ಪ್ರಚಲಿತ

ಹೊಸ ಕ್ರಿಮಿನಲ್ ಕಾನೂನಿನ ಬಗ್ಗೆ ಅಮಿತ್ ಶಾ ಮಾಹಿತಿ

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಭಾರತದಲ್ಲಿ ಹಲವಾರು ಮಹತ್ವದ ಬದಲಾವಣೆಗಳಾಗಿವೆ. ಮಾತ್ರವಲ್ಲದೆ, ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಹಾಗೆಯೂ ಮಹತ್ವದ ಕಾನೂನು, ನಿಯಮಾವಳಿಗಳನ್ನು ಜಾರಿಗೆ ತಂದು, ಅಪರಾಧಿಗಳಿಗೆ ಭಯ ಹುಟ್ಟುವಂತೆ ಮಾಡಿದ ಕೀರ್ತಿಯೂ ಕೇಂದ್ರದ ಪ್ರಧಾನಿ ಮೋದಿ ಸರ್ಕಾರಕ್ಕೆ ಸಲ್ಲುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ನಿನ್ನೆಯಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಹತ್ವದ ಮೂರು ಹೊಸ ಮಸೂದೆಗಳನ್ನು ಅಧಿವೇಶನದಲ್ಲಿ ಮಂಡಿಸಿದ್ದಾರೆ. ಭಾರತೀಯ ನ್ಯಾಯ (ಎರಡನೇ) ಸಂಹಿತೆ -2023, ಭಾರತೀಯ ನಾಗರಿಕ ಸುರಕ್ಷತಾ (ಎರಡನೇ) ಸಂಹಿತೆ – 2023, ಭಾರತೀಯ ಸಾಕ್ಷ್ಯ (ಎರಡನೇ) ಸಂಹಿತೆ -2023 ನ್ನು ಮಂಡಿಸಲಾಗಿದ್ದು, ಧ್ವನಿಮತದ ಮೂಲಕ ಅಂಗೀಕಾರ ಮಾಡಲಾಗಿದೆ.

ಈ ಸಂದರ್ಭದಲ್ಲಿ ಶಾ ಮಾತನಾಡಿದ್ದು, ಈ ಮೂರೂ ಕಾನೂನುಗಳು ಉಗ್ರವಾದದ ಸ್ಪಷ್ಟ ನಿಲುವನ್ನು ಹೊಂದಿವೆ. ಇವು ದೇಶದ್ರೋಹಕ್ಕೆ ‘ರಾಷ್ಟ್ರದ ವಿರುದ್ಧ ಅಪರಾಧಗಳು’ ಎನ್ನುವ ವ್ಯಾಖ್ಯಾನವನ್ನು ನೀಡುತ್ತವೆ ಎಂದು ತಿಳಿಸಿದ್ದಾರೆ. ಸಮಗ್ರವಾಗಿ ಚರ್ಚಿಸಿದ ಬಳಿಕವಷ್ಟೇ ಈ ಮಸೂದೆಗಳನ್ನು ರೂಪಿಸಲಾಗಿದೆ. ಇದನ್ನು ಅಂಗೀಕಾರಕ್ಕಾಗಿ ಸದನಕ್ಕೆ‌ ತರುವ ಮುನ್ನ ಇದರ ಅಲ್ಪ ವಿರಾಮ, ಪೂರ್ಣ ವಿರಾಮಗಳನ್ನೂ ಓದಲಾಗಿದೆ.‌ ಇದು ಭಾರತೀಯ ಚಿಂತನೆಯ ಆಧಾರದಲ್ಲಿ ನ್ಯಾಯ ಒದಗಿಸುವ ಕೆಲಸ ಮಾಡಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇವುಗಳು ಜನರನ್ನು ವಸಾಹತುಶಾಹಿ ಮನಸ್ಥಿತಿ ಮತ್ತು ಚಿಂತನೆಗಳಿಂದ, ಅದರ ಸಂಕೇತಗಳಿಂದ ಮುಕ್ತಗೊಳಿಸುತ್ತವೆ ಎಂದು ಅವರು ತಿಳಿಸಿದ್ದಾರೆ. ಇದೇ ಪ್ರಪ್ರಥಮ ಬಾರಿಗೆ ಕ್ರಿಮಿನಲ್ ನ್ಯಾಯ ವ್ಯವಸ್ಥೆ ಡಿಜಿಟಲ್ ಸ್ಪರ್ಶ ಹೊಂದಿದೆ ಎಂದು ಶಾ ಹೇಳಿದ್ದಾರೆ.

ಇದರನ್ವಯ ತಾರೀಕ್ ಪೆ ತರೀಕ್ ಮುಂದುವರಿಯುತ್ತದೆ. ಪೊಲೀಸರು ಅಪರಾಧ ಪ್ರಕರಣಗಳಲ್ಲಿ ನ್ಯಾಯಾಂಗ ವ್ಯವಸ್ಥೆಯನ್ನು ಹೊಣೆಗಾರನನ್ನಾಗಿ ಮಾಡುತ್ತದೆ. ಸರ್ಕಾರ ಇಂತಹ ಪ್ರಕರಣಗಳಲ್ಲಿ ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಹೊಣೆ ಮಾಡುತ್ತದೆ. ಇಂತಹ ವ್ಯವಹಾರಗಳಲ್ಲಿ ವಿಳಂಬವಾಗುವುದಕ್ಕೆ ಪೊಲೀಸರು ಮತ್ತು ನ್ಯಾಯಾಂಗ ಸರ್ಕಾರವನ್ನು ಹೊಣೆ ಮಾಡುತ್ತವೆ ಎಂದು ಹೇಳಿದ್ದಾರೆ. ಆರೋಪಿಗಳಿಗೆ ಖುಲಾಸೆಗಾಗಿ ಅರ್ಜಿ ಸಲ್ಲಿಕೆ ಮಾಡಲು ಇದರಲ್ಲಿ ಏಳು ದಿನಗಳ‌ ಕಾಲಾವಕಾಶ ಇದೆ. ನ್ಯಾಯಾಧೀಶರು ಆ ಏಳು ದಿನಗಳಲ್ಲಿ ವಿಚಾರಣೆ ನಡೆಸಬೇಕು. ಗರಿಷ್ಟ ನೂರಾರು ಇಪ್ಪತ್ತು ದಿನಗಳಲ್ಲಿ ಪ್ರಕರಣ ವಿಚಾರಣೆಗೆ ಬರಲಿದೆ.

ಈ ಹಿಂದೆ ಮನವಿಯ ಚೌಕಾಸಿಗೆ ಯಾವುದೇ ಕಾಲ ಮಿತಿ ಇರಲಿಲ್ಲ. ಈಗ ಅಪರಾಧ ನಡೆದ 30 ದಿನಗಳೊಳಗಾಗಿ ತಪ್ಪೊಪ್ಪಿಕೊಂಡರೆ ಶಿಕ್ಷಾ ಪ್ರಮಾಣ ಕಡಿಮೆಯಾಗಲಿದೆ. ವಿಚಾರಣಾ ಸಮಯದಲ್ಲಿ ದಾಖಲಾತಿಗಳ ಹಾಜರಿಗೆ ಆಸ್ಪದ ಇಲ್ಲ. ಮೂವತ್ತು ದಿನಗಳ ಒಳಗೆ ಎಲ್ಲಾ ದಾಖಲೆಗಳನ್ನು ಹಾಜರು ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಅದರಲ್ಲಿ ಯಾವ ವಿಳಂಬವೂ ಇಲ್ಲ ಒಂದು ಶಾ ಮಾಹಿತಿ ನೀಡಿದ್ದಾರೆ.

Tags

Related Articles

Close