ಅಂಕಣ

ಹೌದು! ಕಮಲ್ ಹಾಸನ್ ಮತ್ತು ಪ್ರಕಾಶ್ ರಾಜ್ ಹೇಳಿದ್ದರಲ್ಲಿ ಸತ್ಯಾಂಶವಿದೆ! ಆರ್ ಎಸ್ ಎಸ್ ನ ಉಗ್ರವಾದಕ್ಕೆ ಇಲ್ಲಿದೆ ಸಾಕ್ಷ್ಯಾಧಾರಗಳು!!

ಕಮಲ್ ಹಾಸನ್ ಹಿಂದೂ ಭಯೋತ್ಪಾದನೆಯಿದೆಯೆಂದು ಆರ್ ಎಸ್ ಎಸ್ ಸಂಘಕ್ಕೆ ಬೆಟ್ಟು ಮಾಡಿ ತೋರಿಸಿದರು! ಈ ಕೆಳಗಿನ ಅಂಶಗಳನ್ನು ತಿಳಿದರೆ ನಿಮಗೂ
ಹೌದೆನ್ನಿಸಬಹುದು!

ಯಾಕೆ ಕಾಂಗ್ರೆಸ್ಸಿಗರು ಹಾಗೂ ಕಮ್ಯುನಿಸ್ಟರು ರಾಷ್ಟ್ರೀಯ ಸ್ವಯಂ ಸೇವಕ ಸಂಘವೊಂದನ್ನು ಅಷ್ಟು ದ್ವೇಷಿಸುತ್ತಾರೆ ಎಂದನಿಸುತ್ತಿತ್ತು. ಆದರೆ, ಮೊನ್ನೆ ಕಮಲ್ ಹಾಸನ್ ಹಾಗೂ ಕೆಲ ಕಾಂಗ್ರೆಸ್ಸಿಗರು ಸಂಘವನ್ನು ಭಯೋತ್ಪಾದಕ ಸಂಘವೆಂದು ಹೇಳಿದಾಗ ನಿಜಕ್ಕೂ ಸಂಘದ ಬಗ್ಗೆ ತಿಳಿದುಕೊಳ್ಳಲೇ ಬೇಕೆನಿಸಿ ಅಧ್ಯಯನಕ್ಕೆ ಕುಳಿತಾಗ ನಿಜಕ್ಕೂ ಆಘಾತ! ಸತ್ಯ! ಸಂಘವೊಂದು ಭಯೋತ್ಪಾದನೆಯ ಸಂಘಟನೆಯೇ ಬಿಡಿ!

ಸಂಘ ಹುಟ್ಟಿದ ದಿನದಿಂದಲೂ ಸಹ ಮಾಡಿದ್ದೇನು ಗೊತ್ತೇ?!

ಕೇಶವ ಗೋಳವಲ್ಕರ್ ಸ್ಥಾಪಿಸಿದ ಈ ಸಂಘ ಭಾರತದ ಪರವಾಗಿ ಯಾರ ವಿರುದ್ಧವಾದರೂ ಸರಿಯೇ! ಎದುರು ನಿಂತದ್ದು ಇತಿಹಾಸ! ಭಾರತಕ್ಕೆ ಸ್ವಾತಂತ್ರ್ಯವನ್ನು ತಂದುಕೊಡಲೇ ಬೇಕೆಂದು ನಿರ್ಧರಿಸಿದ ಸಂಘ ವಿಶ್ವ ಯುದ್ಧಗಳಲ್ಲಿ ಹಿಟ್ಲರ್ ನ ಪರ ನಿಲ್ಲುವುದಕ್ಕೂ ಯೋಚಿಸಲಿಲ್ಲ! ಭಾರತದ ಹಿತದೃಷ್ಟಿಗೆ ಶತ್ರುವನ್ನೇ ಬಗ್ಗಿಸಿ ಕೈ ಕುಲುಕಿದ್ದನ್ನು ನೋಡಿದರೆ ಹೌದು! ಸಂಘ ಭಯೋತ್ಪಾದನೆಯ ಇನ್ನೊಂದು ಮುಖ!

ಕಾಂಗ್ರೆಸ್ ಎಷ್ಟು ಸಂಘವನ್ನು ದ್ವೇಷಿಸುತ್ತಿತ್ತು ಎಂಬುದು ಗೊತ್ತೇ ಇದೆ! ಹಾಗಿದ್ಯಾಗಿಯೂ ಸಹ, ನೆಹರೂ 1963 ರ ಗಣರಾಜ್ಯದ ದಿವಸ ನಡೆಸುವ ಪರೇಡ್ ಗಾಗಿ ಸಂಘದ ಸೇವಕರನ್ನು ಆಹ್ವಾನಿಸಿತ್ತು! ಕಾರಣ, ಇಂಡೋ – ಚೀನಾ ಯುದ್ಧದಲ್ಲಿ ಗಾಯಗೊಂಡ ಸೈನಿಕರಿಗೆಲ್ಲ ಅದೆಷ್ಟೋ ಲಕ್ಷ ಬಾಟಲಿಗಳ ರಕ್ತವನ್ನು ನೀಡಿತ್ತು ಸಂಘ! ಆದ ಕಾರಣಕ್ಕೋಸ್ಕರ ನೆಹರೂ ಅಭಿನಂದಿಸಿದರು! 3500 ಸೇವಕರು ಅವತ್ತು ಪರೇಡ್ ನಡೆಸಿದರು!

1965 ರಲ್ಲಿಯೂ ಸಹ ಇಂಡೋ- ಪಾಕ್ ಯುದ್ಧ ನಡೆದಾಗ ಇದೇ ಸ್ವಯಂ ಸೇವಕರು ಸೈನಿಕರಿಗೆ ಬೇಕಾಗಿದ್ದ ಆಹಾರ ಸಾಮಗ್ರಿಗಳನ್ನೊದಗಿಸಿದರು. ಸೈನಿಕರಿಗಾಗಿ ಪರಿಹಾರ ಕಾರ್ಯವನ್ನೂ ಆರಂಭಿಸಿದ್ದಕ್ಕಾಗಿ ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ಭಾರತೀಯ ಸೇನೆಯ ಜನರಲ್ ಖುಷ್ವಂತ್ ಸಿಂಗ್ ಶ್ಲಾಘಿಸಿದರು!

1971 ರಲ್ಲಿ ಮತ್ತೊಮ್ಮೆ ಇಂಡೋ – ಪಾಕ್ ಯುದ್ಧ ನಡೆದಾಗಲೂ ತನ್ನ ಹುಚ್ಚಾಟವನ್ನು ಬಿಡದ ಸಂಘ ಮತ್ತೆ ಮತ್ತೆ ಸೈನಿಕರಿಗೆ ಸಹಾಯ ಮಾಡುತ್ತಲೇ ಹೋಯಿತು!

ಛೇ! ಇಂತಹ ಸಂಘವನ್ನು ಹೇಗೆ ಒಬ್ಬ ಪ್ರಧಾನಿ ನಂಬಬಹುದು ನೀವೇ ಹೇಳಿ?! ಅಕಸ್ಮಾತ್ ಪಾಕಿಗಳ ಜೊತೆ ಕೈ ಜೋಡಿಸಿದ್ದರೆ?! ಒದಗಿಸಿದ ಆಹಾರ ಸಾಮಾಗ್ರಿಗಳಲ್ಲಿವಿಷ ಹಾಕಿಬಿಟ್ಟಿದ್ದರೆ?! ರಕ್ತದ ಬಾಟಲುಗಳಲ್ಲಿ ಸೈನೈಡ್ ತುಂಬಿಸಿದ್ದರೆ?! ಯುದ್ಧದ ಸಮಯದಲ್ಲಿ ಗಾಯಗೊಂಡ ಯೋಧರಿಗೆ ಸಾಕಾಗುವಷ್ಟು ರಕ್ತ, ಆಹಾರ ಪೂರೈಕೆ ಮಾಡಿದ ಮೊದಲ ಸಂಸ್ಥೆ ಆರ್ ಎಸ್ ಎಸ್! ಇದು ಭಾರತದ ಇತಿಹಾಸದಲ್ಲಿಯೇ ಕಂಡು ಕೇಳರಿಯದ ದೊಡ್ಡ ಮಟ್ಟದ ಭಯೋತ್ಪಾದನೆ!!

ಎಂತಹ ಭಯೋತ್ಪಾದಕ ಸಂಘಟನೆ ಅಲ್ಲವೇ?! ಎಂತಹ ಭಯೋತ್ಪಾದನೆಯನ್ನು ಭಾರತದಲ್ಲಿ ಪಸರಿಸಿ ಸಮಾಜದ ಅಶಾಂತಿ ಹಾಳುಗೆಡವಿತಲ್ಲವೇ?!

ಅದೂ ಹೋಗಲಿ! ಸಂಘದ ಕಾರ್ಯಕರ್ತರಿಗೆ ಬೇರೇನೂ ಕೆಲಸವೇ ಇಲ್ಲವೇ?! ಭಾರತದಲ್ಲಿ ಯಾವಾಗಲೇ ಪ್ರವಾಹವೇ ಇರಲಿ, ಭೂಕಂಪ ಸಂಭವಿಸಲಿ,. ಬಿಡಿ! ತನ್ನ ಸಾವಿರಾರು ಕಾರ್ಯಕರ್ತರನ್ನು ಆ ಸ್ಥಳಕ್ಕೆ ಕಳುಹಿಸಿಕೊಟ್ಟಿತೆಂದೇ ಅರ್ಥ! ಇಂತಹ ಭಯೋತ್ಪಾದಕ ಸಂಘಟನೆಯ ಕಾರ್ಯಕರ್ತರು ಎಲ್ಲೆಂದರಲ್ಲಿ, ಆಹಾರ ಪೊಟ್ಟಣ ಹಾಗೂ ನೀರಿನ ಬಾಟಲುಗಳನ್ನು ಹಿಡಿದು ನಿಂತು ಬಿಡುತ್ತಿದ್ದನ್ನು ನೀವು ಎಲ್ಲೆಲ್ಲಿಯೂ ಕಾಣಬಹುದು!

ಒಮ್ಮೆ ಇದೇ ಭಯೋತ್ಪಾದಕ ಸಂಘಟನೆಗಳು ಆಹಾರ ಪೊಟ್ಟಣಗಳನ್ನು ದೊಡ್ಡ ದೊಡ್ಡ ವಾಹನಗಳಲ್ಲಿ ಆಹಾರ ಪೊಟ್ಟಣಗಳನ್ನು ತುಂಬಿಸುತ್ತಿದ್ದನ್ನು ನೋಡಿ ನನ್ನ ತಾತ ಕೇಳಿದ್ದರಂತೆ! ಎಲ್ಲಿಗಪ್ಪಾ ಈ ಸಾಮಾಗ್ರಿಗಳೆಲ್ಲ?! ಎಂದು! ಪೊಟ್ಟಣ ತುಂಬಿಸುತ್ತಿದ್ದ ಆ ಭಯೋತ್ಪಾದಕ ಒಮ್ಮೆ ತಲೆ ಎತ್ತಿ ನೋಡಿ “ಇವೆಲ್ಲವೂ ಪ್ರವಾಹ ಪೀಡಿತರಾದ ನನ್ನ ದೇಶದ ಜನರಿಗಾಗಿ” ಎಂದಿದ್ದೇ ಸಾಕಾಗಿ ತಲೆ ಸುತ್ತು ಬಂದಿತಂತೆ ತಾತನಿಗೆ! ಎಂತಹ ಆಘಾತಕರ ಭಯೋತ್ಪಾದಕ ಚಟುವಟಿಕೆ ಇದು!!!!

ಆದರೆ, ಪ್ರವಾಹ ಪೀಡಿತ ಜನರಿಗಾಗಿ, ಭೂಕಂಪ ಸಂಭವಿಸಿದಾಗಲೆಲ್ಲ ಪ್ರಾಣ ಒತ್ತೆ ಇಟ್ಟು ರಕ್ಷಿಸಿದ ಇದೇ ಭಯೋತ್ಪಾದಕ ಸಂಘಟನೆ ಅಕಸ್ಮಾತ್ ಇರುವ ಜನರನ್ನೆಲ್ಲ ನೀರಿನಲ್ಲಿ ಮುಳುಗಿಸಿ ಸಾಯಿಸಿದ್ದರೆ?! ಎಂತಹ ದುರಂತ!!!

ಸಂಘದ ಏಜೆಂಟ್ ಗಳಂತೂ ಎಲ್ಲೆಲ್ಲಿದ್ದರೋ ಲೆಕ್ಕವಿಲ್ಲ ಬಿಡಿ! ಯಾವುದೇ ಕ್ಷೇತ್ರದಲ್ಲಿ ಈ ಭಯೋತ್ಪಾದಕ ಏಜೆಂಟ್ ಗಳಿಲ್ಲ ಎನ್ನುವ ಹಾಗೇ ಇಲ್ಲ! ತಾಜಾ
ಉದಾಹರಣೆ ಪ್ರಧಾನಿ ಮೋದಿ! ಅಬ್ಬೋ! ಮೋದಿ ಯವರೆಂತೂ ಇದೇ ಭಯೋತ್ಪಾದಕ ಸಂಘಟನೆಯಲ್ಲಿಯೇ ಬೆಳೆದು ಬಂದವರು! ಹೇಗೆ ನಂಬುತ್ತೀರಿ ಈ
ಏಜೆಂಟರನ್ನು?! ಮುಂದೊಂದು ದಿನ ಇಟಲಿ ಬೆಡಗಿಯನ್ನು ಮದುವೆಯಾಗುವುದಿಲ್ಲವೆಂಬ ಗ್ಯಾರಂಟಿ ಏನು?! ಅವಳಿಗೆ ದೇಶದ ಪ್ರತೀ ಗುಟ್ಟಿನ ವಿಷಯಗಳನ್ನೂ
ಹೇಳಲಾರರೆಂಬುದಕ್ಕೆ ಗ್ಯಾರಂಟಿ ಏನು?! ಭೋಫೋರ್ಸ್, 2ಜಿ ಗಳಂತಹ ಹಗರಣ ಮಾಡಿ, ದೇಶವನ್ನು ಕೊಳ್ಳೆ ಹೊಡೆದು ಸ್ವಿಸ್ ಬ್ಯಾಂಕಿನಲ್ಲಿ ಹಣ ಪೇರಿಸಿಟ್ಟರೆ ಗತಿ?! ನೋಡಿದಿರಾ?! ಎಲ್ಲಿಯ ತನಕವಿದೆ ಈ ಭಯೋತ್ಪಾದಕ ಸಂಘಟನೆಯ ಕಾರ್ಯಸೂಚಿ?!

ಈ ಹಿಂದೆಯಷ್ಟೇ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಅಧ್ಯಕ್ಷೆ ಸೈನಾಬಾ “ಭಾರತವನ್ನು ಇಸ್ಲಾಮೀಕರಣ ಮಾಡುತ್ತೇವೆ” ಎಂದು ಸಂಸ್ಥೆಯ ಕಾರ್ಯಸೂಚಿಯನ್ನೆಲ್ಲ ಬಹಿರಂಗಗೊಳಿಸಿದ್ದಳು! ಪ್ರೀತಿಯ ಹೆಸರಿನಲ್ಲಿ ಹಿಂದೂಗಳ ಮತಾಂತರ, ಐಎಸ್ ಐಎಸ್ ಉಗ್ರರಿಗೆ ಆ ಹೆಣ್ಣು ಮಕ್ಕಳನ್ನು ಹಂಚುವುದು! ಇವೆಲ್ಲ, ಎಂತಹ ಒಳ್ಳೆಯ ಕೆಲಸಗಳು! ಆದರೆ, ಸಂಘ ಇದನ್ನು ವಿರೋಧಿಸಿ ಮತ್ತದೇ ತನ್ನ ಭಯೋತ್ಪಾದಕ ಮುಖವನ್ನು ತೋರಿಸಿತು!

ಇಸ್ಲಾಮೀಕರಣಕ್ಕೆ ವಿರೋಧಿಸುವ ಆರ್ ಎಸ್ ಎಸ್ ಎಂಬ ಸಂಘಕ್ಕಿಂತ ನಿಮಗೆ ಇನ್ಯಾವ ಭಯೋತ್ಪಾದಕ ಸಂಘ ಸಿಕ್ಕೀತು ಹೇಳಿ?!

ಮಹಾತ್ಮಾ ಗಾಂಧಿಯೂ ಸಂಘವನ್ನು ಶ್ಲಾಘಿಸಿದ್ದರು! ಛೇ! ತಪ್ಪು ತಪ್ಪು!

1925 ನಲ್ಲಿ ಉಗಮವಾದ ಸಂಘ ಅದೆಷ್ಟು ಭಯೋತ್ಪಾದಕನ್ನು ಬೆಳೆಸಿತ್ತು ಎಂಬುವುದನ್ನು ನೋಡಿದ್ದರೂ ಸಹ, ಈ ಭಾರತ ದೇಶವನ್ನು ಒಂದುಗೂಡಿಸಿದ, ಮಹಾತ್ಮಾ ಗಾಂಧಿಯಂತಹ ದೇಶಭಕ್ತರು ಸಂಘದ ಶಿಬಿರಕ್ಕೆ 1934 ರಲ್ಲಿ ಭೇಟಿ ಕೊಟ್ಟಿದ್ದನ್ನು ನೆನಪಿಸಿ 1947ರಲ್ಲಿ ನಡೆದೊಂದು ಸಭೆಯಲ್ಲಿ,

ನಾನು ಹೆಡ್ಗೇವಾರ್ ಅವರು ಬದುಕಿದ್ದಾಗ ಸಂಘದ ಶಿಬಿರಕ್ಕೆ ಭೇಟಿ ಕೊಟ್ಟಿದ್ದೆ. ಕಾರ್ಯಕರ್ತರ ಶಿಸ್ತು, ಅಸ್ಪರ್ಶ್ಯತೆಯ ಅಂಶವೂ ಇಲ್ಲದ ಹಾಗೂ ತೀರಾ ಸರಳವಾದ ಬದುಕನ್ನು ನೋಡಿ ನಾನು ಸ್ಫೂರ್ತಿಗೊಂಡೆ! ಸಂಘದ ಉಗಮವಾದಾಗಿನಿಂದ ನನಗೆ ಒಂದು ಮನವರಿಯಾಗಿದ್ದೇನೆಂದರೆ, ಸೇವೆ ಮತ್ತು ಸ್ವಯಂ ತ್ಯಾಗದ ಉನ್ನತ ಆದರ್ಶದಿಂದ ಸ್ಪೂರ್ಥಿ ಪಡೆದ ಯಾವುದೇ ಸಂಘಟನೆಯು ಶಕ್ತಿಯನ್ನು ಬೆಳೆಸಿಕೊಳ್ಳುತ್ತದೆ!” ಎಂದಿದ್ದರು! ಇಂತಹ ಮಹಾತ್ಮಾನೂ ಕೂಡ ಭಯೋತ್ಪಾದಕ ಸಂಘಟನೆಯನ್ನು ಹೊಗಳಿದ್ದು ತಪ್ಪಲ್ಲವೇ?!

ಭಾರತದ ಸಂವಿಧಾನ ರಚನೆಕಾರ ಅಂಬೇಡ್ಕರರೂ ಸಂಘವನ್ನು ಶ್ಲಾಘಿಸಿದ್ದು ಮಹಾಪರಾಧ!!!

ಇತರರ ಜಾತಿಯನ್ನು ಲೆಕ್ಕಿಸದೇ ಸ್ವಯಂ ಸೇವಕರು ಸಂಪೂರ್ಣ ಸಮಾನತೆ ಮತ್ತು ಸಹೋದರತ್ವದಲ್ಲಿ ಬದುಕುವುದನ್ನು ನೋಡಿ ನನಗೆ ಆಶ್ಚರ್ಯವಾಗಿದೆ!” ಎಂದು ಪುಣೆಯಲ್ಲಿ ನಡೆದ ಶಿಬಿರವೊಂದರಲ್ಲಿ ಹೇಳಿದ್ದರು!

ಇಷ್ಟನ್ನೂ ಬಿಡಿ! ದಾದಾರ್ ಹಾಗೂ ಹವೇಲಿ ನಗರದಿಂದ ದಬ್ಬಾಳಿಕೆ ನಡೆಸುತ್ತಿದ್ದ ಪೋರ್ಚುಗೀಸರನ್ನು ಅಟ್ಟಾಡಿಸಿ ಹೊಡೆದು ದೇಶದಿಂದ ಹೊರದಬ್ಬಿದ್ದಂತಹ ಭಯೋತ್ಪಾದಕ ಚಟುವಟಿಕೆಯನ್ನು ನೀವು ಎಂದಾದರೂ ಕಂಡಿರುವಿರಾ?!

ಭಾರತದಲ್ಲಿ ಬೇರೂರಿದ್ದ ಬ್ರಿಟಿಷರ ದಬ್ಬಾಳಿಕೆ ವಿರುದ್ಧ ತೊಡೆ ತಟ್ಟಿ ನಿಂತದ್ದು ಭಯೋತ್ಪಾದನೆ! ಅತಿಥಿ ದೇವೋ ಭವ ಎಂಬ ಉವಾಚಕ್ಕೆ ತಕ್ಕನಾಗಿ ಬ್ರಿಟಿಷರ ಕಾಲು ನೆಕ್ಕದೇ ಇದ್ದದ್ದು, ಭಾರತೀಯರ ಮೇಲಾದ ದಬ್ಬಾಳಿಕೆಯನ್ನು ವಿರೋಧಿಸಿದ್ದು ಎಂತಹ ಭಯೋತ್ಪಾದನೆ!

ಸಂಘದ ಸಂಸ್ಥಾಪಕರನ್ನು, ಕಾರ್ಯಕರ್ತರನ್ನು, ಬೆಂಬಲಿಗರನ್ನು ಚಿತ್ರಹಿಂಸೆಗೆ ಗುರಿ ಮಾಡಿ ಬ್ರಿಟಿಷ್ ಸರಕಾರ ಇಂತಹ ತಲೆಕೆಟ್ಟ ಭಾರತೀಯರಿಗೆ ತಕ್ಕ ಪಾಠವನ್ನೇ ಕಲಿಸಿದ್ದು ಪ್ರಶಂಸನೀಯವೇ ಬಿಡಿ!

ಮಹರಾಜ್ ಹರಿಸಿಂಗ್ ನ ಮನವೊಲಿಸಿ ಭಾರತಕ್ಕೆ ಸೇರಿಕೊಳ್ಳುವಂತೆ ಮನವೊಲಿಸಿದ್ದು ಎಂತಹ ಭಯೋತ್ಪಾದನೆ ಎಂಬುದನ್ನರಿತಿದ್ದೀರಾ?!

ಹೇಗೆ ಸಂಘ ಶಾಂತಿ ಪ್ರತಿಪಾದನೆಯ ಸಂಸ್ಥೆಗಳಾದ ಅಲ್ ಖೈದಾ, ಪಿಎಫ್ ಐ, ಐಎಸ್ ಐಎಸ್ ನಂತಹದ್ದನ್ನು ಗುರಿಯಾಗಿಸಿ ಹೇಗೆ ನಾಶಗೊಳಿಸುತ್ತಿದೆ ಗೊತ್ತೇನು?!

ಉತ್ತಮ ಸಂಘಟನೆಯಾದ ಅಲ್ ಖೈದಾ, ಐಎಸ್ ಐಎಸ್ ನಂತಹ ಇನ್ನೂ ಒಂದಷ್ಟು ಸಂಘಟನೆಗಳು ಇಸ್ಲಾಂಗೆ ಮತಾಂತರವಾಗಲೊಪ್ಪದ ಲವರನ್ನು ಗುಂಡಿಟ್ಟು ಸಾಯಿಸಿದ್ದು ಎಂತಹ ಅದ್ಭುತ ಕೆಲಸವಲ್ಲವೇ?!

ಇಸ್ಲಾಂ ಸ್ವೀಕರಿಸದ ಜನರನ್ನು ನಿರ್ದಯವಾಗಿ ಹಿಂಸಿಸಿ, ಕಂಡ ಕಂಡಲ್ಲಿ ಬಾಂಬು ಸಿಡಿಸಿ,. ಜಗತ್ತಿನಲ್ಲಿ ಶಾಂತಿ ಸೃಷ್ಟಿಸುತ್ತಿರುವ ಇಂತಹ ಸಂಘಟನೆಗಳನ್ನು ಆರ್ ಎಸ್ ಎಸ್ ವಿರೋಧಿಸಿದ್ದು ತಪ್ಪೇ ಬಿಡಿ!

ಲವ್ ಜಿಹಾದ್ ಎಂಬ ಶೀರ್ಷಿಕೆಯಡಿ, ಹಿಂದೂ ಹೆಣ್ಣು ಮಕ್ಕಳನ್ನು ಇಸ್ಲಾಂ ಗೆ ಮತಾಂತರಿಸಿ ಐಎಸ್ ಐಎಸ್ ಶಿಬಿರಗಳಲ್ಲಿ ವೇಶ್ಯೆಗೂ ಕಡೆಯಾಗಿ ನಡೆಸಿಕೊಳ್ಳುವ ಎಂತಹ ಒಳ್ಳೆಯ ಕೆಲಸವನ್ನು ಆರ್ ಎಸ್ ಎಸ್ ವಿರೋಧಿಸಿದ್ದು ಇದರ ಭಯೋತ್ಪಾದನೆಯ ಆಳ ಎಷ್ಟಿದೆ ಎಂಬುದನ್ನು ಸಾರಿ ಹೇಳುತ್ತದೆ!

ಬಿಡಿ! 2008 ರಲ್ಲಿ ಲಶ್ಕರ್ ಎ ತಾಯ್ಬಾ ಮುಂಬೈ ಮೇಲೆ ದಾಳಿ ಮಾಡಿ 200 ಜನರನ್ನು ಯಮಪುರಿಗಟ್ಟಿದ್ದು ಎಂತಹ ಅದ್ಭುತ! ಇಂತಹ ಒಳ್ಳೆಯ ಕೆಲಸವನ್ನು ನೀವೆಲ್ಲೂ ಕಾಣಲಾರಿರಿ ಬಿಡಿ! ಇಂತಹ, ಆದರ್ಶವಾದ ಕೆಲಸಕ್ಕೆ ನೋಬೆಲ್ ಪ್ರಶಸ್ತಿಯನ್ನು ನೀಡಬೇಕಿತ್ತು! ಆದರೆ, ಪ್ರಕಾಶ್ ರಾಜ್ ಹಾಗೂ ಕಮಲ್ ಹಾಸನ್ ನಂತಹವರು ಮಾತ್ರ ಇಂತಹ ಅದ್ಭುತ ಕೆಲಸಗಳನ್ನು ಗುರುತಿಸಿ ಪರವಹಿಸಿ ಮಾತನಾಡುತ್ತಿದ್ದಾರೆ!

ಇಷ್ಟನ್ನು ಓದಿದ ಮೇಲೆ. . .

ಇದಷ್ಟೂ ಪುರಾವೆಗಳನ್ನೋದಿದ ಮೇಲೆ ಬಹುಷಃ ನಿಮಗೆ ಅರಿವಾಗಬಹುದು! ಅಲ್ ಖೈದಾ, ಪಿಎಫ್ ಐ, ಐಎಸ್ ಐಎಸ್, ಲಶ್ಕರ್ ಎ ತಾಯ್ಬಾ ರಂತಹ ಸಂಘಟನೆಗಳಿಂದಲೇ ದೇಶದ ಶಾಂತಿ ಸ್ಥಾಪನೆಯಾಗುತ್ತಿದೆ! ಮನುಕುಲ ಉದ್ಧಾರವಾಗುತ್ತಿದೆ! ಅಕಸ್ಮಾತ್, ಮನುಕುಲಕ್ಕೆ, ಸಮಾಜದ ಶಾಂತಿ ಹಾಳಾಗಿದ್ದರೆ ನಿಸ್ವಾರ್ಥ ಸೇವೆಗೈದು ಬದುಕಿನ ಕಣಕಣವನ್ನೂ ದೇಶಕ್ಕೆ ಮುಡಿಪಿಟ್ಟ ಸ್ವಯಂ ಸೇವಕರಿಂದ ಮಾತ್ರ ಬಿಡಿ!

– ತಪಸ್ವಿ

Tags

Related Articles

Close