ಅಂಕಣದೇಶಪ್ರಚಲಿತ

ಹಹ್ಹಹ್ಹಾ!!! ಪುಕ್ಕಲು ಚೀನಾದ ಸೈನಿಕರು ಒಕ್ಕೂಟ ರಾಷ್ಟ್ರಗಳ ಕಾರ್ಯಾಚರಣೆಯಿಂದ ಹೆದರಿ ಪಲಾಯನ ಮಾಡಿದ್ದು ಯಾಕೆ?

ವಿಶ್ವದ ಅತೀ ಪ್ರಬಲ ರಾಷ್ಟ್ರ, ತನ್ನ ಶಕ್ತಿ ಸಾಮಥ್ರ್ಯದಿಂದ ಏನು ಬೇಕಾದರೂ ಸಾಧಿಸಬಲ್ಲೇ, ನಾವೇ ಎಲ್ಲರಿಗಿಂತಲೂ ಶ್ರೇಷ್ಠರು ಎಂದು ತನ್ನನ್ನು ತಾನು ಹೊಗಳುವುದು ಎಂದರೆ ಅದು ದೊಡ್ಡ ಮೂರ್ಖತನ ಅಲ್ವೇ?. ಆದರೆ ಒಂದು ದೇಶ ಮತ್ತೊಂದು ದೇಶದ ಜವಬ್ದಾರಿಯನ್ನು ಹೊತ್ತು ಕಷ್ಟಕಾಲದಲ್ಲಿ ಪರಾರಿಯಾದರೆ ಅವರನ್ನು ಏನೆಂದು ಕರೆಯಬೇಕು ನೀವೇ ಹೇಳಿ?.. ಕಷ್ಟಕಾಲದಲ್ಲಿ ನಂಬಿದ ಜನರನ್ನು ಬಿಟ್ಟು ಪಲಾಯನ ಮಾಡಿದ ಸ್ಥಿತಿ ನಿರ್ಮಾಣಗೊಂಡಿರುವುದಾದರೂ ಎಲ್ಲಿ ಅಂತ ಗೊತ್ತೇ? ಅಥವಾ ನಂಬಿದ ಜನರಿಗೆ ಕೈಕೊಟ್ಟು ಹೋದ ದೇಶವಾದರೂ ಯಾವುದೆಂದು ಗೊತ್ತೆ?..

ಎಲ್ಲಾ ಕ್ಷೇತ್ರದಲ್ಲಿ ತಮ್ಮನ್ನು ತಾವೇ ಪ್ರಬಲರು ಎನಿಸಿಕೊಂಡಿರುವ ಚೀನಾ ಇಂತಹ ಹೇಯ ಕೃತ್ಯ ನಡೆಸಿದೆ ಎಂದರೆ ನಂಬಲೇಬೇಕು. ಆರ್ಥಿಕ ಸುಧಾರಣೆಯೊಂದಿಗೆ ಸೇನಾ ಸಾಮಥ್ರ್ಯದಲ್ಲಿ ಈಡೀ ವಿಶ್ವದಲ್ಲಿ ಚೀನಾವನ್ನು ಮೀರಿಸು ಶಕ್ತಿ ಯಾರಲ್ಲೂ ಇಲ್ಲ. ತನ್ನ ಪ್ರಬಲವಾದ ಶಕ್ತಿ ಸಾಮಥ್ರ್ಯದಿಂದ ಎಲ್ಲಾ ದೇಶಕ್ಕಿಂತಲೂ ಚೀನಾ ಮುಂದಿದೆ ಎಂದು ಎಲ್ಲರಿಗೂ ತಿಳಿದಿರುವಂತಹ ವಿಷಯ. ಕಳೆದ ತಿಂಗಳಲ್ಲಿ ಚೀನಾ ಡೋಕ್ಲಾಮ್ ವಿಚಾರವನ್ನು ಮುಂದಿಟ್ಟು ಭಾರತದ ಮೇಲೆ ಯುದ್ಧ ಸಾರುವುದಾಗಿ ಎಚ್ಚರಿಕೆಯ ಘಂಟೆ ಭಾರಿಸಿದ ವಿಷಯ ನಾವು ಇನ್ನೂ ಮರೆತಿಲ್ಲ.

ಆದರೆ ಸುಡಾನ್ ದೇಶದ ನಾಗರಿಕರ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತಿರುವ ಚೀನಾ, ಅಲ್ಲಿನ ಜನತೆಯನ್ನು ರಕ್ಷಣೆ ಮಾಡಲಿಲ್ಲ. ಬದಲಾಗಿ ರಕ್ಷಣೆಗಾಗಿ ನಿಂತ ಚೀನಾ ಸೈನಿಕರು ಪಲಾಯನ ಗೈದರೆಂದರೆ ನಂಬಲಸಾಧ್ಯ. ಆದರೆ ಪಲಾಯನ ಮಾಡಿರುವ ವಿಷಯ ಸುಳ್ಳು ಸುದ್ದಿಯೇ ಅಥವಾ ವದಂತಿಯೇ ಎಂದು ಗೊತ್ತಿಲ್ಲವಾದರೂ ಇದನ್ನು ಭಾರತೀಯ ಗುಪ್ತಚರ ಸಂಸ್ಥೆಗಳು ಈ ವಿಷಯವನ್ನು ದೃಢಪಡಿಸಿದೆ. ಅಲ್ಲದೇ ಚೀನಾ ಸೈನಿಕರು ಯುದ್ಧದಿಂದ ಓಡಿಹೋದ ಘಟನೆಯ ಬಗ್ಗೆ ಅಂತರಾಷ್ಟ್ರೀಯ ಮಾಧ್ಯಮಗಳು ಕೂಡ ಸುದ್ದಿ ಬಿತ್ತರಿಸಿದಂತೂ ನಿಜ.

ನಾಗರಿಕರ ರಕ್ಷಣೆಯ ಜವಾಬ್ದಾರಿಯನ್ನು ಚೀನಾದ ಸೈನಿಕರು ವಹಿಸಿದ್ದರು ಎನ್ನಲಾದ ಸುಡಾನ್ ದೇಶದ ಜುಬಾದಲ್ಲಿ, ಬಂಡಾಯ ಗುಂಪುಗಳು ಜುಲೈ 2015 ರ ಸುಮಾರಿಗೆ ಅಪಾರ ಆಧುನಿಕ ಶಸ್ತ್ರಾಸ್ತ್ರಗಳಿಂದ ನಾಗರಿಕರ ಮೇಲೆ ಆಕ್ರಮಣಗಳನ್ನು ನಡೆಸಲು ಪ್ರಾರಂಭಿಸಿದ್ದರು. ಇದರಿಂದ ತ್ತತರಿಸಿದ ಜುಬಾದ ಸ್ಥಳೀಯ ಸಾವಿರಾರು ಜನರು ಆ ಪ್ರದೇಶದಲ್ಲಿ ಕ್ಯಾಂಪ್ ಹೂಡಿದ್ದ ಚೀನಾ ಸೈನಿಕರ ಮೊರೆ ಹೋದರು. ಆಗಿದ್ದರೂ, ನಾಗರಿಕರನ್ನು ರಕ್ಷಿಸುವ ಜವಾಬ್ದಾರಿಯನ್ನು ಬದಿಗೊತ್ತಿ ಚೀನಾದ ಸೈನಿಕರು ತಮ್ಮ ನೆಲೆಗಳಲ್ಲಿಯೇ ಉಳಿದುಕೊಂಡಿರುವುದು ವಿಪರ್ಯಾಸ.

ಇಲ್ಲಿನ ನಾಗರಿಕರನ್ನು ರಕ್ಷಿಸಲು ಸ್ಥಳಕ್ಕೆ ಇಥಿಯೋಪಿಯನ್ ಸೈನ್ಯದವರೇ ಬರಬೇಕಾಯಿತು. ಇಥಿಯೋಪಿಯನ್ ಸೈನಿಕರು ಬಂದರೂ ಕೂಡ ಈ ಸುಡಾನ್ ದೇಶದ ಜುಬಾದ ಜನತೆಯ ಮೇಲೆ ನಡೆದ ಈ ದೌರ್ಜನ್ಯ ಕೊನೆಗೊಳ್ಳಲೇ ಇಲ್ಲ. ಕೊನೆಗೂ ಈ ಒಂದು ಹೋರಾಟಕ್ಕೆ ಕಡೆಯ ದಿನ ಬಂತಾದರೂ, ಅಲ್ಲಿ ನಡೆದ ಕ್ರೂರ ಹತ್ಯೆ ಜನರನ್ನು ಭಯಭೀತರನ್ನಾಗಿ ಮಾಡಿತು. ಆ ದಿನ ಸುಮಾರು 80 ರಿಂದ 100 ಸ್ಥಳೀಯ ಬಂಡಾಯ ಸೈನಿಕರು ಜುಬಾದಲ್ಲಿ ಒಂದು ಸಂಯುಕ್ತ ದಾಳಿ ನಡೆಸಿದ್ದರು. ಮಾತ್ರವಲ್ಲದೇ ಆ ಈಡೀ ದಿನ ಆ ಪ್ರದೇಶ ಕ್ರೂರಹಿಂಸೆಯ ಬೆಗೆಯಲ್ಲಿ ಬೆಂದಿತ್ತು. ಹೌದು.. ಈ ಘಟನೆಯಲ್ಲಿ ಸುಮಾರು ಐದು ಅಂತರಾಷ್ಟ್ರೀಯ ನೆರವು ಕೆಲಸಗಾರರನ್ನು ಅತ್ಯಾಚಾರ ಮಾಡಿದಲ್ಲದೆ ದೈಹಿಕವಾಗಿ ಅಥವಾ ಲೈಂಗಿಕವಾಗಿ ಹನ್ನೆರಡು ಜನರ ಮೇಲೆ ಆಕ್ರಮಣ ಮಾಡಿದ್ದರು. ಇಷ್ಟೇಲ್ಲಾ ಘಟನೆ ನಡೆದರೂ ಕೂಡ ಚೀನಾ ಸೈನಿಕರು ತಟಸ್ಥ ಮೌನವನ್ನು ಆಚರಿಸಿದರೆ ಹೊರತು ಘಟನಾ ಸ್ಥಳದಿಂದ ಕೆಲವೇ ಮೈಲುಗಳಷ್ಟು ದೂರ ಇದ್ದರೂ ಸಹ ನಾಗರಿಕರ ನೆರವಿಗೆ ಬರಲಿಲ್ಲ.

ಈ ದಾಳಿಯ ಹಿಂಸೆಯಿಂದ ತಪ್ಪಿಸಿಕೊಂಡ ಹಲವಾರು ನಾಗರಿಕರು ಚೀನಾ ಸೈನಿಕರಲ್ಲಿ ತಮ್ಮ ರಕ್ಷಣೆಗಾಗಿ ಬೇಡಿಕೊಂಡರೂ ಕೂಡ ಪ್ರಯೋಜನವಾಗಲಿಲ್ಲ. ಬದಲಾಗಿ ಚೀನಾದ ಸೈನಿಕರು ತಮ್ಮ ಮೂಲದ ಸುರಕ್ಷತೆಯನ್ನು ಬಿಟ್ಟು ಹೊರ ಹೋಗಲು ನಿರಾಕರಿಸಿದರು. ಚೀನಿ ಸೈನಿಕರ ಈ ದುರಂಹಕಾರ ಕೊನೆಗೂ ಅವರ ಬುಡಕ್ಕೂ ಬಂತು. ಬಂಡಾಯ ಪಡೆಗಳ ನಡುವಿನ ನಾಲ್ಕು ದಿನಗಳ ಹೋರಾಟದ ಸಂದರ್ಭದಲ್ಲಿ, ಫಿರಂಗಿ ಸುತ್ತುಗಳು ಮತ್ತು ಗುಂಡಿನ ದಾಳಿಯಿಂದ ಚೀನಾ ಸೈನಿಕರು ನೆಲೆಸಿದ್ದ ಕ್ಯಾಂಪ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿಹೋಯಿತು. ಕೇವಲ ಕ್ಯಾಂಪ್ ಸುಟ್ಟು ಬೂದಿಯಾಗಿದ್ದಲ್ಲದೇ ಎರಡು ಚೀನೀ ಸೈನಿಕರು ಮೃತ ಪಟ್ಟರು ಆದರೆ ಉಳಿದ ಚೀನಾ ಸೈನಿಕರು ಏನು ಮಾಡಿದರು ಗೊತ್ತೇ?

ತಮ್ಮ ಮುಂದೆ ಜುಬಾ ನಾಗರಿಕರ ಹತ್ಯೆ ಮತ್ತು ಮಹಿಳೆಯರ ಅತ್ಯಾಚಾರ ನಡೆದಾಗ ಸುಮ್ಮನಿದ್ದ ಚೀನಾದ ಸೈನಿಕರು ಬಂಡಾಯ ಸೈನಿಕರ ವಿರುದ್ಧ ಯುದ್ಧ ಮಾಡಲಿಲ್ಲ. ಚೀನಾ ಸೈನಿಕರು ನೆಲೆಸಿದ್ದ ಕ್ಯಾಂಪ್‍ನ್ನು ಸಂಪೂರ್ಣವಾಗಿ ನಾಶ ಮಾಡಿದ ಬಂಡಾಯ ಸೈನಿಕರ ವಿರುದ್ಧ ತಮ್ಮ ಶಸ್ತ್ರಾಸ್ತ್ರಗಳನ್ನು ಉಪಯೋಗಿಸಲು ಸಂಪೂರ್ಣವಾಗಿ ವಿಫಲವಾಗಿದ್ದಲ್ಲದೆ ಅಲ್ಲಿಂದ ತಮ್ಮ ಶಸ್ತ್ರಾಸ್ತ್ರಗಳನ್ನು ಬಿಟ್ಟು ಪಾಲಾಯನ ಮಾಡಿದರು.

ಎಂತಹ ದುರ್ವಿಧಿ, ತಾನೇ ಪರಾಕ್ರಮಶಾಲಿ ಎಂದು ತಿಳಿದ ಚೀನಾ ಇದೆಂತಹ ಕೆಲಸ ಮಾಡಿತು ನೋಡಿ. ಜುಬಾದ ನಾಗರಿಕರು ಅಂಗಾಲಚಿ ಬೇಡಿದರೂ ಕೂಡ ಜನತೆಯನ್ನು ಕಾಪಾಡಲಿಲ್ಲ. ಕೊನೆಪಕ್ಷ ಯುದ್ಧಕ್ಕೆಂದು ತಮ್ಮ ಬಳಿ ಬಂದ ಬಂಡಾಯ ಸೈನಿಕರ ವಿರುದ್ಧ ಹೋರಾಡಲೂ ಇಲ್ಲ ಬದಲಿಗೆ ಹೇಡಿಯಂತೆ ಓಟಕ್ಕಿತ್ತರು.

ವಿಶ್ವದ ಯಾವುದೇ ವೃತ್ತಿಪರ ಸೈನಿಕರು ಮಾಡದ ಹೇಯವಾದ ಘಟನೆಗೆ ಸಾಕ್ಷಿಯಾಯಿತು ವಿಶ್ವದ ಪ್ರಬಲ ಸೇನೆ ಎಂದೆನಿಸಿದ ಚೀನಾದ ಸೇನೆ.

-ಸರಿತಾ

Tags

Related Articles

Close