ಪ್ರಚಲಿತ

ಮೋದಿ ಸರಕಾರದಿಂದ ಹೊಸ ಬ್ರಹ್ಮಾಸ್ತ್ರ! ಬೇನಾಮಿ ಆಸ್ತಿಗಳಿಕೆದಾರರಿಗೆ ಮೋದಿ ಕೊಟ್ರಾ ಮತ್ತೊಂದು ದೊಡ್ಡ ಶಾಕ್?!

ಬೇನಾಮಿ ಆಸ್ತಿ ಹೊಂದಿರುವವರೇ ಎಚ್ಚರ. ಕೇಂದ್ರ ಸರ್ಕಾರವು ಅಕ್ರಮ ಆಸ್ತಿಗಳನ್ನು ಪತ್ತೆ ಮಾಡಲು ಆಸ್ತಿ ನೋಂದಣಿಗೆ ಆಧಾರ್ ಸಂಯೋಜಿಸುವುದು ಖಚಿತವಾಗಿದ್ದು, ಬೇನಾಮಿ ಆಸ್ತಿದಾರರಿಗೆ ಬಹುತೇಕ ಕೊನೆಯ ಎಚ್ಚರಿಕೆ ಸಂದೇಶ ರವಾನೆಯಾದಂತಿದೆ. ನೋಟು ರದ್ದು ಮೂಲಕ ಕಾಳಧನ, ಖೋಟಾನೋಟಿಗೆ ಕಡಿವಾಣ ಹಾಕಿದ್ದ ಕೇಂದ್ರ ಸರ್ಕಾರ ಈಗ ಆಧಾರ್ ಮೂಲಕ ಬೇನಾಮಿ ಆಸ್ತಿಗೆ ಪೆಟ್ಟು ನೀಡಲಿದೆ.

ನೋಟು ನಿಷೇಧದ ಬಳಿಕ ಕಾಳಧನಿಕರ ವಿರುದ್ಧ ಕಠಿಣ ಕ್ರಮ ಆರಂಭಿಸಿರುವ ಆದಾಯ ತೆರಿಗೆ ಇಲಾಖೆ, ಸೋಮವಾರ 87 ನೋಟೀಸ್‍ಗಳನ್ನು ಜಾರಿ ಮಾಡಿದೆ. ಅಲ್ಲದೆ ದೇಶವ್ಯಾಪಿ 42 ಪ್ರಕರಣಗಳಲ್ಲಿ ಕೋಟ್ಯಂತರ ರೂ ಬ್ಯಾಂಕ್ ಠೇವಣಿಗಳನ್ನು ಜಪ್ತಿ ಮಾಡಿಕೊಂಡಿದೆ. ಹೊಸದಾಗಿ ಜಾರಿ ಮಾಡಲಾದ ಬೇನಾಮಿ ವಹಿವಾಟು ತಡೆ ಕಾಯ್ದೆಯಡಿ ಐಟಿ ಇಲಾಖೆ ಈ ಕ್ರಮ ಕೈಗೊಂಡಿದೆ. ಈ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಭಾರಿ ದಂಡ ಹಾಗೂ 7 ವರ್ಷಗಳ ವರೆಗೆ ಕಠಿಣ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.

ನೋಟು ನಿಷೇಧದ ಬಳಿಕ ಸರಿಯಾದ ಲೆಕ್ಕ ಪತ್ರವಿಲ್ಲದ ಹಣವನ್ನು ಬೇನಾಮಿ ಖಾತೆಗಳಿಗೆ ವರ್ಗಾಯಿಸಿದರೆ ಕಠಿಣ ಕ್ರಮ ಎದುರಿಸಬೇಕಾದೀತು ಎಂದು ಐಟಿ ಇಲಾಖೆ ಸಾರ್ವಜನಿಕ ಜಾಹೀರಾತುಗಳ ಮೂಲಕ ಎಚ್ಚರಿಕೆ ನೀಡಿತ್ತು. 1998ರ ಬೇನಾಮಿ ಆಸ್ತಿ ವಹಿವಾಟು ಕಾಯ್ದೆಯನ್ನು ಕಳೆದ ನವೆಂಬರ್ 1ರಿಂದ ಸರಕಾರ ಪರಿಷ್ಕೃತವಾಗಿ ಜಾರಿಗೊಳಿಸಿದೆ.

ವಿಸ್ತೃತ ತನಿಖೆ ಬಳಿಕ ಐಟಿ ಇಲಾಖೆ ಕಾಯ್ದೆಯ ಸೆಕ್ಷನ್ 24ರ ಅನ್ವಯ (ಬೇನಾಮಿ ವಹಿವಾಟಿಗೆ ಬಳಸಿದ ಆಸ್ತಿಯ ಮುಟ್ಟುಗೋಲು) 87 ನೋಟೀಸ್‍ಗಳನ್ನು ಜಾರಿ ಮಾಡಿದೆ. ಬ್ಯಾಂಕ್ ಖಾತೆಗಳಲ್ಲಿರುವ ಕೋಟ್ಯಂತರ ರೂ ಹಣವೂ ಸೇರಿದಂತೆ ಒಟ್ಟು 42 ಸ್ಥಿರ ಮತ್ತು ಚರಾಸ್ತಿಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಸುದ್ದಿಸಂಸ್ಥೆ ವರದಿ ತಿಳಿಸಿದೆ.

ಬೇನಾಮಿ ಆಸ್ತಿಗಳ ರೂಪದಲ್ಲಿ ಸಂಗ್ರಹವಾಗಿರುವ ಅಕ್ರಮ ಸಂಪತ್ತನ್ನು ಪತ್ತೆ ಹಚ್ಚಲು 12 ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆ `ಆಧಾರ್’ ಅನ್ನು ಬ್ರಹ್ಮಾಸ್ತ್ರವಾಗಿ ಬಳಸಿಕೊಳ್ಳಲಾಗುತ್ತದೆ’ ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಘೋಷಿಸಿದ್ದಾರೆ. ಆಧಾರ್‍ಅನ್ನು ಆಸ್ತಿ ನೋಂದಣಿಗೆ ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂಬ ಸುಳಿವನ್ನು ಕೇಂದ್ರ ಸಚಿವ ಹರ್ದೀಪ್ ಪುರಿ ಇತ್ತೀಚೆಗೆ ಹೇಳಿದ್ದಾರೆ.

ಇದರ ಬೆನ್ನಲ್ಲೇ ಮೋದಿ ಅವರು ಇದನ್ನು ಖಚಿತಪಡಿಸಿದ್ದಾರೆ. ಆಧಾರ್ ಕಡ್ಡಾಯವಾದಲ್ಲಿ ಅಕ್ರಮ ಸಂಪಾದನೆಯಿಂದ ಆಸ್ತಿ ಖರೀದಿಸಿ ನೋಂದಣಿ ಮಾಡಿದರೆ ಸುಲಭವಾಗಿ ಸಿಕ್ಕಿಬೀಳುತ್ತಾರೆ. ಪತ್ರಿಕೆಯೊಂದು ಆಯೋಜಿಸಿದ್ದ ನಾಯಕತ್ವ ಶೃಂಗದಲ್ಲಿ ಮಾತನಾಡಿದ ಅವರು, ಆಧಾರ್ ಯೋಜನೆಯಿಂದಾದ ಲಾಭಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜತೆಗೆ ಬೇನಾಮಿ ಆಸ್ತಿಗಳ ವಿರುದ್ಧ ಆಧಾರ್ ಅನ್ನು ಬಳಸಿಕೊಳ್ಳಲಾಗುತ್ತದೆ. ಬೇನಾಮಿ ಆಸ್ತಿ ವಿರುದ್ಧದ ಹೋರಾಟದಲ್ಲಿ ಅದು ಬ್ರಹ್ಮಾಸ್ತ್ರವಾಗಲಿದೆ ಎಂದು ನುಡಿದರು.

ಅಕ್ರಮ ಸಂಪತ್ತಿಗೆ ಕಡಿವಾಣ ಹಾಕುವ ಕಾನೂನನ್ನು ಇನ್ನಷ್ಟು ಕಟ್ಟುನಿಟ್ಟುಗೊಳಿಸುವುದಕ್ಕಾಗಿ ಬೇನಾಮಿ ವಹಿವಾಟು ತಿದ್ದುಪಡಿ ಕಾಯ್ದೆ 2015ಕ್ಕೆ ಲೋಕಸಭೆ ಒಪ್ಪಿಗೆ ನೀಡಿದ್ದು
ಬೇನಾಮಿ ಆಸ್ತಿ ಹೊಂದಿರುವವರಿಗೆ ಏಳು ವರ್ಷ ಶಿಕ್ಷೆ ಮತ್ತು ಆಸ್ತಿಯ ಮಾರುಕಟ್ಟೆ ಮೌಲ್ಯದ ಶೇ 25ರಷ್ಟು ದಂಡ ವಿಧಿಸುವುದಕ್ಕೆ ಈ ಕಾಯ್ದೆಯಲ್ಲಿ ಅವಕಾಶ ಇದೆ. ಹಾಗೆಯೇ ಕಾಲ್ಪನಿಕ ವ್ಯಕ್ತಿಗಳ ಹೆಸರಿನಲ್ಲಿ ಖರೀದಿಸಲಾದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೂ ಅವಕಾಶ ಇದೆ. `ಅಕ್ರಮ ಹಣ ಹೊಂದಿರುವ ಸಾಕಷ್ಟು ಜನರು ಕಾಲ್ಪನಿಕ ಹೆಸರಿನಲ್ಲಿ ಆಸ್ತಿ ಖರೀದಿಸುತ್ತಾರೆ. ಇಂತಹ ವಹಿವಾಟುಗಳನ್ನು ತಡೆಯಲೇಬೇಕು’ ಎನ್ನುವ ಉದ್ಧೇಶದಿಂದ ಮೋದಿ ಸರಕಾರ ಹೊಸ ಬ್ರಹ್ಮಾಸ್ತ್ರವನ್ನು ಬಿಟ್ಟಿದ್ದಾರೆ.

ಒಬ್ಬ ವ್ಯಕ್ತಿಯ ಹೆಸರಿಗೆ ನೋಂದಣಿಯಾಗುವ ಅಥವಾ ವರ್ಗಾವಣೆಯಾಗುವ ಆಸ್ತಿಗೆ ಬೇರೊಬ್ಬರು ಹಣ ಪಾವತಿಸುವುದನ್ನು ಬೇನಾಮಿ ಆಸ್ತಿ ಎಂದು ಕಾಯ್ದೆಯಲ್ಲಿ ವಿವರಿಸಲಾಗಿದೆ.ಬೇನಾಮಿ ಆಸ್ತಿ ಬಗ್ಗೆ ತನಿಖಾ ಸಂಸ್ಥೆಗಳಿಗೆ ಮಾಹಿತಿ ನೀಡುವ ರಹಸ್ಯ ಮಾಹಿತಿದಾರರಿಗೆ ಒಂದು ಕೋಟಿ ರು ಬಹುಮಾನ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಯೋಜನೆ ಆದಷ್ಟು ಬೇಗ ಜಾರಿಗೆ ಬರುವ ಸಾಧ್ಯತೆಯಿದ್ದು, 15 ಲಕ್ಷದಿಂದ 1 ಕೋಟಿವರೆಗೆ ಬಹಮಾನ ನೀಡಲಾಗುವುದು ಎಂದು ಕೇಂದ್ರ ತೆರಿಗೆ ನಿರ್ದೇಶನ ಮಂಡಳಿ ಹಿರಿಯ ಅಧಿಕಾರಿಯೊಬ್ಬರು ಈ ಮೊದಲೇ ತಿಳಿಸಿದ್ದರು.

ಮಾಹಿತಿದಾರ ನೀಡುವ ವಿವರ ಅಧಿಕೃತವಾಗಿರಬೇಕು ಹಾಗೂ ಮಾಹಿತಿದಾರನ ಗುರುತನ್ನು ರಹಸ್ಯವಾಗಿಡಲಾಗುವುದು, ಇಲಾಖೆಯೂ ಯಾವುದೇ ಕಾರಣಕ್ಕೂ ಮಾಹಿತಿದಾರನ ವಿವರವನ್ನು ಎಲ್ಲಿಯೂ ಬಹಿರಂಗಗೊಳಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು. ಕಳೆದ ವರ್ಷ ಈ ಬೇನಾಮಿ ಆಸ್ತಿ ಕಾನೂನನ್ನು ಪರಿಚಯಿಸಲಾಗಿದ್ದು, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ಮತ್ತು ಆದಾಯ ಗುಪ್ತಚರ ಇಲಾಖೆಗಳಿಂದ ಮಾಹಿತಿದಾರರಿಗೆ ಬಹುಮಾನ ನೀಡುವ ಪದ್ಧತಿ ಮೊದಲಿನಿಂದಲೂ ಇದೆ. ಬೇನಾಮಿ ಆಸ್ತಿ ಹೊಂದಿರುವವರನ್ನು ಪತ್ತೆ ಹಚ್ಚುವುದು ಆದಾಯ ತೆರಿಗೆ ಇಲಾಖೆ ಹಾಗೂ ಆಡಳಿತ ವಿಭಾಗಕ್ಕೆ ತುಂಬಾ ಕಷ್ಟದಾಯಕವಾದ ಕೆಲಸವಾಗಿದೆ. ಹೀಗಾಗಿ ನಾವು ಮಾಹಿತಿದಾರರಿಂದ ವಿವರ ಪಡೆದರೇ ಕೆಲಸ, ವೇಗವಾಗಿ ಪರಿಣಾಮಕಾರಿಯಾಗಿ ಮುಗಿಯುತ್ತದೆ, ಒಂದು ವೇಳೆ ನಾವು ಮಾಹಿತಿದಾರರಿಗೆ ಸೂಕ್ತ ಬಹುಮಾನ ನೀಡಿದರೇ, ದೇಶಾದ್ಯಂತ ಬೇನಾಮಿ ಆಸ್ತಿ ಹೊಂದಿರುವವರನ್ನು ಪತ್ತೆ ಹಚ್ಚುವುದು ಸುಲಭವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದು ಇದರ ಬೆನ್ನಲೇ ಹೊಸ ಬ್ರಹ್ಮಾಸ್ತ್ರವನ್ನು ಬಿಟ್ಟಿದ್ದಾರೆ.

ಈ ಯೋಜನೆ ಜಾರಿಗೆ ತರಲು ನಿರ್ಧರಿಸಿದ್ದು, ಸದ್ಯ ಪ್ರಸ್ತಾವನೆ ಹಣಕಾಸು ಇಲಾಖೆ ಬಳಿಯಿದೆ, ಒಂದು ಬಾರಿ ಹಣಕಾಸು ಇಲಾಖೆಯಿಂದ ಅನುಮೋದನೆ ಪಡೆದು, ಹಣಕಾಸು ಸಚಿವರಿಂದ ಒಪ್ಪಿಗೆಯಾದರೇ, ಕೇಂದ್ರ ತೆರಿಗೆ ನಿರ್ದೇಶನ ಇಲಾಖೆ ಯೋಜನೆಯನ್ನು ಘೋಷಿಸುತ್ತದೆ. ಈ ಯೋಜನೆ ಅಕ್ಟೋಬರ್ ಅಥವಾ ನವೆಂಬರ್ ನಲ್ಲಿ ಪ್ರಕಟವಾಗುವ ಸಾಧ್ಯತೆಯಿದೆ. 2016ರ ನವೆಂಬರ್ 1 ರಿಂದ ಬೇನಾಮಿ ಆಸ್ತಿ ವಹಿವಾಟು ನಿಷೇಧ ತಿದ್ದುಪಡಿ ಕಾಯಿದೆ ಜಾರಿಗೆ ಬಂದಿದ್ದು, ಇದುವರೆಗೂ ಅನೇಕ ಬೇನಾಮಿ ಆಸ್ತಿಗಳು ಪತ್ತೆಯಾಗಿವೆ ಎಂದು ವಿವರಿಸಿದ್ದರು.

ಮೋದಿ ಸರಕಾರದ ಈ ಹೊಸ ಯೋಜನೆಯಿಂದ ಅನೇಕ ಬೇನಾಮಿ ಆಸ್ತಿದಾರರಿಗೆ ಬೀಳಲಿದೆ ಬ್ರೇಕ್… ಅಕ್ರಮವಾಗಿ ಆಸ್ತಿ ಸಂಪಾದನೆಗೆ ಮಾಡಿದವರು ಮೋದಿ ಸರಕಾರದಿಂದ ಮತ್ತೊಂದು ಶಾಕ್‍ಗೆ ರೆಡಿಯಾಗಿರಬೇಕು!..ಯಾಕೆಂದರೆ ಇದಕ್ಕಿಂತ ಮುಂಚೆ ಅದಾಗಲೇ ನೋಟ್‍ಬ್ಯಾನ್ ಮೂಲಕ ದೊಡ್ಡ ಶಾಕ್ ನೀಡಿದ ಮೋದಿ ಸರಕಾರ ಬೇನಾಮಿ ಆಸ್ತಿಯನ್ನು ಮುಟ್ಟುಗೋಲು ಹಾಕಲು ಮತ್ತೊಂದು ಶಾಕ್ ನೀಡಿದ್ದಾರೆ…

-ಪವಿತ್ರ

Tags

Related Articles

Close