ಪ್ರಚಲಿತ

ಬಯಲಾಯ್ತು ಚುನಾವಣಾ ಪೂರ್ವ ಸಮೀಕ್ಷೆ..! ಈ ಬಾರಿ ಲಿಂಗಾಯತರು ಯಾರ ಪರವಾಗಿದ್ದಾರೆ ಗೊತ್ತಾ..?

ಚುನಾವಣೆ ಹತ್ತಿರ ಬರುತ್ತಿದ್ದಂತೆ  ರಾಜಕೀಯ ಪಕ್ಷಗಳ ಸಮೀಕ್ಷೆಗಳೂ ಒಂದೊಂದೇ ಬಹಿರಂಗವಾಗುತ್ತಿದೆ. ಈ ಬಾರಿ ಮತದಾರ ಯಾವ ಪಕ್ಷಕ್ಕೆ ಒಲವನ್ನು ಹೊಂದಿದ್ದಾನೆ ಎನ್ನುವುದರ ಬಗ್ಗೆ ಹಲವಾರು ಛಾನೆಲ್‍ಗಳು ಮತ ಸಮೀಕ್ಷಯನ್ನು ನಡೆಸಿದೆ. ಇದೀಗ ರಾಷ್ಟ್ರದ ಹಿಂದಿ ಸುದ್ಧಿ ವಾಹಿನಿಯಾದ ಎಬಿಪಿ ಸುದ್ಧಿ ವಾಹಿನಿ ತನ್ನ ಚುನಾವಣಾ ಪೂರ್ವ ಫೈನಲ್ ಹಂತದ ಸಮೀಕ್ಷೆಯನ್ನು ಬಹಿರಂಗಪಡಿಸಿದೆ.

ಲಿಂಗಾಯತರು ಈ ಬಾರಿ ಯಾವ ಪಕ್ಷ..?

ಲಿಂಗಾಯತರ ವೀರಶೈವ. ತನ್ನ ಅಧಿಕಾರದ ಉಳಿವಿಗಾಗಿ ಧರ್ಮವನ್ನೇ ಇಬ್ಬಾಗ ಮಾಡಲು ಹೊರಟಿದ್ದ ಕಾಂಗ್ರೆಸ್ ಸರ್ಕಾರದ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಅನೇಕ ಕಾಂಗ್ರೆಸ್ ಸಚಿವ ಶಾಸಕರ ದುರಾಸೆಗೆ ಬಲಿಯಾದ ಹಿಂದೂ ಧರ್ಮದ ಶ್ರೇಷ್ಟ ಮತಗಳು. ಈ ಲಿಂಗಾಯತ ವೀರಶೈವರನ್ನು ಕೇವಲ ಸವಲತ್ತಿನ ಆಸೆ ತೋರಿಸಿ ಹಿಂದೂ ಧರ್ಮದಿಂದ ಬೇರ್ಪಡಿಸಿ ಜಾತಿ ಜಾತಿಯ ಮಧ್ಯೆಯೇ ಕಿಚ್ಚು ಹಚ್ಚಿಸಿ ಧರ್ಮ ವಿರೋಧಿ ನಾಟಕವಾಡಿದ್ದ ಕಾಂಗ್ರೆಸ್ ಪಕ್ಷ ಇದೀಗ ಭಾರೀ ಮುಖಭಂಗವನ್ನೇ ಅನುಭವಿಸುವಂತಾಗಿದೆ.

ಹಿಂದೂ ಧರ್ಮದಲ್ಲಿದ್ದರೆ ಆ ಮತಗಳು ಭಾರತೀಯ ಜನತಾ ಪಕ್ಷದ ಪಾಲಾಗುತ್ತವೆ. ಹೀಗಾಗಿ ಆ ಧರ್ಮಗಳನ್ನು ಒಡೆದರೆ ಆ ಮತಗಳು ಕಾಂಗ್ರೆಸ್ ಪಾಲಾಗುವ ಕ್ರಿಮಿನಲ್ ತಂತ್ರಗಾರಿಕೆಯನ್ನು ಕಾಂಗ್ರೆಸ್ ಪಕ್ಷ ಮಾಡಿತ್ತು. ಆದರೆ ಕಾಂಗ್ರೆಸ್ ತೋಡಿದ್ದ ಆ ಗುಂಡಿಗೆ ಸ್ವತಃ ಕಾಂಗ್ರೆಸ್ ಪಕ್ಷವೇ ಬಿದ್ದು ನರಳಾಡುತ್ತಿದೆ. ತನ್ನ ಖತರ್ನಾಕ್ ಯೋಜನೆಯೇ ಉಲ್ಟಾ ಪಲ್ಟಾವಾಗಿತ್ತು. ಲಿಂಗಾಯತ ಹಾಗೂ ವೀರಶೈವರು ಬೇರೆ ಬೇರೆ ಎಂದು ಹೇಳುವ ಮೂಲಕ ಸರ್ಕಾರ ಜಾತಿಯ ಮಧ್ಯೆಯೂ ಒಡಕನ್ನು ತಂದಿಟ್ಟಿತ್ತು.

Image result for siddaramaiah

ಕಾಂಗ್ರೆಸ್‍ನ ಈ ವಿಫಲ ಹಾಗೂ ಧರ್ಮವಿರೋಧಿ ತಂತ್ರಗಳ ಹಿಂದೆ ಕಾಂಗ್ರೆಸ್ ಸಚಿವ ಎಂಬಿ ಪಾಟೀಲ್, ವಿನಯ್ ಕುಲಕರ್ಣಿ ಸಹಿತ ಅನೇಕ ಸಚಿವ ಶಾಸಕರುಗಳೂ ಇದ್ದರು. ಸುಳ್ಳು ಹಾಗೂ ನಕಲಿ ಮುಖಗಳನ್ನು ಹೊತ್ತುಕೊಂಡು ಧರ್ಮವನ್ನೇ ಇಬ್ಬಾಗ ಮಾಡುವತ್ತ ಈ ಕಾಂಗ್ರೆಸ್ ನಾಯಕರು ಹೋಗಿದ್ದು ರಾಷ್ಟ್ರಮಟ್ಟದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

ಈ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಲಿಂಗಾಯತರು ಮತ ಹಾಕುತ್ತಾರೆ ಎಂದು ಕಾಂಗ್ರೆಸ್ ನಾಯಕರು ಭಾವಿಸಿದ್ದರು. ಆದರೆ ಇದೀಗ ಎಬಿಪಿ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ಕಾಂಗ್ರೆಸ್ ಪಕ್ಷವನ್ನೇ ಬೆಚ್ಚಿ ಬೀಳಿಸಿದೆ.

ಬಿಜೆಪಿಗೆ ಜೈ ಎಂದ ಲಿಂಗಾಯತರು..!

ಕಾಂಗ್ರೆಸ್ ಪಕ್ಷ ಅದೆಷ್ಟೇ ಆಮಿಷಗಳನ್ನು ಒಡ್ಡಿದರೂ ಲಿಂಗಾಯತರು ಮಾತ್ರ ತಮ್ಮ ನಿಲುವನ್ನು ಭಾರತೀಯ ಜನತಾ ಪಕ್ಷಕ್ಕೆ ಸ್ಪಷ್ಟಪಡಿಸಿದ್ದಾರೆ. ಎಬಿಪಿ ನಡೆಸಿದ ಸಮೀಕ್ಷೆಯಲ್ಲಿ ಲಿಂಗಾಯತರು ಬಹುವಾಗಿ ಭಾರತೀಯ ಜನತಾ ಪಕ್ಷಕ್ಕೆ ಜೈ ಎಂದಿದ್ದಾರೆ. ಬರೋಬ್ಬರಿ 61%ಗಳಷ್ಟು ಒಲವನ್ನು ಭಾರತೀಯ ಜನತಾ ಪಕ್ಷಕ್ಕೆ ವ್ಯಕ್ತಪಡಿಸಿದ್ದಾರೆ. ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ 18%ಗಳಷ್ಟು ಒಲವನ್ನು ವ್ಯಕ್ತಪಡಿಸಿದ್ದಾರೆ. ಈ ಮೂಲಕ ನಮ್ಮ ಜಾತಿ ಏನಿದ್ದರೂ ಧರ್ಮ ರಕ್ಷಿಸುವ ಭಾರತೀಯ ಜನತಾ ಪಕ್ಷವೇ ಹೊರತು ಧರ್ಮವಿರೋಧಿ ಕಾಂಗ್ರೆಸ್ ಪಕ್ಷ ಅನ್ನೋದನ್ನು ಧೃಢಪಡಿಸಿದ್ದಾರೆ.

ಒಟ್ಟಾರೆ ಈ ಬಾರಿ ಅದೆಷ್ಟೇ ಧರ್ಮ ಒಡೆದು ಓಟು ಗಿಟ್ಟಿಸಲು ಪ್ರಯತ್ನ ಪಟ್ಟರೂ ಲಿಂಗಾಯತ ಜಾತಿಯ ಮತದಾರರ ಒಲವು ಮಾತ್ರ ಭಾರತೀಯ ಜನತಾ ಪಕ್ಷದ ಪರವಾಗಿ ಇದೆ ಎಂಬುವುದೇ ಆಶ್ಚರ್ಯದ ಸಂಗತಿ ಹಾಗೂ ಕಾಂಗ್ರೆಸ್‍ಗೆ ಇದು ಚಿಂತೆಯ ಸಂಗತಿಯಾಗಿದೆ.

-ಸುನಿಲ್ ಪಣಪಿಲ

Tags

Related Articles

Close