ಪ್ರಚಲಿತ

ಕಾಂಗ್ರೆಸ್ ಪಕ್ಷಕ್ಕೆ ಅಮಿತ್ ಶಾ ಕೊಟ್ಟರಾ ಎಚ್ಚರಿಕೆ?

ಭಾರತದೊಳಗೇ ಇದ್ದರೂ, ಭಾರತದಿಂದ ಕಾಶ್ಮೀರವನ್ನು ಬೇರ್ಪಡಿಸಿದ್ದ 370 ನೇ ವಿಧಿಯನ್ನು ರದ್ದು ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದ್ದು ಈಗ ಇತಿಹಾಸ.

ಆರ್ಟಿಕಲ್ 370 ರದ್ದತಿಯ ಬಳಿಕ ಕಾಶ್ಮೀರ ಸಹ ಭಾರತಕ್ಕೆಯೇ ಸೇರಿದೆ ಎನ್ನುವ ಭಾವನೆ ಅಲ್ಲಿನ ಜನರ ಜೊತೆಗೆ ಇಡೀ ದೇಶಕ್ಕೆಯೇ ಬಂದಿದೆ ಎನ್ನುವುದು ಸತ್ಯ. ಭಾರತದ ಇತರ ಭಾಗಗಳಿಗೆ ಯಾವ ರೀತಿಯ ಕಾನೂನು ಅನ್ವಯವಾಗುತ್ತದೆಯೋ, ಅದೇ ಕಾನೂನುಗಳು ಜಮ್ಮು ಕಾಶ್ಮೀರಕ್ಕೆ ಸಹ ಅನ್ವಯವಾಗುವ ಹಾಗೆ ಕೇಂದ್ರದ ಈ ನಿಲುವು ಕೆಲಸ ಮಾಡಿತ್ತು ಎನ್ನುವುದು ಸ್ಪಷ್ಟ.

ಆರ್ಟಿಕಲ್ 370 ರದ್ದತಿಯ ಬಳಿಕ ಅಲ್ಲಿನ ಜನರಿಗೆ ಹೆಚ್ಚಿನ ಸ್ವಾತಂತ್ರ್ಯ ದೊರೆತಿದೆ. ಅಲ್ಲಿನ ಜನರಲ್ಲಿಯೂ ದೇಶ ಪ್ರೇಮ ಇದೆ ಎನ್ನುವುದರ ಅರಿವಾಗಿದೆ‌. ಈ ಹಿಂದೆ ಭಯೋತ್ಪಾದನೆಯಲ್ಲಿ ಹೆಸರು ಮಾಡುತ್ತಿದ್ದ ಕಾಶ್ಮೀರ, ಈಗ ಸೇನೆಯಲ್ಲೂ ಹೆಸರು ಮಾಡಲಾರಂಭಿಸಿದೆ. ಇಲ್ಲಿನ ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರಲಾರಂಭಿಸಿದ್ದಾರೆ. ಬಹಳ ಮುಖ್ಯವಾಗಿ ಇಲ್ಲಿನ ಜನರಿಗೆ ತಾವೂ ಭಾರತೀಯರು ಎಂಬ ಭಾವನೆ ಬರತೊಡಗಿದೆ.

ಜೊತೆಗೆ ಕಾಶ್ಮೀರದಲ್ಲೂ ತ್ರಿವರ್ಣ ಧ್ವಜ ಹಾರಲಾರಂಭಿಸಿದೆ. ಸ್ವಾತಂತ್ರ್ಯ ದಿನದ ಆಚರಣೆ ನಡೆಯಲಾರಂಭಿಸಿದೆ. ಪ್ರಧಾನಿ ಮೋದಿ ಸರ್ಕಾರ ಜಮ್ಮು ಕಾಶ್ಮೀರದ ಮೂಲ ಸೌಕರ್ಯ‌ಗಳ ಅಭಿವೃದ್ಧಿಯ ಮೂಲಕ ಆ ರಾಜ್ಯದ ಜನರಿಗೆ ನ್ಯಾಯ ಒದಗಿಸಿದ್ದಾರೆ ಎನ್ನುವುದು ಸತ್ಯ.

ಕಾಂಗ್ರೆಸ್ ಈ ವಿಚಾರವನ್ನು ಸಹ ಚುನಾವಣಾ ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದು, ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಇದನ್ನು ಮತ್ತೆ ತಿದ್ದುಪಡಿ ಮಾಡುವುದಾಗಿ ಹೇಳುತ್ತಿದೆ. ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರದ ಮೋದಿ ಸರ್ಕಾರ ರದ್ದು ಮಾಡಿದ ಆರ್ಟಿಕಲ್ 370 ಯನ್ನು ರದ್ದು ಮಾಡುವ ಧೈರ್ಯ ಕಾಂಗ್ರೆಸ್ ಗೆ ಇದೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದು ಸಾಧ್ಯವಿಲ್ಲದ ಮಾತು ಎಂದು ಅವರು ತಿಳಿಸಿದ್ದಾರೆ.

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 370 ರದ್ದತಿಯ ನಿರ್ಧಾರವನ್ನು ಬಿಜೆಪಿ ಕಾರ್ಯಕರ್ತರು ಮತ್ತು ಪ್ರಧಾನಿ ಮೋದಿ ಅವರು ತೆಗೆದುಕೊಂಡಿರುವುದಾಗಿದೆ. ಇದನ್ನು ತಿದ್ದುಪಡಿ ಮಾಡುವ ಕೆಲಸಕ್ಕೆ ಕೈ ಹಾಕದಂತೆ ಕಾಂಗ್ರೆಸ್ ಪಕ್ಷಕ್ಕೆ ಶಾ ಎಚ್ಚರಿಕೆ ನೀಡಿದ್ದಾರೆ.

ಹಾಗೆಯೇ ಬಿಜೆಪಿ ದೇಶದ ಬುಡಕಟ್ಟು ಜನರ ಅಭ್ಯುದಯಕ್ಕಾಗಿ ಹಲವಾರು ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಬುಡಕಟ್ಟು ಜನರ ಏಳಿಗೆಗಾಗಿ ಶ್ರಮಿಸಲಾಗಿದೆ. ಈ ಜನರಿಗಾಗಿ ಮಹತ್ವದ ಯೋಜನೆಗಳನ್ನು ಸಹ ಜಾರಿಗೆ ತಂದಿದ್ದಾರೆ. ಮುಂದೆಯೂ ನಮ್ಮ ಸರ್ಕಾರ ದೇಶದ, ಜನರ ಅಭಿವೃದ್ಧಿಗೆ ಶ್ರಮಿಸಲಿದೆ ಎಂದು ಅವರು ತಿಳಿಸಿದ್ದಾರೆ.

Tags

Related Articles

Close