್ರಕಾಶ್ ರೈ ಟ್ವೀಟ್‍ಗಳನ್ನು ಪ್ರಶ್ನಿಸುವ ಮೂಲಕ “ಯೋಗಿಯನ್ನು ಪ್ರಶ್ನಿಸಬೇಡಿ.

ಮೊದಲು ನಿಮ್ಮ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯರನ್ನು ಪ್ರಶ್ನಿಸಿ. ಅವರ ರಾಜ್ಯ ಸರ್ಕಾರದ ಆಡಳಿತ ವೈಖರಿಯನ್ನು ಪ್ರಶ್ನಿಸಿ. ಹಿಂದುಗಳ ಹತ್ಯೆ ಆಗುತ್ತಿದೆ ಅದನ್ನು ಪ್ರಶ್ನಿಸಿ. ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅದನ್ನು ಪ್ರಶ್ನಿಸಿ. ರಾಜ್ಯದಲ್ಲಿ ಅತ್ಯಾಚಾರಗಳು ನಡೆಯುತ್ತಿದ್ದು ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಅದನ್ನು ಪ್ರಶ್ನಿಸಿ. ರಾಜ್ಯದ ಮುಖ್ಯಮಂತ್ರಿಗಳು ಬೆಳ್ಳಿ ತಟ್ಟೆಯಲ್ಲಿ ಊಟ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಅದನ್ನು ಪ್ರಶ್ನಿಸಿ. ಸಚಿವರು ಶಾಸಕರ ಭ್ರಷ್ಟಾಚಾರ ತಾಂಡವವಾಗುತ್ತಿದೆ ಅದನ್ನು ಪ್ರಶ್ನಿಸಿ. ಅದನ್ನೆಲ್ಲಾ ಬಿಟ್ಟು ಮೋದಿಯವರನ್ನು ಯೋಗಿಯವರನ್ನು ಟೀಕಿಸಿದರೆ ಸರಿ ಇರಲ್ಲ” ವಾಗ್ದಾಳಿ ನಡೆಸಿದ್ದಾರೆ.

ಇತ್ತೀಚೆಗೆ ಮಂಗಳೂರಿನ ಕರಾವಳಿ ಉತ್ಸವವನ್ನು ಉಧ್ಘಾಟಿಸಲು ಬಂದ ಪ್ರಕಾಶ್ ರೈಗೆ ಮಂಗಳೂರಿನ ಪ್ರಜೆಯೊಬ್ಬ ಮೊಟ್ಟೆ ಎಸೆಯಲು ಯತ್ನಿಸಿದ್ದು ಪ್ರಕಾಶ್ ರೈಯ ಯಾವುದೇ ಆಟಗಳು ನಮ್ಮಲ್ಲಿ ನಡೆಯೋದಿಲ್ಲ ಎಂಬ ಸಂದೇಶವನ್ನೂ ನೀಡಿದ್ದಾರೆ.

-ಸುನಿಲ್ ಪಣಪಿಲ

Tags

Related Articles

Close