ದೇಶ

ಕೇಸರಿ ಬಣ್ಣವನ್ನು ಅವಮಾನಿಸಿದ ಶಾರುಖ್ ಖಾನ್!ಪಠಾಣ್ ಸಿನಿಮಾ ಬಹಿಷ್ಕಾರಕ್ಕೆ ಕರೆ!

ಹಿಂದೂ ಧರ್ಮವನ್ನು ಹೇಗೆಲ್ಲಾ ಅವಮಾನಿಸುವುದಕ್ಕಾಗುತ್ತದೋ, ಆ ರೀತಿಯಲ್ಲೆಲ್ಲಾ ಅವಮಾನಿಸಲು ಕೆಲವು ಅನ್ಯಧರ್ಮದ ಮತಾಂಧರು ಸದಾ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಶಾರುಖ್ ಖಾನ್ ಎಂದು ಖಳ ‘ನಾಯಕ’ ಇದೀಗ ತನ್ನ ಚಿತ್ರದ ಮೂಲಕ ಹಿಂದೂ ಧರ್ಮ‌ವನ್ನು ನಾಚಿಕೆ ಇಲ್ಲದ ಧರ್ಮ ಎಂದು ಹೇಳುವ ಮೂಲಕ ತನ್ನ ತೀಟೆ ತೀರಿಸಿಕೊಂಡಿದ್ದಾನೆ.

ಅವನ ಹೊಸ ಚಿತ್ರ ಪಠಾಣ್‌ನಲ್ಲಿ ನಟಿ ದೀಪಿಕಾ ಪಡುಕೋಣೆಗೆ ಕೇಸರಿ ಬಣ್ಣದ ಅಸಹ್ಯ ಬಟ್ಟೆಯನ್ನು ತೊಡಿಸಿ, ಅದಕ್ಕೆ ಬೇಷರಂ ರಂಗ್ ಎಂದು ಹಾಡು ಬರೆಸಿ ಅದನ್ನು ಬಿಡುಗಡೆ ಮಾಡುವ ಮೂಲಕ ಪಡ್ಡೆ ಹುಡುಗರನ್ನು ನಿದ್ದೆಗೆಡಿಸಿ ತನ್ನ ಗಲ್ಲಾಪೆಟ್ಟಿಗೆ ತುಂಬಿಸಿಕೊಳ್ಳಲು ಖಾನ್ ಮುಂದಾಗಿದ್ದು, ಇದು ಕೇವಲ ಹಿಂದೂಗಳಿಗೆ ಮಾತ್ರವಲ್ಲ ಕೆಲವು ಅನ್ಯಮತೀಯರ ಕೆಂಗಣ್ಣಿಗೆ ಗುರಿಯಾಗಿದೆ.

ಒಂದು ಧರ್ಮದ ಹಿಂದೂ ಹೆಣ್ಣು ಮಗಳನ್ನು ಹೀಗೆ ಅಸಹ್ಯ‌ವಾಗಿ ತೋರಿಸಿಕೊಂಡು, ಅದಕ್ಕೆ ಮತ್ತೊಂದು ಧರ್ಮ‌ವನ್ನು ಹೀಯಾಳಿಸುವಂತಹ ಹಾಡು ಹಾಕಿಸುವ ಮೂಲಕ ಮೈ ಚಳಿ ಬಿಟ್ಟು ಕುಣಿದ ಖಾನ್, ಆ ಮೂಲಕ ತನ್ನ ಚಿತ್ರವನ್ನು ಹಿಟ್ ಮಾಡಲು ದಾರಿಯನ್ನೆನ್ನೋ ಕಂಡುಕೊಂಡ. ಆದರೆ ಹೀಗೆ ಒಂದು ಧರ್ಮ‌ವನ್ನು ಹೀಗಳೆವ ಹಾಡನ್ನು ಬಳಕೆ ಮಾಡಿದಲ್ಲಿ ಜನರು ಅವನನ್ನೇ ಹಿಟ್ ಮಾಡುತ್ತಾರೆ ಎನ್ನುವ ಸಾಮಾನ್ಯ ಜ್ಞಾನ ಸಹ ಆತನಿಗೆ ಇಲ್ಲದೇ ಹೋದದ್ದು ದುರಂತ.

ಇದೇ ಖಾನ್, ಗಣೇಶೋತ್ಸವ‌ದಂದು ಮನೆಯಲ್ಲಿ ಗಣಪತಿಯ ಪೂಜೆ ಮಾಡುವ ಫೋಟೋ ವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ. ಹಾಗೆಯೇ ಕೆಲ ಸಮಯದ ಹಿಂದೆ ಮೆಕ್ಕಾಗೆ ತೆರಳಿ ಉಮ್ರಾ ಮಾಡಿ ಬಂದಿದ್ದ ಈತ, ವೈಷ್ಣೋದೇವಿಗೂ ತೆರಳಿದ್ದು ಅವನ ಧರ್ಮದ ಕೆಲವರ ಕಣ್ಣು ಕೆಂಪಾಗಿಸಿತ್ತು. ಹೀಗೆ ತಾನೊಬ್ಬ ಸಹಿಷ್ಣು ಎಂಬಂತೆ ಫೋಸ್ ನೀಡಿ, ಆ ಬಳಿಕ ಹಿಂದೂ ಧರ್ಮವನ್ನು ನಾಚಿಕೆ ಇಲ್ಲದ ಬಣ್ಣ ಎಂದು ಹೇಳಿರುವು ಶಾರುಖ್ ಖಾನ್ ನ ಮನಸ್ಥಿತಿ ಅದೆಷ್ಟು ಅಸಹ್ಯ‌ಕರ ಎನ್ನುವುದು ಈ ಚಿತ್ರದ ಒಂದೇ ಹಾಡಿನಲ್ಲಿ ಜಗಜ್ಜಾಹೀರು ಆಗಿದೆ.

ಈ ಚಿತ್ರದಲ್ಲಿ ಈ ರೀತಿಯಾಗಿ ಅಭಿನಯಿಸುವ ಮೊದಲು ಆ ನಟಿಯೂ ಕೊಂಚ ಆಲೋಚಿಸಬೇಕಿತ್ತು. ಚಿತ್ರ‌ವನ್ನು ಹಿಟ್ ಮಾಡಿಸುವ ಭರದಲ್ಲಿ ಇನ್ನೊಂದು ಧರ್ಮ‌ಕ್ಕೆ ಅವಮಾನ ಮಾಡಿದ ಖಾನ್‌ನ ಪಠಾಣ್ ಮತ್ತು ಇನ್ನು ಬರುವ ಎಲ್ಲಾ ಚಿತ್ರಗಳು ಹಿಂದೂಗಳು ಬಹಿಷ್ಕಾರ ಮಾಡುವ ಮೂಲಕ, ಅವನಿಗೆ ತಕ್ಕ ಪಾಠ ಕಲಿಸುವ ಅಗತ್ಯ‌ವಿದೆ.

ಇಂದು ಶಾರುಖ್ ಖಾನ್‌ಗೆ ಆತನ ತಪ್ಪಿಗೆ ತಕ್ಕ ಶಿಕ್ಷೆ ದೊರೆಯದೇ ಹೋದಲ್ಲಿ ಮುಂದೆ ಬೇರೆ ನಟರು ಸಹ ಇಂತದ್ದೇ ತಪ್ಪು ಮಾಡುವ, ಧರ್ಮ ಧರ್ಮದ ನಡುವೆ ವಿಷಬೀಜ ಬಿತ್ತು‌ವ ಕೆಲಸವನ್ನು ಚಲನಚಿತ್ರ‌ಗಳ ಮೂಲಕ ಮಾಡುವ ಸಾಧ್ಯತೆ ಇದೆ. ಆದ್ದರಿಂದ ಈತನಿಗೆ ಅವನ ಬೇಷರಂ ಮುಖ, ಮನಸ್ಸು ಎಷ್ಟು ಕೀಳುಮಟ್ಟದ್ದು ಎನ್ನುವುದನ್ನು ಹಿಂದೂ ಧರ್ಮೀಯರು ಈ ಚಲನಚಿತ್ರ‌ವನ್ನು ವಿರೋಧಿಸುವ ಮೂಲಕವೇ ನೀಡಬೇಕು. ಇದು ಇಂತಹ ವಿಕೃತ ಮನಸ್ಸು ಹೊಂದಿರುವ ಪ್ರತಿಯೊಬ್ಬ‌ನಿಗೂ ಪಾಠವಾಗಬೇಕು

Tags

Related Articles

Close