ಪ್ರಚಲಿತ

ಸುಳ್ಳು ಹೇಳುವುದರಲ್ಲಿ ಎಎಪಿ ನಂ.1

ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟ ಎಂದು ಹೇಳಿಕೊಂಡು ಆಮ್ ಆದ್ಮಿ ಪಕ್ಷ ಕಟ್ಟಿದ ಕೇಜ್ರೀವಾಲ್, ಅದೇ ಭ್ರಷ್ಟಾಚಾರದ ವಿಚಾರಕ್ಕೆ ಜೈಲು ಸೇರಿದ್ದರು. ಆ ಮೂಲಕ ಅಧಿಕಾರದಲ್ಲಿ ಇರುವಾಗಲೇ ಪರಪ್ಪನ ಅಗ್ರಹಾರಕ್ಕೆ ಹೋದ ಮೊದಲ ಮುಖ್ಯಮಂತ್ರಿ ಎಂಬ ಕುಖ್ಯಾತಿಯನ್ನು ಸಹ ತಮ್ಮದಾಗಿಸಿಕೊಂಡವರು.

ಭ್ರಷ್ಟ ಅಕ್ರಮ ಅಬಕಾರಿ ನೀತಿ ರೂಪಿಸುವ ಮೂಲಕ ಅರವಿಂದ ಕೇಜ್ರಿವಾಲ್ ಮತ್ತು ಅವರ ಪಟಾಲಂ ಜೈಲು ಸೇರಿದ್ದರು. ಆ ಮೂಲಕ ಭ್ರಷ್ಟಾಚಾರದ ವಿರುದ್ಧ ಹೋರಾಟದ ಹೆಸರು ಹೇಳಿ ಜನರನ್ನು ವಂಚಿಸಿ, ಭ್ರಷ್ಟಾಚಾರದ ಇನ್ನೊಂದು ಮುಖವೇ ಎಎಪಿ ಎಂಬಂತೆ ಕುಖ್ಯಾತವಾದ ಪಕ್ಷ ಎಂದು ಸಂಶಯವಿಲ್ಲದೆ ಹೇಳಬಹುದು. ಎಎಪಿ ಭ್ರಷ್ಟ ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟದ ಸದಸ್ಯ ಎನ್ನುವುದು ಮುಖ್ಯವಾದ ವಿಷಯ.

ಇಂತಹ ಭ್ರಷ್ಟ ಪಕ್ಷದ ವಿರುದ್ಧ ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಕಿಡಿ ಕಾರಿದ್ದಾರೆ.

ಎಎಪಿಯನ್ನು ಅತ್ಯಂತ ಅಪ್ರಾಮಾಣಿಕ ವ್ಯಕ್ತಿ ಎಂದು ಹೇಳಿರುವ ಅವರು, ಅದರ ಮಿತ್ರ ಪಕ್ಷ ಕಾಂಗ್ರೆಸ್ ವಿರುದ್ಧ ಸಹ ಹರಿಹಾಯ್ದಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 400 ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸುವ ಗುರಿ ಹೊಂದಿದ್ದು, ಕಾಂಗ್ರೆಸ್ ಪಕ್ಷ ‘ಅಬ್ಕಿ ಬಾರಿ 40 ಪಾರ್’ ಗಾಗಿ ಹರಸಾಹಸ ಪಡುತ್ತಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಕಳೆದ ಹತ್ತು ವರ್ಷಗಳ ಭಾರತೀಯ ಜನತಾ ಪಕ್ಷ ನೇತೃತ್ವದ ಎನ್‌ಡಿಎ ಆಡಳಿತದಲ್ಲಿ ದೇಶದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳು ನಡೆದಿವೆ. ಇಂತಹ ಅದ್ಭುತ ಕಾರ್ಯವೈಖರಿ ನೋಡಿ ಹಿಂಡು ಹಿಂಡಾಗಿ ಕಾಂಗ್ರೆಸ್ ನಾಯಕರು ಆ ಪಕ್ಷ ತೊರೆದು, ಬಿಜೆಪಿಗೆ ಬರುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರದ ಬಗ್ಗೆ ಹೇಳಿದ್ದಾರೆ.

ಹಾಗೆಯೇ ಎಎಪಿ ಬಗೆಗೂ ಮಾತನಾಡಿರುವ ಅವರು, ದೇಶದ ಅತ್ಯಂತ ಅಪ್ರಾಮಾಣಿಕ ಪಕ್ಷ ಎಂದರೆ ಎಎಪಿ. ಸುಳ್ಳು ಹೇಳುವುದರಲ್ಲಿ ಆಮ್ ಆದ್ಮಿ ಪಕ್ಷ ಅಗ್ರಗಣ್ಯ ಸ್ಥಾನವನ್ನು ಕಾಪಾಡಿಕೊಂಡಿದೆ. ಹಾಗೆಯೇ ಎಎಪಿ ಪಕ್ಷದ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಅತ್ಯಂತ ಅಪ್ರಾಮಾಣಿಕ ವ್ಯಕ್ತಿ ಎನ್ನುವುದರಲ್ಲಿ ಎರಡು ಮಾಡಲಿಲ್ಲ ಎಂದು ಅವರು ತಿಳಿಸಿದ್ದಾರೆ.

ದೆಹಲಿಯ ಎಎಪಿ ಸರ್ಕಾರ ಸದ್ಯ ರದ್ದು ಮಾಡಿರುವ ಅಕ್ರಮ ಮದ್ಯ ನೀತಿಗೆ ಸಂಬಂಧಿಸಿದ ಹಾಗೆ ಇಡಿ ಅಧಿಕಾರಿಗಳು ಅರವಿಂದ ಕೇಜ್ರೀವಾಲ್ ಅವರನ್ನು ಅಧಿಕಾರದಲ್ಲಿ ಇರುವಾಗಲೇ ವಶಕ್ಕೆ ಪಡೆದು, ಬಂಧನದಲ್ಲಿ ಇರಿಸಿರುವುದಾಗಿದೆ.

ಅಣ್ಣಾ ಹಜಾರೆಯವರು ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿ, ಸತ್ಯಾಗ್ರಹ ನಡೆಸಿದ ಸಂದರ್ಭದಲ್ಲಿ ಈ ಹೋರಾಟದಲ್ಲಿ ಭಾಗವಹಿಸಿದ್ದ ಅರವಿಂದ ಕೇಜ್ರಿವಾಲ್ ಆ ಬಳಿಕ ಆಮ್ ಆದ್ಮಿ ಪಕ್ಷ ಕಟ್ಟಿದ್ದರು. ನಮ್ಮದು ಭ್ರಷ್ಟರ ವಿರುದ್ಧ, ಭ್ರಷ್ಟಾಚಾರದ ವಿರುದ್ಧ ಇರುವ ಪಕ್ಷ ಎನ್ನುವ ಮೂಲಕ ಜನರನ್ನು ಮೂರ್ಖರನ್ನಾಗಿ ಆಡಳಿತ ಪಡೆದು, ಈಗ ಭ್ರಷ್ಟಾಚಾರದ ಕಾರಣಕ್ಕೆಯೇ ಕೇಜ್ರಿವಾಲ್ ಪರಪ್ಪನ ಅಗ್ರಹಾರ ಸೇರಿದ್ದಾರೆ ಎನ್ನುವುದು ನಾಚಿಕೆಯ ಸಂಗತಿ.

Tags

Related Articles

Close