ಪ್ರಚಲಿತ

ಮೋದಿ ಸರಕಾರಕ್ಕೆ ಮತ್ತೊಂದು ಗರಿ! ವಿಶ್ವದಲ್ಲೇ ಭಾರತ ಸರಕಾರಕ್ಕೆ 3ನೇ ಸ್ಥಾನ!!! ಯಾಕೆ ಗೊತ್ತಾ??

ಭಾರತದ ರಾಜಕೀಯದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅತ್ಯಂತ ಪ್ರಭಾವ ಶಾಲಿ ಹಾಗೂ ಜನಪ್ರಿಯ ರಾಜಕಾರಣಿ ಎಂದು ಈಗಾಗಲೇ ಅಮೇರಿಕದ ಅಧ್ಯಯನ ಕೇಂದ್ರ ನಡೆಸಿರುವ ಸಮೀಕ್ಷೆಯ ಬೆನ್ನಲ್ಲೇ, ಸಮೀಕ್ಷೆವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮೈತ್ರಿ ಸರ್ಕಾರ ವಿಶ್ವದಲ್ಲೇ 3 ನೇ ನಂಬಿಕಸ್ಥ ಸರ್ಕಾರ ಎಂದೆನಿಸಿಕೊಂಡಿದೆ!!

ಹೌದು…. ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (ಒಇಸಿಡಿ) ನಡೆಸಿದ ಸಮೀಕ್ಷೆಯಲ್ಲಿ ಮೋದಿ ಸರ್ಕಾರ 3 ನೇ ಶ್ರೇಣಿ ಪಡೆದುಕೊಂಡಿದ್ದು, ಮುಕ್ಕಾಲು ಭಾಗದಷ್ಟು ಭಾರತೀಯರು “ನಮ್ಮ ಸರ್ಕಾರದ ಮೇಲೆ ನಮಗೆ ನಂಬಿಕೆ ಇದೆ ಎಂದಿದ್ದಾರೆ” ಎಂದು ವಿಶ್ವ ಆರ್ಥಿಕ ವೇದಿಕೆ ವರದಿಯಲ್ಲಿ ಉಲ್ಲೇಖ ಮಾಡಿದೆ!! ಈ ಹಿಂದೆ ಸುಲಭ ವಹಿವಾಟು ಸೂಚ್ಯಂಕ ಪಟ್ಟಿಯಲ್ಲಿ 30ನೇ ಸ್ಥಾನಕ್ಕೆ ಜಿಗಿದು 100ನೇ ಸ್ಥಾನ ಪಡೆದಿದ್ದ ಭಾರತಕ್ಕೆ, ಜಾಗತಿಕ ಮಟ್ಟದ ರೇಟಿಂಗ್ ಏಜೆನ್ಸಿ `ಮೂಡೀಸ್’ ಬಿಎಎ2 ರೇಟಿಂಗ್ ನೀಡಿ ಮೋದಿ ಸರ್ಕಾರದ ಆರ್ಥಿಕ ನೀತಿಯನ್ನು ಹೊಗಳಿತ್ತು!!

ಅಷ್ಟೇ ಅಲ್ಲದೇ, 13 ವರ್ಷದ ಬಳಿಕ ಮೂಡೀಸ್ ರೇಟಿಂಗ್ ಮೇಲ್ದರ್ಜೆಗೆ ಏರಿದ್ದು, 2004ರಲ್ಲಿ ಭಾರತಕ್ಕೆ `ಬಿಎಎ3′ ರೇಟಿಂಗ್ ನೀಡಿದ್ದು, ನೋಟು ನಿಷೇಧ, ಜಿಎಸ್‍ಟಿ ಜಾರಿ, ಬ್ಯಾಂಕ್ ಖಾತೆಗಳಿಗೆ ಹಾಗೂ ಸರ್ಕಾರದ ಸೌಲಭ್ಯಗಳಿಗೆ ಆಧಾರ್ ಕಡ್ಡಾಯಗೊಳಿಸಿದ ಪರಿಣಾಮ ದೇಶದ ಆರ್ಥಿಕತೆಯ ಮೇಲೆ ಧನಾತ್ಮಕ ಪರಿಣಾಮ ಬೀರಿದೆ ಎಂದು ಮೂಡಿಸ್ ತನ್ನ ವರದಿಯಲ್ಲಿ ತಿಳಿಸಿದೆ. ಇನ್ನು ದೇಶಿ ಮತ್ತು ವಿದೇಶಿ ಹೂಡಿಕೆಯ ಬೆಳವಣಿಗೆ ಆಗುತ್ತಿರುವ ಜೊತೆಗೆ ಉತ್ಪಾದನೆ, ಉದ್ಯಮಗಳಿಗೆ ಪೂರಕ ವಾತಾವರಣ ನಿರ್ಮಾಣವಾಗುತ್ತಿರುವುದರಿಂದ ದೇಶದ ಅರ್ಥವ್ಯವಸ್ಥೆ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಮೂಡಿಸ್ ಹೇಳಿದೆ!! ಈ ಬೆನ್ನಲ್ಲೆ ಇದೀಗ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (ಒಇಸಿಡಿ) ನಡೆಸಿದ ಸಮೀಕ್ಷೆಯಲ್ಲಿ ಮೋದಿ ಸರ್ಕಾರ 3 ನೇ ಶ್ರೇಣಿಯನ್ನು ಪಡೆದುಕೊಂಡಿರುವುದು ಹೆಮ್ಮೆಯ ವಿಚಾರವಾಗಿದೆ!!

ಮೊದಲ ಸ್ಥಾನವನ್ನು ಪಡೆದಿದೆ ಸ್ವಿಟ್ಝರ್‍ಲ್ಯಾಂಡ್…….!!!

ಇದೇ ವೇಳೆ ‘ಭ್ರಷ್ಟಾಚಾರ ವಿರೋಧಿ ಧೋರಣೆ ಮತ್ತು ತೆರಿಗೆ ಸುಧಾರಣೆಯ ನೀತಿಗಳಿಂದಾಗಿ ಜನರು ಸರ್ಕಾರದ ಮೇಲೆ ಭಾರಿ ವಿಶ್ವಾಸ ಹೊಂದುವಂತಾಗಿದೆ’ ಎಂದು ಉಲ್ಲೇಖಿಸಿರುವ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (ಒಇಸಿಡಿ) 74 % ದಷ್ಟು ಭಾರತೀಯರು ಮೋದಿ ಸರ್ಕಾರದ ಮೇಲೆ ವಿಶ್ವಾಸ ಹೊಂದಿದ್ದಾರೆ ಎಂದು ಹೇಳಿದೆ!! ಒಇಸಿಡಿ ಸಮೀಕ್ಷೆಯಲ್ಲಿ ಸ್ವಿಟ್ಝರ್‍ಲ್ಯಾಂಡ್ ಮೊದಲ ಸ್ಥಾನದಲ್ಲಿದ್ದು 82 % ಜನರು ತಮ್ಮ ಸರ್ಕಾರದ ಮೇಲೆ ವಿಶ್ವಾಸ ಹೊಂದಿದ್ದರೆ, 2 ನೇ ಸ್ಥಾನವನ್ನು ಇಂಡೋನೇಷ್ಯಾ ಸರ್ಕಾರ ಪಡೆದಿದ್ದು, ಅಲ್ಲಿರುವ 82 %ದಷ್ಟು ಜನರು ವಿಶ್ವಾಸವನ್ನು ಹೊಂದಿದ್ದಾರೆ ಎಂದು ಹೇಳಿದೆ!!

ಒಇಸಿಡಿ ಸಮೀಕ್ಷೆ ಹೇಳುವ ಪ್ರಕಾರ, ‘ಕಳೆದ ಕೆಲ ವರ್ಷಗಳಿಂದ ಜನರು ಸರ್ಕಾರಗಳ ಮೇಲೆ ವಿಶ್ವಾಸ ಕಳೆದುಕೊಂಡಿದ್ದರು. ಆದರೆ ಮೋದಿ ಅವರು ಅದನ್ನು ಹುಸಿ ಮಾಡಿದ್ದಾರೆ. ಅಷ್ಟೇ ಅಲ್ಲದೇ, ಪ್ರತೀ ಭಾರತೀಯ ಪ್ರಧಾನಿ ನಾಯಕತ್ವದಲ್ಲಿ ನ್ಯೂ ಇಂಡಿಯಾದ ಕನಸನ್ನು ಎದುರು ನೋಡುತ್ತಿದ್ದಾನೆ’ ಎಂದು ಸಮೀಕ್ಷೆ ಹೇಳಿದೆ!! ಇದೇ ವೇಳೆ ಗ್ರೀಸ್, ಸ್ಲೋವೇನಿಯಾ, ಚಿಲಿ, ಫಿನ್‍ಲ್ಯಾಂಡ್ ಸರ್ಕಾರದ ಮೇಲೆ ಜನರು ಎಳ್ಳಿನಷ್ಟೂ ವಿಶ್ವಾಸ ಹೊಂದಿಲ್ಲ ಎಂದು ಸಮೀಕ್ಷೆ ಹೇಳಿದೆ. ಅಷ್ಟೇ ಅಲ್ಲದೇ, ಈ ಹಿಂದೆ ಜುಲೈ ತಿಂಗಳಿನಲ್ಲಿ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ ನಡೆಸಿದ ಇನ್ನೊಂದು ಸಮೀಕ್ಷೆಯಲ್ಲಿ ಮೋದಿ ಸರ್ಕಾರದ ಮೇಲೆ 73 % ಜನರು ವಿಶ್ವಾಸ ಹೊಂದಿದ್ದಾರೆ ಎನ್ನುವ ಅಂಶ ಬಹಿರಂಗಪಡಿಸಿತ್ತು!!

ಇನ್ನು ಈ ಹಿಂದೆ ಅಮೇರಿಕದ ಅಧ್ಯಯನ ಕೇಂದ್ರ ನಡೆಸಿದ ಹೊಸ ಸಮೀಕ್ಷೆಯೊಂದರಲ್ಲಿ ಮೋದಿ ಅತ್ಯಂತ ಪ್ರಭಾವ ಶಾಲಿ ಹಾಗೂ ಜನಪ್ರಿಯ ರಾಜಕಾರಣಿಯಾಗಿ ಹೊರಹೊಮ್ಮಿದ್ದಾರೆ!! 2017 ರ ಫೆಬ್ರವರಿ 21ರಿಂದ ಮಾರ್ಚ್ 10ರ ಮಧ್ಯೆ “ಫ್ಯೂ ರಿಸರ್ಚ್ ಸೆಂಟರ್” ನಡೆಸಿದ ಈ ಸಮೀಕ್ಷೆಯಲ್ಲಿ 2464 ಜನರು ಭಾಗವಹಿಸಿದ್ದು, ಈ ಸಮೀಕ್ಷೆಯ ಪ್ರಕಾರ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು 30 ಅಂಕಗಷ್ಟು ಹಿಂದಿಕ್ಕಿರುವ ಪ್ರಧಾನಿ ಮೋದಿ 88% ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ!!

ಅಮೆರಿಕದ ಮೂಡೀಸ್ ಇನ್ವೆಸ್ಟರ್ ಸರ್ವಿಸಸ್ ಸಂಸ್ಥೆ ಬಿಡುಗಡೆಗೊಳಿಸಿರುವ ವರದಿಯ ಪ್ರಕಾರ ಸುಮಾರು ಒಂದು ದಶಕದ ಬಳಿಕ ಭಾರತದ ಸೊವರಿನ್ ಕ್ರೆಡಿಟ್ ರೇಟನ್ನು ಮೂಡೀಸ್ ಬಿಎಎ3 ಹಂತದಿಂದ ಬಿಎಎ2ಗೆ ಏರಿಸಿದ್ದು, ನೋಟು ರದ್ದು, ಸರಕು ಮತ್ತು ಸೇವಾ ತೆರಿಗೆ ಸೇರಿ ಹಲವು ಆರ್ಥಿಕ ಸುಧಾರಣಾ ಕ್ರಮಗಳಿಗೆ ವಿಪಕ್ಷಗಳಿಂದ ತೀವ್ರ ವಾಗ್ಧಾಳಿ ಎದುರಿಸುತ್ತಿರುವ ಸಂದರ್ಭದಲ್ಲೇ ಸರಕಾರಕ್ಕೆ ಮೂಡೀಸ್ ವರದಿ ಆನೆಬಲ ನೀಡಿತ್ತು. ಇನ್ನು ಈ ಬಾರಿ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (ಒಇಸಿಡಿ) ನೀಡಿರುವ ವರದಿಯ ಪ್ರಕಾರ, ಮೋದಿ ಸರಕಾರವನ್ನು ವಿಶ್ವದಲ್ಲೇ 3 ನೇ ನಂಬಿಕಸ್ಥ ಸರ್ಕಾರ ಎಂದು ಹಾಡಿ ಹೊಗಳಿರುವುದು ಹೆಮ್ಮೆಯ ವಿಚಾರವಾಗಿದೆ!!

ಮೂಲ:http://zeenews.india.com/india/pm-narendra-modi-led-bharatiya-janata-party-bjp-government-third-most-trusted-government-in-world-report-2058422.html

– ಅಲೋಖಾ

Tags

Related Articles

Close