ಪ್ರಚಲಿತ

ಮೈಸೂರಿನ ಶಿಲ್ಪಿ ಕೈಯಲ್ಲಿ ಪೂರ್ಣರೂಪ ‌ಪಡೆದ ಅಯೋಧ್ಯೆ ಶ್ರೀರಾಮ ಮಂದಿರದ ಬಾಲರಾಮ ವಿಗ್ರಹ

ಅಯೋಧ್ಯೆಯ ಶ್ರೀರಾಮ ಮಂದಿರದ ಉದ್ಘಾಟನಾ ಕಾರ್ಯ ಇನ್ನೇನು ಕೇವಲ ತಿಂಗಳುಗಳೊಳಗಾಗಿ ನಡೆಯಲಿದೆ. ಕೋಟ್ಯಾನುಕೋಟಿ ಭಕ್ತರು ಈ ಸುಂದರ ಕ್ಷಣವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ.

ಈ ನೂತನ ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಲು ರಾಮಲಲ್ಲಾನ ವಿಗ್ರಹವನ್ನು ದೇಶದ ಮೂವರು ಶಿಲ್ಪಿಗಳು ಕೆತ್ತನೆ ಮಾಡುತ್ತಿದ್ದು, ಇವರುಗಳ ಪೈಕಿ ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ಅವರು ತಾವು ವಹಿಸಿಕೊಂಡ ಕೆತ್ತನೆ ಕೆಲಸವನ್ನು ಪೂರ್ಣಗೊಳಿಸಿದ್ದಾರೆ. ಅರುಣ್ ಅವರು ಐದು‌ವರ್ಷಗಳಿರುವಾಗಿನ ‌ಶ್ರೀರಾಮನ ಮೂರ್ತಿಯನ್ನು ಕೆತ್ತನೆ ಮಾಡಿದ್ದಾರೆ.

ಈ ವಿಗ್ರಹವು ಐದು ಅಡಿ ಎತ್ತರ ಹಾಗೂ 3.5 ಅಡಿ ಅಗಲವಿದೆ. ಕೆತ್ತಲಾದ‌ ಶ್ರೀರಾಮ ವಿಗ್ರಹದಲ್ಲಿ ರಾಮ ಬಿಲ್ಲು ಬಾಣವನ್ನು ಹಿಡಿದಿದ್ದಾನೆ. ಈ ವಿಗ್ರಹದ ಕೆತ್ತನೆ ರಪೂರ್ಣಗೊಳಿಸಲು ಅರುಣ್ ಅವರು ಆರು ತಿಂಗಳ ಸಮಯ ತೆಗೆದುಕೊಂಡಿದ್ದಾರೆ. ರಾಮ ಮಂದಿರ ಉದ್ಘಾಟನೆಗೆ ಆಹ್ವಾನ ಪಡೆದ 2000 ವ್ಯಕ್ತಿಗಳಲ್ಲಿ ಅರುಣ್ ಸಹ ಒಬ್ಬರಾಗಿದ್ದಾರೆ.

ಬೆಂಗಳೂರಿನ ಜಿ. ಎಲ್. ಭಟ್, ರಾಜಸ್ಥಾನದ ಸತ್ಯನಾರಾಯಣ ಪಾಂಡೆ, ಅರುಣ್ ಈ ಮೂಲರು ಕುಶಲಕರ್ಮಿಗಳು ಬಾಲ ರಾಮನ ವಿಗ್ರಹ ಕೆತ್ತನೆ ಮಾಡಿದ್ದು, ಇದರಲ್ಲಿ ಒಂದು ವಿಗ್ರಹವನ್ನು ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ‌. ಜನವರಿ ಮೊದಲ ವಾರದಲ್ಲಿ ಈ‌ ಮೂರರಲ್ಲಿ ಯಾವ ಪ್ರತಿಮೆ ಪ್ರತಿಷ್ಠಾಪನೆಗೆ ಸೂಕ್ತ ಎಂಬುದನ್ನು ಸಹ ತೀರ್ಮಾನ ಮಾಡಿ, ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಮೂಲಗಳು ಮಾಹಿತಿ ನೀಡಿವೆ.

ಇನ್ನು ರಾಮ ಮಂದಿರ ಲೋಕಾರ್ಪಣೆಗೆ ‌ಕೆಲವೇ ಕೆಲವು ಸಮಯ ಬಾಕಿ ಉಳಿದಿದ್ದು, ಸಿದ್ಧತೆ ಕಾರ್ಯಗಳು ಭರದಿಂದ‌ ಸಾಗುತ್ತಿವೆ. ಅಯೋಧ್ಯೆಗೆ ತೆರಳಿ ಎಲ್ಲರಿಗೂ ಈ ಸಂಭ್ರಮವನ್ನು ‌ಕಣ್ತುಂಬಿಕೊಳ್ಳಲು ಅಸಾಧ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ದೇಶವಾಸಿಗಳು ತಮ್ಮ ಪ್ರದೇಶದ ದೇಗುಲಗಳಲ್ಲಿ ಶ್ರೀರಾಮ ವಿಗ್ರಹ ಪ್ರತಿಷ್ಠಾ ದಿನದಂದು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವುದು, ಮನೆಗಳಲ್ಲಿ ದೀಪಾವಳಿಯ ಹಾಗೆ ದೀಪಾಲಂಕಾರ ಮಾಡುವ ಮೂಲಕ, ಈ ಪುಣ್ಯ ಕೈಂಕರ್ಯದಲ್ಲಿ ‌ಭಾಗವಹಿಸುವಂತೆಯೂ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈ ಹಿಂದೆಯೇ ಮನವಿ ಮಾಡಿದೆ.

Tags

Related Articles

Close