ಅಂಕಣದೇಶಪ್ರಚಲಿತ

2007 ರಲ್ಲೇ ಬಾಬಾ ರಹೀಮ್ ನ ದಾವೆಯನ್ನು ಮುಚ್ಚಿ ಹಾಕಲು ಕಾಂಗ್ರೆಸ್ ಯತ್ನಿಸಿದ್ದು ಯಾಕೆ ಗೊತ್ತೇ?! ಮಾಜಿ ಸಿಬಿಐ ಅಧಿಕಾರಿಯಿಂದ ಸ್ಫೋಟಕ ಮಾಹಿತಿ!

ಹರಿಯಾಣದ ಡೇರಾ ಸಚ್ಚಾ ಸೌದಾ ಸ್ಥಾಪಕ, ಸ್ವಯಂಘೋಷಿತ ದೇವಮಾನವ, ಬಾಬಾ ರಾಮ್ ರಹೀಮ್ ಗೆ ವಿಶೇಷ ಸಿಬಿಐ ನ್ಯಾಯಲಯವು 20 ವರ್ಷಗಳ ಜೈಲು ಶಿಕ್ಷೆ ನೀಡುವ ಮೂಲಕ ಸರ್ವ ಧರ್ಮ ಸಹಿಷ್ಣುತೆ ಎಂಬ ತತ್ವವನ್ನು ಎತ್ತಿ ಹಿಡಿದಿದೆ. ಕಾನೂನು ಎಲ್ಲರಿಗೂ ಒಂದೇ. ಕಾನೂನಿಗೆ ಎಲ್ಲರು ತಲೆಬಾಗಲೇ ಬೇಕು ಎಂಬುವುದು ಈ ನಯವಂಚಕ ಬಾಬಾ ರಾಮ್ ರಹೀಮ ನ ವಿಷಯದಲ್ಲಿ ಮಗದೊಮ್ಮೆ ಸಾಬೀತಾಗಿದೆ. ಆದರೆ ಇಲ್ಲಿ ಈ ಕೇಸ್ ಮುಚ್ಚಲು ಹಲವಾರು ಕುತಂತ್ರಗಳು ನಡೆದಿವೆ. ಹೌದು! ಬಾಬಾ ರಾಮ್ ರಹೀಮನನ್ನು ಕಾಂಗ್ರೆಸ್ ಸರ್ಕಾರ ರಕ್ಷಣೆ ಮಾಡಲು ಹೊರಟಿತ್ತು, ಇದರ ವಿರುದ್ಧ ಹಲವಾರು ಪಿತೂರಿಗಳನ್ನು ನಡೆಸಿದ್ದಾರೆ. ಸಿಬಿಐ ಗೆ ಈ ಕೇಸ್ ನ್ನು ವಾಪಸು ತೆಗೆದುಕೊಳ್ಳಬೇಕೆಂದು ಬೆದರಿಕೆ ಹಾಕಿತ್ತಂತೆ ಈ ಕಾಂಗ್ರೆಸ್! ಇತ್ತೀಚೆಗೆ ಹರಿಯಾಣದ ಜನರು ರಾಜ್ಯಾದ್ಯಂತ ಸಿಬಿಐ ನಿರ್ಧಾರದ ವಿರುದ್ಧ ಭುಗಿಲೆದ್ದಿದ್ದರು, 35 ಅಮಾಯಕ ಜನರು ಬಲಿಯಾದರು, ಇವೆಲ್ಲದರ ಹಿಂದೆ ಕೆಲ ರಾಜ್ಯ ರಾಜಕಾರಣಿಗಳ ಕುಮ್ಮಕ್ಕು ಇತ್ತು!

ಈ ಮಧ್ಯೆ ನಾವು ಸಿಬಿಐ ವಿಶೇಷ ನ್ಯಾಯಲಯವು ಬಾಬಾ ರಾಮ್ ರಹೀಮನಿಗೆ 20 ವರ್ಷಗಳ ಡಬಲ್ ಆಫರ್ ಸೆರೆವಾಸ ನೀಡಿರುವುದರ ಹಿಂದೆ ಹಲವಾರು
ಕಾಣದ ಕೈಗಳ ಕಠಿಣ ಪರಿಶ್ರಮ ಅಡಗಿದೆ. ಅದರಲ್ಲೂ ಈ ಪ್ರಕರಣದ ಆದಾರ ಸ್ತಂಭವಾಗಿ ನಿಂತಿದ್ದ ಮಹಾ ಶಕ್ತಿ ಮುಳಿಂಜಾ ನಾರಾಯಣನ್ ಪ್ರಮುಖರು.
ನಾರಾಯಣನ್ ಕಾಸರಗೋಡು ಜಿಲ್ಲೆಯ ಉಪ್ಪಳದವರು. ಕಾಸರಗೋಡಿನ ವಿದ್ಯಾನಗರ ಸರ್ಕಾರಿ ಕಾಲೇಜಿನಲ್ಲಿ 1970 ರಲ್ಲಿ ವಿಜ್ಞಾನ ಪದವಿ ಪಡೆದಿದ್ದ ಇವರು
ನಂತರ ಎಸ್‍ಐ ಶ್ರೇಣಿಯಿಂದ ಸಿಬಿಐಗೆ ಸೇರಿ ವೃತ್ತಿ ಜೀವನ ಪ್ರಾರಂಭಿಸಿದರು. ತದನಂತರದಲ್ಲಿ ಬಡ್ತಿ ಪಡೆಯುತ್ತಾ ಹೋದ ಇವರು ಮುಂದಿನ 38 ವರ್ಷಗಳ
ಸೇವೆಯಲ್ಲಿ ಸಿಬಿಐ ಜಂಟಿ ನಿರ್ದೇಶಕರಾಗಿ/ಡಿಐಜಿ ಆಗಿ 2009 ರಲ್ಲಿ ಕರ್ತವ್ಯದಿಂದ ನಿವೃತ್ತರಾದರು. ಇದೀಗ 67 ವರ್ಷದ ನಾರಾಯಣನ್ ದೆಹಲಿಯಲ್ಲಿ ವಿಶ್ರಾಂತ ಜೀವನವನ್ನು ಸಾಗಿಸುತ್ತಿದ್ದಾರೆ.

ಮುಳಿಂಜಾ ನಾರಾಯಣನ್ ರೇಪಿಸ್ಟ್ ಬಾಬಾರವರ ಪ್ರಕರಣದ ಜಾಲ ಹಿಡಿದು ಅದನ್ನು ದಡ ಸೇರಿಸುವಲ್ಲಿ ತಮ್ಮ ವೃತ್ತಿ ನಿಷ್ಠೆಯನ್ನು ಮೆರೆದಿದ್ದಾರೆ. ಗುರ್ಮೀತ್ ರಾಮ್ ರಹೀಮ್ ಸಿಂಗ್ ಅತ್ಯಾಚಾರ ಪ್ರಕರಣವನ್ನು 2002 ರ ಸೆಪ್ಟೆಂಬರ್ ಅಂದು ಪಂಜಾಬ್, ಹರಿಯಾಣ ಹೈಕೋರ್ಟ್‍ಗೆ ವರ್ಗಾಯಿಸಲಾಗಿತ್ತು. ತನಿಖೆಯ
ಜವಾಬ್ದಾರಿಯನ್ನು ನಾರಾಯಣನ್ ಅವರು ವಹಿಸಿಕೊಂಡಿದ್ದರು. ಆ ಸಮಯದಲ್ಲಿ ನಾರಾಯಣನ್ ದೆಹಲಿಯಲ್ಲಿ Deputy Inspector General of Police (Special Crimes) ಆಗಿ ಕಾರ್ಯ ನಿರ್ವಹಿಸುತ್ತಿದ್ದರು. 2002 ಡಿ 12 ರಂದು ಇದರ ತನಿಖೆ ಕೈಗೆತ್ತಿ ಕೊಂಡಾಗ ಇವರಿಗೆ ಹಲವಾರು
ಸಮಸ್ಯೆಗಳು ಎದುರಾದವು, ಬೆದರಿಕೆ ಕರೆಗಳು ಕೂಡ ಬಂದವು! ಒಬ್ಬ ಅಧಿಕಾರಿಯಂತು ಅವರ ಕಛೇರಿಗೆ ನುಗ್ಗಿ ನಿನಗೆ ಈ ಕೇಸ್ ವಹಿಸಿರುವ ಉದ್ದೇಶ ಏನು ಗೊತ್ತೇ?”Just to close it Dear Officer” ಎಂದನಂತೆ! ಇದಾದ ಮೇಲೂ ಕೂಡ ಹಲವಾರು ಅಧಿಕಾರಿಗಳು ಹಾಗೂ ರಾಜಕಾರಣಿಗಳು ಈ
ವಿಷಯದಲ್ಲಿ ತಕರಾರೆದ್ದಿದ್ದರಂತೆ!

ಇಷ್ಟೆಲ್ಲಾ ಒತ್ತಡಗಳ ನಡುವೆಯು ನ್ಯಾಯದೇವತೆಯ ಮೊರೆ ಹೋಗಿದ್ದ ನಾರಾಯಣನ್‍ಗೆ ನ್ಯಾಯಾಂಗವು ಒಂದು ಪ್ರಬಲಅಸ್ತ್ರವಾಗಿತ್ತಂತೆ. ಇದು ಅವರಿಗೆ ದುಷ್ಟ ಸಂಹಾರ ಮಾಡಲು ಸಹಾಯಕವಾಯಿತೆಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಇವರು ಈ ಕೇಸ್‍ನ್ನು ತನಿಖೆ ಮಾಡುತ್ತಿರುವಾಗ 1999 ರಲ್ಲಿ ಬಾಬಾರಿಂದ ಅತ್ಯಾಚಾರಕ್ಕೆ ಒಳಗಾಗಿದ್ದ ಯುವತಿಯು ವಿಹಾಹ ವಾಗಿ ಗಂಡನ ಮನೆ ಸೇರಿದ್ದಳು. ಬಾಬಾನ ವಿರುದ್ದ ಯಾವುದೇ ಕ್ರಮ ತೆಗೆದು ಕೊಳ್ಳುವುದು ಬೇಡ, ನಾನು ಮದುವೆಯಾಗಿ ನೆಮ್ಮದಿಯಿಂದ ಇದ್ದುದಾಗಿ ಈಕೆ ತಿಳಿಸಿದ್ದಳು. ಅ ಸಂದರ್ಭದಲ್ಲಿ ನಾರಾಯಣನ್ ಆಕೆಯ ತಂದೆಯ ಸ್ಥಾನದಲ್ಲಿ ನಿಂತು “ಮಗಳೇ ನಾ ನಿನ್ನ ಜೊತೆ ಇದ್ದೇನೆ, ಬಾಬಾ ಇನ್ನು ಮುಂದೆ ಯಾವುದೇ ಹೆಣ್ಣು ವiಕ್ಕಳಿಗೆ ವಂಚಿಸದಂತೆ ನೋಡಿಕೊಳ್ಳುವುದಾಗಿ ಆಶ್ವಾಸನೆ ನೀಡಿದರು. ನೀನೊಬ್ಬಳು ನನ್ನ ಜೊತೆ ಬಾಬಾನ ವಿರುದ್ಧ ಹೋರಾಡು ಎಂದೆಲ್ಲ ಧೈರ್ಯ ತುಂಬಿ ಅವಳಲ್ಲಿ ಅಂಗಲಾಚಿ ಬೇಡಿಕೊಂಡಿದ್ದರಂತೆ.’’ ಆ ನಂತರ ನಡೆದದ್ದು ಇತಿಹಾಸದ ಪುಟ ಸೇರೋ ಸಂಗತಿಯೇ ಸರಿ! ಅದೇಷ್ಟೋ ಹೆಣ್ಣು ಮಕ್ಕಳ ಜೀವನ ಬಲಿತೆಗೆದು ಕೊಂಡವನು ಕಂಬಿ ಎಣಿಸುವಂತಾಗಿದೆ. ಈಗ ನಾರಾಯಣನ್ ನೊಂದ ಹೆಣ್ಣು ಮಕ್ಕಳ ನಿಜವಾದ ಹೀರೋ !
ಇವರ ನಿಷ್ಟಾವಂತ ಬದುಕು, ಸತತ 38 ವರ್ಷಗಳ ಪರಿಶ್ರಮ ಹಾಗೂ ಕಾರ್ಯನಿರ್ವಹಣೆಗೆ ಇವರು, 1992 ರಲ್ಲಿ ಪೊಲೀಸ್ ಪದಕ, 1999 ರಲ್ಲಿ ರಾಷ್ಟ್ರಪತಿಯ
ಪೊಲೀಸ್ ಪದಕ ಶೋಭಿತರಾಗಿದ್ದಾರೆ. ಇದರೊಂದಿಗೆ ಮಹಾತ್ಮಾಗಾಂಧಿ ಕೊಲೆ, ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಕೊಲೆ, ಅಯೋಧ್ಯ ರಾಮ ಮಂದಿರ ಪ್ರಕರಣ, ಕಂದಹಾರ್ ವಿಮಾನ ಅಪಹರಣ ಹೀಗೆ ಹತ್ತು ಹಲವಾರು ಪ್ರಕರಣಗಳ ಬೇದಿಸಿದ ತಂಡದ ಪ್ರಮುಖ ಸದಸ್ಯರಲ್ಲೊಬ್ಬರಾಗಿದ್ದರು. ಅದೆನೇ ಇರಲಿ ದೇವರ ಹೆಸರಿನಲ್ಲಿ ಅದೆಷ್ಟೋ ಮನಸ್ಸುಗಳ ಭಾವನೆಗಳಲ್ಲಿ ಚೆಲ್ಲಾಟ ಆಡುವ ಬಾಬಾ ರಾಮ ರಹೀಮರಂತಹ ನೀಚರಿಗೆ ತಕ್ಕ ಶಾಸ್ತಿಯಾಗಿದೆ. ಇಂತಹ ದುಷ್ಟರಿಂದ ದೇಶಕ್ಕೆ ನಷ್ಟವೇ ಹೊರತು, ಲಾಭವಿಲ್ಲ! ಇಂತವರನ್ನು ಸೆರೆಹಿಡಿಯುವುದರಿಂದ ಅಮಾಯಕ ಜೀವಗಳು ನೆಮ್ಮದಿಯಿಂದ ಉಸಿರಾಡುವಂತಾಗಲಿ..

-ಕಾವ್ಯ ಅಂಚನ್

Tags

Related Articles

Close