ಅಂಕಣ

ಸಿಐಎ ವರದಿಯೊಂದು ಇಂದಿರಾಗಾಂಧಿ ಸೋವಿಯತ್ ಯೂನಿಯನ್ ನಿಂದ ಲಂಚ ತೆಗೆದುಕೊಳ್ಳುವ ಸಲುವಾಗಿ ಭಾರತಕ್ಕೆ ದ್ರೋಹ ಬಗೆದಿದ್ದಾಳೆಂದು ಬಹಿರಂಗಗೊಳಿಸಿದೆ!

ಇಂದಿರಾ ಗಾಂಧಿಯವರು ರಾಷ್ಟ್ರಕ್ಕೆ ಹೇಗೆ ದ್ರೋಹ ಮಾಡಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ಇದೀಗಾಗಲೇ ಸಿಐಎ ವರದಿಗಳು ಬಹಿರಂಗಪಡಿಸಿವೆ.
ಆಘಾತಕಾರಿ ಮಾಹಿತಿ ಬಹಿರಂಗ ಪಡಿಸುವಿಕೆಯಲ್ಲಿ ಸಿಐಎ 1970ರ ದಶಕದಿಂದ 1980ರವರೆಗೆ ಕಾಂಗ್ರೆಸ್ ನಿಧಿಯೊಳಗೆ ಸಂಬಂಧಿಸಿದ ಎಲ್ಲಾ ಕಡತಗಳ
ಮಾಹಿತಿಯ ಬಗ್ಗೆ ಬಹಿರಂಗಪಡಿಸಿವೆs ಸುಮಾರು ಹತ್ತು ವರ್ಷಗಳವರೆಗೆ ಯುಎಸ್‍ಎಸ್‍ಆರ್‍ನಿಂದ ಕಾಂಗ್ರೆಸ್ ಹಣ ಹೂಡಿಕೆ ಮಾಡುವ ಯೋಜನೆಯೊಂದನ್ನು ಮಾಡಿರುವ ಕಡತಗಳನ್ನು ಸಿಐಎ ಬಿಡುಗಡೆ ಮಾಡಿದೆ. ಈ ಅವಧಿಯಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಭದ್ರತೆಗಾಗಿ ಸೋವಿಯತ್ ಯೂನಿಯನ್‍ನೊಂದಿಗೆ ರಾಜಿ ಮಾಡಿಕೊಳ್ಳುತ್ತಾರೆ.

ಈಗ ಸಿಐಎನಲ್ಲಿ 25 ವರ್ಷಗಳ ಕಡ್ಡಾಯ ಅವಧಿಯವರೆಗೆ ಈ ದಾಖಲೆಗಳನ್ನು ವರ್ಗೀಕರಿಸಲಾಗಿದೆ. ಇಂದಿರಾ ಗಾಂಧಿ ಮತ್ತು ಭಾರತದಲ್ಲಿನ ಕಮ್ಯೂನಿಸ್ಟ್ ಪಕ್ಷಗಳ ಅಡಿಯಲ್ಲಿ ಕಾಂಗ್ರೆಸ್ ಸೋವಿಯತ್‍ನಿಂದ ಭಾರೀ ಹಣವನ್ನು ಪಡೆಯುತ್ತಿದೆ ಎಂಬ ಸಾಕ್ಷಿ ತೋರಿಸುತ್ತಿದೆ. ಇಂದಿರಾ ಗಾಂಧಿಯ ಸರಕಾರದಲ್ಲಿ ಸುಮಾರು ಶೇಖಡಾ 40 ರಷ್ಟು ಯುಎಸ್‍ಎಸ್‍ಆರ್‍ನಿಂದ ಅಕ್ರಮವಾಗಿ ಹಣವನ್ನು ಪಡೆದಿದ್ದಾರೆ ಎಂಬೂವುದನ್ನು ತಿಳಿಸಲಾಗಿದೆ. 1985 ಕ್ಕೆ ಸಂಬಂಧಿಸಿದ ದಾಖಲೆಗಳ ಭಾಗವಾಗಿರುವ “ದಿ ಸೋವಿಯತ್ಸ್ ಇನ್ ಇಂಡಿಯಾ” ಎಂಬ ಹೆಸರಿನ ಆ ಕಡತದಲ್ಲಿ ಸಿಐಎ ವರದಿಯ ಪ್ರಕಾರ ,ಸೋವಿಯತ್ ರಹಸ್ಯವಾದ ಮಾಹಿತಿ ಪಡೆಯಲು ಮತ್ತು ಕಾಂಗ್ರೆಸ್ ರಾಜಕಾರಣಿಗಳಿಗೆ ರಹಸ್ಯ ಪಾವತಿಗಾಗಿ ಬಳಸಿದ ದೊಡ್ಡ ಪ್ರಮಾಣದ ಭಾರತೀಯ ಹಣವನ್ನು ನಿರ್ವಹಿಸುತ್ತಿದೆ ಎಂದು ವರದಿಗಳಲ್ಲಿ ಉಲ್ಲೇಖವಾಗಿದೆ. ರಹಸ್ಯ ಮಾಹಿತಿಯನ್ನು ಪಡೆಯಲು ಮತ್ತ ಅತ್ಯಂತ ದೊಡ್ಡ ಮೊತ್ತದ ಹಣವನ್ನು ಕಬಳಿಸಲು ಕಾಂಗ್ರೆಸ್‍ನ ಪ್ರಮುಖ ವ್ಯಕ್ತಿಗಳು ಸೋವಿಯತ್ ಜೊತೆ ಭಾಗಿಯಾಗಿದ್ದಾರೆ ಎಂದು ಉಲ್ಲೇಖವಾಗಿದೆ. ಸೋವಿಯತ್ ಆಳವಾಗಿ ಈ ವಿಷಯದಲ್ಲಿ ತಮ್ಮ ಪಾತ್ರ ತೊಡಗಿಸಿಕೊಂಡಿದೆ ಎಂದು ಈ ಬಗ್ಗೆ ವರದಿಯು ಸ್ಪಷ್ಟವಾಗಿ ಹೇಳುತ್ತದೆ. ರಾಜಕೀಯ ವಿಚಾರಗಳು ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯಗಳು ಹಾಗೂ ರಹಸ್ಯ ಕೊಡುಗೆಗಳ ಮೂಲಕ ಪಕ್ಷಗಳಿಗೆ ಮತ್ತು ಕೆಲವು ತಮ್ಮ ವಯಕ್ತಿಕ ಮಂತ್ರಿಗಳಿಗೆ ಸಹಾಯ ಮಾಡುವಲ್ಲಿ ತೊಡಗಿಸಿಕೊಂಡಿದೆ ಎಂಬೂವುದು ಸಿಐಎ ಸ್ಪಷ್ಟವಾಗಿ ಬಿಡುಗಡೆ ಮಾಡಿದೆ.

ಕೆಜಿಬಿ ಆಪರೇಟಿವ್ ವಾಸಿಲಿ ಮಿತ್ರೋಕನ್ ತಾನು ಬರೆದ ಪುಸ್ತಕದಲ್ಲಿ ಮಾಡಿದ ಆರೋಪ ಮತ್ತು ಸಿಐಎ ಬಹಿರಂಗಪಡಿಸಿದ ವಿವರಗಳಿಗೆ ಸರಿ ಸಮವಾಗಿ
ಹೋಲುತ್ತದೆ. ವಾಸಿಲಿ ಮಿತ್ರೀಖಿನ್ ಹೇಳಿರುವ ಪ್ರಕಾರ ಸೋವಿಯತ್ ಸರಕಾರದಿಂದ ಸಾವಿರಾರು ರಹಸ್ಯ ದಾಖಲೆಗಲನ್ನು ಕಳ್ಳ ಸಾಗಾಣಿಕೆ ಮಾಡಲಾಗಿದೆ ಎಂದು ಹೇಳಲಾಗಿದೆ. ದೊಡ್ಡ ಮೊತ್ತದ ಹಣದ ಬ್ಯಾಗ್‍ಗಳನ್ನು ಇಂದಿರಾ ಗಾಂಧಿ ಮತ್ತು ಕಾಂಗ್ರೆಸ್ ಮಂತ್ರಿಗಳಿಗೆ ಕಳುಹಿಸಲಾಗಿತ್ತು ಎಂದು ಇದೀಗ ಬಹಿರಂಗವಾಗಿದೆ. ಮಾಜಿ ರಕ್ಷಣಾ ಸಚಿವ ಕೃಷ್ಣ ಮೆನನ್ ಅವರ ಚುನಾವಣಾ ಪ್ರಚಾರವನ್ನು 1970 ರ ದಶಕದಲ್ಲಿ ಸೋವಿಯತ್ ಬೆಂಬಲಿಸಿದೆ ಎಂದು ಕೆಜಿಬಿ ದಾಖಲೆಗಳು ಬಹಿರಂಗಪಡಿಸಿದೆ.

ರಕ್ಷಣಾ ವ್ಯವಹಾರಗಳ ಮತ್ತು ಭಾರತೀಯ ವ್ಯಾಪಾರಿಗಳ ಮೂಲಕ ಕಾಂಗ್ರೆಸ್ ಮಂತ್ರಿಗಳು ದೊಡ್ಡ ಲಂಚವನ್ನೇ(ಕಿಕ್‍ಬ್ಯಾಕ್) ಪಡೆದಿದ್ದಾರೆ. ಸಿಪಿಐ ಮತ್ತು ಸಿಪಿಎಂ ಗೆ ರಹಸ್ಯ ಮಾಹಿತಿ ಒದಗಿಸುವಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ತೀರಾ ನಿಷ್ಠೆಯಿಂದ ಕೆಲಸ ನಿರ್ವಹಿಸುತ್ತಿರುವ ಪ್ರಮುಖ ಪಲಾನುಭವಿಗಳು ಅವ್ಯವಹಾರಗಳಲ್ಲಿ ತೊಡಗಿರುವ ಎಲ್ಲಾ ಮಾಹಿತಿಗಳನ್ನು ಸಿಐಎ ಗೆ ಮಾಹಿತಿ ರವಾನಿಸುವುದರಲಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ ಎಂದು ದಾಖಲೆಗಳು ಸ್ಪಷ್ಟಪಡಿಸುತ್ತದೆ.

ನಿರ್ಣಾಯಕ ಮಾಹಿತಿಯನ್ನು ಪೂರೈಸುವಲ್ಲಿ ನೇರವಾಗಿ ತೊಡಗಿಸಿಕೊಂಡಿರುವ ನಿರ್ದಿಷ್ಟ ವ್ಯಕ್ತಿಗಳ ಹೆಸರನ್ನು ಮತ್ತು ಅದೇ ರೀತಿಯ ಲಂಚ ಸ್ವೀಕರಿಸಿರುವ ಬಗ್ಗೆ ಸಿಐಎ ಬಹಿರಂಗ ಪಡಿಸಿದೆ. ಸೋವಿಯತ್‍ಗೆ ರಹಸ್ಯ ಮಾಹಿತಿ ನೀಡುವಲ್ಲಿ ಇಂದಿರಾ ಸರಕಾರದಲ್ಲಿ ಸಿಐಎ ನಾಲ್ಕು ಮಂತ್ರಿಗಳನ್ನು ಮತ್ತು 24 ಸಂಸದರನ್ನು ಗುರುತಿಸಲು ಸಾಧ್ಯವಾಯಿತು ಎಂದು ಗುಪ್ತಚರ ಇಲಾಖೆಯ ಅಧಿಕಾರಿ ಎಂ.ಕೆ.ಧರ್ ಹೇಳಿದ್ದಾರೆ.

ವರದಿಗಳ ಪ್ರಕಾರ ಇಂದಿರಾ ಗಾಂಧಿಯ ನಂತರ ರಾಜೀವ್ ಗಾಂಧಿಯವರು ಸೋವಿಯತ್‍ನಿಂದ ಪ್ರಭಾವಿತರಾಗಿದ್ದರು. ಈ ಸೋವಿಯತ್, ಗಾಂಧಿಯವರ
ಪ್ರಯತ್ನವನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಸಂಜಯ್ ಉತ್ತರಾಧಿಕಾರಿಯಾಗಿದ್ದರೂ, 1980 ರಲ್ಲಿ ಸಂಜಯ್ ಅವರ ಮರಣದ ನಂತರ ರಾಜೀವ್
ಉತ್ತರಾಧಿಕಾರಿಯಾಗಿದ್ದಾಗ ಅದೇ ತಪ್ಪನ್ನು ಮತ್ತೆ ಮಾಡಲಿಲ್ಲ.

ಇದು ಯಶಸ್ವಿಯಾದರೆ ಮುಖ್ಯವಾಗಿ ರಾಜೀವ್ ನಾಯಕತ್ವದ ಸಾಮಥ್ರ್ಯದ ಮೇಲೆ ಅವಲಂಬಿತವಾಗಿದೆ. ಸಿಖ್ಖರಿಗೆ ವಿರುದ್ಧವಾಗಿ ಆತಂರಿಕ ಪ್ರತಿಕಾರಕ್ಕೆ ರಾಜೀವ್ ಅವರ ಬಂಧನವನ್ನು ಇರಿಸಿಕೊಳ್ಳತ್ತಿದ್ದರೆ ಮತ್ತು ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ತನ್ನ ತಾಯಿಯ ಹತ್ಯೆಯನ್ನು ಬಳಸಿಕೊಳ್ಳುತ್ತಿದ್ದರೆ ಅಥವಾ ಇಂದಿರಾ ಗಾಂಧಿ ಅನುಪ ಸ್ಥಿತಿಯಲ್ಲಿ ವಿರೋಧ ಪಕ್ಷಗಳು ಒಂದು ಏಕೀಕ ಶಕ್ತಿಯಾಗುತ್ತಿದ್ದರೆ, ಅವರ ಪ್ರಭಾವದಿಂದ ಸೋವಿಯೆತ್ ಹೊರಹೊಮ್ಮುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.

-ಶೃಜನ್ಯಾ

Tags

Related Articles

Close