ದೇಶಪ್ರಚಲಿತ

ಲವ್ ಜಿಹಾದಿಗಳ ಹುಟ್ಟಡಗಿಸಲು ರಾಜ್ಯ ಸರ್ಕಾರ ರೆಡಿ!
ಬುಲ್ಡೋಜರ್ ಬಳಿಕ ರೆಡಿಯಾಯ್ತು ಮತ್ತೊಂದು ಅಸ್ತ್ರ!

ಇಡೀ ದೇಶದ ನಿದ್ದೆ ಕೆಡಿಸಿರೋ ಲವ್ ಜಿಹಾದ್ ಎಂಬ ಮಹಾಮಾರಿ ವಿರುದ್ಧ ಮಧ್ಯಪ್ರದೇಶ‌ ಎಚ್ಚೆತ್ತು‌ಕೊಂಡಿದೆ. ರಾಜ್ಯದಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದಾಗಿ ಅಲ್ಲಿನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಬಳಿಕ ಮಧ್ಯಪ್ರದೇಶ ಸರ್ಕಾರ ಇಂತಹ ಒಂದು ದೃಢ ನಿರ್ಧಾರವನ್ನು ಕೈಗೊಳ್ಳಲು ಮುಂದಾಗಿದೆ. ಶ್ರದ್ಧಾ ವಾಕರ್ ಹೆತ್ತವರ ಮಾತು ಮೀರಿ, ಅವರ ಗಮನಕ್ಕೆ ಬಾರದಂತೆ ಮುಂಬೈ‌ನಿಂದ ದೆಹಲಿಗೆ ತೆರಳಿ, ತನ್ನ ಗೆಳೆಯ ಅಫ್ತಾಬ್ ಪೂನಾವಾಲಾ ಎಂಬ ಮುಸಲ್ಮಾನ ಯುವಕನ ಜೊತೆಗೆ ಲಿವಿಂಗ್ ಟುಗೆದರ್ ರಿಲೇಶನ್ಶಿಪ್‌ನಲ್ಲಿದ್ದಳು. ಆಕೆ ಅಫ್ತಾಬ್‌ ಬಳಿ ತನ್ನನ್ನು ಮದುವೆಯಾಗುವಂತೆ ಒತ್ತಾಯ ಹೇರುತ್ತಿದ್ದಳೆಂಬ ಕಾರಣಕ್ಕೆ, ಆಕೆ ನಂಬಿದ್ದ ಗೆಳೆಯನೇ ಅವಳನ್ನು ಕೊಂದು, 35 ತುಂಡುಗಳನ್ನಾಗಿಸಿ ಸೂಟ್ಕೇಸ್‌ನಲ್ಲಿ ಹಾಕಿ ಪ್ರಿಜ್‌ನಲ್ಲಿಟ್ಟಿದ್ದ. ನಂತರ ಅದೇ ಫ್ಲಾಟ್‌ನಲ್ಲಿ ಬೇರೆ ಯುವತಿಯ ಜತೆಗೂ ರಂಗಿನಾಟ ಆಡಿದ್ದ. ಈ ಘಟನೆ ಸಮಾಜವನ್ನು ತಲ್ಲಣಗೊಳಿಸಿತ್ತು.

ಈ ಘಟನೆಯ ಬಳಿಕ ಮಧ್ಯಪ್ರದೇಶ ಸರ್ಕಾರ ರಾಜ್ಯದಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನು ತರಲು ಮುಂದಾಗಿರುವುದಾಗಿ ಮುಖ್ಯಮಂತ್ರಿ ಚೌಹಾಣ್ ಹೇಳಿದ್ದಾರೆ. ರಾಜ್ಯದಲ್ಲಿ ಲವ್ ಜಿಹಾದ್‌ಗೆ ಹೆಣ್ಣು ಮಕ್ಕಳು ಮೋಸ ಹೋಗುವುದಕ್ಕೆ ಬಿಡುವುದಿಲ್ಲ. ಅವರನ್ನು ತುಂಡು ತುಂಡಾಗಿ ಕತ್ತರಿಸಲು ಯಾರಿಗೂ ಅವಕಾಶ ನೀಡುವುದಿಲ್ಲ. ಬುಡಕಟ್ಟು ಜನಯ ಭೂಮಿಯನ್ನು ಕಬಳಿಸುವ ನಿಟ್ಟಿನಲ್ಲಿ ಲವ್ ಜಿಹಾದ್ ಮಾಡುತ್ತಿದ್ದಾರೆ. ಇದರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು. ಪ್ರೀತಿಯ ಹೆಸರಿನಲ್ಲಿ ನಡೆಯುವ ಈ ಆಟವನ್ನು ಮಧ್ಯಪ್ರದೇಶ‌ದ ನೆಲದಲ್ಲಿ ನಡೆಯಲು ಯಾವ ಕಾರಣಕ್ಕೂ ಬಿಡುವುದಿಲ್ಲ ಎಂದು ಹೇಳಿದ್ದಾರೆ.

ದೇಶದಲ್ಲಿ ಏಕರೂಪದ ನಾಗರಿಕ ಸಂಹಿತೆ ಜಾರಿಯ ಸಮಯ ಬಂದಿದೆ. ಮಧ್ಯಪ್ರದೇಶ‌ದಲ್ಲಿಯೂ ಈ ನಿಟ್ಟಿನಲ್ಲಿ ಸಮಿತಿ ಒಂದನ್ನು ರಚಿಸಲಾಗುವುದು. ಎಲ್ಲಾ ನಾಗರಿಕರಿಗೆ ಸಮಾನವಾಗಿ ಅನ್ವಯವಾಗುವ ವೈಯಕ್ತಿಕವಾಗಿ ಅನ್ವಯವಾಗುವ ಕಾನೂನು‌ಗಳನ್ನು ಪ್ರಸ್ತಾಪಿಸಲಾಗುವುದು ಎಂದು ಅವರು ಗಟ್ಟಿ ಧ್ವನಿಯಲ್ಲಿ ತಿಳಿಸಿದ್ದಾರೆ.

ಒಟ್ಟಿನಲ್ಲಿ ಲವ್ ಜಿಹಾದ್ ವಿರುದ್ಧ ಮಧ್ಯಪ್ರದೇಶ‌ದ ಸರ್ಕಾರ ತೆಗೆದುಕೊಂಡಿರುವ ದಿಟ್ಟ ನಿಲುವನ್ನು ಕರ್ನಾಟಕ‌ವೂ ಸೇರಿದಂತೆ ದೇಶದ ಎಲ್ಲಾ ರಾಜ್ಯ‌ಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅನುಸರಿಸಿಕೊಂಡಲ್ಲಿ, ಹಿಂದೂ ಹೆಣ್ಮಕ್ಕಳು ಮೊಸ ಹೋಗುವುದು, ಪ್ರೀತಿ ಹೆಸರಿನಲ್ಲಿ ಕೊಲೆಯಾಗುವಂತಹ ಸನ್ನಿವೇಶ‌ವನ್ನು ತಪ್ಪಿಸಬಹುದಾಗಿದೆ.

Tags

Related Articles

Close