ಪ್ರಚಲಿತ

ಮೋದಿ ಭಾರತದ ಆರ್ಥಿಕತೆಯನ್ನು ಮೇಲಕ್ಕೆತ್ತುವರೆಂಬ ಫೋರ್ಬ್ಸ್ ಪತ್ರಿಕೆಯ ಸಮೀಕ್ಷೆಯೊಂದು ಕಾಂಗ್ರೆಸ್ ನಾಯಕರಿಗೆ ಬರ್ನಾಲ್ ಕೊಟ್ಟಿದ್ದು ಹೇಗೆ ಗೊತ್ತಾ?!

ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾರತದ ಆರ್ಥಿಕತೆಯನ್ನು ಮೇಲಕ್ಕೆತ್ತುವಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ! ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯಿಂದ ಭಾರತ 2020 ರಲ್ಲಿ ವಿಶ್ವಗುರುವಾಗಲಿದೆ! ಹಿಂದೆಂದೂ ಇರದ ಆರ್ಥಿಕ ಸೂಚ್ಯಂಕವೊಂದು ಡಾಲರ್ ಗಳ ಜೊತೆ ಸ್ಪರ್ಧೆಗಿಳಿಯಲಿದೆ!

ಇದು World Economic Forum Report (WEFR) ಪ್ರಕಟಪಡಿಸಿದ ಮೋದಿಯ ಬಗೆಗಿನ ಪ್ರಶಂಸೆಯ ಸ್ಯಾಂಪಲ್ಲಷ್ಟೇ! ಭಾರತ 137 ರಾಷ್ಟ್ರಗಳ ಪೈಕಿ
40 ನೇ ಸ್ಥಾನ ಗಳಿಸಿದೆ! ಮೂರು ವರ್ಷಗಳ ಹಿಂದೆ 71 ನೇ ಸ್ಥಾನದಲ್ಲಿತ್ತು ಭಾರತ!

ಇದು ಮೋದಿಯವರಿಗೂ ಸ್ವತಃ ಆಶ್ಚರ್ಯವನ್ನುಂಟು ಮಾಡಿರುವುದು ಸುಳ್ಳಲ್ಲ! ಅದೂ, ಭಾರತದ ಕರೆನ್ಸಿ ನೋಟುಗಳ ಅಮಾನತುಕರಣವಾದ ನಂತರ ಭಾರತ ಆರ್ಥಿಕವಾಗಿ ಇನ್ನಷ್ಟು ಮುಂದುವರೆದಿದೆ ಎಂದಿರುವುದು ಇಲ್ಲಿಯ ತನಕವೂ ವಿರೋಧಿಸುತ್ತಲೇ ಬಂದಿದ್ದ ಕಾಂಗ್ರೆಸ್ ಚೇಲಾಗಳಿಗೆ ಎದೆಯಲ್ಲಿ ಬೆಂಕಿ ಬಿದ್ದಂತಾಗಿರುವುದು ಸುಳ್ಳಲ್ಲ!

‘ಮೋದಿ ಕೆಲವೊಂದನ್ನು ಸರಿಯಾಗಿಯೇ ಮಾಡಿದ್ದಾರೆ! ದೇಶದ ವ್ಯವಸ್ಥಿತ ವ್ಯಾಪಾರ ವಹಿವಾಟು ಕಳೆದ ವರ್ಷಕ್ಕಿಂತ ದುಪ್ಪಟ್ಟಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದರೆ, ಶಿಕ್ಷಣ ಹಾಗೂ ತರಬೇತಿಯಲ್ಲಿ ಆರು ಪಟ್ಟು ಹೆಚ್ಚಿನ ಗುಣಮಟ್ಟ ಕಂಡಿದೆ ಎಂದು ತಿಳಿಸಿದೆ!

ಇದಲ್ಲದೇ, ತಾಂತ್ರಿಕ ಕ್ಷೇತ್ರದಲ್ಲಿ, ಡಿಜಿಟಲ್ ಇಂಡಿಯಾ ಎಂಬ ಯೋಜನೆಯೊಂದಿಗೆ ಸಾರ್ವಜನಿಕರನ್ನೂ ಮುಟ್ಟುವಲ್ಲಿ ಬಹುತೇಕ ಯಶಸ್ಸು ಕಂಡಿರುವ ಭಾರತ, ನರೇಂದ್ರ ಮೋದಿಯ ನೇತೃತ್ವದಲ್ಲಿ ಬಹಳ ಪ್ರಸಿದ್ಧಿಗೆ ಬಂದಿದೆ ಎಂದಿರುವ ಫೋರ್ಬ್ಸ್ ಪತ್ರಿಕೆಯನ್ನೇ ಸುಳ್ಳು ಎಂದುಬಿಡುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿದೆ ಬಿಡಿ!

ಆರ್ಥಿಕತೆಯನ್ನು ಸಧೃಢಗೊಳಿಸುವಲ್ಲಿ ಸ್ಪರ್ಧೆಗಿಳಿದ ಭಾರತ ವಿದೇಶಾಂಗ ವಹಿವಾಟುಗಳನ್ನೂ ಸಹ ಔನ್ನತ್ಯಕ್ಕೇರಿಸಿರುವುದು ಸಾಧನೆಯಲ್ಲವೇ?!

ವಿದೇಶಿ ಹೂಡಿಕೆಗಳ ಮೇಲೆ ನೀತಿಯನ್ನು ಸಡಿಲಗೊಳಿಸಿರುವುದು, ಆಮದು ಹಾಗೂ ರಫ್ತು ಸರಕುಗಳ ಮೇಲೆ ತೆರಿಗೆಯನ್ನು ಕಡಿಮೆಗೊಳಿಸಿರುವುದು, ಬೆಲೆಯ ಮೇಲೆ ನಿಗಾವಹಿಸಿ ವ್ಯವಹಾರ ಮಾಡುತ್ತಿರುವುದೆಲ್ಲವೂ ಸಹ ಭಾರತದ ಆರ್ಥಿಕತೆಯನ್ನು ಸಧೃಢಗೊಳಿಸುವಲ್ಲಿ ಧನಾತ್ಮಕ ವಿಷಯಗಳೇ!

ಇದರಿಂದ 2017 ರಲ್ಲಿ ಆರ್ಥಿಕತೆಯಲ್ಲಿ ಅತೀ ವೇಗನೇ ಬೆಳೆಯುತ್ತಿರುವ ಜಗತ್ತಿನ ನಾಲ್ಕನೇ ದೇಶವಾಗಿ ಗುರುತಿಸಿಕೊಂಡಿದೆ! ಇದು ನಾವು ಹೇಳುತ್ತಿರುವುದಲ್ಲ. ಸ್ವತಃ ಅಂತರಾಷ್ಟ್ರೀಯ ಬ್ಯಾಂಕುಗಳ ಇತ್ತೀಚೆಗಿನ ಗ್ಲೋಬಲ್ ಎಕಾನಮಿಕ್ ಪ್ರಾಸ್ಪೆಕ್ಟಿನಲ್ಲಿ ಪ್ರಕಟಪಡಿಸಿದೆ ಕೂಡ!

ಈ ವಿಷಯಗಳೆಲ್ಲವೂ ಸಹ ಜಗತ್ತಿನ ಪ್ರಭಾವೀ ಏಜೆನ್ಸಿಗಳಾಗಿರುವ ಎಯೋನ್ ಎಂಬಂತಹವುಗಳೆಲ್ಲ ಭಾರತದಲ್ಲಿ ಹೂಡಿಕೆ ಮಾಡುವ ಬಗ್ಗೆ ಆಸಕ್ತಿ ಹೊಂದಿದ್ದೂ ಅಲ್ಲದೇ, ಭಾರತ ನಿಜಕ್ಕೂ ಆರ್ಥಿಕ ಸ್ಥಿತಿಯಲ್ಲಿ ಎಲ್ಲ ರಾಷ್ಟ್ರಗಳನ್ನೂ ಮೀರಿಸುತ್ತವೆಂದು ಹೇಳಿದೆ!

ಇದು ಹೂಡಿಕೆದಾರರಿಗೆ ಹಬ್ಬವೇ! ಅದೆಷ್ಟೋ ವಿದೇಶಿ ಕಂಪೆನಿಗಳು ಭಾರತದಲ್ಲಿ ಈಗಾಗಲೇ ಹೂಡಿಕೆ ಮಾಡಿವೆ ಕೂಡ! ಪರಿಣಾಮ iShares S&P India 50 ಪ್ರತಿಶತ 10.69% ಗಳಷ್ಟು ಕಳೆದ ಐದು ವರ್ಷಗಳಿಗೆ ಹೋಲಿಸಿದರೆ ಏರಿಕೆ ಕಂಡಿದ್ದರೆ ಪಾಕಿಸ್ಥಾನದ Global X MSCI 5.30% ಗಳಷ್ಟು ಇಳಿಕೆಯಾಗಿದೆ!

Index/Fund                                                                                                                12- month Performance
Global X MSCI Pakistan (PAK)                                                                              -5.30%
iShares S&P India 50 (INDY)                                                                                  10.69%

Source: Finance.yahoo.com 9/26/17

ಇದಲ್ಲದೇ ಇನ್ನೊಂದಿಷ್ಟು ಫೋರ್ಬ್ಸ್ ಕೊಟ್ಟ ಮಾಹಿತಿಗಳಿಂದ ವಿದೇಶಿ ಕಂಪೆನಿಗಳು ಭಾರತದಲ್ಲಿ ಹೂಡಿಕೆ ಮಾಡಲು ತುದಿಗಾಲಲ್ಲಿ ನಿಂತಿವೆಯಷ್ಟೇ! ಇನ್ನಾದರೂ, ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶದಿಂದ ಅಭಿವೃದ್ಧಿಯಾದ ದೇಶ ಎಂದಷ್ಟೇ ಬದಲಾಗಬೇಕಿದೆ!

ಹಾಗೇನಾದರೂ ಆದರೆ, ಕಾಂಗ್ರೆಸ್ ಮುಕ್ತ ದೇಶವೊಂದೇ ಅಲ್ಲ, ಬಹುಷಃ ನೆಹರೂ ಮುಕ್ತ ದೇಶವಾಗುವುದರಲ್ಲಿ ಸಂಶಯವಿಲ್ಲವಷ್ಟೇ!

Source :Modi Lifts India – Forbes Magazine

– ಪೃಥು ಅಗ್ನಿಹೋತ್ರಿ

Tags

Related Articles

Close