ಪ್ರಚಲಿತ

ಸಾಮಾನ್ಯ ಕಾರ್ಯಕರ್ತನನ್ನು ಜಾಗತಿಕ ನಾಯಕನನ್ನಾಗಿ ಮಾಡಿದೆ ಬಿಜೆಪಿ: ಅಮಿತ್ ಶಾ

ಈ ಲೋಕಸಭಾ ಚುನಾವಣೆ ಬಿಜೆಪಿಗಾಗಿ ಅಲ್ಲ, ಭಾರತಕ್ಕಾಗಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಿಳಿಸಿದ್ದಾರೆ.

ಅವರು ಗುಜರಾತ್‌ನಲ್ಲಿ ತಮ್ಮ ಚುನಾವಣಾ ಪ್ರಚಾರ ಕಾರ್ಯಕ್ರಮವನ್ನು ಆರಂಭಿಸಿ ಮಾತನಾಡಿ, ಪ್ರಚಾರ ಕಾರ್ಯದಲ್ಲಿ ತೊಡಗಿರುವ ಬಿಜೆಪಿ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದು, ಪ್ರತಿಯೋರ್ವ ಮತದಾನನ್ನೂ ತಲುಪುವಂತೆ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಅವರು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಜತೆಗೆ ಗುರುಕುಲ ರಸ್ತೆಯಲ್ಲಿನ ಹನುಮಾನ್ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ತಮ್ಮ ಆರಂಭಿಕ ರಾಜಕೀಯ ಜೀವನದ ಬಗೆಗೂ ಮಾತನಾಡಿದ್ದಾರೆ. ಕಳೆದ ಮೂವತ್ತು ವರ್ಷಗಳ ಹಿಂದೆ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದು, ಇದೇ ದೇವಾಲಯಕ್ಕೆ ತೆರಳಿ ಆಗಲೂ ಪೂಜೆ ಸಲ್ಲಿಸಿದ ದಿನಗಳನ್ನು ಮೆಲುಕು ಹಾಕಿದ್ದಾರೆ.

ಈ ಪ್ರಚಾರ ಕಾರ್ಯದ ಸಂದರ್ಭದಲ್ಲಿ ಅವರು ಭಾರತದ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರಾದ ಸುಭಾಶ್ ಚಂದ್ರ ಬೋಸರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ್ದಾರೆ.

ಹಾಗೆಯೇ ತನ್ನ ರಾಜಕೀಯ ಜೀವನ ಆರಂಭಕ್ಕೂ ಮೊದಲು ಸಾವಿರದೈನೂರಕ್ಕೂ ಹೆಚ್ಚು ಪಕಿಷಗೊಲಿರುವ ದೇಶದಲ್ಲಿ ಕರಪತ್ರ ಹಂಚುವ, ಪಕ್ಷದ ಬ್ಯಾನರ್ ಕಟ್ಟುತ್ತಿದ್ದಂತಹ ನನ್ನಂತಹ ಸಾಮಾನ್ಯ ಕಾರ್ಯಕರ್ತನನ್ನು ಕೇಂದ್ರ ಸಚಿವನನ್ನಾಗಿಸಿದ, ಪಕ್ಷದ ಅಧ್ಯಕ್ಷ ಸ್ಥಾನ ನೀಡಿದ ಪಕ್ಷ ಬಿಜೆಪಿ ಮಾತ್ರವೆ. ಹಾಗೆಯೇ ಬಿಜೆಪಿ ಸಾಮಾನ್ಯ ಚಹಾ ಮಾರಾಟಗರನನ್ನು ಈ ದೇಶದ ಪ್ರಧಾನಿಯನ್ನಾಗಿ ಮತ್ತು ಜಾಗತಿಕ ನಾಯಕನನ್ನಾಗಿ ಮಾಡಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

Tags

Related Articles

Close