ಪ್ರಚಲಿತ

ಹುತಾತ್ಮ ದೀಪಕ್ ರಾವ್‍ನನ್ನು ಶಿವಾಜಿ ಕ್ಷತ್ರಿಯ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ಮಾಡಿದ್ಯಾಕೆ..? ಮತ್ತೆ ಹುಟ್ಟಿ ಬಾ ಸಹೋದರಾ…

ದೀಪಕ್ ರಾವ್ ಹತ್ಯೆ ಕರಾವಳಿ ಮಾತ್ರವಲ್ಲದೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಆತನ ಅಗಲಿಕೆಯಿಂದ ಹಿಂದೂ ಸಮಾಜವೇ ದುಖಃದ ಮಡುವಿನಲ್ಲಿ ಕಣ್ಣೀರ ಧಾರೆಯನ್ನೇ ಹರಿಸುತ್ತಿದೆ. ಕಣ್ಣೀರು ಕಟ್ಟುತ್ತಿಲ್ಲ, ಧುಖಃ ತಡೆಯಲಾಗುತ್ತಿಲ್ಲ. ಅದೆಷ್ಟೇ ಅತ್ತರೂ ನಮ್ಮನ್ನಗಲಿದ ಆ ದೀಪಕ್ ರಾವ್ ಮತ್ತೆ ಬರೋದಿಲ್ಲ ಎಂಬ ಕಟು ಸತ್ಯವನ್ನು ಒಮ್ಮೆ ಯೋಚಿಸಿದರೆ ಕಣ್ಣೀರು ಮತ್ತೆ ಕಟ್ಟೆ ಒಡೆಯುತ್ತೆ. ಅಪ್ಪನಿಲ್ಲ, ಅಣ್ಣನಿಲ್ಲ. ಇರುವ ಒಬ್ಬ ತಮ್ಮನಿಗೆ ಬಾಯಿ ಬರೋದಿಲ್ಲ. ಹೆತ್ತಬ್ಬೆಯ ಮುಗಿಲು ಮುಟ್ಟಿದ ಆಕ್ರಂದನ ನೋಡಲಾಗುತ್ತಿಲ್ಲ. ತನ್ನ ಕುಟುಂಬವನ್ನು ನೋಡಿಕೊಳ್ಳುತ್ತಿದ್ದ, ಕುಟುಂಬಕ್ಕೆ ಆಧಾರವಾಗಿದ್ದ ಒಬ್ಬನೇ ಒಬ್ಬ ಮಗನನ್ನು ಕಳೆದುಕೊಂಡುಬಿಟ್ಟೆವಲ್ಲಾ ಎಂಬ ಆಕ್ರಂದನ ಲಕ್ಷಾಂತರ ಹಿಂದೂ ಕಾರ್ಯಕರ್ತರ ಹಾಗೂ ತಾಯಂದಿರ ಮನದಲ್ಲಿ ಮತ್ತೊಮ್ಮೆ ಧುಖಃದ ಮುದ್ರೆಯೊತ್ತಿದ್ದು ಮಾತ್ರ ಸುಳ್ಳಲ್ಲ.

ತನ್ನ ಮಗ ಮತ್ತೆ ಹುಟ್ಟಿ ಬರೋದಿಲ್ಲ ಎಂಬ ಕಟು ಸತ್ಯವನ್ನು ಆ ತಾಯಿಯಾದರೂ ಅದೇಗೆ ಸಹಿಸಿಕೊಳ್ಳುವಳು. ಅದಾಗಲೇ ಗಂಡ ಹಾಗೂ ಓರ್ವ ಹಿರಿಯ ಮಗನನ್ನು ಕಳೆದುಕೊಂಡ ಸಂಕಟವನ್ನು ಅನುಭವಿಸುತ್ತಿರುವಾಗಲೇ ಈಗ ಮತ್ತೊಬ್ಬ ಮಗನನ್ನು ಕಳೆದುಕೊಂಡಿರುವ ಆ ಮಹಾ ತಾಯಿಯ ಕಣ್ಣಿಂದ ಹರಿದು ಹೋಗುವ ಆ ಕಣ್ಣೀರನ್ನು ತಡೆಯಲು ಸಾಧ್ಯವೇ..? ಓಟಿನ ಓಲೈಕೆಗಾಗಿ ಮತಾಂಧರಿಗೆ ಬೆಂಬಲ ನೀಡುವ ಇಂದಿನ ರಾಜಕಾರಣಿಗಳ ಕುತಂತ್ರಕ್ಕೆ ಕುಟುಂಬವನ್ನು ಸಾಕಲು ಇದ್ದ ಒಬ್ಬನೇ ಒಬ್ಬ ಮಗನನ್ನೂ ಕಳೆದುಕೊಂಡ ನೋವು ಆ ರಾಜಕಾರಣಿಗಳಿಗೆ ಏನು ಗೊತ್ತು.

ಶಿವಾಜಿ ಕ್ಷತ್ರೀಯ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ…

ಹೌದು. ಪಾಪಿ ಉಗ್ರರಿಂದ ಹತ್ಯೆಗೀಡಾದ ದೀಪಕ್ ರಾವ್‍ರ ಅಂತ್ಯ ಸಂಸ್ಕಾರವನ್ನು ಶಿವಾಜಿ ಕ್ಷತ್ರೀಯ ಸಂಪ್ರದಾಯದಂತೆ ಮಾಡಲಾಗುತ್ತಿದೆ. ಆತ ಹಿಂದೂ ಸಂಘಟನೆಯ ಕಾರ್ಯಕರ್ತ ಎಂಬ ಕಾರಣಕ್ಕೆ ಆತನನ್ನು ಶಿವಾಜಿ ಕ್ಷತ್ರೀಯ ಸಂಪ್ರದಾಯದಂತೆ ಅಂತ್ಯ ಸಂಸ್ಕಾರವನ್ನು ಮಾಡಲಾಗುತ್ತಿಲ್ಲ. ಬದಲಾಗಿ ಆತನ ಜಾತಿಯೂ ಶಿವಾಜಿಯ ಜಾತಿಗೂ ಸಂಬಂಧವಿದೆ. ಹಿಂದೂ ಧರ್ಮದಲ್ಲಿ ಜನಿಸಿದ ದೀಪಕ್ ರಾವ್‍ನ ಜಾತಿ “ರಾವ್” ಎಂಬ ಪದದಿಂದ ಬಂದಿರುತ್ತದೆ. ಇದು ಛತ್ರಪತಿ ಶಿವಾಜಿ ಮಹಾರಾಜರು ಜನಿಸಿದ ಕ್ಷತ್ರೀಯ ಮತಕ್ಕೆ ಸೇರಿದ್ದಾಗಿದೆ. ಹೀಗಾಗಿ ದೀಪಕ್ ರಾವ್‍ನ ಅಂತ್ಯ ಸಂಸ್ಕಾರವನ್ನೂ ಶಿವಾಜಿ ಮತವಾಗಿದ್ದ ಕ್ಷತ್ರೀಯ ಮತ ಸಂಪ್ರದಾಯದಂತೆ ಮಾಡಲಾಗುತ್ತಿದೆ.

 

 

ನೀನೇ ಪುಣ್ಯವಂತ ಕಣೋ…

ಯಾರಿಗಿದೆ ಹೇಳು. ನೀನು ಜನಿಸಿದ್ದೇ ಆ ಶಿವಾಜಿ ಜನಿಸಿದ ಕ್ಷತ್ರೀಯ ವಂಶದಲ್ಲಿ. ಸಾವಿರಾರು ನಿನ್ನ ಅಭಿಮಾನಿಗಳ ಮುಂದೆ ಓ ಶಾಂತಿ, ಭಾರತ್ ಮಾತಾಕೀ ಜೈ ಎಂದು ಘೋಷಣೆ ಕೂಗುತ್ತಾ ಶಿವಾಜಿ ಕ್ಷತ್ರೀಯ ಸಂಪ್ರದಾಯದಂತೆ ನಿನ್ನ ಅಂತ್ಯ ಸಂಸ್ಕಾರ ಮಾಡಿಕೊಳ್ಳುತ್ತಿರುವ ನೀನೇ ಭಾಗ್ಯವಂತ ಕಣೋ. ನೀನು ಆ ಶಿವಾಜಿ ಮಹಾರಾಜರ ಪಾದವನ್ನೇ ಸೇರಿದ್ದೀಯ ಬಿಡು. ದೇವರಾಣೆಗೂ ನಮಗೆ ಇಂತಹ ಅವಕಾಶ ಸಿಗೋದೇ ಇಲ್ಲ ಬಿಡು. ಸಾವಿರಾರು ಜನರು ನಿನ್ನ ದೇಹಕ್ಕೆ ಹೆಗಲು ಕೊಟ್ಟಿದ್ದಾರೆ. ಅವರೆಲ್ಲರೂ ನಿನ್ನ ರಕ್ತವನ್ನು ಹಂಚಿಕೊಂಡು ಹುಟ್ಟಿದವರಲ್ಲ. ಆದರೆ ನಿನ್ನನ್ನು ಒಡಹುಟ್ಟಿದ ಸಹೋದರನಂತೆ ಎನಿಸಿಕೊಂಡು ತಮ್ಮ ಹೆಗಲ ಮೇಲೆ ನಿನ್ನನ್ನು ಕೊಂಡೊಯ್ಯುವ ಆ ಯುವಕರೂ ನಿನ್ನಂತೆಯೇ ಜಿಹಾದಿಗಳಿಗೆ ಸಿಂಹಸ್ವಪ್ನವಾಗಿರುವವರು. ಚಿಂತಿಸಿಬೇಡ ಸಹೋದರ ನಿನ್ನ ಕುಟುಂಬಕ್ಕೆ ಸಮಸ್ತ ಕೋಟಿ ಹಿಂದೂ ಸಮಾಜವೇ ನಿಂತಿದೆ. ನಿನಗೆ ಜನ್ಮ ನೀಡಿದ ಅವಳು ನಿನ್ನ ತಾಯಿ ಅಲ್ಲ ಕಣೋ… ಅವಳು ನಮ್ಮೆಲ್ಲರ ತಾಯಿ. ಕೋಟಿ ಕೋಟಿ ಮಕ್ಕಳಿಗೆ ಭಾರತಾಂಬೆ ಅವಳು. ಇನ್ನುಮುಂದೆ ಅವಳ ಜವಬ್ದಾರಿ ನಮ್ಮದು ಕಣೋ. ಮತ್ತೆ ಹುಟ್ಟಿ ಬಾ ಅನ್ನೋದೇ ನಮ್ಮ ಉಧ್ಘೋಷ…

Image result for shivaji

ಪಾಪಿಗಳಿಗೆ ಪಾಪದ ಕುಟುಂಬವೇ ಟಾರ್ಗೇಟ್..!!!

ರಾಜ್ಯದಲ್ಲಿ ಮತಾಂಧರು ಹತ್ಯೆ ಮಾಡಿದ ಅಷ್ಟೂ ಕುಟುಂಬಗಳೂ ಬಡ ಕುಟುಂಬಗಳಾಗಿವೆ. ಅದ್ರಲ್ಲೂ ಕರಾವಳಿಯಲ್ಲಿ ಹತ್ಯೆಗೀಡಾದ ಎಲ್ಲಾ ಕುಟುಂಬಗಳೂ ಮೃತರನ್ನೇ ಆಧರಿಸಿಕೊಂಡು ಬದುಕುತ್ತಿದ್ದವರಾಗಿದ್ದಾರೆ. ಮೂಡುಬಿದಿರೆಯ ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಹತ್ಯೆ ನಡೆದಿತ್ತು. ಆತನ ಮನೆಯಲ್ಲೂ ಆತನೊಬ್ಬನೇ ಮಗನಾಗಿದ್ದ. ಸಾಲದ ಹೊರೆ ಆತನ ಮೇಲಿದ್ದು ಕುಟುಂಬ ಸಂಕಟ ಪಡುತ್ತಿರುವ ಸಂದರ್ಭದಲ್ಲೇ ಆತನ ಕೊಲೆಯನ್ನು ಪಿಎಫ್‍ಐ ಪಾಪಿಗಳು ಮಾಡಿದ್ದರು. ಬಂಟ್ವಾಳದಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕಾರ್ಯಕರ್ತ ಶರತ್ ಮಡಿವಾಳರ ಹತ್ಯೆ ನಡೆದಿತ್ತು. ಆತನ ಕುಟುಂಬಕ್ಕೂ ಆತನೇ ಆಧಾರ ಸ್ತಂಬವಾಗಿದ್ದ. ಒಬ್ಬನೇ ಮಗನಾಗಿದ್ದ ಆತ ತನ್ನ ವೃದ್ಧ ಹೆತ್ತವರನ್ನು ಈತನೇ ದುಡಿದು ಸಾಕುತ್ತಿದ್ದ. ಹೀಗೆ ಮತಾಂಧರು ಮಾಡಿದ ಅನೇಕ ಕೊಲೆಗಳಲ್ಲೂ ಇಂತಹ ಪಾಪದ ಕುಟುಂಬಳೇ ಟಾರ್ಗೇಟ್ ಆಗುತ್ತಿವೆ.

ಒಟ್ಟಿನಲ್ಲಿ ಓರ್ವ ಕೆಚ್ಚೆದೆಯ ಹಿಂದೂ ಕಾರ್ಯಕರ್ತನನ್ನು ಹಿಂದೂ ಸಮಾಜ ಕಳೆದುಕೊಂಡಿದೆ. ರಾಜಕಾರಣಿಗಳ ಓಟಿನ ಆಸೆಗಾಗಿ ಇನ್ನೆಷ್ಟು ದೇಹಗಳು ಬೀಳಬೇಕೋ. ಇನ್ನೆಷ್ಟು ಅಮಾಯಕ ಜೀವಗಳು ರಾಜಕಾರಣಿಗಳ ಹಿತಕ್ಕೆ ಬಲಿಯಾಗಬೇಕೋ. ಒಂದು ಧರ್ಮವನ್ನು ಓಲೈಕೆ ಮಾಡುವ ಈ ರೀತಿಯ ರಾಜಕಾರಣದಿಂದಲೇ ಇಂದು ಸಾಲು ಸಾಲು ಹಿಂದೂ ಸಮಾಜದ ಕೊಲೆಗಳು ನಡೆಯುತ್ತಿದೆ ಅನ್ನೋದು ನಗ್ನ ಸತ್ಯ. ಆದರೆ ಹಿಂದೂಗಳು ಮಾತ್ರ ಇನ್ನೂ ನೀಚ ರಾಜಕಾರಣಿಗಳ ಹಿಂದೆ ಬಿದ್ದು ತಾನು ಹುಟ್ಟಿದ ಧರ್ಮವನ್ನೇ ಮರೆಯುತ್ತಿರುವುದು ಮಾತ್ರ ದುರ್ಧೈವ.

-ಸುನಿಲ್ ಪಣಪಿಲ

Tags

Related Articles

Close