ಪ್ರಚಲಿತ

ಜವಹರಲಾಲ್ ನೆಹರೂ ಬಗ್ಗೆ ಅಮಿತ್ ಶಾ ಹೀಗೆಂದರಾ?

ಭಾರತದ ಭೂಭಾಗಗಳಿಗೆ ಚೀನಾ ಮರುನಾಮಕರಣ ಮಾಡಿ, ಆಕ್ರಮಿಸಿಕೊಳ್ಳುವ ಸಂಚು ಮಾಡಿದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುಡುಗಿದ್ದಾರೆ.

ಭಾರತದ ಒಂದಿಂಚು ಭೂಮಿಯನ್ನು ಸಹ ಆಕ್ರಮಿಸಿಕೊಳ್ಳಲು ಚೀನಾಕ್ಕೆ ಸಾಧ್ಯವಿಲ್ಲ. ಏಕೆಂದರೆ ಕೇಂದ್ರದಲ್ಲಿ ಆಡಳಿತದಲ್ಲಿ ಇರುವುದು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಎಂದು ಅವರು ಹೇಳಿದ್ದಾರೆ.

ದೇಶದ ಗಡಿಗಳ ವಿಚಾರಕ್ಕೆ ಸಂಬಂಧಿಸಿದ ಹಾಗೆ ಸಾಕಷ್ಟು ಪರಿಣಾಮಕಾರಿ ಕ್ರಮಗಳನ್ನು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ಚೀನಾ ದೇಶ ಭಾರತದ ಒಂದಿಂಚು ಜಾಗವನ್ನು ಸಹ ಅತಿಕ್ರಮಿಸಿಕೊಳ್ಳುವುದು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ. ಕೇಂದ್ರ ಸರ್ಕಾರವು ಬಾಂಗ್ಲಾದೇಶದ ಜೊತೆಗಿನ ಗಡಿಗಳನ್ನು ಭದ್ರಪಡಿಸಿದೆ. ಜೊತೆಗೆ, ಅಕ್ರಮ ನುಸುಳುವಿಕೆ ಸಾಧ್ಯವಾಗದ ಹಾಗೆ ಕ್ರಮ ಕೈಗೊಂಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಜವಹರಲಾಲ್ ನೆಹರು ಅವರ ಬಗೆಗೂ ಪ್ರಸ್ತಾಪಿಸಿರುವ ಅವರು, 1962 ರ ಚೀನಾ ಆಕ್ರಮಣದ ಸಂದರ್ಭದಲ್ಲಿ ಅಂದಿ ನ ಪ್ರಧಾನಿ ಜವಹರಲಾಲ್ ನೆಹರು ಅವರು ಅಸ್ಸಾಂ ಮತ್ತು ಅರುಣಾಚಲ ಪ್ರದೇಶಕ್ಕೆ ಬಾಯ್, ಬಾಯ್ ಹೇಳಿದ್ದಾರೆ. ಆದರೆ ಆ ರಾಜ್ಯಗಳ ಜನರು ಇನ್ನೂ ಅದನ್ನು ನೆನಪಿನಲ್ಲಿ ಇರಿಸಿಕೊಂಡಿದ್ದಾರೆ. ಈಗ ಚೀನಾ ನಮ್ಮ ಒಂದಿಂಚು ಭೂಮಿಯನ್ನು ಸಹ ಅತಿಕ್ರಮಣ ಮಾಡುವುದು ಸಾಧ್ಯವಾಗಿಲ್ಲ. ಡೋಕ್ಲಾಮ್‌ನಲ್ಲಿರುವ ನಾವು ಅವರನ್ನು ಹಿಂದಕ್ಕೆ ಅಟ್ಟಿದ್ದೇವೆ ಎಂಬುದಾಗಿಯೂ ಅವರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಮತ್ತು ಅಸ್ಸಾಂ ರಾಜ್ಯದಲ್ಲಿ ಹಿಮಂತ್ ಬಿಸ್ವಾ ಶರ್ಮಾ ಸರ್ಕಾರ ಒಳನುಸುಳುವಿಕೆಯನ್ನು ಪರಿಣಾಮಕಾರಿಯಾಗಿ ನಿಲ್ಲಿಸಿದೆ. ಅಸ್ಸಾಂನ ಹಿಂದಿನ ಕಾಂಗ್ರೆಸ್ ಸರ್ಕಾರ ತನ್ನ ದುರ್ಬಲ ಆಡಳಿತದ ಮೂಲಕ ರಾಜ್ಯದ ಜನರಿಗೆ ಅನ್ಯಾಯವನ್ನು ಮಾಡಿದೆ. ವಿಭಿನ್ನ ಹಿಂಸಾತ್ಮಕ ಚಳುವಳಿಗಳು, ದಂಗೆ ಸಂಬಂಧಿತ ಘಟನೆಗಳಿಂದ ಕೊಲ್ಲಲ್ಪಟ್ಟ ಹಲವಾರು ಜನರಿಗೆ ಅನ್ಯಾಯವಾಗಿದೆ ಎಂದು ಅವರು ಕಾಂಗ್ರೆಸ್‌ನ ದುರಾಡಳಿತದ ಬಗ್ಗೆ ಕೆಂಡ ಕಾರಿದ್ದಾರೆ.

ಆದರೆ ಕಳೆದ ಹತ್ತು ವರ್ಷಗಳ ಪ್ರಧಾನಿ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರದ ಕಾರಣಕ್ಕೆ ಹಲವು ಶಾಂತಿ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಒಂಬತ್ತು ಸಾವಿರಗಳಷ್ಟು ಬಂಡುಕೋರರು ಶರಣಾಗತರಾಗಿದ್ದಾರೆ. ರಾಜ್ಯದ ಎಂಬತ್ತು ಶೇಕಡಾ ಪ್ರದೇಶಗಳಿಂದ ಸಶಸ್ತ್ರ ಪಡೆಗಳ ಕಾಯ್ದೆಯನ್ನು ಸಹ ಹಿಂದಕ್ಕೆ ಪಡೆಯಲಾಗಿದೆ. ಈಗ ಅಸ್ಸಾಂ ಜನರ ಮುಂದೆ ಆಯ್ಕೆ ಸ್ಪಷ್ಟವಾಗಿದೆ. ಇಲ್ಲಿನ ಜನರು ರಾಹುಲ್ ಗಾಂಧಿ ಮತ್ತು ಇಂಡಿ ಒಕ್ಕೂಟವನ್ನು ವರ್ಜಿಸಲಿದ್ದಾರೆ. ಮೂರನೇ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದಾರೆ.

Tags

Related Articles

Close