ಅಂಕಣ

ಮೋದಿ ಸರಕಾರದ ಮಹತ್ವದ ಯೋಜನೆಗಳಲ್ಲೊಂದಾದ “ಸ್ಕಿಲ್ ಇಂಡಿಯಾ” ಯೋಜನೆ ಬರೀ ಹೊಟ್ಟೆ ತುಂಬಿಸುವದಕ್ಕಲ್ಲ!!!

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದೆನಿಸಿರುವ ಕೌಶಲ್ಯ ಭಾರತ (ಸ್ಕಿಲ್ ಇಂಡಿಯಾ)ಯೋಜನೆ ಬರೀ ಹೊಟ್ಟೆಯನ್ನು ತುಂಬಿಸುವ ಯೋಜನೆಯಲ್ಲ, ಬದಲಾಗಿ ಬಡ ಕುಟುಂಬಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ಮೂಲಕ ರಾಷ್ಟ್ರಕ್ಕೆ ಹೊಸ ಶಕ್ತಿಯನ್ನು ನೀಡಿರುವ
ಯೋಜನೆಯಾಗಿದೆ. ಅಷ್ಟೇ ಅಲ್ಲದೇ, ಭಾರತವನ್ನು ‘ಸ್ಕಾಮ್ ಇಂಡಿಯಾ’ ದಿಂದ ‘ಸ್ಕಿಲ್ ಇಂಡಿಯಾ’ ದತ್ತ ಕೊಂಡೊಯ್ಯುವ ಮಹತ್ವದ ಯೋಜನೆಗಳಲ್ಲೊಂದಾಗಿದೆ!!

ಜನಸಂಖ್ಯೆ ಬೆಳೆದಿದೆ, ಉದ್ಯೋಗಾವಕಾಶಗಳಲ್ಲಿ ಸ್ಪರ್ಧೆಯೂ ಹೆಚ್ಚಾಗಿದೆ. ಹೀಗಾಗಿ ಯುವಜನತೆಗೆ, ವೃತ್ತಿಪರ ಕೋರ್ಸ್‍ಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಉದ್ಯೋಗ ಹಾಗೂ ಉಚಿತ ತರಬೇತಿಯ ಯೋಜನೆಯನ್ನು ಕೇಂದ್ರ ಸರಕಾರದ ವತಿಯಿಂದ ಹಮ್ಮಿಕೊಳ್ಳಲಾಗುವಂತಹ ಯೋಜನೆ ಇದಾಗಿದೆ!!!

ಕೇಂದ್ರದಲ್ಲಿ ಬಿಜೆಪಿ ಸರ್ಕಾರ 2014 ಮೇ 26ರಂದು ಅಧಿಕಾರಕ್ಕೆ ಬಂದ ನಂತರದಲ್ಲಿ ಅದೆಷ್ಟೋ ಯೋಜನೆಗಳನ್ನು ದೇಶದ ಜನತೆಗಾಗಿ ನೀಡುತ್ತಿರುವ ಕೇಂದ್ರ ಸರಕಾರ, ಇದರಲ್ಲಿ ಬಡವರು, ರೈತರು, ಯುವಕರು, ಮಹಿಳೆಯರು ಹಾಗೂ ಹಿರಿಯ ನಾಗರಿಕರು ಸೇರಿದಂತೆ ಎಲ್ಲರ ಕ್ಷೇಮಾಭಿವೃದ್ಧಿಗಾಗಿ ಹತ್ತು ಹಲವು ಯೋಜನೆಗಳನ್ನು ಮಾಡಲಾಗಿದೆ!! ಆ ಮೂಲಕ ಭಾರತದ ಸಮಗ್ರ ಅಭಿವೃದ್ಧಿಯ ಜತೆಗೆ ಹಣಕಾಸು ಭದ್ರತೆ, ಮೂಲಭೂತ ಅಭಿವೃದ್ಧಿ ಹಾಗೂ ದೀನರ ಸಬಲೀಕರಣದ ಮೂಲಕ ಪ್ರತಿಯೊಬ್ಬರ ಕ್ಷೇಮಾಭಿವೃದ್ಧಿ ಸಾಧಿಸುವುದು ಮೋದಿ ಸರ್ಕಾರದ ಉದ್ದೇಶವಾಗಿದೆ. ಆದರೆ ಸ್ಕಿಲ್ ಇಂಡಿಯಾ ಭಾರತದ ಯುವಜನತೆಯ ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯೋಗಕ್ಕೆ ತಯಾರಿಗೊಳಿಸುವ ಯೋಜನೆಯಾಗಿದೆ!!

ಏನಿದು ಸ್ಕಿಲ್ ಇಂಡಿಯಾ ಯೋಜನೆ??

ಮಧ್ಯಮ ವರ್ಗ, ಕೆಳ ಮಧ್ಯಮವರ್ಗ ಮತ್ತು ಬಡ ಕುಟುಂಬಗಳ ಪೆÇೀಷಕರು ತಮ್ಮ ಮಕ್ಕಳಿಗೆ ಕೆಲವು ಕೌಶಲ್ಯಗಳನ್ನು ಕಲಿಯುವಂತೆ ಪೆÇ್ರೀತ್ಸಾಹಿಸಿ ಅವರ
ಕಾಲ ಮೇಲೆ ನಿಲ್ಲುವಂತೆ ಮಾಡಿ, ದೇಶವನ್ನು ಅಭಿವೃದ್ಧಿಶೀಲ ಭಾರತವನ್ನಾಗಿಸುವ ಕನಸು ಕಂಡಿರುವ ನರೇಂದ್ರ ಮೋದಿಯವರ ವಿಶಿಷ್ಟ ಯೋಜನೆಗಳಲ್ಲೊಂದಾಗಿದೆ ಈ ಸ್ಕಿಲ್ ಇಂಡಿಯಾ ಯೋಜನೆ!!

ಮೋದಿ ಸರಕಾರದ ಯಶಸ್ವಿ ಯೋಜನೆಗಳಲ್ಲೊಂದಾದ ಸ್ಕಿಲ್ ಇಂಡಿಯಾ ಯೋಜನೆ ಲಕ್ಷಾಂತರ ಯುವ ಸಮುದಾಯಕ್ಕೆ ದಾರಿದೀಪವಾಗಿದ್ದು, ಈಗಾಗಲೇ ಸಾಕಷ್ಟು ಮಟ್ಟದಲ್ಲಿ ಯಶಸ್ವಿಯನ್ನು ಪೂರೈಸಿದೆ. ಅಷ್ಟೇ ಅಲ್ಲದೇ, ಈ ಸ್ಕಿಲ್ ಇಂಡಿಯಾ ಯೋಜನೆಯಿಂದಾಗಿ ಅನೇಕ ಯುವಜನರಲ್ಲಿ ತಮ್ಮ ಬದುಕಿನ ಬಗ್ಗೆ ಧೈರ್ಯ ತುಂಬಿದ್ದಂತೂ ನಿಜ!! ಹಾಗಾದರೆ ಏನಿದು ಸ್ಕಿಲ್ ಇಂಡಿಯಾ ಯೋಜನೆ??

ಜುಲೈ 15ರಂದು ವಿಶ್ವ ಕೌಶಲ್ಯ ದಿನಾಚರಣೆ ಅಂಗವಾಗಿ ಎನ್.ಡಿ.ಎ ಸರ್ಕಾರ ತನ್ನ ಮಹತ್ವದ ಯೋಜನೆ ‘ಕೌಶಲ್ಯ ಭಾರತ’ ಯೋಜನೆಗೆ ಚಾಲನೆ ನೀಡಿದ್ದು, 2022ರ ವೇಳೆಗೆ ಸುಮಾರು 40.2 ಕೋಟಿ ಯುವ ಸಮುದಾಯವನ್ನು ಕೌಶಲ್ಯ ಪೂರ್ಣರನ್ನಾಗಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಹೊಸ ನಿಯಮಾವಳಿ, ಕಾನೂನನ್ನೂ ಕೂಡ ರೂಪಿಸಲಾಗಿದೆ. ಈ ಕೌಶಲ್ಯ ಅಭಿವೃದ್ಧಿಯ ಹೆಚ್ಚಿನ ಪ್ರಯೋಜನ ಕೃಷಿ ಕ್ಷೇತ್ರಕ್ಕೆ ಸಿಗಲಿದ್ದು, ಶೇಕಡಾ 54ರಷ್ಟು ಜನ ಈ ಕ್ಷೇತ್ರದಿಂದ ಪ್ರಯೋಜನ ಪಡೆಯಬಹುದು. ಅಷ್ಟೇ ಅಲ್ಲದೇ, ಸಿಲ್ಕ್ ಇಂಡಿಯಾ ಮಿಷನ್ ಅಡಿಯಲ್ಲಿ ಕೌಶಲ್ಯ ಅಭಿವೃದ್ಧಿ ಜೊತೆಗೆ ಹೊಸ ಉದ್ದಿಮೆ ಸ್ಥಾಪನೆಗೆ ಯುವ ಸಮುದಾಯವನ್ನು ಹುರಿದುಂಬಿಸುವ ಹಾಗೂ ತರಬೇತಿ ನೀಡುವ ಕಾರ್ಯ ಇದಾಗಿದೆ!!

ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ(ಪಿಎಂಕೆ ವಿವೈ) ಮೂಲಕ ಮುಂದಿನ ವರ್ಷದಲ್ಲಿ 24 ಲಕ್ಷ ಯುವ ಸಮುದಾಯಕ್ಕೆ ಉದ್ಯೋಗ, ತರಬೇತಿ, ಕೌಶಲ್ಯ
ಅಭಿವೃದ್ಧಿ ಸಿಗಲಿದ್ದು, ಕೌಶಲ್ಯ ಸಾಲ ನೀಡಲಾಗುತ್ತದೆ!! ಇದರಲ್ಲಿ 5 ಸಾವಿರ ರೂಪಾಯಿಯಿಂದ 1.5 ಲಕ್ಷ ರೂಪಾಯಿವರೆಗೆ ಸಾಲ ಪಡೆಯಬಹುದು. ಇದು ದೇಶದ 34 ಲಕ್ಷ ಯುವ ಸಮುದಾಯಕ್ಕೆ ನೆರವಾಗಲಿರುವ ಯೋಜನೆಗಳಲ್ಲೊಂದು.

Image result for Skill india and narendra modi

2020ರ ಹೊತ್ತಿಗೆ 500 ಮಿಲಿಯನ್ ಯುವ ಜನತೆಗೆ ಲಾಭವಾಗಲಿದೆಯಂತೆ……!!!

ದೇಶದ ಶೇಕಡ 54ರಷ್ಟು ಜನರು 25 ವರ್ಷಕ್ಕಿಂತ ಕೆಳಗಿದ್ದು, ಕೌಶಲ್ಯ ಭಾರತ (ಸ್ಕಿಲ್ ಇಂಡಿಯಾ) ಯೋಜನೆಯು “ಮೇಕ್ ಇನ್ ಇಂಡಿಯಾ’ ಜತೆ ಸಮನ್ವಯ
ಹೊಂದುವಂತಾಗಬೇಕು ಎಂಬ ಮೋದಿ ಅವರ ಆಶಯದಂತೆ ಯೋಜನೆ ರೂಪಿತಗೊಂಡಿದೆ. ಸ್ಕಿಲ್ ಇಂಡಿಯಾ ಭಾರತದ ಯುವಜನತೆಯ ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯೋಗಕ್ಕೆ ತಯಾರಿಗೊಳಿಸುವ ಯೋಜನೆ ಇದಾಗಿದ್ದು, 2020ರ ಹೊತ್ತಿಗೆ 500 ಮಿಲಿಯನ್ ಯುವ ಜನತೆಗೆ ಇದರಿಂದ ಲಾಭ ಸಿಗುವ ಭರವಸೆಯನ್ನು ಎನ್.ಡಿ.ಎ ಸರ್ಕಾರ ನೀಡಿದೆ!!

2022ರೊಳಗೆ ಸರ್ಕಾರ 40.2 ಕೋಟಿ ಜನರ ಕೌಶಲ್ಯ ವೃದ್ಧಿಸುವ ಗುರಿಯನ್ನು ಸರ್ಕಾರ ಹಾಕಿಕೊಂಡಿದ್ದು, ಈ ಉಪಕ್ರಮಗಳು ಉದ್ದೇಶ ಈಡೇರಿಕೆಯ ಗುರಿ
ಹೊಂದಿದೆ. ಹಾಗಾಗಿ ನಾವು ಬಡತನದ ವಿರುದ್ಧ ಯುದ್ಧ ಸಾರುವ ಮೂಲಕ ಜಯಿಸಬೇಕಾಗಿದೆ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ಮಾದರಿ ಕೌಶಲ್ಯ ಸಾಲ
ಯೋಜನೆಯಲ್ಲಿ ಸಾಲಗಳ ಮಂಜೂರಾತಿ ಪ್ರಕ್ರಿಯೆ ಸುಲಭವಾಗುವಂತೆ ಸರಳೀಕರಿಸಲಾಗಿದೆ. ಇದನ್ನು ಸಾಲ ಖಾತರಿ ಫಂಡ್ ಜೊತೆ ಜೋಡಿಸಲಿದ್ದು, ಇದರಿಂದ ಸಣ್ಣ ಸಾಲ ನೀಡುವಲ್ಲಿ ಬ್ಯಾಂಕ್‍ಗಳ ಅಪಾಯ ತಗ್ಗಲಿದೆ!!

ಕೌಶಲ್ಯ ಅಭಿವೃದ್ಧಿ ಸಾಲ ಯೋಜನೆ ಯಾವ ರೀತಿ ಇದೆ ಎಂದರೆ 5 ಸಾವಿರ ರೂಪಾಯಿಯಿಂದ 1.5 ಲಕ್ಷ ರೂಪಾಯಿ ವರೆಗೆ ಸಾಲ ಪಡೆಯಬಹುದಾಗಿದ್ದು, ಇದು ದೇಶದ 34 ಲಕ್ಷ ಯುವ ಸಮುದಾಯಕ್ಕೆ ನೆರವಾಗಲಿದೆ. ಅಷ್ಟೇ ಅಲ್ಲದೇ, ಕೌಶಲ್ಯ ಅಭಿವೃದ್ಧಿಗಾಗಿ ನೂತನ ರಾಷ್ಟ್ರೀಯ ನೀತಿ ಇದಾಗಿದ್ದು, ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ(ಎನ್ ಎಸ್ ಡಿಸಿ) ವತಿಯಿಂದ ಯೋಜನೆಯ ಕಾರ್ಯರೂಪ ಹಾಗೂ ನಿರ್ವಹಣೆ ದೇಶದೆಲ್ಲೆಡೆ ನಡೆಯಲಿದೆ. ಮುಂದಿನ ವರ್ಷದಲ್ಲಿ 24 ಲಕ್ಷ ಯುವ ಸಮುದಾಯಕ್ಕೆ ಉದ್ಯೋಗ ಅವಕಾಶ ಲಭ್ಯವಾಗಲಿದೆ !!

ಇನ್ನು, ಈ ಯೋಜನೆಯಡಿ 187 ತರಬೇತಿ ಕೇಂದ್ರಗಳಿದ್ದು, ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ(ಎನ್ ಎಸ್ ಡಿಸಿ), ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಏಜೆನ್ಸಿ (ಎನ್ ಎಸ್ ಡಿಎ), ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಧಿ (ಎನ್ ಎಸ್ ಡಿಎಫ್), 33 ಸೆಕ್ಟರ್ ಸಿಲ್ಕ್ ಕೌನ್ಸಿಲ್ಸ್ (ಎಸ್‍ಎಸ್ ಸಿಎಸ್)ಎನ್ನುವ ನಿಗಮಗಳನ್ನು ಹಾಗೂ
ಸಚಿವಾಲಯಗಳನ್ನು ಹೊಂದಿದೆ!!

ಅಂತೂ…… ದೇಶದ ಯುವಜನರಿಗೆ ಉದ್ಯೋಗವಕಾಶಗಳನ್ನು ಕಲ್ಪಿಸುವ ಜೊತೆಗೆ ಬಡ ಕುಟುಂಬಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ವಿಶೇಷ ಯೋಜನೆ ಇದಾಗಿದ್ದು, ಈಗಾಗಲೇ ಈ ಯೋಜನೆಯಿಂದ ಲಕ್ಷಾಂತರ ಮಂದಿ ಪ್ರಯೋಜನವನ್ನು ಪಡೆದುಕೊಂಡಿರುವುದು ಹೆಮ್ಮೆಯ ವಿಚಾರವಾಗಿದೆ!!

– ಅಲೋಖಾ

Tags

Related Articles

Close