ಪ್ರಚಲಿತ

ರಾಹುಲ್ ಗಾಂಧಿಯನ್ನ ರಾಮಭಕ್ತನಂತೆ ಬಿಂಬಿಸೋಕೆ ಹೆಣಗಾಡುತ್ತಿರೋ ಕಾಂಗ್ರೆಸ್ ಏನು ಮಾಡುತ್ತಿದೆ ಗೊತ್ತಾ?

ಅಯೋಧ್ಯೆಯ ರಾಮಮಂದಿರ ವಿವಾದ ಮತ್ತೆ ಕಾಂಗ್ರೆಸ್ಸಿಗೆ ಮುಳುವಾಗುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ. ಅತ್ತ ಗುಜರಾತಿನಲ್ಲಿ ಟೆಂಪಲ್ ರನ್ ಮಾಡುತ್ತಿರೋ ರಾಹುಲ್ ಗಾಂಧಿ ತಾನೊಬ್ಬ ಜನಿವಾರ ಧರಿಸುವ ಬ್ರಾಹ್ಮಣ ಅಂತ ಹಿಂದೂಗಳನ್ನ ಓಲೈಸೋಕೆ ಹೆಣಗಾಡುತ್ತಿದ್ದಾನೆ.

ರಾಹುಲ್ ಪಕ್ಕಾ ಶಿವಭಕ್ತ ಅಂತ ಕಾಂಗ್ರೆಸ್ಸಿನವರಿಗೆ ಹಠಾತ್ತಾಗಿ ಭೋಲೆನಾಥ ಶಿವನ ನೆನಪಾಗಿ ಬಿಟ್ಟಿದೆ. ಆದರೆ “ಜನಿವಾರಧಾರಿ ಬ್ರಾಹ್ಮಣ ಹಿಂದೂ” ರಾಹುಲ್ ಗಾಂಧಿಗೆ ಮಾತ್ರ ರಾಮ ಕಣ್ಣಿಗೆ ಕಾಣ್ತಾನೇ ಇಲ್ಲ.

ರಾಹುಲ್ ಗಾಂಧಿ ರಾಮಮಂದಿರ, ರಾಮನ ಕುರಿತಾಗಿ ತುಟಿಕ್ ಪಿಟಿಕ್ ಅಂತಿಲ್ಲ,‌ಅದೇ ಕಾಂಗ್ರೆಸ್ಸಿನ ನಾಯಕನಾಗಿರೋ ಕಪಿಲ್ ಸಿಬಲ್ ಇತ್ತ ಸುನ್ನಿ ವಕ್ಫ್ ಬೋರ್ಡ್ ಪರವಾಗಿ ರಾಮ ಮಂದಿರದ ವಿರುದ್ಧದ ಕೇಸ್ ನಡೆಸುತ್ತಿದ್ದಾನೆ.

ರಾಹುಲ್ ಗಾಂಧಿ ರಾಮನ ಬಗ್ಗೆ ಯಾಕೆ ಮಾತಾಡ್ತಿಲ್ಲ ಅಂತ ಚಾನೆಲ್ ಒಂದ್ರಲ್ಲಿ ಮೊನ್ನೆ ಚರ್ಚೆಯೊಂದು ನಡೆದಿತ್ತು, ಆಗ ಕಾಂಗ್ರೆಸ್ಸನ್ನ ಸಮರ್ಥನೆ ಮಾಡುತ್ತ ಕಾಂಗ್ರೆಸ್ ವಕ್ತಾರನೊಬ್ಬ “ನಾವು ರಾಮನ ವಿರುದ್ಧವಾಗಿದ್ದರೆ ನಮ್ಮ ರಾಜೀವ್ ಗಾಂಧಿ ರಾಮ ಮಂದಿರದ ಬೀಗ ಯಾಕೆ ತೆಗೆಯುತ್ತಿದ್ದರು?” ಅನ್ನೋ ಪ್ರಶ್ನೆಯೊಂದನ್ನ ಕೇಳುತ್ತಿದ್ದ. ಅಷ್ಟಕ್ಕೂ ರಾಜೀವ್ ಗಾಂಧಿ ರಾಮಮಂದಿರದ ಬೀಗ ತೆಗೆಸಿದ್ದಾರೂ ಯಾಕೆ ಗೊತ್ತಾ?

ಈಗ ರಾಹುಲ್ ಗಾಂಧಿ, ಕಾಂಗ್ರೆಸ್ಸಿಗೆ ಹೇಗೆ ಹಿಂದೂಗಳ ಮತಬ್ಯಾಂಕ್ ತಮ್ಮ ಪಕ್ಷದಿಂದ ದೂರ ಸರಿಯುತ್ತಿವೆ ಅನ್ನೋ ಅರಿವಾಗಿದೆಯೋ ಹಾಗೆಯೇ ರಾಜೀವ್ ಗಾಂಧಿ ಗಾಗಿತ್ತು ಅನ್ನೋದನ್ನ ಕಾಂಗ್ರೆಸ್ಸಿನವರು ಎಲ್ಲೂ ಹೇಳಲ್ಲ.

ಆಯೋಧ್ಯೆಯ ರಾಮಮಂದಿರ ಬೀಗ ತೆಗೆಸುವುದರ ಹಿಂದೆ ರಾಜೀವ್ ಗಾಂಧಿಯ ಕುತಂತ್ರವೇನಿತ್ತು ಗೊತ್ತಾ..!? ಅದು 1984, ಸಿಖ್ಖರ ಪವಿತ್ರ ಕ್ಷೇತ್ರವಾದ ಸ್ವರ್ಣಮಂದಿರದಲ್ಲಿ ಸೇನಾ ಟ್ಯಾಂಕರ್ ಗಳು ನುಗ್ಗಿ ಖಾಲಿಸ್ತಾನಿ ಉಗ್ರರನ್ನ ಹೊಡೆದುರುಳಿಸಿದ್ದರ ಪರಿಣಾಮವಾಗಿ ಸ್ವರ್ಣಮಂದಿರ ಧ್ವಂಸವಾಗಿತ್ತು.ಇದರ ಪ್ರತೀಕಾರ ತೀರಿಸಿಕೊಳ್ಳಲು ಇಂದಿರಾ ಗಾಂಧಿಯವರ ಅಂಗರಕ್ಷಕರಾಗಿದ್ದ ಇಬ್ಬರು ಸಿಖ್ಖರು ಇಂದಿರಾ ಗಾಂಧಿಯ ಹತ್ಯೆಯನ್ನ ಮಾಡಿಬಿಟ್ಟಿದ್ದರು.

ಇಂದಿರಾಗಾಂಧಿಯವರ ಹತ್ಯೆ ನಂತರ ರಾಜೀವ್ ಗಾಂಧಿ ಪ್ರಧಾನಿ ಪಟ್ಟ ಅಲಂಕರಿಸಿದರು. ಅದೂ ಕೇವಲ 2 ತಿಂಗಳ ಅವಧಿಗೆ, ನಂತರ ಮತ್ತೆ ಚುನಾವಣೆ ನಡೆಯಿತು ರಾಜೀವ್ ಗಾಂಧಿ ಅನುಕಂಪದ ಆಧಾರದ ಮೇಲೆ 409 ಸ್ಥಾನಗಳು ಗೆದ್ದು ಮತ್ತೆ ಪ್ರಧಾನಿ ಗದ್ದುಗೆ ಏರಿದ ಭಾರತದ ಕಿರಿಯ ವಯಸ್ಸಿನ ಪ್ರಧಾನಿಯಾದರು.

ರಾಜೀವ್ ಗಾಂಧಿ ಆಯೊಧ್ಯೆಯ ರಾಮಜನ್ಮಭೂಮಿಯ ಪ್ರವೇಶ ದ್ವಾರ ಏಕೆ ತೆಗೆದಿಸಿದರು? ಅದರ ಹಿಂದಿನ ರಾಜಕೀಯ ದುರುದ್ದೇಶವಾದರೂ ಏನಾಗಿತ್ತು ಗೊತ್ತಾ? ಅದಕ್ಕೆ ಕಾರಣವಾಗಿದ್ದು ಶಹಬಾನು ಪ್ರಕರಣ, ಅದು ನವೆಂಬರ್ 6 ,1985 ಮಧ್ಯ ಪ್ರದೇಶದ ಇಂದೋರ್ ನ ಮುಸ್ಲಿಂ ಕುಟುಂಬದಲ್ಲಿ ನಡೆದ ಘಟನೆ. ಶಹಬಾನು ಮತ್ತು ಮಹಮ್ಮದ್ ಅಹಮದ ಖಾನ್ ಎಂಬ ದಂಪತಿ ಇದ್ದರು.

ಶಹಬಾನು ತಮ್ಮ ಮಕ್ಕಳ ಪೋಷಣೆಗಾಗಿ, ಅವರ ವಿದ್ಯಾಭ್ಯಾಸಕ್ಕಾಗಿ ಮುಹಾವಜಾ ಅಂದರೆ ಜೀವನಾಂಶದ ಖರ್ಚಿಗಾಗಿ ಗಂಡನಿಗೆ ಬೇಡಿಕೆಯಿಟ್ಟಳು. ಇದಕ್ಕೆ ಸ್ಪಂದಿಸದ ವಕೀಲ ವೃತಿಯಲ್ಲಿದ್ದ ಅಹಮದ್ ಖಾನ್ ಜಗಳವಾಡಿ ಮೂರು ಬಾರಿ ‘ತಲಾಕ್’ ಹೇಳಿಯೇ ಬಿಟ್ಟ, ಅಂದರೆ ಶಹಬಾನುಗೆ ವಿಚ್ಛೆದನ ನೀಡಿಯೇ ಬಿಟ್ಟನು.

ಶಹಬಾನು ಅವರು ಕುಟುಂಬ ನಿರ್ವಹಣೆಗೆ ಆರ್ಥಿಕವಾಗಿ ಅಹಮದ್ ತಿಂಗಳಿಗೆ ದುಡ್ಡು ಕೊಡಬೇಕೆಂದು ಕೋರ್ಟ್ ನ ಮೆಟ್ಟಿಲೇರಿದರು. ಜಿಲ್ಲಾ ನ್ಯಾಯಾಲಯದಲ್ಲಿ ಮತ್ತು ಉಚ್ಚ ನ್ಯಾಲಯದಲ್ಲಿಯೂ ಕೂಡ ಶಹಬಾನು ಅವರ ಪರವಾಗಿಯೇ ತೀರ್ಪು ಬಂದಿತ್ತು.

ಈ ತೀರ್ಪಿನ ನಂತರ ಅಹಮದ್ ಸುಪ್ರೀಂ ಕೋರ್ಟಿನ ಬಾಗಿಲಿಗೆ ಹೋದ ಹಾಗು ಈ ಪ್ರಕರಣ ಸುಪ್ರೀಂ ಕೋರ್ಟಿನ ಅಂಗಳಕ್ಕೆ ಹೋಗಿ ರಾಷ್ಟ್ರಾದ್ಯಂತ ಚರ್ಚೆಗೆ ಎಡೆ ಮಾಡಿಕೊಟ್ಟಿತು.ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸಿದ ಅಹಮದ್ ಖಾನ್ “ಇಸ್ಲಾಮಿನ ಷರಿಯಾ ಕಾನೂನಿನ ಪ್ರಕಾರ ತಲಾಕ್ ಕೊಟ್ಟರೆ ಯಾವುದು ನಿರ್ವಹಣೆ ದುಡು ಕೊಡುವ ಅವಶ್ಯಕತೆ ಇಲ್ಲ” ಎಂದು ಮಂಡಿಸಿದ.

ಏಪ್ರಿಲ್ 19 ,1986 ಸುಪ್ರೀಂ ಕೋರ್ಟ್ 5 ಸದಸ್ಯರ ಪೀಠ ತೀರ್ಪು ಪ್ರಕಟಿಸಿತ್ತು “ಅಹಮದ್ ಶಹಬಾನುಗೆ ಪ್ರತಿ ತಿಂಗಳು ಆಕೆಯ ಜೀವನ ನಿರ್ವಹಣೆಗಾಗು 500 ರುಪಾಯಿ ದುಡ್ಡು ನೀಡಬೇಕು”
ಎಂದು ತೀರ್ಪು ಪ್ರಕಟಿಸಿತು.

ಸುಪ್ರೀಂ ಕೋರ್ಟ್ ನ ತೀರ್ಪಿನ ನಂತರ ದೇಶದೆಲ್ಲೆಡೆ ಮುಸ್ಲೀಮರು ಆ ತೀರ್ಪನ್ನು ವಿರೋಧಿಸಿದರು ಮತ್ತು ಇದು ತಮ್ಮ ಇಸ್ಲಾಮಿನ ಕುರಾನ್ ಗೆ ಅಗೌರವ ತೋರಿದ ಹಾಗೆ ಎಂದು ಆಕ್ರೋಶವ್ಯಕ್ತಪಡಿಸಿದರು.

ಪ್ರಾರಂಭದಲ್ಲಿ ರಾಜೀವ್ ಗಾಂಧಿ ಸುಪ್ರೀಂ ಕೋರ್ಟ್ ನ ತೀರ್ಪಿನ ಪರವಾಗಿಯೇ ಇದ್ದರು, ಮುಸ್ಲಿಂ ವೋಟ್ ಬ್ಯಾಂಕ್ ಕಳೆದುಕೊಳ್ಳುವ ಭಯದಿಂದ ನಂತರ ಕೋರ್ಟಿನ ತೀರ್ಪನ್ನ ವಿರೋಧಿಸಿದರು.

ರಾಜೀವ್ ಗಾಂಧಿ ಮುಸ್ಲಿಂ ಓಲೈಸುವ ತಂತ್ರ ಹೆಣೆದರು “Muslim women protection of rights and divorce bill” ಎಂಬ ಬಿಲ್ಲನ್ನ ಸಂಸತ್ತಿನಲ್ಲಿ ಮಂಡಿಸಿದರು. ಈ Bill ನ ಅನ್ವಯ “ವಿಚೇದನವಾದ ನಂತರ 3 ತಿಂಗಳಿಗೆ ಮಾತ್ರ ನಿರ್ವಹಣೆ ದುಡ್ಡು ಕೊಡಬೇಕು ಎಂದು ಹೇಳಿತು.” 8 ಮೇ, 1986 ರಂದು ಹಲವು ಸದಸ್ಯರ ವಿರೋಧದ ನಡುವೆ
“Muslim women protection of rights and divorce bill” ಜಾರಿಯಾಗಿತ್ತು.

ಅಷ್ಟರಲ್ಲಿ, ಉತ್ತರ ಭಾರತದ ಹಲವು ಕಡೆ ಉಪ ಚುನಾವಣೆ ನಡೆಯಿತು, ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋಲು ಕಂಡಿತ್ತು. ಚುನಾವಣೆ ಸೋಲಿನ ಅವಲೋಕನ ಮಾಡಿದಾಗ ರಾಜೀವ್ ಗಾಂಧಿ ಗೆ ಅರಿವಾಗಿದ್ದು ಹಿಂದೂಗಳ ಬೆಂಬಲ ಕಾಂಗ್ರೆಸ್ ಪಕ್ಷಕ್ಕೆ ಕಡಿಮೆಯಾಗಿದೆ ಕಾರಣ ಮುಸ್ಲಿಂ ಪರವಾಗಿ ಮಾಡಿದ ಆ ಬಿಲ್ ನ ಪರಿಣಾಮ. ಇದೇ ಸಮಯದಲ್ಲಿ ಉತ್ತರಪ್ರದೇಶ ಹಾಗು ದೇಶಾದ್ಯಂತ ಎದ್ದಿದ್ದ ರಾಮಮಂದಿರದ ಕಾವನ್ನ ರಾಜಕೀಯ ದಾಳವಾಗಿ ರಾಜೀವ್ ಗಾಂಧಿ ಬಳಸಿಕೊಂಡರು.

ಹೌದು ಹಿಂದೂಗಳ ವೋಟ್ ಬ್ಯಾಂಕ್ ಪಡೆಯುವ ಉದ್ದೇಶದಿಂದ ರಾಜೀವ್ ಗಾಂಧಿ ಅಯೋಧ್ಯೆ ಪ್ರಕರಣದ ಬೆಂಕಿಗೆ ತುಪ್ಪ ಸುರಿದರು. ಉಮೇಶ್ ಚಂದ್ ಪಾಂಡೆ ಎಂಬಾತ ಫೈಜಾಬಾದ್ ಜಿಲ್ಲಾ ನ್ಯಾಯಾಲಯದಲ್ಲಿ ಅಯೋಧ್ಯೆ ಪ್ರವೇಶಕ್ಕೆ ಅನುವು ಮಾಡಿಕೊಡಬೆಂದು ಕೋರಿದ್ದರು.

ಇದನ್ನ ತನ್ನ ರಾಜಕೀಯ ಲಾಭಕ್ಕಾಗಿ ಬಳಸಿದ ರಾಜೀವ್ ಗಾಂಧಿ ಕೋರ್ಟ್ ಮೇಲೆ ಹೆಚ್ಚಿನ ಒತ್ತಡ ಹೇರಿದರು ಮತ್ತು ಅಯೋಧ್ಯೆಯ ಪ್ರವೇಶ ದ್ವಾರ ತೆಗೆಯಲೂ ಹೇಳಿದರು. 30 ಜನವರಿ 1986 ರಂದು ಫೈಜಾಬಾದ್ ಜಿಲ್ಲಾ ಕೋರ್ಟ್ ಅಯೋಧ್ಯೆಯ ಪ್ರವೇಶ ದ್ವಾರ ತೆಗೆಯಬೇಕೆಂದು ತೀರ್ಪು ನೀಡಿತು. ತೀರ್ಪು ಬಂದ 40 ನಿಮಿಷದಲ್ಲಿ ಅಯೋಧ್ಯೆ ಬಾಗಿಲು ತೆಗೆಯಲು ರಾಜೀವ್ ಗಾಂಧಿ ಆದೇಶಿಸಿದರು. ಇದರಿಂದ ಅರ್ಥವಾಗತ್ತೆ ಗಾಂಧಿ ರಾಜೀವ್ ಏಕೆ ಅಯೋಧ್ಯೆ ಬಾಗಿಲು ತೆಗಿಸಿದ್ದರು ಅಂತ.

ಹಿಂದೂ ಧರ್ಮದ ಮೇಲಿನ ಅಥವ ಹಿಂದುಗಳ ಭಾವನೆಗಳಿಗೆ ಗೌರವಿಸಿ ಬಾಗಿಲನ್ನ ತೆಗೆಸಿರಲಿಲ್ಲ, ಬಾಗಿಲು ತೆಗೆಸಿದ್ದು ವೋಟ್ ಬ್ಯಾಂಕ್ ರಾಜಕೀಯಕ್ಕಾಗಿತ್ತು ಅಂತ ಆಗ ತಾವು ಹಿಂದುಗಳ ಪರವಾಗಿದ್ದೇವೆ ಬೊಬ್ಬೆಯಿಟ್ಟ ಕಾಂಗ್ರೆಸ್ ಹಿಂದೂ ಮತಗಳನ್ನ ಸಲೀಸಾಗಿ ಮತ್ತೆ ತಮ್ಮ ಪಕ್ಷದತ್ತ ಸೆಳೆದಿದ್ದರು, ಆದರೆ ಕಾಂಗ್ರೆಸ್ಸಿನ ದುರುದ್ದೇಶ ಜನರಿಗೆ ಕ್ರಮೇಣ ಅರ್ಥವಾಗುತ್ತ ಕಾಂಗ್ರೆಸ್ಸಿನತ್ತ ಒಲವು ಕಡಿಮೆಯಾಗುತ್ತ ಹೋಯಿತು.

ಈಗಲೂ ಕಾಂಗ್ರೆಸ್ ಹಿಂದುಗಳ ಪರವಾಗಿರದೆ ವೋಟ್ ಬ್ಯಾಂಕ್ ಸಿಗುತ್ತೆ ಅಂತಾದರೆ ಯಾವ ಮಂದಿರಕ್ಕೂ ಬರೋಕೆ ಸೈ ಯಾವ ಮಸೀದಿಯಲ್ಲೂ ನಮಾಜ್ ಮಾಡಲು ಸೈ ಅನ್ನೋದನ್ನ ಸದ್ಯ ಗುಜರಾತಿನಲ್ಲಿ ಗುಡಿ ಗುಂಡಾರಗಳನ್ನ ಸುತ್ತುತ್ತಿರುವ ರಾಜೀವ್ ಗಾಂಧಿಯವರ ಸುಪುತ್ರ ರಾಹುಲ್ ಗಾಂಧಿಯನ್ನ ನೋಡಿದರೇ ಅರ್ಥವಾಗುತ್ತೆ.

ಆದರೆ ಇವರ ಹಿಂದೂ ಭಕ್ತಿ ಕೇವಲ ಚುನಾವಣಾ ನಿಮಿತ್ತ ಅನ್ನೋದು ಕಪಿಲ್ ಸಿಬಲ್ ಸುಪ್ರಿಂ ಕೋರ್ಟಿನಲ್ಲಿ ಮಾಡಿದ ವಾದದಿಂದ ಸ್ಪಷ್ಟವಾಗಿ ಅರ್ಥವಾಗುತ್ತೆ. ಕಪಿಲ್ ಸಿಬಲ್ ಹೇಳ್ತಾನೆ, “2019 ರ ಚುನಾವಣೆಯ ನಂತರ ಈ ಕೇಸ್ ನ್ನ ಹಿಯರಿಂಗ್ ಮಾಡಿ”

ಅಂದರೆ ಇವರಿಗೆ ಚುನಾವಣಾ ಮುನ್ನ ರಾಮಮಂದಿರದ ಪ್ರಕ್ರಿಯೆ ಮುಗಿಯೋದು ಬೇಕಾಗಿಲ್ಲ, ಹಾಗೇನಾದರೂ ಆದರೆ 2019 ರ ಚುನಾವಣೆಗೆ ಹಿಂದುಗಳ ಮತಗಳು ಒನ್ ಸೈಡ್ ಆಗಿ ಮೋದಿ ಸರ್ಕಾರಕ್ಕೇ ಬೀಳುತ್ತೆ ಅನ್ನೋದು ಕಾಂಗ್ರೆಸ್ಸಿಗೆ
ಖಾತ್ರಿಯಾಗಿದೆ ಅನ್ಸತ್ತೆ.

ಆದರೆ ರಾಮ, ರಾಮಮಂದಿರ ಅನ್ನೋದು ಹಿಂದುಗಳ ಭಾವನೆಯ ಪ್ರತೀಕವಾಗಿದೆ ಹೊರತು ರಾಜಕಾರಣ ಅಲ್ಲ ಅನ್ನೋದು ಕಾಂಗ್ರೆಸ್ ಈಗಲಾದರೂ ಅರ್ಥ ಮಾಡಿಕೊಳ್ಳಬೇಕು.

ಹಿಂದುಗಳು ಸಹಿಷ್ಣುಗಳು, ಕ್ಷಮಾದಾನ ನೀಡುವ ಕ್ಷಮಯಾಧರಿತ್ರಿಗಳು, ಆದರೆ ಕಾಂಗ್ರೆಸ್ ಮಾತ್ರ ಹಿಂದುಗಳ ಭಾವನೆಗಳಿಗೆ ಕೊಳ್ಳಿಯಿಡುತ್ತ ಬಂದಿದ್ದಕ್ಕೇ 2014 ರಲ್ಲಿ ಹಿಂದುಗಳು ಒಗ್ಗಟ್ಟಾಗಿ ಮೋದಿ ಸರ್ಕಾರವನ್ನ ಅಧಿಕಾರಕ್ಕೆ ತಂದದ್ದು.ಈಗಲೂ ಅದೇ ಕುತಂತ್ರ ಮುಂದುವರೆಸಿದರೆ ಕಾಂಗ್ರೆಸ್ ಹೇಳ ಹೆಸರಿಲ್ಲದೆ ಸರ್ವನಾಶವಾಗಬಹುದು!!!

– Vinod Hindu Nationalist

Tags

Related Articles

Close