ಪ್ರಚಲಿತ

ಯೋಗಿಯನ್ನು ಪ್ರಶ್ನಿಸುವ ಸಿದ್ದರಾಮಯ್ಯರೇ ರಾಜ್ಯದ ಜನತೆಯ ಈ ಪ್ರಶ್ನೆಗಳಿಗೆ ಮೊದಲು ಉತ್ತರಿಸುವಿರಾ..? ನಂಬರ್ 1 ಅವರಾದರೆ ನಂಬರ್ 2 ಯಾರು?!

“ಕರ್ನಾಟಕ ಅತ್ಯಂತ ಪುಣ್ಯದ ನಾಡು. ಈ ನಾಡಿಗೆ ಕಾಲಿಟ್ಟಿದ್ದೇ ನನ್ನ ಪುಣ್ಯ. ಇದೇ ಮಣ್ಣಿನಲ್ಲಿ ಕೋಟಿ ಕೋಟಿ ಭಕ್ತರ ಆರಾಧ್ಯ ದೇವನಾದ ರಾಮಭಕ್ತ ಹನುಮಂತ ಜನಿಸಿದ್ದು ನಿಜವಾಗಿಯೂ ಕರ್ನಾಟಕಕ್ಕೆ ಹೆಮ್ಮೆ. ಇಂತಹ ಪುಣ್ಯದ ಮಣ್ಣಿನಲ್ಲಿ ನನ್ನನ್ನು ಪ್ರೀತಿಯಿಂದ ಸ್ವಾಗತಿಸಿದ್ದಕ್ಕೆ ಉತ್ತರ ಕರ್ನಾಟಕದ ಜನತೆಗೆ ಮನಃಪೂರ್ವಕ ಧನ್ಯವಾದಗಳು”.

ಇದು ಮೊನ್ನೆ ತಾನೇ ಕರುನಾಡಿಗೆ ಬಂದಿದ್ದ ಹಿಂದೂ ಬೆಂಕಿ ಚೆಂಡು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‍ರವರ ಕರ್ನಾಟಕದ ಜನತೆಯ ಬಗೆಗಿನ ನುಡಿಗಳು. ಹಿಂದೂಗಳ ಪಾಲಿನ ಹೃದಯ ಸಾಮ್ರಾಟ್ ಆಗಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕರ್ನಾಟಕಕ್ಕೆ ಬರುತ್ತಾರೆ ಎಂದು ತಿಳಿದ ಕರ್ನಾಟಕದ ಮಂದಿಯೇ ಪುಳಕಿತರಾಗಿದ್ದರು.

ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೊರತು ಪಡಿಸಿದರೆ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ವ್ಯಕ್ತಿ ಎಂದರೆ ಅದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್. ಹೀಗಾಗಿ ಇವರು ಬರುತ್ತಾರೆಂದರೆ ಜನತೆ ಚಾತಕ ಪಕ್ಷಿಗಳಂತೆ ಕಾಯುತ್ತಾ ಕುಳಿತಿರುತ್ತಾರೆ.

ಸಿಎಂ ಸಿದ್ದರಾಮಯ್ಯರನ್ನು ಕುಟುಕಿದ್ದ ಯೋಗಿ…

ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದಿದ್ದ ಭಾರತೀಯ ಜನತಾ ಪಕ್ಷದ ಪರಿವರ್ತನಾ ಯಾತ್ರೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಖ್ಯ ಅಥಿತಿಯಾಗಿ ಆಗಮಿಸಿದ್ದರು. ಸಾವಿರಾರು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಯೋಗಿ ಬರುತ್ತಾರೆಂದೇ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಹೀಗೆ ಆಗಮಿಸಿದ್ದ ಯೋಗಿ ಆದಿತ್ಯನಾಥ್ ಕರ್ನಾಟಕ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಹಿಂದೂಗಳನ್ನು ಧಮನಿಸುತ್ತಿರುವ ಸಿದ್ದರಾಮಯ್ಯರನ್ನು ತನ್ನದೇ ಶೈಲಿಯಲ್ಲಿ ತರಾಟೆಗೆ ತೆಗೆದುಕೊಂಡಿದ್ದರು.

“ಇದು ರಾಮಭಕ್ತ ಹನುಮ ಜನಿಸಿದ ಪುಣ್ಯದ ನಾಡು. ಈ ನಾಡಿನಲ್ಲಿ ರಾಮ ಭಜನೆ, ಹನುಮ ಭಜನೆ ನಡೆಯಬೇಕಿತ್ತು. ಆದರೆ ಇಲ್ಲಿನ ಮುಖ್ಯಮಂತ್ರಿಗಳು ಏನು ಮಾಡುತ್ತಿದ್ದಾರೆ?, ಇಲ್ಲಿ ಹನುಮ ಪೂಜೆ ಮಡುವ ಬದಲು ಇಲ್ಲಿನ ಮುಖ್ಯಮಂತ್ರಿಗಳು ಟಿಪ್ಪು ಪೂಜೆಯನ್ನು ಮಾಡುತ್ತಾ ಇದ್ದಾರೆ. ಯಾರಿಗೂ ಇಷ್ಟವಿಲ್ಲದ ದೇಶದ್ರೋಹಿ ಟಿಪ್ಪುವಿನ ಜಯಂತಿ ಇಲ್ಲಿ ಮಾಡುವ ಅವಶ್ಯಕತೆಯಾದರೂ ಏನಿತ್ತು.? ಟಿಪ್ಪು ಓರ್ವ ಮತಾಂಧ. ಅವನ ಜಯಂತಿ ಆಚರಿಸಿ ಮುಖ್ಯಮಂತ್ರಿಗಳು ರಾಜ್ಯದ ಜನತೆಗೆ ಯಾವ ಸಂದೇಶವನ್ನು ಸಾರುತ್ತಾರೆ.?

ರಾಜ್ಯದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರ ಸಾಲು ಸಾಲು ಹತ್ಯೆಗಳು ನಡೆಯುತ್ತಿದ್ದರೂ ಸಿಎಂ ಸಿದ್ರಾಮಯ್ಯ ಯಾಕೆ ಇನ್ನೂ ಮೌನವಾಗಿದ್ದಾರೆ.? ಇಲ್ಲಿನ ಕೊಲೆಗಡುಕ ಮತಾಂಧರಿಗೆ ಬೆಂಬಲ ನೀಡುವ ಸಿದ್ದರಾಮಯ್ಯರನ್ನು ಅಧಿಕಾರದಿಂದ ಕೆಳಗಿಳಿಸಬೇಕು. ಮಾತ್ರವಲ್ಲದೆ ಹಿಂದೂ ವಿರೋಧಿ ನೀತಿಯನ್ನು ಅನುಸರಿಸಿದ ಕಾಂಗ್ರೆಸ್ ಸರಕಾರವನ್ನೇ ಕಿತ್ತೊಗೆಯಬೇಕು.

ಉತ್ತರ ಪ್ರದೇಶದಲ್ಲಿ ಅಷ್ಟೊಂದು ಜನ ಸಂಖ್ಯೆಯಿದ್ದರೂ ನಾವು ಅಧಿಕಾರಕ್ಕೆ ಬಂದೊಡನೆ ರೈತರ ಸಾಲವನ್ನು ಮನ್ನಾ ಮಾಡಿದ್ದೇವೆ. ಆದರೆ ಇಷ್ಟು ವರ್ಷವಾದರೂ ಇಲ್ಲಿನ ರಾಜ್ಯ ಕಾಂಗ್ರೆಸ್ ಸರಕಾರ ಏನಾದರೂ ಸಾಲಮನ್ನಾ ಮಡಿದೆಯೇ..? ಸಾಲ ಮನ್ನಾ ಮಾಡಿದ್ದೇವೆ ಎಂದು ಮಾತಿನಲ್ಲೇ ಹೇಳುತ್ತಿರುವ ಮುಖ್ಯಮಂತ್ರಿಗಳಿಗೆ ರೈತರ ಬಗ್ಗೆ ನಿಜವಾಗಿಯೂ ಕಾಳಜಿ ಇದೆಯೇ. ಅವರು ಮಾಡಿದ್ದು ಸಾಲ ಮನ್ನಾ ಎಂದು ಯಾರಾದರೂ ಹೇಳಬಹುದೇ?”

ಇದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಕಾಲೆಳೆದ ಪರಿ. ಅವರ ಮಾತಿನಲ್ಲಿ ಒಂದೊಂದು ಪದಕ್ಕೂ ಅದ್ಭುತವಾದ ಅರ್ಥವಿತ್ತು. ಅವರ ಮಾತಿನ ಪ್ರಖರತೆಗೆ ನೆರೆದ ಸಾವಿರಾರು ಅಭಿಮಾನಿಗಳು ಉದ್ಘೋಷಣೆಗಳನ್ನು ಕೂಗಿದ್ದರು. ಹುಬ್ಬಳ್ಳಿ ಅಕ್ಷರಷಃ ಯೋಗಿಮಯವಾಗಿತ್ತು.

ಯೋಗಿಯವರನ್ನು ಟೀಕಿಸಿದ ಸಿದ್ದು..!!!

ನಯಾ ಪೈಸೆಯ ಯೋಗ್ಯತೆ ಇಲ್ಲದಿದ್ದರೂ ಪರವಾಗಿಲ್ಲ ಮತ್ತೊಬ್ಬರನ್ನು ಟೀಕಿಸಲು ನಮ್ಮ ರಾಜ್ಯದ ಸಿದ್ದರಾಮಯ್ಯರ ನಾಲಗೆ ಚೆನ್ನಾಗಿ ತಿರುಗುತ್ತದೆ. ತಾನು ಆಳುತ್ತಿರುವ ರಾಜ್ಯದಲ್ಲಿ ಜನರು ನೆಮ್ಮದಿಯಿಂದ ಉಸಿರಾಡಲೂ ಸಾಧ್ಯವಾಗದಿದ್ದರೂ ಪರವಾಗಿಲ್ಲ ಮತ್ತೊಬ್ಬರನ್ನು ಟೀಸುವುದೆಂದರೆ ಈ ನಮ್ಮ ಮುಖ್ಯಮಂತ್ರಿಗಳಿಗೆ ಅದೇನೋ ಪ್ರೀತಿ.

ಈ ಕಾರಣಕ್ಕಾಗಿಯೇ ಏನೋ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‍ರನ್ನು ಮತ್ತು ಅವರು ಆಳುತ್ತಿರುವ ರಾಜ್ಯವನ್ನು ಟೀಕಿಸಿದ್ದಾರೆ. “ಉತ್ತರ ಪ್ರದೇಶ ಕೋಮು ಗಲಭೆ ಹಾಗೂ ಹಿಂಸೆಯಲ್ಲಿ ನಂಬರ್ ವನ್ ಸ್ಥಾನದಲ್ಲಿ ಇದೆ. ಅದನ್ನು ಸರಿಮಾಡಲಿ. ಮತ್ತೆ ನಮ್ಮ ರಾಜ್ಯದ ವಿಚಾರಕ್ಕೆ ಬರಲಿ” ಎಂದು ಟೀಕಿಸಿದ್ದಾರೆ.

ಮುಖ್ಯಮಂತ್ರಿಗಳೇ… ಮೊದಲು ನಿಮ್ಮ ರಾಜ್ಯವನ್ನೊಮ್ಮೆ ನೋಡುವಿರಾ..?

ಈ ರಾಜ್ಯದಲ್ಲಿ ನಿರಂತರವಾಗಿ ಹಿಂದೂ ಸಂಘಟನೆಗಳ ಹತ್ಯೆಗಳು ನಡೆಯುತ್ತಿದೆ. ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಹತ್ಯೆಗಳು ನಡೆಯುತ್ತಿದೆ. ರೈತರ ಆತ್ಮಹತ್ಯೆಯ ಸಂಖ್ಯೆಯು ಸಾವಿರದ ಗಡಿ ದಾಟಿದೆ. ಸಚಿವರುಗಳ ಕೋಟಿ ಕೋಟಿ ಅವ್ಯವಹಾರಗಳು ಒಂದೊಂದೇ ಬಯಲಿಗೆ ಬರುತ್ತಿದೆ. ನಿಷ್ಟಾವಂತ ಪೊಲೀಸ್ ಸಹಿತ ದಕ್ಷ ಸರ್ಕಾರಿ ಅಧಿಕಾರಿಗಳನ್ನು ಕೊಲೆ ಮಾಡಿರುವ ಕೀರ್ತಿ ಈ ದೇಶದಲ್ಲಿ ಯಾರಿಗಾದರೂ ಇದ್ದರೆ ಅದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮಾತ್ರ.

ಆ ಭಾಗ್ಯ ಈ ಭಾಗ್ಯ ಎಂದು ಬೇಡದ ಭಾಗ್ಯಗಳನ್ನು ಘೋಷಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಹಿಂದೂಗಳಿಗೆ ಜೀವ ಭಾಗ್ಯವನ್ನು ನೀಡುವಲ್ಲಿ ವಿಫಲವಾಗಿತ್ತು. ದೇವಸ್ಥಾನದ ಹಣಗಳನ್ನೆಲ್ಲಾ ಕೊಳ್ಳೆ ಹೊಡೆದು ಬಹುಸಂಖ್ಯಾತ ಹಿಂದೂಗಳಿಗೆ ದ್ರೋಹವನ್ನು ಎಸಗಿತ್ತು. ದೇವಸ್ಥಾನಗಳ ಹಣಗಳನ್ನೆಲ್ಲಾ ಕಬಳಿಸಿ ಚರ್ಚ್ ಹಾಗೂ ಮಸೀದಿಗಳಿಗೆ ಹಣಗಳನ್ನು ನೀಡಿತ್ತು.

ರಾಜ್ಯದಲ್ಲಿ ಹತ್ಯೆಗಳು, ಅತ್ಯಾಚಾರಗಳು, ಸುಲಿಗೆಗಳು, ಎಗ್ಗಿಲ್ಲದೆ ನಡೆಯುತ್ತಿದೆ. ಕೋಮುಗಲಭೆಗಳು ತಾರಕಕ್ಕೇರಿದೆ. ಕೋಮುಗಲಭೆ ಹಾಗೂ ಹತ್ಯೆಗಳಲ್ಲಿ ಕರ್ನಾಟಕ ರಾಜ್ಯ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಹೀಗಿರುವಾಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‍ರನ್ನು ಟೀಕಿಸುವುದು ರಾಜ್ಯದ ಮುಖ್ಯಮಂತ್ರಿಗಳ ಬಾಲಿಶತನವನ್ನು ಬಿಂಬಿಸುತ್ತದೆ.

ಮುಖ್ಯಮಂತ್ರಿಗಳೇ ಇದಕ್ಕೆ ಉತ್ತರಿಸಿ…

* ಉತ್ತರ ಪ್ರದೇಶ ಅನ್ನೋದು ಕರ್ನಾಟಕದ ಹಾಗೆ ಪುಟ್ಟ ರಾಜ್ಯ ಅಲ್ಲ. ಅದು ದೇಶದಲ್ಲಿಯೇ ಅತಿದೊಡ್ಡ ರಾಜ್ಯವಾಗಿದೆ. ಕರ್ನಾಟಕದ ಜನಸಂಖ್ಯೆ 7 ಕೋಟಿಯಾದರೆ, ಉತ್ತರ ಪ್ರದೇಶದ ಜನಸಂಖ್ಯೆ 21 ಕೋಟಿ.

* ಉತ್ತರ ಪ್ರದೇಶದಲ್ಲಿ ಹಿಂದಿನ ಸರ್ಕಾರ ಇರುವಾಗ ಕಾನೂನು ಸುವ್ಯವಸ್ಥೆ ತೀರಾ ಹಾಳಾಗಿತ್ತು. ಕೊಲೆ ಸುಲಿಗೆಗಳು ತಾರಕಕ್ಕೇರಿತ್ತು. ಉತ್ತರ ಪ್ರದೇಶವೆಂದರೆ ಅದು ಗೂಂಡಾಗಳ ರಾಜ್ಯ ಎಂಬಾಂತಾಗಿತ್ತು. ಆದರೆ ಯೋಗಿ ಮುಖ್ಯಮಂತ್ರಿಯಾದ ನಂತರ ಇವೆಲ್ಲಾ ಕಡಿಮೆಯಾಗಿದೆ ಎಂದು ಪೊಲೀಸರೇ ಮಾಹಿತಿ ನೀಡಿದ್ದು ಅರಿವಿದೆಯಾ ಸಿದ್ದರಾಮಯ್ಯನವರೇ..?

* ಕೊಲೆಕಟುಕರ ತವರಾಗಿದ್ದ ಉತ್ತರ ಪ್ರದೇಶ ಈಗ ಗೂಂಡಾ ಮುಕ್ತ ರಾಜ್ಯವಾಗಿದ್ದು ಮರೆತು ಹೋಯಿತೇ? ಯೋಗಿ ಮುಖ್ಯಮಂತ್ರಿಯಾದ ನಂತರ ನೂರಾರು ಗೂಂಡಾಗಳನ್ನು ಎನ್‍ಕೌಂಟರ್ ಮಾಡಲಾಗಿತ್ತು. ಈಗ ಇಂತಹ ಗೂಂಡಾಗಳ ಸದ್ದೇ ಅಡಗಿ ಹೋಗಿದೆ.

* ಕರ್ನಾಟಕದಲ್ಲಿ ಇಂತಹ ಧೈರ್ಯವನ್ನು ಮಾಡಿದ್ದೀರಾ ಮುಖ್ಯಮಂತ್ರಿಗಳೇ..? ಗೂಂಡಾನ ಜೊತೆ ಹೋರಾಡಿ ತನ್ನ ಪ್ರಾಣವನ್ನೇ ಕಳೆದುಕೊಂಡ ಮಲ್ಲಿಕಾರ್ಜುನ ಬಂಡೆಗೆ ನೀವು ಯಾವ ಮಾರ್ಯಾದೆ ಕೊಟ್ಟಿದ್ದೀರಾ..? ದಕ್ಷ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ತಮ್ಮ ಅಂಕುಶದಲ್ಲಿ ಸಿಲುಕುವ ಅಧಿಕಾರಿಗಳನ್ನು ಮಾತ್ರ ಕಾಂಗ್ರೆಸ್ ಪಕ್ಷದ ಏಜೆಂಟ್‍ಗಳಂತೆ ನಡೆಸಿಕೊಳ್ಳುತ್ತೀರಾ..? ನಿಮಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಗಳ ಬಗ್ಗೆ ಮಾತನಾಡುವ ಹಕ್ಕಿದೆಯೇ..?

* 7 ಕೋಟಿ ಜನ ಇರುವ ಕರ್ನಾಟದಲ್ಲೇ ಅರಾಜಕತೆಯನ್ನು ತಡೆಯಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲ. ಇನ್ನು 21 ಕೋಟಿ ಇರುವ ಉತ್ತರ ಪ್ರದೇಶವನ್ನು ನಿರ್ವಹನೆ ಮಾಡುವುದು ಎಷ್ಟು ಕಷ್ಟ ಎಂದು ಬಲ್ಲಿದ್ದೀರಾ..?

ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಿಮಗೆ ತಾಕತ್ತಿದಿಯಾ..?

* ಹಿಂದೂಗಳ ಸಾಲು ಸಾಲು ಹತ್ಯೆಗಳನ್ನು ಮಾಡುತ್ತಾ ಬಂದಿರುವ ಪಿಎಫ್‍ಐ ಹಾಗೂ ಕೆಎಫ್‍ಡಿ ಸಂಘಟನೆಗಳನ್ನು ನಿಷೇಧಿಸುವ ಬಗ್ಗೆ ಮಾತನಾಡುವ ತಾಕತ್ತು ನಿಮಗಿದಿಯಾ..?

* ದೇವಸ್ಥಾನಗಳ ಹಣಗಳನ್ನು ಮಸೀದಿಗಳಿಗೆ ಕೊಡುತ್ತೀರಿ. ದಸರಾ ಹಾಗೂ ಇತರ ಹಿಂದೂ ಆಚರಣೆಗಳನ್ನು ಅದೇ ಹಣದಲ್ಲಿ ವಿಜ್ರಂಭಣೆಯಿಂದ ಮಾಡಲು ತಾಕತ್ತಿದಿಯಾ..?

* ನಿಮ್ಮದೇ ಸಚಿವರುಗಳು ದಕ್ಷ ಅಧಿಕಾರಿಗಳ ಕೊಲೆಗಳನ್ನು ಮಾಡಿದ್ದಾರೆ ಎಂದು ಸಿಬಿಐ ಎಫ್‍ಐಆರ್ ಸಮೇತ ದಾಖಲು ಮಾಡಿದ್ದಾರೆ. ಅವರ ರಾಜೀನಾಮೆ ಕೇಳುವ ತಾಕತ್ತು ನಿಮಗಿದಿಯಾ..?

* ಬಜರಂಗ ದಳ, ವಿಶ್ವ ಹಿಂದೂ ಪರಿಷತ್ ಬಗ್ಗೆ ಪ್ರಶ್ನಿಸುವ ನಿಮಗೆ ಮೂಲಭೂತವಾದಿ ಮುಸಲ್ಮಾನರ ಬಗ್ಗೆ ಮಾತನಾಡುವ ತಾಕತ್ತಿದಿಯಾ..?

* ಎಲ್ಲಾ ಬಿಡಿ. ಈ ರಾಜ್ಯದಲ್ಲಿ ಹಿಂದೂಗಳು ಕೋಮು ಗಲಭೆ ಮಾಡುತ್ತಾರೆ ಎನ್ನುವ ನೀವು ಮುಸಲ್ಮಾನರಿಂದಲೇ ಇವೆಲ್ಲ ಆರಂಭವಾಗುತ್ತದೆ ಎನ್ನುವ ಹೇಳಿಕೆ ನೀಡುವ ತಾಕತ್ತಿದಿಯಾ..?

ರಾಜ್ಯ ವಿನಾಶದ ಅಂಚನ್ನು ತಲುಪಿದೆ. ಕಾಂಗ್ರೆಸ್ ಅನ್ನುವ ಮುಳುಗುತ್ತಿರುವ ಹಡಗಿಗೆ ಭಾರತೀಯ ಜನತಾ ಪಕ್ಷದವರನ್ನು ತೆಗಳುವುದು ಬಿಟ್ಟರೆ ಬೇರಾವ ದಾರಿನೂ ಇಲ್ಲದಂತಾಗಿದೆ. ಹೀಗಾಗಿಯೇ ಉತ್ತರ ಪ್ರದೇಶದ ಮುಖ್ಯಮಂತ್ರಿಗಳ ಬಗ್ಗೆ ಇಂತಹ ಹಗುರವಾದ ಮಾತುಗಳನ್ನಾಡಿ ತಮ್ಮ ಮುಖಕ್ಕೆ ತಾವೇ ಮಂಗಳಾರತಿ ಮಾಡಿಕೊಂಡಿದ್ದಾರೆ.

ರಾಜ್ಯಕ್ಕೆ ಯೋಗಿ ಆದಿತ್ಯನಾಥರಂತಹ ಮುಖ್ಯಮಂತ್ರಿಗಳು ಬೇಕೇ ವಿನಹ ಸಿದ್ದರಾಮಯ್ಯರಂತಹ ಸೋಗಲಾಡಿ ಮುಖ್ಯಮಂತ್ರಿಗಳು ಬೇಡವೇ ಬೇಡ. ದಿನವಿಡೀ ಚುರುಕ್ಕಾಗಿ ಕೆಲಸ ಮಾಡುವ ಆದಿತ್ಯನಾಥರಂತವರು ಬೇಕೇ ವಿನಃ ಎಲ್ಲಿ ಹೋದರೂ ನಿದ್ದೆ ಮಾಡುವ ಸಿದ್ದರಾಮಯ್ಯ ಮಾತ್ರ ಬೇಡವೇ ಬೇಡ. ಆಚಾರ ವಿಚಾರಗಳನ್ನು ಪಾಲಿಸುವ ಯೋಗಿಯಂತವರು ಬೇಕೇ ವಿನಃ ಮಾಂಸ ತಿಂದು ದೇವಸ್ಥಾನಕ್ಕೆ ಹೋಗುವ ಭೋಗಿ ಸಿದ್ದರಾಮಯ್ಯರಂತು ನಮಗೆ ಖಂಡಿತಾ ಬೇಡವೇ ಬೇಡ. ಇದು 7 ಕೋಟಿ ಜನರ ಆಶಯ ಅಷ್ಟೆ.

-ಸುನಿಲ್ ಪಣಪಿಲ

Tags

Related Articles

Close