ಪ್ರಚಲಿತ

ಚುನಾವಣಾ ಬಾಂಡ್‌: ಅಮಿತ್ ಶಾ ಹೀಗೆಂದರಾ?

ಚುನಾವಣೆಯಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ಪಕ್ಷ, ನಾಯಕರು ಯಾವ ಮಟ್ಟಿಗೆ ಕೀಳು ಪ್ರಚಾರ ಪಡೆಯುವುದಕ್ಕೂ ಹೇಸುವುದಿಲ್ಲ. ತನ್ನ ವಿರೋಧಿಗಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುವ ಕಾಂಗ್ರೆಸ್ ಮತ್ತು ಆ ಪಕ್ಷದ ಐವತ್ತರ ಯುವ ನಾಯಕ ರಾಹುಲ್ ಗಾಂಧಿಯ ಚಳಿ ಬಿಡಿಸುವ ಕೆಲಸವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಡಿದ್ದಾರೆ.

ರಾಹುಲ್ ಗಾಂಧಿ ಅವರು ಚುನಾವಣಾ ಬಾಂಡ್‌ ಗಳಿಗೆ ಸಂಬಂಧಿಸಿದ ಹಾಗೆ ವಿವಾದಾತ್ಮಕ ಹೇಳಿಕೆಯೊಂದನ್ನು ರನೀಡಿದ್ದರು. ಅವರಿಗೆ ಅಮಿತ್ ಶಾ ಅವರು ತಿರುಗೇಟು ನೀಡಿದ್ದಾರೆ.

ಚುನಾವಣಾ ಬಾಂಡ್‌ಗಳನ್ನು ಹಫ್ತಾ ವಸೂಲಿ ಎಂದಿರುವ ರಾಹುಲ್, ಕಾಂಗ್ರೆಸ್‌ ಸಾವಿರ ಆರು ನೂರು ಕೋಟಿ ರೂ. ಗಳನ್ನು ಎಲ್ಲಿಂದ ಪಡೆಯಿತು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಶಾ ಆಗ್ರಹಿಸಿದ್ದಾರೆ. ಗಾಂಧಿ ಸಹ ಸಾವಿರದ ಆರು ನೂರು ರೂ. ಪಡೆದಿದ್ದಾರೆ. ಅವರು ಈ ಮಟ್ಟದ ಹಫ್ತಾ ‌ವಸೂಲಿಯನ್ನು ಎಲ್ಲಿಂದ, ಹೇಗೆ ಮಾಡಿದರು ಎಂಬುದನ್ನು ತಿಳಿಸಬೇಕು. ಚುನಾವಣಾ ಬಾಂಡ್ ಎಂಬುದು ಪಾರದರ್ಶಕ ಪ್ರಕ್ರಿಯೆ ಮೂಲಕ ನಡೆದದ್ದು ಎಂದು ಅವರು ಸ್ವಷ್ಟಪಡಿಸಿದ್ದಾರೆ. ಆದರೆ ಕೈ ಪಕ್ಷ ಇದಕ್ಕೆ ಭ್ರಷ್ಟಾಚಾರದ ಲೇಬಲ್ ಅಂಟಿಸಿದ್ದಾರೆ. ಈ ಆರೋಪಕ್ಕೆ ಅವರು ಸಾಕ್ಷಿ ನೀಡಬೇಕು ಎಂದು ಹೇಳಿದ್ದಾರೆ.

ಈ ಬಾಂಡ್‌ಗೆ ಸಂಬಂಧಿಸಿದ ಹಾಗೆ ಎಲ್ಲಾ ದಾನಿಗಳ ವಿವರಗಳನ್ನು ಬಿಜೆಪಿ ಹೊರ ತರುತ್ತದೆ ಎಂದು ನಾನು ಭರವಸೆ ನೀಡುತ್ತೇನೆ. ಅದಾದ ಬಳಿಕ ಇಂಡಿ ಮೈತ್ರಿಕೂಟವು ಸಾರ್ವಜನಿಕರ ಮುಂದೆ ತಲೆ ತಗ್ಗಿಸಬೇಕಾಗುತ್ತದೆ. ರಾಜಕೀಯದಲ್ಲಿ ಕಪ್ಪು ಹಣದ ಶಕ್ತಿಗೆ ಮುಕ್ತಿ ಹಾಡಲು ಚುನಾವಣಾ ಬಾಂಡ್ ಪರಿಚಯಿಸಲಾಗಿದೆ. ಈಗ ಇದನ್ನು ರದ್ದು ಮಾಡಲಾಗಿದೆ.‌ ಇದರಿಂದ ಮತ್ತೆ ಬ್ಲ್ಯಾಕ್ ಮನಿ ಪ್ರಾಬಲ್ಯ ಹೆಚ್ಚಾಗುವ ಭಯವನ್ನೂ ಅವರು ಇದೇ ಸಂದರ್ಭದಲ್ಲಿ ವಿವರಿಸಿದ್ದಾರೆ.

ಚುನಾವಣಾ ಬಾಂಡ್‌ಗಳನ್ನು ರದ್ದು ಮಾಡುವುದು ಸರಿಯಾದ ಕ್ರಮವಲ್ಲ. ಬದಲಾಗಿ ಅದನ್ನು ಸರಿಯಾದ ರೀತಿಯಲ್ಲಿ ಸುಧಾರಣೆ ಮಾಡುವ ಕೆಲಸಗಳಾಗಬೇಕು ಎಂದು ಶಾ ಹೇಳಿದ್ದಾರೆ. ಆದರೆ ಇದು ರಾ ವು ದೇ ರೀತಿಯ ಮಹತ್ವ ಹೊಂದಿಲ್ಲ. ಏಕೆಂದರೆ ಉನ್ನತ ನ್ಯಾಯಾಲಯ ಚುನಾವಣಾ ಬಾಂಡ್‌ಗೆ ಸಂಬಂಧಿಸಿದ ಹಾಗೆ ತೀರ್ಪು ನೀಡಿದ್ದು, ಅದನ್ನು ನಾನು ಗೌರವಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಆದರೆ ಬಾಂಡ್‌ ಗಳು ರಾಜಕೀಯದಲ್ಲಿ ಕಪ್ಪು ಹಣವನ್ನು ಸಾಕಷ್ಟು ಪ್ರಮಾಣದಲ್ಲಿ ಕೊನೆಗೊಳಸಿವೆ. ಇದಕ್ಕಾಗಿಯೇ ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳು ಇದರ ವಿರುದ್ಧ ಇದ್ದವು. ಅವರು ಹಳೆಯ ಕಟ್ ಮನಿ ವ್ಯವಸ್ಥೆಯನ್ನೇ ರಾಜಕೀಯದಲ್ಲಿ ತರಲು ಬಯಸಿದ್ದರು ಎಂದು ಆರೋಪಿಸಿದ್ದಾರೆ.

Tags

Related Articles

Close