ಪ್ರಚಲಿತ

ಭಾರತದ ಎರಡು ನಗರಗಳು ಯುನೆಸ್ಕೋ ಕ್ರಿಯೇಟಿವ್ ಸಿಟಿ ನೆಟ್ವರ್ಕ್‌ಗೆ ಸೇರ್ಪಡೆ

ಭಾರತದ ಸಾಂಸ್ಕೃತಿಕ ಪರಂಪರೆಯೇ ಹಾಗೆ. ಅದಕ್ಕೆ ಎಲ್ಲರನ್ನೂ ಸೆಳೆಯುವ, ಎಲ್ಲವನ್ನೂ ಆಕರ್ಷಿಸುವ ವಿಶೇಷ ಗುಣ ಇದೆ. ದೇಶದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿ ಸಹ ನಮ್ಮ ಸಾಂಸ್ಕೃತಿಕ ವಸ್ತು ವಿಷಯಗಳಿಗೆ ವಿಶೇಷ ಮಾನ್ಯತೆ ಇದೆ ಎನ್ನುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ.

ಭಾರತದ ಸಾಂಸ್ಕ್ರತಿಕ ಪರಂಪರೆಗೆ ಸಂಬಂಧಿಸಿದ ಹಾಗೆ ಯುನೆಸ್ಕೋದ ಕ್ರಿಯೇಟಿವ್ ಸಿಟಿ ನೆಟ್ವರ್ಕ್‌ಗೆ ಭಾರತದ ಎರಡು ನಾಮನಿರ್ದೇಶನಗಳು ಪುರಸ್ಕರಿಸಲ್ಪಟ್ಟಿವೆ.

ನಮ್ಮ ನೆರೆಯ ರಾಜ್ಯ ಕೇರಳದ ಕೋಝಿಕ್ಕೋಡ್‌ನ ಸಾಹಿತ್ಯಕ್ಕೆ ಮತ್ತು ಮಧ್ಯಪ್ರದೇಶದ ಗ್ವಾಲಿಯರ್‌ನ ಸಂಗೀತಕ್ಕಾಗಿ ಈ ಎರಡು ಪ್ರದೇಶಗಳು ಯುನೆಸ್ಕೋದ ಕ್ರಿಯೇಟಿವ್ ಸಿಟಿ ನೆಟ್ವರ್ಕ್‌ಗೆ ಸೇರ್ಪಡೆಯಾಗಿವೆ.

ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಸಂತಸ ಹಂಚಿಕೊಂಡು ಟ್ವೀಟ್ ಮಾಡಿದ್ದು, ಕೋಝಿಕೋಡ್‌ನ ಶ್ರೀಮಂತ ಸಾಹಿತ್ಯ ಪರಂಪರೆ ಮತ್ತು ಗ್ವಾಲಿಯರ್‌ನ ಸುಮುಧುರ ಪರಂಪರೆಯ ಜೊತೆಗೆ ಜಾಗತಿಕ ವೇದಿಕೆಯಲ್ಲಿ ಭಾರತದ ಸಾಂಸ್ಕೃತಿಕ ಚೈತನ್ಯವು ಪ್ರಕಾಶಮಾನವಾಗಿ ಮಿಂಚುತ್ತಿದೆ. ಈ ಎರಡು ನಗರಗಳಿಗೆ ಈಗ ಯುನೆಸ್ಕೋದ ಕ್ರಿಯೇಟಿವ್ ಸಿಟಿ ನೆಟ್ ವರ್ಕ್ ‌ಗೆ ಸೇರಿರುತ್ತವೆ. ಇಂತಹ ಗಮನಾರ್ಹ ಸಾಧನೆಗಾಗಿ ಈ ಎರಡೂ ನಗರಗಳ ಜನರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಹಾಗೆಯೇ, ನಾವು ಈ ಅಂತರಾಷ್ಟ್ರೀಯ ಮನ್ನಣೆಯನ್ನು ಆಚರಣೆ ಮಾಡುವಾಗ ನಮ್ಮ ದೇಶವು ಇಲ್ಲಿನ ಸಾಂಸ್ಕೃತಿಕ ಸಂಪ್ರದಾಯಗಳನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವ ತನ್ನ ಬದ್ಧತೆಯನ್ನು ಪುನರುಚ್ಛರಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಅದರೊಂದಿಗೆ ಇಂತಹ ಪುರಸ್ಕಾರಗಳು ನಮ್ಮ ಅನನ್ಯ ಸಾಂಸ್ಕೃತಿಕ ನಿರೂಪಣೆಗಳನ್ನು ಪೋಷಿಸಲು, ಅದನ್ನು ಹಂಚಿಕೊಳ್ಳಲು ಸಮರ್ಪಿತವಾದ ಪ್ರತಿಯೋರ್ವ ವ್ಯಕ್ತಿಯ ಸಾಮೂಹಿಕ ಪ್ರಯತ್ನಕ್ಕೆ ಹಿಡಿದ ಕೈಗನ್ನಡಿ ಎಂದು ಅವರು ತಿಳಿಸಿದ್ದಾರೆ.

https://x.com/narendramodi/status/1719639802180776392?s=20
Tags

Related Articles

Close