ಪ್ರಚಲಿತ

ಅಧ್ಯಯನದಿಂದ ಬಯಲು!! ವಿಶ್ವದ ಬಲಿಷ್ಠ ರಾಷ್ಟ್ರಗಳಿಗೆ ಕಾದಿದೆ ಗಂಡಾಂತರ!! ಆರ್ಥಿಕತೆಯ ವಿಚಾರವಾಗಿ ಭಾರತದ ಎದುರು ಮಂಡಿಯೂರಲಿದೆ ಇಡೀ ವಿಶ್ವ!! 

ಭಾರತವನ್ನು ಬಡರಾಷ್ಟ್ರವೆಂದು ಹೀಯಾಳಿಸುತ್ತಿದ್ದ ಅದೆಷ್ಟೋ ರಾಷ್ಟ್ರಗಳು ಇಂದು ಭಾರತದ ಎದುರು ಕೈ ಕಟ್ಟಿ ನಿಲ್ಲುವಂತಹ ಪರಿಸ್ಥಿತಿ ಇದೀಗ ಎದುರಾಗಿದೆ ಎಂದರೆ ನಂಬ್ತೀರಾ?? ಆದರೆ ಅದನ್ನು ನಂಬಲೇಬೇಕು!! ಯಾಕೆಂದರೆ, ವಿಶ್ವಾದ್ಯಂತ ಬಹಳಷ್ಟು ರಾಷ್ಟ್ರಗಳು ಆರ್ಥಿಕ ಕುಸಿತಕ್ಕೊಳಗಾಗುತ್ತವೆ ಎಂಬ ಆತಂಕಕಾರಿ ಸುದ್ದಿಯೊಂದು ಹೊರ ಬಂದಿರುವ ಮೂಲಕ ವಿಶ್ವದ ದೊಡ್ಡಣ್ಣನೆಂದು ಕರೆಸಿಕೊಳ್ಳುತ್ತಿರುವ ರಾಷ್ಟ್ರಗಳು, ಮುಂದಿನ ದಿನಗಳಲ್ಲಿ ಆರ್ಥಿಕ ಸಂಕಷ್ಟವನ್ನು ಎದುರಿಸಲಿದೆ ಎನ್ನುವ ಸುದ್ದಿ ಇದೀಗ ಹೊರಬಿದ್ದಿದೆ!!

ನೋಟ್ ಬ್ಯಾನ್, ಜಿ ಎಸ್ ಟಿ ಯಿಂದಾಗಿ ಭಾರತವು ಆರ್ಥಿಕ ಸಂಕಷ್ಟವನ್ನು ಎದುರಿಸಲಿದೆ ಎಂದು ಬೊಬ್ಬಿರಿದಿದ್ದ ಅದೆಷ್ಟೋ ಬುದ್ದಿಜೀವಿಗಳಿಗೆ ದೇಶದ ಜಿಡಿಪಿ ಏರಿಕೆಯಾಗಿದ್ದನ್ನು ಕಂಡು ದಂಗಾಗಿ ಹೋಗಿದ್ದರು. ಅಷ್ಟೇ ಅಲ್ಲದೇ, ನರೇಂದ್ರ ಮೋದಿಯವರ ರಾಜತಾಂತ್ರಿಕ ನಡೆಯಿಂದಾಗಿ ದೇಶದ ಆರ್ಥಿಕತೆಯೂ ಸುಧಾರಣೆಯತ್ತ ಸಾಗುತ್ತಿದೆಯಲ್ಲದೇ ಮುಂದಿನ ದಿನಗಳಲ್ಲಿ ಭಾರತ ವಿಶ್ವದ ದೊಡ್ಡಣ್ಣನ್ನೂ ಮೀರಿಸಿ ಆರ್ಥಿಕತೆಯಲ್ಲಿ ಬಲಿಷ್ಠ ರಾಷ್ಟ್ರ ಎನ್ನುವ ಕೀರ್ತಿಗೂ ಪಾತ್ರವಾಲಿದೆ ಎನ್ನುವ ವಿಚಾರವೊಂದು ಹೊರಬಿದ್ದಿದೆ.

ಇನ್ನು ಮೂರು ವರ್ಷಗಳಲ್ಲಿ ವಿಶ್ವಾದ್ಯಂತ ಬಹಳಷ್ಟು ರಾಷ್ಟ್ರಗಳು ಆರ್ಥಿಕ ಕುಸಿತಕ್ಕೊಳಗಾಗಲಿದ್ದು, ಅವುಗಳಲ್ಲಿ ಕೆಲವೇ ಕೆಲವು ರಾಷ್ಟ್ರಗಳು ಮಾತ್ರ ಈ ಆರ್ಥಿಕ ಕುಸಿತದಿಂದ ಬಚಾವಾಗಲಿದ್ದು, ಅದರಲ್ಲಿ ಭಾರತವೂ ಒಂದಾಗಲಿದೆ. ಅಷ್ಟೇ ಅಲ್ಲದೇ, ವಿಶ್ವದ ಅಗ್ರಮಾನ್ಯ ರಾಷ್ಟ್ರವಾಗಲು ಹವಣಿಸುತ್ತಿರುವ ಚೀನಾ ದೇಶಕ್ಕೆ ಅತ್ಯಂತ ಹೆಚ್ಚು ಹಾನಿಯಾಗಲಿದೆ ಎಂದು ನೋಮುರಾ ಸಿಂಗಾಪುರ್ ಎಂಬ ಹಣಕಾಸು ಸೇವಾ ಸಂಸ್ಥೆಯ ಅಧ್ಯಯನದಿಂದ ತಿಳಿದುಬಂದಿದೆ.

ಏಷ್ಯಾ ಖಂಡದಲ್ಲಿ ಭಾರತ ಸೇರಿ ಎರಡೇ ದೇಶ ಮಾತ್ರ ಸೇಫಾ? ಚೀನಾಗೆ ಕಾದಿದೆಯಂತೆ ಗಂಡಾಂತರ

 

ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೆಚ್ಚು ಹಾನಿಯಾಗಲಿದೆ. ಆದರೆ, ಹಾಂಕಾಂಗ್ ನಂಥ ಮುಂದುವರಿದ ದೇಶಗಳಿಗೂ ಹಿನ್ನಡೆಯಾಗಲಿದೆ ಎಂದು ಈ ಅಧ್ಯಯನದಲ್ಲಿ ಹೇಳಾಗಿದ್ದು, ಇದರ ಪ್ರಕಾರ, ಬಹುತೇಕ ಏಷ್ಯನ್ ರಾಷ್ಟ್ರಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿವೆ. ಆದರೆ, ಭಾರತ ಮತ್ತು ದಕ್ಷಿಣ ಕೊರಿಯಾ ಮಾತ್ರ ಬಚಾವ್ ಆಗಲಿದೆ ಎನ್ನುವ ವಿಚಾರ ಈ ಮೂಲಕ ಹೊರಬಂದಿದೆ!! ಇನ್ನು, ನೋಮುರಾ ಸಿಂಗಾಪುರ್ ಎಂಬ ಹಣಕಾಸು ಸೇವಾ ಸಂಸ್ಥೆಯ ಅಧ್ಯಯನದಿಂದ ಚೀನಾ ಮತ್ತು ಹಾಂಕಾಂಗ್ ದೇಶಗಳಿಗೆ ಅತೀ ಹೆಚ್ಚು ಹೊಡೆತ ಬೀಳಲಿದ್ದು, ಈ ಮೂಲಕ ಚೀನಾ ಅತ್ಯಂತ ಹೆಚ್ಚು ಹಾನಿಯನ್ನು ಎದುರಿಸಲಿದೆ ಎಂದು ತಿಳಿದು ಬಂದಿದೆ.

ಈಗಾಗಲೇ, ಬ್ರಿಟನ್ ಮಾಜಿ ಪ್ರಧಾನಿ ಡೇವಿಡ್ ಕೆಮರಾನ್, “ವಿಶ್ವ ಎರಡನೇ ಆರ್ಥಿಕ ಕುಸಿತದತ್ತ ಜಾರುತ್ತಿದ್ದು ಇದನ್ನು ತಪ್ಪಿಸಲು, ದೈತ್ಯ ಆರ್ಥಿಕ ಶಕ್ತಿಗಳಾಗಿ ಉದಯಿಸುತ್ತಿರುವ ಭಾರತ-ಚೀನಾದೊಂದಿಗೆ ಹೆಚ್ಚು ಔದ್ಯಮಿಕ ಒಪ್ಪಂದಗಳನ್ನು ಮಾಡಬೇಕಿದೆ” ಎಂದು ಅವರು ವಿಶ್ವಕ್ಕೆ ಕರೆ ನೀಡಿದ್ದಾರೆ.  ಅಷ್ಟೇ ಅಲ್ಲದೇ, “ಸದ್ಯ ವಿಶ್ವದ ಆರ್ಥಿಕತೆ ಅಸ್ಥಿರತೆಯಿಂದ ಕೂಡಿದ್ದು, ಅನಿಶ್ಚಿತತೆಯಲ್ಲಿದೆ. ವಿಶ್ವದ ಆರ್ಥಿಕತೆಯ ಮೇಲೆ ಕೆಂಪು ದೀಪ ಉರಿಯುತ್ತಿದ್ದು, ಕಳೆದ 6 ವರ್ಷಗಳ ಹಿಂದಿನ ದಿನಗಳನ್ನು ನೆನಪಿಸುವಂತಾಗಿದೆ” ಎಂದು ಕೆಮರಾನ್ ಎಚ್ಚರಿಸಿದ್ದರು.

ಅಷ್ಟೇ ಅಲ್ಲದೇ, “ಈ ಹಿಂಜರಿತದಿಂದಾಗಿ, ಮುಂದಿನ ದಿನಗಳಲ್ಲಿ ನಿರುದ್ಯೋಗ, ಅಭಿವೃದ್ಧಿ ದರ, ಬೆಲೆಗಳ ದರ ತೀವ್ರ ಇಳಿಕೆ ಕಾಣಬಹುದು. ಇದರಿಂದಾಗಿ ಆರ್ಥಿಕ ಚೇತರಿಕೆಗೆ ಚಾಲಕ ಶಕ್ತಿಯಾಗಿರುವ ಉದಯೋನ್ಮುಖ ಮಾರುಕಟ್ಟೆಗಳ ಮೇಲೂ ಪರಿಣಾಮವಾಗಲಿದೆ. ಈ ಪರಿಸ್ಥಿತಿಯಿಂದಾಗಿ ಬ್ರಿಟನ್ ಆರ್ಥಿಕ ವೇಗ ಕಾಯ್ದುಕೊಳ್ಳುವುದು ಸವಾಲಾಗಿ ಪರಿಣಮಿಸಿದೆ. ಯೂರೋ ವಲಯದ ಕುಸಿತವೂ ಬ್ರಿಟಿಷ್ ರಫ್ತು ಮತ್ತು ಉತ್ಪಾದನಾ ಕ್ಷೇತ್ರದ ಮೇಲೆ ಪರಿಣಾಮ ಬೀರಿದೆ ಎಂದವರು ಹೇಳಿದ್ದರು!! ಆದರೆ ಇದೀಗ ವಿಶ್ವಾದ್ಯಂತ ಬಹಳಷ್ಟು ರಾಷ್ಟ್ರಗಳು ಆರ್ಥಿಕ ಕುಸಿತಕ್ಕೊಳಗಾಗಲಿದ್ದು, ಭಾರತ ಮತ್ತು ದಕ್ಷಿಣ ಕೊರಿಯಾ ಮಾತ್ರ ಬಚಾವ್ ಆಗಲಿದೆ ಎನ್ನುವ ವಿಚಾರವನ್ನು ನೋಮುರಾ ಸಿಂಗಾಪುರ್ ಎಂಬ ಹಣಕಾಸು ಸೇವಾ ಸಂಸ್ಥೆಯ ಅಧ್ಯಯನ ಹೇಳಿದೆ ಎಂದರೆ ಬ್ರಿಟನ್ ಮಾಜಿ ಪ್ರಧಾನಿ ಡೇವಿಡ್ ಕೆಮರಾನ್ ಹೇಳಿರುವ ಮಾತು ನಿಜ ಎಂದೆನಿಸುತ್ತದೆ!!

ನೋಮುರಾ ಸಿಂಗಾಪುರ್ ಎಂಬ ಹಣಕಾಸು ಸೇವಾ ಸಂಸ್ಥೆಯ ಅಧ್ಯಯನದ ಪ್ರಕಾರ, ಭಾರತ ಸೇರಿದಂತೆ ವಿಶ್ವದ 14 ರಾಷ್ಟ್ರಗಳು ಆರ್ಥಿಕ ಹಿನ್ನಡೆಯನ್ನು ಮೀರಿ ಬೆಳೆಯಲಿದೆ  ಎಂದು ಈ ಅಧ್ಯಯನದಲ್ಲಿ ಹೇಳಲಿದೆಯಾದರೂ, ಆರ್ಥಿಕ ಸಂಕಷ್ಟ ಎಷ್ಟು ತೀವ್ರ ಮಟ್ಟದಲ್ಲಿ ಬರುತ್ತದೆ ಎಂಬುದನ್ನು ಈ ಅಧ್ಯಯನ ತಿಳಿಸಿಲ್ಲ. ತೊಂಬತ್ತರ ದಶಕದ ಅಂತ್ಯದಲ್ಲಿ ಪ್ರಾರಂಭಗೊಂಡ ವಿಶ್ವ ಆರ್ಥಿಕ ಕುಸಿತದ ರೀತಿಯಲ್ಲೇ ಮತ್ತೊಂದು ಜಾಗತಿಕ ಆರ್ಥಿಕ ಹಿನ್ನಡೆಯಾಗುವ ಸಾಧ್ಯತೆ ಇದೆ.

 

ಈಗಾಗಲೇ ಹಲವು ರಾಷ್ಟ್ರಗಳಲ್ಲಿ ಹಣಕಾಸು ಬಿಕ್ಕಟ್ಟು ತಲೆದೋರುತ್ತಿದ್ದು, ಚೀನಾ ದೇಶದ ಆರ್ಥಿಕ ಪ್ರಗತಿ ದರವೂ ಕುಂಠಿತಗೊಳ್ಳುತ್ತಿದೆ. ಇನ್ನೆರಡು ವರ್ಷದಲ್ಲಿ ಪ್ರಗತಿಯ ವೇಗದಲ್ಲಿ ಚೀನಾವನ್ನು ಭಾರತ ಹಿಂದಿಕ್ಕುವ ಸಾಧ್ಯತೆ ಇದೆ ಎನ್ನಲಾಗಿದೆ. ಈಗಾಗಲೇ ನೋಟು ನಿಷೇಧ ಮತ್ತು ಜಿಎಸ್ ಟಿ ತೆರಿಗೆ ಬಳಿಕ ಹಿನ್ನಡೆ ಅನುಭವಿಸಿದ್ದ ಭಾರತದ ಆರ್ಥಿಕ ಪ್ರಗತಿಯ ದರ ಏರಿಕೆಯಾಗಿದ್ದು, 2018ರಲ್ಲಿ ಭಾರತ 7.4ರಷ್ಟು ಆರ್ಥಿಕ ಪ್ರಗತಿ ಸಾಧಿಸಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹೇಳಿರುವ ವಿಚಾರ ಗೊತ್ತೇ ಇದೆ. ಆದರೆ ಇದೀಗ ಭಾರತದ ಎದುರು ವಿಶ್ವದ ಅತ್ಯಂತ ಬಲಿಷ್ಠ ರಾಷ್ಟ್ರಗಳು ಆರ್ಥಿಕತೆಯ ವಿಚಾರವಾಗಿ ಸಂಕಷ್ಟವನ್ನು ಅನುಭವಿಸಲಿದ್ದು, ಭಾರತ ಆರ್ಥಿಕತೆಯಲ್ಲಿ ಬಲಿಷ್ಠ ರಾಷ್ಟ್ರ ಎನ್ನುವ ಕೀರ್ತಿಗೂ ಪಾತ್ರವಾಗಲಿದೆ ಅನ್ನೋದು ಅಕ್ಷರಶಃ ನಿಜ.

ಮೂಲ:

https://goo.gl/iBgYSF

https://goo.gl/wmPZbg

– ಅಲೋಖಾ

Tags

Related Articles

Close