ಪ್ರಚಲಿತ

ಭ್ರಷ್ಟಾಚಾರಕ್ಕೆ ಬೆದರಿದ ಸಿಎಂ..! ಭ್ರಷ್ಟಾಚಾರ ಮಟ್ಟಹಾಕಲು ಮೊದಲ ಹಂತದಲ್ಲೇ ಹಿಂದೇಟು ಹಾಕಿದ ಕುಮಾರಣ್ಣ..!

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಚುನಾವಣೆಗೂ ಮೊದಲು ಅಬ್ಬರಿಸಿದ್ದೇ ಅಬ್ಬರಿಸಿದ್ದು, ನನ್ನ ಕೈಗೆ ಅಧಿಕಾರ ಕೊಟ್ಟು ನೋಡಿ , ರಾಜ್ಯದಲ್ಲಿ ಒಂದೇ ಒಂದು ಭ್ರಷ್ಟಾಚಾರ ಪ್ರಕರಣಗಳು ತಲೆ ಎತ್ತದಂತೆ ನೋಡಿಕೊಳ್ಳುತ್ತೇನೆ ಎಂದು ಹೋದಲ್ಲೆಲ್ಲಾ ಹೇಳಿಕೊಂಡು ಬರುತ್ತಿದ್ದರು.‌ ರಾಜ್ಯದ ಅಭಿವೃದ್ಧಿಯೊಂದೇ ನನ್ನ ಗುರಿ ಎಂದು ಹೇಳುತ್ತಿದ್ದ ಕುಮಾರಸ್ವಾಮಿ ಅವರು ಅಧಿಕಾರ ಕೈಗೆ ಸಿಗುತ್ತಿದ್ದಂತೆ ಉಲ್ಟಾ ಹೊಡೆದಿದ್ದಾರೆ. ಯಾಕೆಂದರೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡ ದಿನದಿಂದಲೇ ನಾನು ರಾಜ್ಯದ ಜನರ ಮುಲಾಜಿನಲ್ಲಿಲ್ಲ, ಬದಲಾಗಿ ನನಗೆ ಮುಖ್ಯಮಂತ್ರಿ ಪಟ್ಟ ಕೊಟ್ಟ ಕಾಂಗ್ರೆಸ್‌ನ ಮುಲಾಜಿನಲ್ಲಿದ್ದೇನೆ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಆಗಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಚನ‌ಭ್ರಷ್ಟ ಎಂಬುದು ಮತ್ತೊಮ್ಮೆ ಸಾಬೀತಾಗಿತ್ತು. ಯಾಕೆಂದರೆ ಕುಮಾರಸ್ವಾಮಿ ಅವರು ಹೇಳಿದ ಪ್ರಕಾರ ಈವರೆಗೆ ನಡೆದುಕೊಂಡ‌ ಉದಾಹರಣೆಯೇ ಇಲ್ಲ.‌ ಕೇವಲ ಅಧಿಕಾರದ ಆಸೆಗಾಗಿ ಭಾರೀ ಭಾಷಣ ಮಾಡುತ್ತಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇದೀಗ ತಾನು ಚುನಾವಣೆಗೂ ಮೊದಲು ಹೇಳಿಕೊಂಡಿದ್ದ ಎಲ್ಲಾ ಹೇಳಿಕೆಗಳನ್ನು ಮರೆತು ಅಧಿಕಾರದ ಅಮಲಿನಲ್ಲಿ ತೇಲುವಂತೆ ವರ್ತಿಸುತ್ತಿದ್ದಾರೆ.!

ಭ್ರಷ್ಟಾಚಾರ ತಡೆಯಲು ನನ್ನಿಂದ ಸಾಧ್ಯವಿಲ್ಲ..!

ಈ‌ ಮಾತು ನಿಜವಾಗಿಯೂ ಒಬ್ಬ ರಾಜ್ಯದ ಮುಖ್ಯಮಂತ್ರಿಯ ಬಾಯಿಂದ ಬರುವುದು ಎಂದರೆ ಯಾರೂ ನಂಬುವುದಿಲ್ಲ. ಆದರೆ ಕರ್ನಾಟಕದ ಪರಿಸ್ಥಿತಿ ಈ ಮಟ್ಟಿಗೆ ಬಂದಿದೆ ಎಂದು ಹೇಳಲೇಬೇಕಾದ ಅನಿವಾರ್ಯತೆ ನಮಗಿದೆ. ಯಾಕೆಂದರೆ ರಾಜ್ಯದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರವನ್ನು ಒಬ್ಬ ಮುಖ್ಯಮಂತ್ರಿಯಾಗಿ ನನ್ನಿಂದ ತಡೆಯಲು ಸಾಧ್ಯವಿಲ್ಲ ಎಂದು ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಹೇಳಿಕೊಂಡಿದ್ದಾರೆ.‌ ಸರ್ಕಾರಿ ಕೆಲಸದಿಂದ ಹಿಡಿದು ಪ್ರತಿಯೊಂದು ಕೆಲಸದಲ್ಲೂ ಲಂಚದ ರೂಪದಲ್ಲಿ ಭ್ರಷ್ಟಾಚಾರ ನಡೆಯುತ್ತಲೇ ಇದೆ. ಇದ್ಯಾವುದನ್ನೂ ಮಟ್ಟ ಹಾಕಲು ನನ್ನಿಂದ ಸಾಧ್ಯವಿಲ್ಲ, ಯಾಕೆಂದರೆ ಭ್ರಷ್ಟರ ವಿರುದ್ಧ ಕ್ರಮ ಕೈಗೊಂಡರೆ ನನ್ನ ಕುರ್ಚಿ ಉಳಿಯುವುದಿಲ್ಲ ಎಂದು ಅಸಹಾಯಕತೆಯಿಂದ ಹೇಳಿಕೊಂಡಿದ್ದಾರೆ. ರಾಜ್ಯದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಭ್ರಷ್ಟಾಚಾರ ನಡೆಯುತ್ತಲೇ ಇದೆ,ಈ ಹಿಂದಿನ ಸರಕಾರ ಕೂಡ ಇದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ, ಅದರ ಪರಿಣಾಮವಾಗಿ ರಾಜಾರೋಷವಾಗಿ ಭ್ರಷ್ಟಾಚಾರ ನಡೆಯುತ್ತಿದೆ. ಆದ್ದರಿಂದ ನಾನು ಮುಖ್ಯಮಂತ್ರಿಯಾಗಿದ್ದರೂ ಕೂಡ ಸಂಪೂರ್ಣವಾಗಿ ಭ್ರಷ್ಟಾಚಾರ ತಡೆಯಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದಾರೆ.!

ವಿಧಾನಸೌಧದ ಮೂರನೇ ಮಹಹಿಡಿಯಲ್ಲೇ ಭ್ರಷ್ಟಾಚಾರ ತಾಂಡವವಾಡುತ್ತಿದೆ, ಇದನ್ನು ಹಂತ ಹಂತವಾಗಿ ನಮ್ಮ ಸರಕಾರ ತಡೆಯುವ ಪ್ರಯತ್ನ ನಡೆಸುತ್ತದೆ, ಆದರೆ ಸಂಪೂರ್ಣವಾಗಿ ಭ್ರಷ್ಟಾಚಾರ ನಿರ್ಮೂಲನೆ ಅಸಾಧ್ಯ ಎಂದಿದ್ದಾರೆ. ಸರಕಾರಿ ಕ್ಷೇತ್ರಗಳಲ್ಲಿಯೇ ವರ್ಗಾವಣೆಗೂ ಲಂಚ ನೀಡಲಾಗುತ್ತಿದೆ, ಇಂತಹ ವ್ಯವಸ್ಥೆಯಲ್ಲಿ ನಾವು ಅಸಹಾಯಕರಾಗಿದ್ದೇವೆ ಎಂದು ಹೇಳಿದ್ದಾರೆ.!

Related image

ವರ್ಗಾವಣೆಯಲ್ಲಿ ನಡೆಯುತ್ತೆ ಭಾರೀ ಭ್ರಷ್ಟಾಚಾರ..!

ಸರಕಾರಿ ಅಧಿಕಾರಿಗಳು ನಡೆಸುವ ಭ್ರಷ್ಟಾಚಾರದ ವಿಚಾರಕ್ಕೆ ಕೈ ಹಾಕಲು ನನಗೆ ಭಯವಾಗುತ್ತದೆ. ಯಾಕೆಂದರೆ ವರ್ಗಾವಣೆಯಿಂದಲೇ ಭ್ರಷ್ಟಾಚಾರ ಆರಂಭವಾಗುತ್ತದೆ. ಒಂದು ವರ್ಗಾವಣೆ ಮಾಡಲು ಮೇಲಾಧಿಕಾರಿಗಳು ೫ ರಿಂದ ೧೦ ಲಕ್ಷ ಲಂಚ ಪಡೆಯುತ್ತಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಶೃಂಗೇರಿ ಜಗದ್ಗುರುಗಳನ್ನು ಭೇಟಿಯಾದ ಸಂದರ್ಭದಲ್ಲಿ ಶ್ರೀಗಳು ರಾಜ್ಯದಲ್ಲಿ ಎಗ್ಗೆ ಮೀರಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಡೆಯಬೇಕೆಂದು ಕುಮಾರಸ್ವಾಮಿ ಅವೆ ಬಳಿ ಹೇಳಿಕೊಂಡಿದ್ದರು. ಆ ವಿಚಾರವಾಗಿಯೇ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಏಕಾಏಕಿ ಭ್ರಷ್ಟರ ವಿರುದ್ಧ ಧ್ವನಿ ಎತ್ತಿದರೆ ನನ್ನ ಅಧಿಕಾರ ಉಳಿಯುವುದಿಲ್ಲ ಎಂದು ಬೇಜವಾಬ್ದಾರಿಯಿಂದ ಹೇಳಿಕೆ ನೀಡಿದ್ದಾರೆ.!

ಯಾಕೆಂದರೆ ಕುಮಾರಸ್ವಾಮಿ ಅವರ ಈ ಹೇಳಿಕೆ ಒಬ್ಬ ಮುಖ್ಯಮಂತ್ರಿಯಾಗಿ ಹೇಳುವಂತದ್ದಲ್ಲ. ತಮ್ಮ ಕೈಯಲ್ಲಿ ಅಧಿಕಾರ ಇಟ್ಟುಕೊಂಡು ಕಳ್ಳಕಾಕರಿಗೆ ಹೆದರಿಕೊಂಡು ಸುಮ್ಮನಾಗುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಸ್ವಪಕ್ಷೀಯರೇ ಅಸಮಧಾನಗೊಂಡಿದ್ದಾರೆ‌. ಆದ್ದರಿಂದ ಕೇವಲ ಅಧಿಕಾರದ ಆಸೆಗಾಗಿ ಮೈತ್ರಿ ಮಾಡಿಕೊಂಡು , ಚುನಾವಣೆಗೂ ಮೊದಲು ನೀಡಿದ್ದ ಎಲ್ಲಾ ಹೇಳಿಕೆಗಳನ್ನು ಮರೆತಿರುವ ಕುಮಾರಸ್ವಾಮಿ ಅವರು ವಚನಭ್ರಷ್ಟರಲ್ಲದೆ ಮತ್ತಿನ್ನೇನು..?!

–ಅರ್ಜುನ್

Tags

Related Articles

Close