ಪ್ರಚಲಿತ

ಗುಡ್ ನ್ಯೂಸ್ ಕರ್ನಾಟಕ: ಕನ್ನಡದ ಈ ಮಕ್ಕಳಿಗಾಗಿ ಕರಗಿತು ಬಿಜೆಪಿ ಚಾಣಾಕ್ಯನ ಗಟ್ಟಿ ಮನಸ್ಸು!! ಇಲ್ಲಿದೆ ನೋಡಿ ಮನಕಲಕುವ ಸ್ಟೋರಿ…

ಅವರು ಕನ್ನಡದ ಸಿಂಗಂ ಎಂದೇ ಹೆಸರಾಗಿರುವ ದಕ್ಷ ಪೊಲೀಸ್ ಅಧಿಕಾರಿ. ಎದುರಾಳಿ ತನ್ನ ಕೈಯಲ್ಲಿ ಬಂದೂಕು ಹಿಡಿದುಕೊಂಡಿದ್ದರೂ ಆತನ ವಿರುದ್ಧ ಹೋರಾಟ ನಡೆಸಿ, ಜೀವದ ಹಂಗನ್ನು ತೊರೆದು ದೇಶಕ್ಕಾಗಿ ಖಾಕಿ ತೊಟ್ಟಿದ್ದೇನೆ, ಗೂಂಡಾಗಳ ಹುಟ್ಟಡಗಿಸಿಯೇ ತೀರುತ್ತೇನೆ ಎಂದು ಛಲ ತೊಟ್ಟು ಸರ್ಕಾರ ನೀಡಿರುವ 6 ಬುಲೆಟ್‍ನ ಬಂದೂಕನ್ನು ಹಿಡಿದುಕೊಂಡು ಆ ಗೂಂಡಾನ ವಿರುದ್ಧ ಹೋರಾಟ ನಡೆಸಿ, ಕೊನೆಗೆ ಆತ ಸಿಡಿಸಿದ ಗುಂಡಿನೇಟಿಗೆ ಬಲಿಯಾಗಿ ತನ್ನ ಜೀವವನ್ನೇ ದೇಶಕ್ಕಾಗಿ ಬಲಿದಾನಗೈದ ಸಿಂಹದ ಮರಿ ಅವರು… ತನ್ನ ಎದೆಗೆ ಗುಂಡೇಟು ಬಿದ್ದರೂ ಎದುರಾಳಿ ಗೂಂಡಾನ ಬೆನ್ನು ಬಿಡದೆ ಅಟ್ಟಾಡಿಸಿ ಗುಂಡಿಕ್ಕಿ ಆತನನ್ನು ನರಕಕ್ಕೆ ಕಳಿಸಿದ ಗಂಡೆದೆಯ ಪೊಲೀಸ್ ಅಧಿಕಾರಿ… ಅವರೇ ಮಲ್ಲಿಕಾರ್ಜುನ ಬಂಡೆ…

ಹೌದು. 2014ರಲ್ಲಿ ನರ ರಾಕ್ಷಸರ ವಿರುದ್ಧ ಹೋರಾಟ ನಡೆಸಿ ಅವರನ್ನು ಯಮಲೋಕಕ್ಕಟ್ಟಿದ್ದರು.. ಪಿಎಸ್‍ಐ ಮಲ್ಲಿಕಾಜುನ ಬಂಡೆ 2014ರ ಜನವರಿ 8ರಂದು ಶಾರ್ಪ್ ಶೂಟರ್ ಮುನ್ನಾ ಜೊತೆ ನಡೆದಿದ್ದ ಗುಂಡಿನ ಕಾಳಗದಲ್ಲಿ ಎದೆಗೆ ಗುಂಟೇಟು ಬಿದ್ದು ಸುಮಾರು ವಾರಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣದ ಮಧ್ಯೆ ಹೋರಾಟ ನಡೆಸಿ ಹುತಾತ್ಮರಾಗಿದ್ದರು…

ತದ ನಂತರ ಸರಕರ ಇವರ ಸಾವಿನ ಬಗ್ಗೆ ಯಾವುದೇ ವಿಷಯದ ಬಗ್ಗೆಯೂ ಕಾಂಗ್ರೆಸ್ ಸರಕಾರ ಮಾತ್ರ ತನಿಖೆಯನ್ನು ನಡೆಸಲು ಆಸಕ್ತಿಯನ್ನು ಹೊಂದಿರಲಿಲ್ಲ.. ಹಾಗಾಗಿ ಅವರನ್ನು ಸಾವನ್ನು ಯಾವುದೇ ತನಿಖೆ ನಡೆಸದೆ ಹಾಗೇ ಬಿಟ್ಟರು!!…

ಇವರ ಸಾವಿನ ನಂತರ ಪ್ರತೀ ತಿಂಗಳಿಗೆ ಕೇವಲ 1000 ಸಾವಿರ ರೂಪಾಯಿಗಳನ್ನು ನೀಡುವ ಮೂಲಕ ಯವುದೇ ತನಿಖೆಯನ್ನು ಮಾಡದೆ ಕೈ ತೊಳೆದು ಬಿಡುತ್ತಾರೆ… ಆರೋಪಿಗಳ ಬಗ್ಗೆಯೂ ಯಾವುದೇ ತನಿಖೆಯನ್ನು ನಡೆಸುವುದಿಲ್ಲ.. ಅವರನ್ನು ಅರೆಸ್ಟ್ ಕೂಡಾ ಮಾಡುವುದಿಲ್ಲ… ನಂತರ ಮಲ್ಲಿಕಾರ್ಜುನ ಬಂಡೆಯವರ ಸಾವಿನ ನಂತರ ಆರೋಪಿಗಳಿಗೆ ಇನ್ನಷ್ಟು ಬಲ ಹೆಚ್ಚಾಗುತ್ತದೆ.. ಯಾವ ಅಧಿಕಾರಿಯನ್ನು ಏನೇ ಮಾಡಿದರೂ ನಮ್ಮನ್ನು ಏನು ಮಾಡುವುದಿಲ್ಲ ಎಂದು ಗೂಂಡಾಗಳಿಗೆ ವಿಶ್ವಾಸ ಹೆಚ್ಚಾಯಿತು.. ಮಲ್ಲಿಕಾರ್ಜುನ ಬಂಡೆ ಹತ್ಯೆಯ ನಂತರ ಡಿ.ಕೆ ರವಿಯವರ ಸಾವಾಗುತ್ತದೆ.. ಅದರಲ್ಲೂ ಯಾವ ತನಿಖೆಯನ್ನು ಸರಕಾರ ಮಾಡುವುದಿಲ್ಲ…

ಅದರಲ್ಲೂ ಅರೋಪಿಗಳಿಗೆ ಫುಲ್ ಖುಷ್ ಆಗುತ್ತಾರೆ!!.. ನಂತರ ಡಿವೈಎಸ್‍ಪಿ ಗಣಪತಿ ಹತ್ಯೆಯಾಗುತ್ತದೆ.. ಹೀಗೆ ಹಲವಾರು ಜನರ ಹತ್ಯೆ ನಿಗೂಢವಾಗಿ ಆದರೂ ಯಾವುದೇ ತನಿಖೆಯನ್ನು ನಡೆಸದೆ ತಾವು ಮಾತ್ರ ಆರಾಮಾಗಿ ಕುಳಿತು ಸತ್ತವರು ಎಷ್ಟು ಎಂದು ಕಾಂಗ್ರೆಸ್ ಸರಕಾರ ಲೆಕ್ಕ ಹಾಕಿ ಕುಳಿತುಕೊಳ್ಳುತ್ತಾರೆ… ಆದರೆ ಬಿಜೆಪಿ ಸರಕಾರ ಅದೆಷ್ಟೋ ಬಾರಿ ಇವರ ಸಾವಿನ ಬಗ್ಗೆ ತನಿಖೆ ಮಾಡಲು ಒತ್ತಾಯಿಸಿದರೂ ಯಾರು ಚುಪ್‍ಚಾಪ್ ಅನ್ನಲಿಲ್ಲ..

ಮಲ್ಲಿಕಾರ್ಜುನ ಬಂಡೆ ಸಾವಿನ ನಂತರ ಸಂಸಾರದ ಹೊರೆಯೆಲ್ಲಾ ಪತ್ನಿ ಮಲ್ಲಮ್ಮ ಬಂಡೆ ಹೆಗಲಿಗೆ ಬಿದ್ದಿತ್ತು.. ಹೇಗೋ ಪಾಪ ಸರಕಾರದಿಂದ ತಿಂಗಳಿಗೆ ಸಿಗುತ್ತಿದ್ದ ಒಂದು ಸಾವಿರ ರೂಪಾಯಿಂದ ಹಾಗೋ ಹೀಗೋ ಜೀವನ ನಡೆಸುತ್ತಿದ್ದರು.. ವಿಧಿಯಾಟ ನೋಡಿ!! ತದ ನಂತರ ಮಲ್ಲಮ್ಮನೂ ಬ್ರೈನ್ ಟ್ಯೂಮರ್‍ನಿಂದ ಬಳಲುತ್ತ ಚಿಕಿತ್ಸೆ ಪಡೆಯುತ್ತಿದ್ದರು.. 2016 ಜುಲೈ 9ರಂದು ಮಲ್ಲಮ್ಮ ಕೂಡಾ ವಿಧಿವಶರಾಗುತ್ತಾರೆ… ತದ ನಂತರ ಬಿಜೆಪಿ ಕಾರ್ಯಕರ್ತರೇ ಇವರಿಗೆ ಅನೇಕ ಬಾರಿ ಸಹಾಯವನ್ನು ಮಾಡುತ್ತಾರೆ…

ಇಬ್ಬರು ಮಕ್ಕಳನ್ನು ದತ್ತು ಪಡೆದ ಶಾ!!

ಸೋಮವಾರ ಸೇಡಂ ರಸ್ತೆಯ ಇಎಸ್‍ಐ ಆಸ್ಪತ್ರೆಯ ಆಡಿಟೋರಿಯಂನಲ್ಲಿ ನಡೆದಿದ್ದ ಬಿಜೆಪಿ ವಿಭಾಗೀಯ ಮಟ್ಟದ ಕಾರ್ಯಕರ್ತರ ಹಾಗೂ ಮುಖಂಡರ ಸಭೆಯಲ್ಲಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್, ಬಂಡೆ ಮಕ್ಕಳ ಪರಿಸ್ಥಿತಿಯ ಬಗ್ಗೆ ಹಾಗೂ ಸರ್ಕಾರ ತಿಂಗಳಿಗೆ ಕೇವಲ ಒಂದು ಸಾವಿರ ರೂಪಾಯಿ ಹಣ ಮಾತ್ರ ನೀಡುತ್ತಿದೆ. ಇದರಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ ಅಂತಾ ಶಾ ಗಮನಕ್ಕೆ ತಂದಿದ್ದರು.

ಹೀಗೆ ಬಿಜೆಪಿ ಕಾರ್ಯಕ್ರಮ ನಡೆದ ಸಂದರ್ಭದಲ್ಲಿ ಅಮಿತ್ ಶಾ ಆಗಮನದಂದು ಈ ವಿಷಯನ್ನು ಕರ್ನಾಟಕದ ಬಿಜೆಪಿ ಮುಖಂಡರು ಈ ಬಗ್ಗೆ ಅಮಿತ್ ಶಾ ಅವರಲ್ಲಿ ಈ ವಿಷಯವನ್ನು ಪ್ರಸ್ತಾಪಿಸುತ್ತಾರೆ… ಸರಕಾರದಿಂದ ಹುತಾತ್ಮ ಮಲ್ಲಿಕಾರ್ಜುನ ಬಂಡೆಯವರಿಗೆ ಸರಕಾರ ಕೊಡುವ ಹಣ ಮತ್ತು ಅವರ ವಿದ್ಯಾಭ್ಯಾಸದ ಬಗ್ಗೆ ಬಿಜೆಪಿ ಮುಖಂಡರುಗಳು ಪ್ರಸ್ತಾವನೆಯನ್ನು ಮಾಡುತ್ತಾರೆ… ಈ ಎಲ್ಲಾ ವಿಷಯವನ್ನು ಮನಗಂಡು ಬಿಜೆಪಿ ಚಾಣಕ್ಯ ಇದಕ್ಕೊಂದು ಪರಿಹಾರವನ್ನು ಕಂಡು ಹಿಡಿಯೋಣ ಎಂಬ ಭರವಸೆಯನ್ನು ನೀಡುತ್ತಾರೆ..

ನಂತರ ಇದಕ್ಕೆ ತಕ್ಷಣವೇ ಸ್ಪಂದಿಸಿದ ಶಾ, ಮಕ್ಕಳ ಶಿಕ್ಷಣದ ಸಂಪೂರ್ಣ ವೆಚ್ಚ ಪಕ್ಷವೇ ಭರಿಸುವುದರ ಜೊತೆಗೆ ಇಬ್ಬರು ಮಕ್ಕಳನ್ನ ದತ್ತು ಪಡೆಯುವುದಾಗಿ ಘೋಷಣೆ ಮಾಡಿದರು…

ಸಿದ್ದರಾಮಯ್ಯ ಸರಕಾರದ ಇಷ್ಟು ವರ್ಷ ಆಳ್ವಿಕೆ ನಡೆಸಿದರೂ ಮಲ್ಲಿಕಾರ್ಜುನ ಬಂಡೆಯವರ ಸಾವಿನ ಬಗ್ಗೆ ತನಿಖೆಯೂ ಮಾಡದೆ ಅವರ ಕುಟುಂಬಕ್ಕೆ ಯಾವುದೇ ಸಹಾಯವನ್ನು ಮಾಡದೆ ಕಾಂಗ್ರೆಸ್ ಸರಕಾರದ ಮುಖ ಮತ್ತೊಮ್ಮೆ ಅನಾವರಣವಾಗಿದೆ.. ಆದರೆ ಬಿಜೆಪಿ ಚಾಣಕ್ಯ ಅಮಿತ್ ಶಾ ರ ಈ ಕಾರ್ಯ ಮಾತ್ರ ನಿಜವಾಗಿಯೂ ಮೆಚ್ಚುವಂತಹದ್ದು!!

ಪವಿತ್ರ

Tags

Related Articles

Close