ಪ್ರಚಲಿತ

ದೊಡ್ಡಣ್ಣನ ಧಮ್ಕಿಗೆ ಕ್ಯಾರೆ ಅನ್ನದ ಮೋದಿ ಸರಕಾರ!! ರಷ್ಯಾದ ಜೊತೆ ರಕ್ಷಣಾ ಸಂಬಂಧ ಮುಂದುವರಿಸುವ ನಿರ್ಧಾರ!! ಇದು ಮೋದಿ ನೇತೃತ್ವದ ಬಲಿಷ್ಠ ದೇಶ ಎಂದು ಜಗತ್ತಿಗೆ ಸಾರಿದ ಭಾರತ!!

ತಾನು ಪ್ರಪಂಚದ ಯಾವ ದೊಡ್ಡಣ್ಣ-ದೊಡ್ಡಪ್ಪನಿಗೂ ಡೊಗ್ಗು ಸಲಾಂ ಹಾಕುವುದಿಲ್ಲ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ ಪ್ರಧಾನ ಸೇವಕ ಮೋದಿ. ಭಾರತ ತಾನು ಸರ್ವ ತಂತ್ರ ಸ್ವತಂತ್ರವಾಗಿ ತನ್ನ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಶಕ್ತವಾಗಿದ್ದೇನೆ ಎನ್ನುವುದನ್ನು ಕಳೆದ ಬಾರಿ ಜೆರೂಸಲೆಮ್ ವಿಷಯದಲ್ಲಿ ಅಮೇರಿಕಾ ವಿರುದ್ದ ಮತ ಚಲಾಯಿಸುವ ಮೂಲಕ ತೋರಿಸಿ ಕೊಟ್ಟಿದೆ. ತಾನೇನು “ಮುಲಾಜು ಪ್ರಧಾನ ಮಂತ್ರಿ”ಯಲ್ಲ, ತನಗೆ ವಿಶ್ವದ ಇತರ ದೇಶಗಳ ಮುಲಾಜಿಲ್ಲ, ತಾನು ಕೇವಲ ತನ್ನ ದೇಶಕ್ಕೆ ಮತ್ತು ದೇಶದ ಜನರ ಮುಲಾಜಿಗೆ ಬಾಧ್ಯನು ಎನ್ನುವುದನ್ನು ಮೋದಿ ಪದೆ ಪದೆ ವಿಶ್ವಕ್ಕೆ ತೋರಿಸಿಕೊಡುತ್ತಿದ್ದಾರೆ.

ಬ್ರಿಟನ್ ರಾಣಿಯಾದರೇನು, ಅರಬ್ ರಾಜನಾದರೇನು? ಅದು ನಿಮ್ಮ ನಿಮ್ಮ ಅರಮನೆಗಳಲ್ಲಿ ನನಗೂ ಅದಕ್ಕೂ ಸಂಬಂಧವಿಲ್ಲ, ನನ್ನ ದೇಶ ನನಗೆ ಮೊದಲು ಎನ್ನುವ ಮೋದಿ ಈ ಸರಿ ಮತ್ತೊಮ್ಮೆ ಅಮೇರಿಕಾದ ಧಮಕಿಗೆ ಕ್ಯಾರೆ ಅನ್ನದೆ ರಷ್ಯಾ ಜೊತೆ ರಕ್ಷಣಾ ಸಂಬಂಧವನ್ನು ಮುಂದುವರಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ. ಭಾರತವು ಎಸ್ -400 ಟ್ರಯಂಫ್ ಏರ್ ಡಿಫೆನ್ಸ್ ಸಿಸ್ಟಮ್ ವ್ಯವಹಾರದ ಕುರಿತು ರಕ್ಷಣಾ ವಲಯದಲ್ಲಿ ಇಂಡೋ-ರಷ್ಯನ್ ಸಹಕಾರ ಮುಂದುವರಿಸಲಿದೆ ಎಂದು ಅಮೇರಿಕಾಕ್ಕೆ ಸ್ಪಷ್ಟವಾಗಿ ತಿಳಿಸಿದೆ. ತನ್ನ ರಾಷ್ಟ್ರಪತಿ ಚುನಾವಣೆಯ ವೇಳೆ ಅಕ್ರಮವೆಸಗಿದ ಕಾರಣ ಇಟ್ಟುಕೊಂಡು ಇತ್ತೀಚೆಗೆ ಟ್ರಂಪ್ ಆಡಳಿತವು ರಷ್ಯಾ ವಿರುದ್ಧ ಕಠಿಣ ನಿರ್ಬಂಧಗಳನ್ನು ಹೇರಿದೆ. ಏಳು ಉನ್ನತ-ಮಟ್ಟದ ರಷ್ಯಾ ಉದ್ಯಮಿಗಳು, ಹನ್ನೆರಡು ರಷ್ಯನ್ ಕಂಪನಿಗಳು ಮತ್ತು 17 ಹಿರಿಯ ಸರ್ಕಾರಿ ಅಧಿಕಾರಿಗಳ ವಿರುದ್ಧ ದಂಡನಾತ್ಮಕ ಕ್ರಮಗಳನ್ನು ಘೋಷಿಸಿದೆ.

ತನ್ನ ಸರ್ವಾಧಿಕಾರಿ ಧೋರಣೆಗೆ ಹೆಸರುವಾಸಿಯಾದ ಅಮೇರಿಕಾ ತನ್ನ ಶತ್ರುಗಳ ಜೊತೆ ಇತರರೂ ಶತ್ರುತ್ವ ಇಟ್ಟುಕೊಳ್ಳಬೇಕೆಂದು ಬಯಸುತ್ತದೆ. ಭಾರತದ ಚುಕ್ಕಾಣಿ ಗುಲಾಮರ ಕೈಯಲ್ಲಿ ಇದ್ದಿದ್ದರೆ ಅಮೇರಿಕಾ ಧಮಕಿಗೆ ಹೆದರಿ ರಷ್ಯಾದೊಡನೆ ಸಂಬಂಧ ಕಡಿದು ಕೊಳ್ಳುತ್ತಿದ್ದರೋ ಏನೋ? ಆದರೆ ಈಗಿರುವುದು ಸ್ವಾಭಿಮಾನಿ ದೇಶಭಕ್ತನ ಸರಕಾರ. ದೇಶದ ವಿಷಯದಲ್ಲಿ ಯಾರ ಧಮಕಿಗೂ ಜಗ್ಗುವುದಿಲ್ಲ ನರೇಂದ್ರ ದಾಮೋದರ್ ದಾಸ್ ಮೋದಿ ಎನ್ನುವ ಪ್ರಧಾನ ಸೇವಕ! ಭಾರತದ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ಇದು ಪರೀಕ್ಷೆಯ ಸಮಯ ಆದರೆ ರಷ್ಯಾ ಜೊತೆ ಸಂಬಂಧ ಕಡಿದು ಕೊಳ್ಳುವ ಮಾತೆ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಅಮೇರಿಕಾದ CAATSA ಕಾನೂನಿನನ್ವಯ ರಷ್ಯಾದ ರಕ್ಷಣಾ ಅಥವಾ ಗುಪ್ತಚರ ಸಂಸ್ಥೆಗಳೊಂದಿಗೆ ಗಮನಾರ್ಹ ವಹಿವಾಟಿನಲ್ಲಿ ತೊಡಗಿಸಿಕೊಂಡ ದೇಶಗಳು ಮತ್ತು ಘಟಕಗಳನ್ನು ಶಿಕ್ಷಿಸುವ ಅಧಿಕಾರ ಅಮೇರಿಕಾದ ಆಡಳಿತಕ್ಕೆ ದೊರೆಯುತ್ತದೆ. ತನ್ನ ರಕ್ಷಣಾ ತಂತ್ರಜ್ಞಾನ ಅಭಿವೃದ್ದಿ, ರಕ್ಷಣಾ ಉಪಕರಣಗಳ ಬಿಡಿ ಭಾಗಗಳು, ತಾಂತ್ರಿಕ ಮತ್ತು ಸಾರಿಗೆಗೆ ಉಪಯೋಗವಾಗುವ ಕಚ್ಚಾ ಸಾಮಾಗ್ರಿಗಳು ಎಲ್ಲಾದಕ್ಕೂ ಭಾರತ ರಷ್ಯಾದ ಮೇಲೆ ಅವಲಂಬಿತವಾಗಿದೆ. ಅದರ ಜೊತೆ ಬಾರಿ ಮಹತ್ವದ ಎಸ್ -400 ಟ್ರಯಂಫ್ ಏರ್ ಡಿಫೆನ್ಸ್ ಸಿಸ್ಟಮ್ ವ್ಯವಹಾರದ ಬಗ್ಗೆ ಮಾತುಕತೆಯೂ ನಡೆಯುತ್ತಿದೆ. ರಷ್ಯಾದ ಜೊತೆ ಯಾವುದೇ ಕಾರಣಕ್ಕೂ ಸಂಬಂಧ ಕಡಿದುಕೊಳ್ಳುವ ಪರಿಸ್ಥಿತಿಯಲ್ಲಿ ಭಾರತವಿಲ್ಲ. ಅದಕ್ಕಾಗಿ ದೊಡ್ಡಣ್ಣನ್ನು ಎದುರು ಹಾಕಿಕೊಳ್ಳಲು ತಾನು ತಯಾರು ಎಂದು ಭಾರತ ಈಗಾಗಲೆ ಸ್ಪಷ್ಟ ಪಡಿಸಿದೆ.

ಏಷ್ಯಾದಲ್ಲಿ ಅಮೇರಿಕಾದ ಅತಿ ದೊಡ್ಡ ಶತ್ರು ಚೀನಾ. ಚೀನಾವನ್ನು ಮಣಿಸುವ ತಾಕತ್ತಿರುವುದು ಕೇವಲ ಭಾರತಕ್ಕೆ. ಭಾರತಕ್ಕೆ ಅಮೇರಿಕಾದ ಸಹಾಯದ ಅಗತ್ಯಕ್ಕಿಂತಲೂ ಅಮೇರಿಕಾಕ್ಕೆ ಭಾರತದ ಸಹಾಯದ ಅಗತ್ವವಿದೆ ಎನ್ನುವುದು ಅಮೇರಿಕಾಗೆ ಗೊತ್ತು. ಅಷ್ಟಿಲ್ಲವಾಗಿದ್ದರೆ ಅದು ತನ್ನ ಕಮಾಂಡಿಗೆ ಇಂಡೋ-ಫೆಸಿಫಿಕ್ ಕಮಾಂಡ್ ಎಂದು ಹೆಸರು ಯಾಕಿಡುತ್ತಿತ್ತು? ಭಾರತದ ಸ್ನೇಹ ಅಮೇರಿಕಾಕ್ಕೆ ಅನಿವಾರ್ಯವೆ ಹೊರತು ಅಮೇರಿಕಾದ ಸ್ನೇಹ ಭಾರತಕ್ಕೆ ಅನಿವಾರ್ಯವಲ್ಲ. ರಷ್ಯಾವನ್ನಾದರೂ ನಂಬಬಹುದು ಅಮೇರಿಕಾವನ್ನಲ್ಲ ಎನ್ನುವ ಸತ್ಯ ಜಗತ್ತಿಗೆ ಗೊತ್ತು. ತನ್ನ ದೇಶದ ಒಳಿತಿಗಾಗಿ ಯಾವ ಸಮಯದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಬೇಕೆಂಬುದು ಮೋದಿ ಅವರಿಗೆ ಚೆನ್ನಾಗಿ ತಿಳಿದಿದೆ. ಚೀನಾ ಕೆಂಗಣ್ಣಿರಲಿ, ಪಾಕಿಸ್ತಾನದ ಮಂಗಣ್ಣ ಇರಲಿ, ಜಗತ್ತಿನ ದೊಡ್ಡಣ್ಣ ಇರಲಿ ನಾವೀಗ ಯಾರಿಗೂ ಕ್ಯಾರೆ ಅನ್ನಲ್ಲ. ಇದು ಹಿಂದಿನ ಜಿ ಹುಜೂರ್ ಭಾರತವಲ್ಲ, ಬದಲಾಗಿ ಮೋದಿ ನೇತೃತ್ವದ ಬಲಿಷ್ಟ ಭಾರತ….

-ಶಾರ್ವರಿ

Related Articles

Close